Author: Kodagu-admin

ಬಲ್ಲಮಾವಟಿ ಪೇರೂರು ಮಂಜಾಟ್ ಕಾಲೋನಿಯಲ್ಲಿ ಕಾಡಾನೆಗಳ ಹಾವಳಿ -ಆಟೋ, ಬೈಕ್ ದ್ವಂಸ – ಗ್ರಾಮಸ್ಥರಲ್ಲಿ ಆತಂಕ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಮಂಜಾಟ್ ಕಾಲೋನಿಯಲ್ಲಿ ಸೋಮವಾರ ಮುಂಜಾನೆ ಕಾಡಾನೆಗಳು ದಾಳಿ ನಡೆಸಿದ್ದು ಎರಡು ಆಟೋರಿಕ್ಷಾ ಹಾಗೂ ದ್ವಿಚಕ್ರವಾಹನವನ್ನು ತುಳಿದು ಹಾನಿಪಡಿಸಿದ ಘಟನೆ ನಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಪೇರೂರು ಗ್ರಾಮದ ಮಂಜಾಟ್ ಕಾಲೋನಿ ನಿವಾಸಿಗಳಾದ ಕೆ.ಕೆ.ಅರ್ಜುನ, ಕೆ.ಬಿ.ಪೂವಯ್ಯ ಎಂಬುವವರ ಮನೆಯ ಸಮೀಪದ ರಸ್ತೆಯಲ್ಲಿ ನಿಲ್ಲಿಸಿದ್ದ ಎರಡು ಆಟೋರಿಕ್ಷಾದ ಮೇಲೆ ಕಾಡನೆಗಳ ಹಿಂಡು ದಾಳಿ ನಡೆಸಿದ್ದು ಇದರಿಂದ ಹಾನಿ ಸಂಭವಿಸಿದೆ. ಅದರಂತೆ ಇದೆ ರಸ್ತೆಬದಿಯಲ್ಲಿ ಪೂಣಚ್ಚ ಎಂಬುವವರ ದ್ವಿಚಕ್ರವಾಹನವನ್ನು ಕೂಡ ತುಳಿದು ಹಾನಿಪಡಿಸಿದ್ದು ನಷ್ಟಸಂಭವಿಸಿದೆ. ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಗ್ರಾಮದ ಬೆಳೆಗಾರರ ತೋಟಗಳಿಗೆ ಹಾಗೂ ಗದ್ದೆಗಳಿಗೆ ನಿರಂತರ ದಾಳಿನಡೆಸಿ ಕೃಷಿ ಗಿಡಗಳನ್ನು ಹಾನಿ ಪಡಿಸುತ್ತಿದ್ದು ಅಪಾರ ನಷ್ಟ ಸಂಭವಿಸುತ್ತಿದೆ ಎಂದು ಗ್ರಾಮದ ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ನಿರಂತರ ಕಾಡಾನೆಗಳ…

Read More

ಕಲ್ಕಂದೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ: ಗೋಮಾಂಸ & ಆರೋಪಿಗಳ ಸಮೇತ ವಾಹನ ಮುಟ್ಟುಗೋಲು ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರಿನಲ್ಲಿ KA50 M 6232 ನೋಂದಣಿ ಸಂಖ್ಯೆಯ ಆಲ್ಟೋ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಲ್ಕಂದೂರಿನ ಅದ್ರಾಮ ಮತ್ತು ನಾಲ್ವರು ಅಸ್ಸಾಂ ಕಾರ್ಮಿಕರೂ ಸೇರಿದಂತೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಒಟ್ಟು 5 ಆರೋಪಿಗಳ ಸಮೇತ ಆಲ್ಟೋ ಕಾರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಗೋಹತ್ಯೆ- ಗೋಕಳ್ಳಸಾಗಾಟ- ಗೋಮಾಂಸ ಮಾರಾಟಗಳನ್ನು ತಡೆಗಟ್ಟಲು ಪೋಲೀಸರು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದಾಗಿ ಬಹುಸಂಖ್ಯಾತ ಹಿಂದುಗಳು ಪೂಜಿಸುವ ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುತ್ತಿದೆಯೆಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೊಡಗು ನ್ಯೂಸ್

Read More

*SSLC ಯಲ್ಲಿ ಗರಿಷ್ಠ ಅಂಕ ಗಳಿಸಿದ ಮೋಕ್ಷಿತಾಗೆ ಐದು ವರ್ಷಗಳ ಕಾಲ ವಿದ್ಯಾರ್ಥಿವೇತನ ಘೋಷಿಸಿದ ಶಾಸಕ ಪೊನ್ನಣ್ಣ* ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕು ತಿತಿಮತಿಯಲ್ಲಿ, ಲ್ಯಾಂಪ್ಸ್ ಅಕಾಡೆಮಿಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿದರು. SSLC ಯಲ್ಲಿ ಗರಿಷ್ಠ ಅಂಕ ಗಳಿಸಿದ ಮೋಕ್ಷಿತಾಗೆ ಮುಂದಿನ ಐದು ವರ್ಷಗಳ ಕಾಲ ವಿದ್ಯಾರ್ಥಿವೇತನ ಘೋಷಿಸಿದ ಶಾಸಕ ಪೊನ್ನಣ್ಣ ಈ ಶಾಲೆಯಲ್ಲಿ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 613 ಅಂಕ ಗಳಿಸಿದ ಬಡ ವಿದ್ಯಾರ್ಥಿನಿ ಮೋಕ್ಷಿತ ಗೆ ಶಾಸಕರು ಅವರ ದತ್ತಿನಿದಿಯಿಂದ ಮುಂದಿನ ಐದು ವರ್ಷಗಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನವನ್ನು ಘೋಷಿಸಿದರು. ಲೈನ್ ಮನೆಯಲ್ಲಿ ವಾಸವಿದ್ದುಕೊಂಡು ಬಡ ಕುಟುಂಬದಿಂದ ಬಂದಿರುವ ಮೋಕ್ಷಿತ ಸ್ವ ಪ್ರಯತ್ನದಿಂದ ಈ ಅಂಕ ಗಳಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಅವರ ಭವಿಷ್ಯ ಉಜ್ವಲವಾಗಿರಲಿ ಹಾಗೂ ಮುಂದಿನ ದಿನಗಳಲ್ಲಿ ಈ ಬಾಲೆಯ ವಿದ್ಯಾಭ್ಯಾಸಕ್ಕಾಗಿ, ತನ್ನ ಕೈಲಾಗುವ…

Read More

*ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗಲಿದೆ – ಶಾಸಕ ಪೊನ್ನಣ್ಣ ವಿಶ್ವಾಸ.* ⁠ಯುಕೊ ನಿಯೋಗದೊಂದಿಗೆ ಕೊಡವ ಅಭಿವೃದ್ದಿ ನಿಗಮ ಕುರಿತು ಚರ್ಚಿಸಿದ ಶಾಸಕರು. – ⁠ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ವಿಚಾರ ಪ್ರಸ್ತಾಪಿಸಿ ಚರ್ಚಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಕೊಡವ ಅಭಿವೃದ್ಧಿ ನಿಗಮ ಶೀಘ್ರದಲ್ಲೇ ಘೋಷಣೆಯಾಗುವ ವಿಶ್ವಾಸವಿದೆಯೆಂದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗು ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಹೇಳಿದ್ದಾರೆ. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಇಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ನಿಯೋಗವು ಶಾಸಕ ಪೊನ್ನಣ್ಣನವರನ್ನು ವಿರಾಜಪೇಟೆಯ ಅವರ ಗೃಹ ಕಛೇರಿಯಲ್ಲಿ ಬೇಟಿಮಾಡಿ ಚರ್ಚಿಸಿತು. ನಿಯೊಗವನ್ನುದ್ದೇಶಿಸಿ ಮಾತನಾಡಿದ ಪೊನ್ನಣ್ಣ, ಈಗಾಗಲೇ ಯುಕೊ ಸಂಘಟನೆಯ ಮಂಜು ಚಿಣ್ಣಪ್ಪನವರು ಈ ಕುರಿತು ಹೋರಾಟ ನಡೆಸುತ್ತಾ ಬಂದಿದ್ದಾರೆ. ನನ್ನೊಂದಿಗೂ ಹಲವು ಬಾರಿ ಚರ್ಚಿಸಿದ್ದಾರೆ. ಹಾಗೆಯೇ ನನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕೊಡವ ಅಭಿವೃದ್ಧಿ ನಿಗಮ…

Read More

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಮೆಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಮೇಕೇರಿ-ಅರವತ್ತೊಕ್ಲು ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮ್ಮಪ್ಪ ರಸ್ತೆ ಇಂದು ನಾಮಕರಣ ಮಾಡಬೇಕೆಂದು ಈ ಹಿಂದೆ ಸ್ಥಳೀಯರು ಮಾನ್ಯ ಶಾಸಕರಲ್ಲಿ ಮನವಿಯನ್ನು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಮಾನ್ಯ ಶಾಸಕರು, ಒಪ್ಪಿಗೆ ಸೂಚಿಸಿ, ಇಂದು ಮೆಕೇರಿ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಈ ರಸ್ತೆಗೆ ಅಧಿಕೃತವಾಗಿ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮಪ್ಪ ರಸ್ತೆ ಎಂದು ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಪೂಜಾರಿರ ಕುಟುಂಬದ ಪಟ್ಟೆದಾರರು ಪೂಜಾರಿರ ಪೂವಯ್ಯ, ಅಂಬೆಕಲ್ ಕುಶಾಲಪ್ಪ, ಪಕ್ಷದ ಮುಖಂಡರು ಸೂರಜ್ ಹೊಸೂರು, ತೆನ್ನಿರ ಮೈನಾ, ಭೀಷ್ಮ ಮಾದಪ್ಪ, ಬಗರ್ ಹುಕುಂ ಸದಸ್ಯರು ಕೇಟೋಳಿ ಮೋಹನ್ ರಾಜ್, ಪಟ್ಟಡ ದೀಪಕ್, ಧ್ರುವ ಪೂಜಾರಿರ, ವಲಯ ಅಧ್ಯಕ್ಷರು ಪೊನ್ನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು ರಕ್ಷಿತ್ ಉತ್ತಪ್ಪ, ಸದಸ್ಯರು ಹನೀಫ್, ದಿನೇಶ್,…

Read More

ಮೇಕೇರಿ-ಅರವತ್ತೂಕ್ಲು ಸಂಪರ್ಕ ಕಲ್ಪಿಸುವ ರಸ್ತೆಗೆ ಮರುನಾಮಕರಣ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಮೆಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಮೇಕೇರಿ-ಅರವತ್ತೊಕ್ಲು ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮ್ಮಪ್ಪ ರಸ್ತೆ ಇಂದು ನಾಮಕರಣ ಮಾಡಬೇಕೆಂದು ಈ ಹಿಂದೆ ಸ್ಥಳೀಯರು ಮಾನ್ಯ ಶಾಸಕರಲ್ಲಿ ಮನವಿಯನ್ನು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಮಾನ್ಯ ಶಾಸಕರು, ಒಪ್ಪಿಗೆ ಸೂಚಿಸಿ, ಇಂದು ಮೆಕೇರಿ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಈ ರಸ್ತೆಗೆ ಅಧಿಕೃತವಾಗಿ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮಪ್ಪ ರಸ್ತೆ ಎಂದು ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಪೂಜಾರಿರ ಕುಟುಂಬದ ಪಟ್ಟೆದಾರರು ಪೂಜಾರಿರ ಪೂವಯ್ಯ, ಅಂಬೆಕಲ್ ಕುಶಾಲಪ್ಪ, ಪಕ್ಷದ ಮುಖಂಡರು ಸೂರಜ್ ಹೊಸೂರು, ತೆನ್ನಿರ ಮೈನಾ, ಭೀಷ್ಮ ಮಾದಪ್ಪ, ಬಗರ್ ಹುಕುಂ ಸದಸ್ಯರು ಕೇಟೋಳಿ ಮೋಹನ್ ರಾಜ್, ಪಟ್ಟಡ ದೀಪಕ್, ಧ್ರುವ ಪೂಜಾರಿರ, ವಲಯ ಅಧ್ಯಕ್ಷರು ಪೊನ್ನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು…

Read More

ಅಮ್ಮತ್ತಿ ಸಂತ ಅಂತೋಣಿ ಚರ್ಚ್ ಗೆ ಶಾಸಕ ಎ ಎಸ್ ಪೊನ್ನಣ್ಣ ಭೇಟಿ ವಿರಾಜಪೇಟೆ ತಾಲೂಕು ಅಮ್ಮತಿಯಲ್ಲಿರುವ ಸಂತ ಆಂತೋಣಿ ಚರ್ಚ್ ಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಭೇಟಿ ನೀಡಿದರು. ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ರವರು ಆಯೋಜಿಸಿದ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಪ್ರಯುಕ್ತ ಸ್ಥಳೀಯ ಕ್ರೈಸ್ತ ಭಾಂದವರು ಮಾನ್ಯ ಶಾಸಕರನ್ನು ಆಗಮಿಸುವಂತೆ ಆಹ್ವಾನಿಸಿದ್ದರು. ಕ್ರಿಸ್ಮಸ್ ಹಬ್ಬಾಚರಣೆಯ ದಿನದಂದು ಮಾನ್ಯ ಶಾಸಕರು ಕ್ಷೇತ್ರದಲ್ಲಿ ಅಲಭ್ಯವಿದ್ದ ಕಾರಣ ಇಂದು ತೆರಳಿದ ಮಾನ್ಯ ಶಾಸಕರು ಎಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ಧರ್ಮ ಗುರುಗಳು ಮಾದಲೈ ಮುತ್ತು, ದಕ್ಷಿಣ ಕೊಡಗು ಕ್ರಿಸ್ಟಿಯನ್ ಅಸೋಸಿಯೇಷನ್ ಅಧ್ಯಕ್ಷರು ಎ ಜೆ ಬಾಬು, ಕೂರ್ಗ್ ಕ್ಲಿಫ್ಸ್ ಮಾಲೀಕರದ ಜಾನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕೊಡಗು ನ್ಯೂಸ್

Read More

ಬೀದಿ ನಾಯಿಯನ್ನು ಹೊಡೆದು ಕೊಂದ ಗ್ರಾಮಸ್ಥರು ಗೋಣಿಕೊಪ್ಪ:ಬೀದಿ ನಾಯಿ ದಾಳಿಗೆ ವಿದ್ಯಾರ್ಥಿಗಳು ಸೇರಿ ನಾಲ್ವರಿಗೆ ಗಾಯ: ಗೋಣಿಕೊಪ್ಪ: ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಸ್ಥಳೀಯರು ಬೀದಿ ಶ್ವಾನವನ್ನು ಹೊಡೆದು ಸಾಯಿಸಿದ್ದಾರೆ. ಯುವನಿಕಾ(13), ಗ್ರಹಿತ ವಿ.ಆರ್. (10), ಶ್ರೀನಿವಾಸ್ (45), ತಜವೀಯ (25) ಗಾಯಗೊಂಡವರು. ಶನಿವಾರ ಬೆಳಗ್ಗೆ 8.50ಕ್ಕೆ ಮೈಸೂರಮ್ಮ ನಗರದಿಂದ ಗೋಣಿಕೊಪ್ಪ ಬಸ್‌ ನಿಲ್ದಾಣಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಶಾಲೆಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಇನ್ನಿಬ್ಬರ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಪರಿಣಾಮ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಗ್ರೀಷ್ಮ ಬೋಜಮ್ಮ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಏತನ್ಮಧ್ಯೆ, ವಿದ್ಯಾರ್ಥಿಗಳು ಮತ್ತು ಜನರ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಯಿಂದ ಮತ್ತಷ್ಟು ಸಂಭವಿಸಬಹುದಾದ ಅನಾಹುತ ತಪ್ಪಿಸುವ ಸಲುವಾಗಿ ಸಾರ್ವಜನಿಕರು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ “ಗೋಣಿಕೊಪ್ಪದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ರಸ್ತೆಯಲ್ಲಿ ತೆರಳಲು…

Read More

ಪತ್ರಕರ್ತ ಅನಿಲ್ ಹೆಚ್.ಟಿ ಗೆ ಗಾಂಧಿಪ್ರಿಯ ಪ್ರಶಸ್ತಿ ಬೆಂಗಳೂರಿನ ಸಮಥ೯ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಠಾನವು ನೀಡುವ ವಾಷಿ೯ಕ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಮಡಿಕೇರಿಯ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ. ಸಮಥ೯ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಟಾನವು ವಾಷಿ೯ಕವಾಗಿ ಪತ್ರಿಕೋದ್ಯಮ, ಸಮಾಜಸೇವೆ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಉದ್ಯಮ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಗಾಂಧಿ ಪ್ರಿಯ ಹೆಸರಿನ ಪ್ರಶಸ್ತಿ ನೀಡುತ್ತಿದೆ. ಈ ವಷ೯ದ ಗಾಂಧಿ ಪ್ರಿಯ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ವಿದ್ಯುನ್ಮಾನ, ಬಾನುಲಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಸೇವೆಗಳಲ್ಲಿ ಅನಿಲ್ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರತಿಷ್ಟಾನದ ಅಧ್ಯಕ್ಷ ಎಸ್.ಆರ್. ವಿಜಯಸಮಥ್೯ ತಿಳಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿತವಾಗಿದ್ದು ವಿಶ್ರಾಂತ ನ್ಯಾಯಮೂತಿ೯ ಪಾಲಾಕ್ಷಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮಡಿಕೇರಿಯಲ್ಲಿ ಪತ್ರಕತ೯ರಾಗಿರುವ ಅನಿಲ್ ಟಿವಿ 1 ಚಾನಲ್ ನ ಪ್ರಧಾನ ಸಂಪಾದಕರಾಗಿದ್ದು…

Read More

ವಸುದೈವ ಕುಟುಂಬಕಂ ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ವಿರಾಜಪೇಟೆ ತಾಲೂಕಿನ ಅರೇಮೇರಿ ಎಸ್ಎಂಎಸ್ ವಿದ್ಯಾಪೀಠ ಶಾಲೆಗೆ, ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಇಲ್ಲಿ ನಡೆಯುತ್ತಿರುವ ವಸುದೈವ ಕುಟುಂಬಕಂ, ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಶಾಸಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು, ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ವಾರ್ಷಿಕೋತ್ಸವವು, ಸಂಸ್ಥೆಯ ವಿಶಾಲ ಮನೋಭಾವ ಹಾಗೂ ಧ್ಯೇಯವನ್ನು ಸಾರುತ್ತದೆ. ಪ್ರಪಂಚವೇ ಒಂದು ಕುಟುಂಬ ಎಂದು ಸಾರುವ ಈ ಧ್ಯೇಯ ವಾಕ್ಯವು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಮ್ಮ ಮಾತುಗಳನ್ನು ಮಾನ್ಯ ಶಾಸಕರು ಪ್ರಾರಂಭಿಸಿದರು. ದಶಕಗಳಿಂದ ಅರಮೇರಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸೌಲಭ್ಯವನ್ನು ಒದಗಿಸುತ್ತ ವಿದ್ಯಾರ್ಜನೆ ಮಾಡುತ್ತಾ ಬಂದಿದೆ. ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಈಗಾಗಲೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಪಡೆದು, ನಾಡಿನ…

Read More