- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
- ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ
- ರಸ್ತೆ ಬದಿ ಮದ್ಯದ ಬಾಟಲಿ ಬಾಕ್ಸ್ ಎಸೆದ ಆಸ್ಪತ್ರೆ ಸಿಬ್ಬಂದಿ?
- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
Author: Kodagu-admin
ವಿರಾಜಪೇಟೆ ಮಗ್ಗುಲದಲ್ಲಿ ಗ್ರಾಮಸ್ಥರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ ತಡರಾತ್ರಿ ಬರುವ ಆನೆಗಳು ಈಗ ಸಂಜೆಯಾಗುತ್ತಲೆ ಕಾಣಿಸುತ್ತಿರುವುದು ಆತಂಕ ಸೃಷ್ಟಿಯಾಗಿಸಿದೆ. ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿ ಸಂಜೆಯ ಹೊತ್ತು ಗಜಪಡೆಗಳು ಧಾಳಿ ನಡೆಸಿ ತೋಟದ ಬೆಳೆಗಳನ್ನು ನಾಶಪಡಿಸಿ ಗ್ರಾಮಸ್ಥರು ಮತ್ತು ರೈತರು ಆತಂಕದಿಂದ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಆಗೊಮ್ಮೆ,ಈಗೊಮ್ಮೆ ತಡರಾತ್ರಿಯಲ್ಲಿ ಬರುವ ಆನೆಗಳ ಹಿಂಡು ಬೆಳೆ ನಷ್ಟ ಮಾಡಿದ ಬಗ್ಗೆ ಮಗ್ಗುಲ ಗ್ರಾಮದಿಂದ ಸುದ್ದಿಗಳು ಬರುತ್ತಿದ್ದು ಈಗ ಒಂದು ವಾರದಿಂದ ಸಂಜೆಯಾಗುತ್ತಲೇ ಆನೆಗಳು ಗ್ರಾಮಕ್ಕೆ ಎಂಟ್ರಿ ಕೊಟ್ಟು ಕೊಯ್ಲು ಮಾಡಿದ ಭತ್ತ,ಭತ್ತದ ಹುಲ್ಲು,ಕಾಫಿ,ಬಾಳೆ ಮುಂತಾದ ಬೆಳೆಗಳನ್ನು ನಾಶಪಡಿಸಿವೆ.ಪ್ರಸ್ತುತ ಕಾಫಿ ಕುಯ್ಲಿನ ಸಮಯವಾಗಿದ್ದು ಕಣಗಳಲ್ಲಿ ರೈತರು ಕೆಲಸ ಮಾಡಲು ಆತಂಕ ಎದುರಾಗಿದೆ. ನಿನ್ನೆ ಸಂಜೆ ಮೂರು ಆನೆಗಳನ್ನು ಒಳಗೊಂಡ ಆನೆಗಳ ಹಿಂಡು ಗ್ರಾಮದ ಪ್ರಗತಿಪರ ರೈತ ಪುಲಿಯಂಡ ಜಗದೀಶ್ ಹಾಗೂ ಅಕ್ಕಪಕ್ಕದ ರೈತರ ತೋಟಕ್ಕೆ ಲಗ್ಗೆ ಇಟ್ಟು ಗಿಡಗಳು ಮತ್ತು ಬೆಳೆಗಳನ್ನು ನಷ್ಟ ಪಡಿಸಿವೆ. ರೈತರೊಬ್ಬರ ಕಣದಲ್ಲಿ ಚೀಲದಲ್ಲಿ ತುಂಬಿಸಿ…
ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ನಾಪೋಕ್ಲುವಿನ ಸ್ವಾತಿ ಆಯ್ಕೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ನಾಪೋಕ್ಲುವಿನ ಜೆ.ಡಿ.ಸ್ವಾತಿ ಆಯ್ಕೆಯಾಗಿದ್ದಾರೆ. ಮೈಸೂರಿನ ಸೆಂಟ್ ಫಿಲೋಮಿನಾಸ್ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಸ್ವಾತಿ ಎನ್ ಸಿ ಸಿ ಯಿಂದ ಜೂನಿಯರ್ ಅಂಡರ್ ಆಫೀಸರ್ ಆಗಿ ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.ಸ್ವಾತಿ ನಾಪೋಕ್ಲುವಿನ ನೂರಂಬಡ ಮಠದ ದೇವರಾಜು ಹಾಗೂ ನಯನ ದಂಪತಿಗಳ ಪುತ್ರಿಯಾಗಿದ್ದಾರೆ.
ನಿವೃತ್ತಿ ಹೊಂದಿದ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿಅವರಿಗೆ ಪಂಚಾಯಿತಿಯಿಂದ ಬೀಳ್ಕೊಡುಗೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು:ನಾಪೋಕ್ಲು ಹಾಗೂಎಮ್ಮೆಮಾಡು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಚೋಂದಕ್ಕಿ ಅವರನ್ನು ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಾಪೋಕ್ಲುವಿನ ಫುಡ್ ಬೈಟ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್ ಅವರು ಪಾಲ್ಗೊಂಡು ಮಾತನಾಡಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಅವರು ಕಾರ್ಯನಿರ್ವಹಿಸಿದ ಎಲ್ಲಾ ಪಂಚಾಯಿತಿಗಳಲ್ಲೂ ಸಾಧನೆ ಮತ್ತು ಅಭಿವೃದ್ಧಿ ಆಗಿದೆ. ಏನೇ ಸಮಸ್ಯೆಗಳಾದರೂ ಸಮಗ್ರವಾಗಿ ಪರಿಹರಿಸಿ ಧೀರತನದಿಂದ ಕೆಲಸ ಕಾರ್ಯನಿರ್ವಹಿಸಿದ್ದಾರೆ ಎಂದು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರವರು ಮಾತನಾಡಿ 2018ರ ಪ್ರವಾಹದ ಸಂದರ್ಭ ಮತ್ತು ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಅವರು ಹಾಗೂ ಪಂಚಾಯಿತಿ ಆಡಳಿತ ಮಂಡಳಿಯ ಸಲಹೆ, ಮಾರ್ಗದರ್ಶನ,ಸಹಕಾರ ಉತ್ತಮ ರೀತಿಯಲ್ಲಿ ಸಿಕ್ಕಿರುವುದರಿಂದ…
ಕೊಡವ ಭಾಷೆ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಶಾಸಕದ್ವಯರ ಉಪಸ್ಥಿತಿಯಲ್ಲಿ ಜ.5 ರಂದು ಮಹತ್ವದ ಸಭೆ ಕೊಡವ ಭಾಷೆಯನ್ನು ಭಾರತ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕಿರುವ ಹಿನ್ನೆಲೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಮಾಹಿತಿ/ ವರದಿ ಒದಗಿಸಬೇಕಿದೆ. ಆದ್ದರಿಂದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ, ಜನವರಿ, 05 ರಂದು ಬೆಳಗ್ಗೆ 10 ಗಂಟೆಗೆ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಪೂರ್ವಭಾವಿ ಮಹತ್ವದ ಸಭೆಯು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಇತರರು ಪಾಲ್ಗೊಳ್ಳಲಿದ್ದಾರೆ. ಸಭೆಗೆ ಕೊಡವ ಭಾಷಿಕ ವಿವಿಧ ಸಮಾಜದ ಪ್ರಮುಖರು, ಕೊಡವ ಭಾಷಾಭಿಮಾನಿಗಳು,…
ಚೆಯ್ಯಂಡಾಣೆಯ ಕರ್ನಾಟಕ ಬ್ಯಾಂಕ್ 53ನೇ ವರ್ಷಾಚರಣೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು:ಚೆಯ್ಯಂಡಾಣೆಯ ಕರ್ನಾಟಕ ಬ್ಯಾಂಕ್ ನ 53ನೇ ವರ್ಷಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬ್ಯಾಂಕ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಎಜಿಎಂ ಡಾ.ಟಿ. ಆರ್ ಅರುಣ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಬ್ಯಾಂಕ್ ಚೆಯ್ಯಂಡಾಣೆ ಶಾಖೆಯ ವ್ಯವಸ್ಥಾಪಕರಾದ ಬಾಲಕೃಷ್ಣರವರು 53ನೇ ವರ್ಷಾಚರಣೆ ಆಚರಿಸುವ ಬ್ಯಾಂಕಿನ ಕಾರ್ಯವೈಕರಿಯ ಕುರಿತು ಮಾತನಾಡಿದರು. ಈ ಸಂದರ್ಭ ಗ್ರಾಹಕಾರದ ಈರಪ್ಪ ಸಿ.ಕೆ, ದಿಲೀಪ್ ಬಿ.ಸಿ, ನಾರಾಯಣ ಮೂರ್ತಿ,ಕುಮ್ಮಂಡ ಮೊಣ್ಣಪ್ಪ,ಪಿ.ಡಿ.ಮನೋಜ್, ರಣಜಿತ್, ಬ್ಯಾಂಕ್ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು. ಕೊಡಗು ನ್ಯೂಸ್
ಶುಕ್ರವಾರದಂದು ನೂತನ ಜಿಲ್ಲಾಧಿಕಾರಿಯಾಗಿ ಎಸ್.ಜೆ ಸೋಮಶೇಖರ್ ಅಧಿಕಾರ ವಹಿಸಿಕೊಂಡರು ಕೊಡಗು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎಸ್.ಜೆ.ಸೋಮಶೇಖರ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರಿಂದ ಅಧಿಕಾರ ಸ್ವೀಕರಿಸಿದರು. ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಡಿಎಫ್ಒ ಅಭಿಷೇಕ್ , ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿಕಿಲ್ ಚಕ್ಕಿ, ತಹಶಿಲ್ದಾರರಾದ ಪ್ರವೀಣ್ ಕುಮಾರ್, ಕಿರಣ್ ಗೌರಯ್ಯ, ಶ್ರೀಧರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಅಭಿನಂದಿಸಿದರು. ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಈ ಹಿಂದೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಆಯುಕ್ತರಾಗಿ, ಚಿತ್ರದುರ್ಗ ಜಿಲ್ಲೆಯಲ್ಲಿ ಜಿ.ಪಂ.ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯಮಾಹಿತಿ: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ನಿಯಮ ಜಾರಿ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಿಗೆ ಇನ್ಮುಂದೆ ವೆಬ್‌ಸ್ಟ್ರೀಮಿಂಗ್ ಕಡ್ಡಾಯಗೊಳಿಸಿದೆ. ಪರೀಕ್ಷೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು, ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ಜನವರಿ 27 ರಿಂದ ಫೆಬ್ರವರಿ 14 ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಎಲ್ಲಾ ಚಟುವಟಿಕೆಯನ್ನು ರಿಯಲ್ ಟೈಮ್ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕಳೆದ ವರ್ಷ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದರೂ, ಥಿಯರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಲು ವಿಫಲರಾಗಿರುವುದರಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ವೆಬ್‌ಕಾಸ್ಟ್ ಮಾಡಲು ಮಂಡಳಿಯು ಎಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆ ಮಾಡಲಿದೆ. ಸಂಪೂರ್ಣ ಪ್ರಕ್ರಿಯೆಗಾಗಿ ಕೃತಕ ಬುದ್ಧಿಮತ್ತೆಯನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಜನವರಿ…
ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಲ್ಲಿ ‘ರಸ್ತೆ ಸುರಕ್ಷತಾ ಮಾಸಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ ಬೆಂಗಳೂರು : ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಲ್ಲಿ ‘ರಸ್ತೆ ಸುರಕ್ಷತಾ ಮಾಸಾಚರಣೆ’ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಈ ಮಾಸಾಚರಣೆಯನ್ನು ಫಲಪ್ರದವಾಗಿ ‘ಆಚರಿಸುವಂತೆ, ಜಾಗೃತಿಯ ಚಟುವಟಿಕೆಗಳನ್ನು ಯೋಜಿತವಾಗಿ ಕೈಗೊಳ್ಳುವಂತೆ ಮತ್ತು ವಿದ್ಯಾರ್ಥಿ-ಶಿಕ್ಷಕರು ಸಕ್ರಿಯವಾಗಿ ಭಾಗವಹಿಸುವಂತೆ ಈ ಸುತ್ತೋಲೆ ಮೂಲಕ ಇಲಾಖೆಯು ನಿರ್ದೇಶನಗಳನ್ನು ಜಾರಿಗೊಳಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ರಸ್ತೆ ಸುರಕ್ಷತೆಯು ಜನಜೀವನದ ಅನಿವಾರ್ಯ ಅಂಶವಾಗಿದ್ದು, ಅದರ ಕುರಿತು ಸಮಗ್ರ ಜಾಗೃತಿ ಮೂಡಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಕಂಡುಬರುವ ಏರಿಕೆ, ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಸುರಕ್ಷಿತ ಸಂಚಾರದ ಅಭ್ಯಾಸಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ವಿದ್ಯಾರ್ಥಿಗಳು ನಾಳೆಯ ಜವಾಬ್ದಾರಿಯುತ ನಾಗರಿಕರಾಗಿರುವುದರಿಂದ, ಅವರಿಗೆ ಬಾಲದಲ್ಲೇ ರಸ್ತೆ ಸುರಕ್ಷತಾ ನಿಯಮಗಳು, ಜವಾಬ್ದಾರಿಯುತ ನಡೆ-ನುಡಿ ಮತ್ತು ಎಚ್ಚರಿಕೆಯಿಂದ ಸಂಚಾರ ಮಾಡುವ…
ಮಾರಣಾಂತಿಕ ಹಲ್ಲೆಗೊಳದ ವ್ಯಕ್ತಿ ಸಾವು ಪ್ರಕರಣ ಸಹಪಾಠಿ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹಿನ್ನೆಲೆ ಪೊನ್ನoಪೇಟೆ ತಾಲೂಕು ಹಾತೂರು ಕುದ್ದಾರಸ್ತೆಯಲ್ಲಿ ಮರಣಾಂತಿಕ ಹಲ್ಲೆಯಲ್ಲಿ ಮೃತಪಟ್ಟ ಡ್ರೈವರ್ ನವಾಜ್ ಎಂಬುವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋಣಿಕೊಪ್ಪಲು ಪೊಲೀಸರು ನಾಲ್ಕರಿಂದ ಐದು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಥಮಿಕ ತನಿಖೆಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಹಾತುರು ಕುಂದ ರಸ್ತೆಯಲ್ಲಿರುವ ಕಾಫಿ ಕ್ಯೂರಿಂಗ್ ಘಟಕದ ಲಾರಿ ಡ್ರೈವರ್ ರವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತಪಟ್ಟ ನವಾಜ್ ಗೆ ಇವನು ಸಹಪಾಠಿ ಡ್ರೈವರ್ ರವರ ಪತ್ನಿ ಯೊಂದಿಗೆ ಸಂಬಂಧವಿರೋ ಬಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಈ ಸಂಬಂಧ ಕಲಹ ಏರ್ಪಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದರೆ ನವಾಜ್ ತನ್ನ ಚಾಳಿಯನ್ನು ಮುಂದುವರಿಸಿದ್ದು ನಿನ್ನೆ ರಾತ್ರಿ ಕುಶಾಲನಗರದ ಮೂಲದ ಪ್ರಸ್ತುತ ಕಾಫಿ ಕ್ಯೂರಿಂಗ್ ವರ್ಕ್ನ ಆವರಣದಲ್ಲಿ ವಾಸಿವಿರುವ ಡ್ರೈವರ್ ಪೂರ್ಣಚಂದ್ರ…
ನಾಪೋಕ್ಲು ಬಳಿಯ ಹೊದವಾಡ ಗ್ರಾಮದ ರಾಫೆಲ್ಸ್ ಅಂತರಾಷ್ಟ್ರೀಯ ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಂಭ್ರಮ – ಆಧುನಿಕ ಯುಗ ನೈಸರ್ಗಿಕ ಜಗತ್ತು ಮರೆತು ಎಐ ತಂತ್ರಜ್ಞಾನದತ್ತ ಮುಖಮಾಡುತ್ತಿರುವುದು ದುಃಖಕರ -ವಕೀಲ ಬಾಲಸುಬ್ರಹ್ಮಣ್ಯ ಅಭಿಪ್ರಾಯ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ಇತ್ತೀಚಿನ ದಿನಗಳಲ್ಲಿ ಆಧುನಿಕ ಯುಗ ನೈಸರ್ಗಿಕ ಜಗತ್ತು ಬದಲಾವಣೆಗೊಂಡು ಎಐ ತಂತ್ರಜ್ಞಾನದತ್ತ ಮುಖ ಮಾಡುತ್ತಿರುವುದು ದುಃಖಕರ, ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನವು ಮಾನವನನ್ನು ಆಳುವುದರಲ್ಲಿ ಸಂಶಯವಿಲ್ಲವೆಂದು ಮಡಿಕೇರಿಯ ಹಿರಿಯ ವಕೀಲರಾದ ಕೆ.ಪಿ. ಬಾಲಸುಬ್ರಹ್ಮಣ್ಯ ಅವರು ಅಭಿಪ್ರಾಯಪಟ್ಟರು. ನಾಪೋಕ್ಲು ಬಳಿಯ ಹೊದವಾವಾಡ ಗ್ರಾಮದ ರಾಫೆಲ್ಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಶಾಲೆ ಮತ್ತು ಪಿ.ಯು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಪರೀಕ್ಷೆಗೂ ಮುನ್ನ ಮೊಬೈಲ್ ಅವಲಂಬಿಸಿರುವುದು ವಿಷಾದನೀಯ. ಮಾನವನು ಪ್ರತಿಯೊಂದು ವಿಷಯ ತಿಳಿಯಬೇಕಾದರು ಗೂಗಲ್ ನಲ್ಲಿ ಹುಡುಕುವುದು ಕಂಡು ಬರುತ್ತಿದೆ. ಜಗತ್ತು ಎಐ…
