Author: Kodagu-admin

ಹೊಸ ವರ್ಷದ ಪ್ರಯುಕ್ತ ಕಕ್ಕಬ್ಬೆ ನಾಲಡಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಟ್ರ್ಯಾಕ್ ಸೂಟ್ ಕೊಡುಗೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ನಾಲಡಿಯ ಗ್ರಾಮಸ್ಥರು ಹೊಸ ವರ್ಷದ ಪ್ರಯುಕ್ತ ಟ್ರ್ಯಾಕ್ ಸೂಟ್ ಅನ್ನು ಕೊಡುಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಗ್ರಾಮಸ್ಥರು ಉದಾರವಾಗಿ ನೀಡಿದ ಟ್ರ್ಯಾಕ್ ಸೂಟನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿತರಿಸಿದರು. ಗ್ರಾಮಸ್ಥರ ಉದಾರ ಸೇವೆಗೆ ಶಾಲೆಯ ಶಿಕ್ಷಕ ವೃಂದ, ಮೇಲುಸ್ತುವಾರಿ ಸಮಿತಿಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭ ಶಾಲೆಯ ಅತಿಥಿ ಶಿಕ್ಷಕರಾದ ಗೌರಮ್ಮ, ಶಾರಿಕ, ಸಿಬ್ಬಂದಿ ವೀಣಾ ಉಪಸ್ಥಿತರಿದ್ದರು.

Read More

ಕೊಡಗು ಜೆಲ್ಲೆ ವಿರಾಜಪೇಟೆ ತಾಲೂಕು ಹಾಲುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲುಗುಂದ ಅಂಗನವಾಡಿ ಕೇಂದ್ರದಲ್ಲಿ ಹೊಸ ವರ್ಷದ ಆಚರಣೆಯನ್ನು ಅಂಗನವಾಡಿ ಸಹಾಯಕಿ ಸಾವಿತ್ರಿ ಹಾಗೂ ಮಕ್ಕಳು ಕೇಕ್ ಕತ್ತರಿಸುವುದರ ಮೂಲಕ ಹೊಸ ವರ್ಷದ ಆಚರಣೆಯನ್ನು ಮಾಡಲಾಯಿತು ಇದೇ ಸಂದರ್ಭದಲ್ಲಿ ಸೊಸೈಟಿ ಕಾರ್ಯದರ್ಶಿ ಕಾವೇರಮ್ಮ ಕಂದಾಯ ಇಲಾಖೆಯ ಗೋವಿಂದ, ಪುನರ್ವಸತಿ ಕಾರ್ಯಕರ್ತರಾದ ಸದನ್ ಟಿ ಎ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು ಕೊಡಗು ನ್ಯೂಸ್

Read More

ನಾಪೋಕ್ಲು ಬೇತು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಹೊಸ ವರ್ಷಾಚರಣೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 2026ರ ಹೊಸ ವರ್ಷಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಅಂಗನವಾಡಿ ಕೇಂದ್ರದಲ್ಲಿ ಪುಟಾಣಿ ಮಕ್ಕಳು ಕೇಕ್ ಕತ್ತರಿಸಿ ಪರಸ್ಪರ ಹಂಚುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಆಶಾ, ಸಹಾಯಕಿ ಲೀಲಾವತಿ ಹಾಜರಿದ್ದರು. ಕೊಡಗು ನ್ಯೂಸ್

Read More

ನಾಪೋಕ್ಲು ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ನಡೆದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸಭೆ ವರದಿ:-ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸಭೆಯು ಯಶಸ್ವಿಯಾಗಿ ನಡೆಯಿತು. ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಸುಮತಿ ಅವರು ಪಾಲ್ಗೊಂಡು ಮಾತನಾಡಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಫೋಕ್ಸೋ ಕಾಯಿದೆ, ಬಾಲಕಾರ್ಮಿಕ ನಿರ್ಮೂಲನ ಹಾಗೂ ಆತ್ಮಹತ್ಯೆ ತಡೆಯ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚರಿಕಾ ಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕಾಧಿಕಾರಿ ತುಳಸಿ ಅವರು ಮಾತನಾಡಿ ಪ್ರಾಯೋಜಕೃತ್ ಯೋಜನೆಯ ಮಾಹಿತಿ ಮತ್ತು ಸಮುದಾಯದ ವ್ಯಾಪ್ತಿಯಲ್ಲಿ ದೌರ್ಜನ್ಯ ಅನೈತಿಕ ಚಟುವಟಿಕೆಗಳು ಕಂಡುಬಂದಲ್ಲಿ ಅದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ಕಂದಾಯ ಪರಿವೀಕ್ಷಕರಾದ ರವಿಕುಮಾರ್ ರವರು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್ ಐ ಆರ್ ಮ್ಯಾಪಿಂಗ್ ಕಾರ್ಯವನ್ನು ವ್ಯಾಪ್ತಿಯ…

Read More

ಕಾಡಾನೆ ದಾಳಿ ವ್ಯಕ್ತಿ ಬಲಿ ಪೊನ್ನಪ್ಪ (62) ಕೃಷಿ ಕಾರ್ಯಕ್ಕೆ ತಮ್ಮ ಜಮೀನಿಗೆ ಬಂದಾಗ ದಾಳಿ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಯ್ಯಪುರ ಗ್ರಾಮದ ಪೊನ್ನಪ್ಪ ತಮ್ಮ ಮನೆ ಮುಂಭಾಗದಲ್ಲಿ ನಡೆದ ಘಟನೆ ಸ್ಥಳಕ್ಕೆ ಎ ಸಿ ಎಫ್ ಗೋಪಾಲ್ , ಆರ್ ಎಫ್ ಒ ಶೈಲೆಂದ್ರ,ಡಿಆರ್ ಎಫ್ ಶ್ರಾವಣ ಕುಮಾರ್, ಇಲಾಖೆಯ ಈರಣ್ಣ, ವೆಂಕಟೇಶ್, ಪ್ರವೀಣ್ ಕುಮಾರ್, ರಂಜಿತ್, ವೇದಮೂರ್ತಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ, ಹಾಗೂ ವೃತ್ತ ನೀರಿಕ್ಷಕರು ಭೇಟಿ. ಮನೆಯ ನಾಯಿಗೆ ದಾಳಿ ಮಾಡಿ ನಂತರ ವ್ಯಕ್ತಿ ಮೇಲೆ ದಾಳಿ ಕಾಡಾನೆ ಹಿಡಿದು ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯ. ಪ್ರತಿಭಟನೆ ಗೆ ಸಿದ್ಧತೆ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ಎ ಸಿ ಎಫ್ ಗೋಪಾಲ್ ಪ್ರತಿಭಟನಗಾರರನ್ನು ಮನವೊಲಿಸುವಲ್ಲಿ ಯಶಸ್ಸು. ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಕಾಡಾನೆ ಕಾಡಿನಿಂದ ಬರದಂತೆ ಟ್ರಂಚ್ ಹಾಗೂ ಪೆನ್ಸಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.

Read More

ನಾಪೋಕ್ಲುವಿನ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎಂ.ಪಿ. ಜ್ಯೋತಿಗೆ ಪಂಚಾಯತ್ ವತಿಯಿಂದ ಸನ್ಮಾನ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಪಿ.ಜ್ಯೋತಿ ಅವರನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಾಪೋಕ್ಲುವಿನ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 36 ವರ್ಷಗಳ ಕಾಲ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಜ್ಯೋತಿ ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಇವರ ಅವಧಿಯಲ್ಲಿ ನೀಡಿರುವ ಉತ್ತಮ ಸೇವೆನ್ನು ಗುರುತಿಸಿ ನಾಪೋಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ಜ್ಯೋತಿ ಅವರನ್ನು ಪಂಚಾಯಿತಿ ವತಿಯಿಂದ ಶಾಲು ಹೊದಿಸಿ ಕಿರುಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್,ಪಂಚಾಯತ್ ಸದಸ್ಯರಾದ ಕುಶು ಕುಶಾಲಪ್ಪ, ಬಿ. ಎಂ. ಪ್ರತೀಪ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ,ಕಂದಾಯ ಪರಿವೀಕ್ಷಕರ ರವಿಕುಮಾರ್, ನಾಪೋಕ್ಲು ಠಾಣೆಯ ಸಹಾಯಕ ಠಾಣಾಧಿಕಾರಿ ಮೋಹನ್, ಸಿಬ್ಬಂದಿ ಜೋಸೆಫ್, ಸ್ವಸಹಾಯ ಸಂಘದ ಅಧ್ಯಕ್ಷೆ ಟಿ.ವಿ.ಭವಾನಿ, ಸಂಚಾಲಕಿ ಆಶಲತಾ, ಅಂಗನವಾಡಿ ಕಾರ್ಯಕರ್ತೆಯರು,…

Read More

ಗೋಣಿಕೊಪ್ಪಲಿನ ಆಟೋ ಡ್ರೈವರ್ ಮೇಲೆ ಹಲ್ಲೆ ಕೆಲವೇ ಕ್ಷಣಗಳಲ್ಲಿ ಆಟೋ ಡ್ರೈವರ್ ಸಾವು ಹೊಸ ವರ್ಷದಂದೆ ಅಮಾನವೀಯ ಘಟನೆ ದೊಣ್ಣೆಯಿಂದ ಹೊಡೆದು ಆಟೋ ಡ್ರೈವರ್ ಒಬ್ಬರನ್ನು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪಲು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಗೋಣಿಕೊಪ್ಪಲು ಆಸ್ಪತ್ರೆಗೆ ಹಲ್ಲೆಗೆ ಒಳಗಾದವನನ್ನು ಚಿಕಿತ್ಸೆಗೆ ಕರೆದುಕೊಂಡು ಬಂದ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದಾನೆ. ಗೋಣಿಕೊಪ್ಪಲಿನ ಹರಿಶ್ಚಂದ್ರ ಪುರದ ನಿವಾಸಿ ಖಾಸಗಿ ಸಂಸ್ಥೆಯಲ್ಲಿ ಡ್ರೈವರ್ ಹಾಗೂ ಉಳಿದ ಸಮಯದಲ್ಲಿ ಆಟೋ ಡ್ರೈವರ್, ಆಗಿ ಕಾರ್ಯ ನಿರ್ವಹಿಸುತ್ತಿದ್ದ ನವಾಜ್ (39) ಎಂಬುವನೆ ಹತ್ಯೆಗಿಡಾಗಿದ್ದಾನೆ. ರಾತ್ರಿ ಹಾತುರೂ ಕುಂದಾ ರಸ್ತೆ ಮಾರ್ಗಕ್ಕೆ ಆಟೋ ಡ್ರೈವರ್ ಅನ್ನು ಕರೆಸಿಕೊಂಡು ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ. ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರಾದ ಶಿವರಾಜ್ ಮುದುವಾಳ್, ಠಾಣಾಧಿಕಾರಿ ಪ್ರದೀಪ್ ತಂಡ ತನಿಖೆ ಕೈಗೊಂಡಿದ್ದು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಇರಿಸಲಾಗಿದೆ.

Read More

ನಿಖರತೆ ಇಲ್ಲದ ಸುದ್ದಿಯಿಂದ ಹಲವರ ಬಗ್ಗೆ ಅನುಮಾನ:-ಜಗದೀಶ್ ರೈ ಸ್ಪಷ್ಟನೆ ನಮಸ್ಕಾರ… ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹನಿಟ್ರ್ಯಾಪ್‌ಗೆ ಸಂಬಂಧಿಸಿದ ಒಂದು ಸುದ್ದಿ ಹರಿದಾಡುತ್ತಿದೆ. ಯಾವುದೇ ನಿಖರತೆ ಇಲ್ಲದೆ, ಕೇವಲ ಊಹಾಪೋಹ ವಿಚಾರವನ್ನಿಟ್ಟುಕೊಂಡು ಮಾಡಿರುವ ಸುದ್ದಿಯಿಂದ ಅನೇಕರ ಬಗ್ಗೆ ಅನುಮಾನ ಮೂಡುವಂತಾಗಿದೆ. ನನ್ನನ್ನೂ ಸೇರಿದಂತೆ ಹಲವರು ಗುತ್ತಿಗೆದಾರರಾಗಿದ್ದುಕೊಂಡು, ಬೇರೆ ಬೇರೆ ಸಮಾಜದ ಜವಾಬ್ದಾರಿಯಲ್ಲಿದ್ದಾರೆ. ಐಶಾರಾಮಿ ವಾಹನಗಳನ್ನೂ ಹೊಂದಿದ್ದಾರೆ. ಈಗ ಹರಿದಾಡುತ್ತಿರುವ ಸುದ್ದಿಯಿಂದ ಜನ ನಮ್ಮನ್ನೆಲ್ಲ ಅನುಮಾನದಿಂದ ಕಾಣುವಂತಾಗಿದೆ. ಹೀಗಾಗಿ ಮಾಧ್ಯಮದವರಲ್ಲಿ ವಿನಂತಿಸುತ್ತಿದ್ದೇನೆ, ಈ ಸುದ್ದಿಯಲ್ಲಿರುವ ನಿಖರತೆಯನ್ನು ಪರಿಶೀಲಿಸಿ ದಾಖಲೆ ಸಮೇತ ಯಾರು ಈ ಕೃತ್ಯದಲ್ಲಿದ್ದಾರೆಂಬುದನ್ನು ಬಹಿರಂಗಪಡಿಸಲಿ. ಕೇವಲ ಊಹಾಪೋಹದ ಸುದ್ದಿಯಿಂದ ಸಮಾಜದಲ್ಲಿ ಅನುಮಾನ ಮೂಡಿಸುವುದು ಬೇಡ. ಪೊಲೀಸ್‌ ಇಲಾಖೆಯ ಅಧಿಕೃತ ಹೇಳಿಕೆ ಪಡೆದು, ಯಾರ್ಯಾರು ಇದ್ದಾರೆ ಅನ್ನುವುದನ್ನು ಹೆಸರು ಸಹಿತ ಪ್ರಕಟಿಸಿದಲ್ಲಿ ಜನತೆಯಲ್ಲಿನ ಗೊಂದಲ, ಅನುಮಾನಕ್ಕೂ ಉತ್ತರ ಸಿಕ್ಕಂತಾಗುತ್ತದೆ. ಧನ್ಯವಾದಗಳು ಬಿ.ಡಿ. ಜಗದೀಶ್‌ ರೈ PWD ಗುತ್ತಿಗೆದಾರ, ಮಡಿಕೇರಿ ಕೊಡಗು ನ್ಯೂಸ್

Read More

ಶಾಸಕ ಮಂತರ್ ಗೌಡ ರವರಿಂದ 95 ಲಕ್ಷದ ಕಾಮಗಾರಿಗೆ ಚಾಲನೆ. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣ ಗ್ರಾಮಕ್ಕೆ ಮಡಿಕೇರಿ ಕ್ಷೇತ್ರ ಶಾಸಕರ ಅನುದಾನದಿಂದ ಸುಮಾರು 95 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕರಾದ ಮಂತರ್ ಗೌಡರವರನ್ನು ಮಾದಪಟ್ಟದಲ್ಲಿ ವಾದ್ಯಗೋಷ್ಠಿ ಮೆರವಣಿಗೆ ಮೂಲಕ ಆರತಿ ಬೆಳಗ್ಗೆ ಸನ್ಮಾನಿಸಲಾಯಿತು. ಮಾದಪಟ್ಟಣ ಗ್ರಾಮದ ಕಾಂಕ್ರೀಟ್ ರಸ್ತೆಗೆ 25 ಲಕ್ಷ, ಅಂಗನವಾಡಿ ಕೇಂದ್ರಕ್ಕೆ ಮೂರು ಲಕ್ಷ, ಸಮುದಾಯ ಭವನ ನವೀಕರಣಕ್ಕೆ 5 ಲಕ್ಷ ಮಾದಪಟ್ಟಣದಿಂದ ಡ್ರೀಮ್ಸ್ ಲೇಔಟ್ ತನಕ 7 ಲಕ್ಷ ಹಾಗೂ 9 ರೈತರಿಗೆ ತಲೆ 5 ಲಕ್ಷದಂತೆ 45 ಲಕ್ಷಗಳು ಸಣ್ಣ ನೀರಾವರಿ ಇಲಾಖೆಯಿಂದ ಶಾಸಕರ ಮೂಲಕ ದಾಮೋದರ್ ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಒಟ್ಟು 95 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಯಿತು. ಕೊಡಗು ನ್ಯೂಸ್

Read More