- ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ಪ್ರಾದೇಶಿಕ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ
- ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ವಲಯ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ*
- ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕ ಪೊನ್ನಣ್ಣ
- ಕಾಫಿ ತೋಟದಲ್ಲಿ ಕಾಡಾನೆ ದಾಳಿ: ಕಾರ್ಮಿಕನಿಗೆ ಗಂಭೀರ ಗಾಯ
- ಮಳೆ–ಗಾಳಿಯಲ್ಲೂ ಬಸ್ ನಿಲ್ದಾಣವೇ ಆಸರೆ: ವೃದ್ಧನಿಗೆ ನೆರವಿನ ಹಸ್ತ ಬೇಕಿದೆ
- ಕೊಡಗು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ ಸಾಧಕ ಪತ್ರಕತ೯ರಿಗೆ ಸನ್ಮಾನ
- ಆಟವಾಡುತ್ತಾ ಶಾಶ್ವತ ನಿದ್ರೆಗೆ ಜಾರಿದ ಅಪೂರ್ವ… ಕಣ್ಣೀರಿಟ್ಟ ಕುಟುಂಬಕ್ಕೆ ಮಂತರ್ ಗೌಡ ಸಾಂತ್ವನ
- ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆಟೋ ಚಾಲಕನಿಗೆ ₹12 ಸಾವಿರ ದಂಡ
Author: Kodagu-admin
*ಅಶೋಕ್_ಮಡಿಕೇರಿ* ಕೊಡಗು: ICSE ಅಂತರ ಶಾಲಾ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯ ಅರ್ಹತಾ ಪಂದ್ಯಗಳಲ್ಲಿ ಕಾಪ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾದೇಶಿಕ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಕಾಲ್ಸ್ ವಿರುದ್ಧ 3–0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಕಾಪ್ಸ್ ತಂಡ, ಫೈನಲ್ ಪಂದ್ಯದಲ್ಲಿ ಹಾಸನ ತಂಡವನ್ನು 2–0 ಗೋಲುಗಳಿಂದ ಮಣಿಸಿ ಪ್ರಾದೇಶಿಕ ಮಟ್ಟಕ್ಕೆ ಆಯ್ಕೆಯಾಗಿದೆ. ಪಂದ್ಯಾವಳಿಯುದ್ದಕ್ಕೂ ಉತ್ತಮ ಆಟದ ಮೂಲಕ ಗಮನ ಸೆಳೆದ ಕಾಪ್ಸ್ ಶಾಲಾ ತಂಡ, ಇದೀಗ ಪ್ರಾದೇಶಿಕ ಮಟ್ಟದ ಪಂದ್ಯಾವಳಿಯಲ್ಲಿ ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ. ತಂಡದ ಯಶಸ್ಸಿನ ಹಿಂದೆ ಆಟಗಾರರ ಪರಿಶ್ರಮ ಹಾಗೂ ಉತ್ತಮ ತರಬೇತಿ ಪ್ರಮುಖವಾಗಿದ್ದು, ತಂಡದ ಕೋಚ್ ಆಗಿ ಮಹೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾದೇಶಿಕ ಮಟ್ಟದಲ್ಲಿಯೂ ಕಾಪ್ಸ್ ಶಾಲೆಯ ತಂಡ ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂಬ ಶುಭಾಶಯಗಳು ವ್ಯಕ್ತವಾಗಿವೆ.
*ಅಶೋಕ್_ಮಡಿಕೇರಿ* ICSE ಅಂತರ ಶಾಲಾ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯ ವಲಯ ಮಟ್ಟದ ಅರ್ಹತಾ ಪಂದ್ಯಗಳಲ್ಲಿ ಕಾಪ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ವಲಯ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಕಾಲ್ಸ್ ಶಾಲೆಯ ವಿರುದ್ಧ 3–0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಕಾಪ್ಸ್ ತಂಡ, ಫೈನಲ್ ಪಂದ್ಯದಲ್ಲಿ ಹಾಸನ ತಂಡವನ್ನು 2–0 ಗೋಲುಗಳಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪಂದ್ಯಾವಳಿಯುದ್ದಕ್ಕೂ ಸಂಘಟಿತ ಆಟ, ಉತ್ತಮ ಪಾಸ್‌ಗಳು ಹಾಗೂ ಪರಿಣಾಮಕಾರಿ ಗೋಲುಗಳ ಮೂಲಕ ಗಮನ ಸೆಳೆದ ಕಾಪ್ಸ್ ತಂಡ, ಇದೀಗ ಮುಂದಿನ ಹಂತವಾದ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ. ತಂಡದ ಯಶಸ್ಸಿನ ಹಿಂದೆ ಆಟಗಾರರ ಪರಿಶ್ರಮದ ಜೊತೆಗೆ ತರಬೇತುದಾರರ ಮಾರ್ಗದರ್ಶನವೂ ಪ್ರಮುಖವಾಗಿದ್ದು, ತಂಡದ ಕೋಚ್ ಆಗಿ ಮಹೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ವಲಯ ಮಟ್ಟದಲ್ಲಿಯೂ ಕಾಪ್ಸ್ ಶಾಲೆಯ ತಂಡ ಉತ್ತಮ ಪ್ರದರ್ಶನ ನೀಡಿ ಕೊಡಗಿಗೆ ಕೀರ್ತಿ ತರಲಿ ಎಂಬ ಶುಭಾಶಯಗಳು ವ್ಯಕ್ತವಾಗಿವೆ.
ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕ ಪೊನ್ನಣ್ಣ ವಿರಾಜಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ವಿರಾಜಪೇಟೆ ತಾಲೂಕಿನ ಕೊಮ್ಮೆತೋಡು ಗ್ರಾಮದಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕ್ರೀಡಾಕೂಟಕ್ಕೆ ಶುಭ ಹಾರೈಸಿ ಮಾತನಾಡಿದ ಶಾಸಕ ಪೊನ್ನಣ್ಣ, ಕೊಡಗು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿರುವ ಕೆಸರುಗದ್ದೆ ಕ್ರೀಡೆ ಇಂದಿಗೂ ಯುವಜನರನ್ನು ಆಕರ್ಷಿಸುತ್ತಿದೆ ಎಂದರು. ನಮ್ಮ ಪೂರ್ವಜರು ಗದ್ದೆಯಲ್ಲಿ ನಾಟಿ ಕಾರ್ಯ ಆರಂಭಿಸುವ ಮುನ್ನವೇ ಕೆಸರುಗದ್ದೆ ಕ್ರೀಡೆಗಳನ್ನು ಆಯೋಜಿಸುತ್ತಿದ್ದರು. ಗದ್ದೆಯ ಮಣ್ಣನ್ನು ಕೃಷಿಗೆ ಮತ್ತಷ್ಟು ಯೋಗ್ಯಗೊಳಿಸುವ ಉದ್ದೇಶವೂ ಈ ಕ್ರೀಡೆಯ ಹಿಂದೆ ಅಡಗಿತ್ತು. ಹೀಗಾಗಿ ಗ್ರಾಮೀಣ ಕ್ರೀಡೆಗಳು ಕೇವಲ ಮನರಂಜನೆಯಲ್ಲ, ಕೃಷಿ ಬದುಕು ಹಾಗೂ ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪರಂಪರೆಯ ಭಾಗವಾಗಿವೆ ಎಂದು ಅವರು ಹೇಳಿದರು. ಇಂತಹ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಸಕರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ…
ಕಾಫಿ ತೋಟದಲ್ಲಿ ಕಾಡಾನೆ ದಾಳಿ: ಕಾರ್ಮಿಕನಿಗೆ ಗಂಭೀರ ಗಾಯ ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಯಡೂರು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಸುವನ್ನು ನೋಡಲು ಕಾಫಿ ತೋಟಕ್ಕೆ ತೆರಳಿದ್ದ ಅಣ್ಣಪ್ಪ (40) ಎಂಬ ಕಾರ್ಮಿಕನ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ಅಣ್ಣಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಆಗಮಿಸಿದ್ದಾರೆ. ಗಾಯಗೊಂಡ ಅಣ್ಣಪ್ಪ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಮಡಿಕೇರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಯಡೂರು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಸುಂಟಿಕೊಪ್ಪ: ಗದ್ದೆಹಳ್ಳ ಬಸ್ ನಿಲ್ದಾಣದಲ್ಲಿ ವೃದ್ಧರೊಬ್ಬರು ಮಳೆ–ಗಾಳಿಯ ನಡುವೆಯೇ ನೆಲದ ಮೇಲೆ ಮಲಗಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ. ಆಶ್ರಯವಿಲ್ಲದೆ ಬಸ್ ನಿಲ್ದಾಣವನ್ನೇ ಆಸರೆಯಾಗಿಸಿಕೊಂಡಿರುವ ವೃದ್ಧರಿಗೆ ಸ್ಥಳೀಯರು ತಮ್ಮ ಕೈಲಾದಷ್ಟು ಊಟೋಪಚಾರ ಹಾಗೂ ಮಾನವೀಯ ನೆರವು ನೀಡುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ನೆಲದ ಮೇಲೆಯೇ ಮಲಗುವ ಪರಿಸ್ಥಿತಿ ವೃದ್ಧರಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಮಡಿಕೇರಿ ಭಾಗದ ಕೆಲ ವೃದ್ಧಾಶ್ರಮಗಳಲ್ಲಿ ಹಾಸಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇದೆ ಎಂದು ವೃದ್ಧರು ಹೇಳುತ್ತಿರುವ ಹಿನ್ನೆಲೆಯಲ್ಲಿ, ಈ ವೃದ್ಧರಿಗೆ ಸುರಕ್ಷಿತ ಆಶ್ರಯ ಕಲ್ಪಿಸುವ ಅಗತ್ಯವಿದೆ. ಮನುಷ್ಯತ್ವ ಇನ್ನೂ ಜೀವಂತವಿದ್ದರೆ, ಈ ವೃದ್ಧರತ್ತ ಒಂದು ಸಹಾಯದ ಕೈ ಚಾಚೋಣ. ಯಾರಾದರೂ ಸಂಘ-ಸಂಸ್ಥೆಗಳು, ದಾನಿಗಳು ಅಥವಾ ಸಮಾಜ ಸೇವಕರು ಮುಂದೆ ಬಂದು ವೃದ್ಧರಿಗೆ ಸುರಕ್ಷಿತ ವಸತಿ, ಆಹಾರ ಮತ್ತು ಅಗತ್ಯ ಆರೈಕೆ ಒದಗಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. 👉 ವೃದ್ಧರಿಗೆ ನೆರವು ನೀಡಲು ಸಾಧ್ಯವಿರುವವರು ದಯವಿಟ್ಟು ಸ್ಥಳೀಯರು ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಮಾನವೀಯ ನೆರವಿಗೆ ಮುಂದಾಗಬೇಕು.
ಮಡಿಕೇರಿ: ಕೊಡಗು ಪತ್ರಕತ೯ರ ಸಂಘ(ರಿ)ದ ವಾಷಿ೯ಕ ಮಹಾಸಭೆಯು ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು. ರಾಜ್ಯ ಚೇಂಬರ್ ಆಫ್ ಕಾಮಸ್೯ ವತಿಯಿಂದ ಅತ್ಯುತ್ತಮ ಉದ್ಯಮಕ್ಕಾಗಿನ ಪ್ರಶಸ್ತಿಗೆ ಭಾಜನರಾದ ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್, ಕನ್ನಡ ಭವನ ಸಂಸ್ಥೆಯಿಂದ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ತಮಿಳು ಪತ್ರಕತ೯ರ ಸಂಘದ ಪ್ರಶಸ್ತಿಗೆ ಭಾಜನರಾದ ಎಸ್.ಎಂ.ಮುಬಾರಕ್, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಕ್ಕೆ ಭಾಜನರಾಗಿದ್ದ ಬಿ.ಸಿ. ದಿನೇಶ್, ಎನ್ ಎಸ್ ಎಸ್ ಸಂಸ್ಥೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಡಾ. ಎಂ.ಎನ್. ವನಿತ್ ಕುಮಾರ್, ಬುದ್ದ ನಾಡ ಭೂಷಣ ಪ್ರಶಸ್ತಿ ಪಡೆದ ಜಯಪ್ಪ ಹಾನಗಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಮಾತನಾಡಿ 15 ತಿಂಗಳಿನಿಂದ ಸಂಘವು ವ್ಯೆವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಮಾಜ ಮುಖಿಯಾಗಿದೆ. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಉತ್ತಮ…
ಕುಶಾಲನಗರ: ನಿನ್ನೆ ಮೊನ್ನೆಯವರೆಗೂ ಮನೆಯಂಗಳದಲ್ಲಿ ನಗುತ್ತಾ, ಓಡಾಡುತ್ತಾ ಆಟವಾಡುತ್ತಿದ್ದ ನಾಲ್ಕು ವರ್ಷದ ಪುಟ್ಟ ಕಂದಮ್ಮ ಅಪೂರ್ವ, ದುರಾದೃಷ್ಟವಶಾತ್ ಗೇಟ್ ಬಿದ್ದು ಮೃತಪಟ್ಟಿರುವ ಘಟನೆ ಬಸವನಹಳ್ಳಿ ಹಾಡಿಯಲ್ಲಿ ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಮಗುವಿನ ಅಗಲಿಕೆಯ ನೋವಿನಿಂದ ಕಂಗೆಟ್ಟಿರುವ ಕುಟುಂಬದ ಮನೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ, ಪುಟ್ಟ ಅಪೂರ್ವನಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ದುಃಖತಪ್ತ ಪೋಷಕರನ್ನು ಭೇಟಿಯಾಗಿ, ಅವರ ನೋವಿಗೆ ಸಾಂತ್ವನ ಹೇಳಿದರು. ಮಗುವನ್ನು ಕಳೆದುಕೊಂಡ ತಾಯಿಯ ಕಣ್ಣೀರು… ತಂದೆಯ ಮೌನದ ನೋವು… ಕಂಡು ಶಾಸಕ ಮಂತರ್ ಗೌಡ ಭಾವುಕರಾದರು. ಇಂತಹ ದುರಂತ ಮತ್ತೊಂದು ಕುಟುಂಬಕ್ಕೆ ಎದುರಾಗದಂತೆ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. “ನಾಲ್ಕು ವರ್ಷದ ಕಂದಮ್ಮನನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಅಪೂರ್ವನ ಕುಟುಂಬದ ಈ ಕಷ್ಟದ ಸಮಯದಲ್ಲಿ ಅವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ” ಎಂದು ಪೋಷಕರಿಗೆ ಧೈರ್ಯ ತುಂಬಿದರು. ನಗುತ್ತಾ ಓಡಾಡಬೇಕಿದ್ದ ಪುಟ್ಟ ಹೆಜ್ಜೆಗಳು ಶಾಶ್ವತವಾಗಿ ನಿಂತುಹೋಗಿದ್ದು,…
ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆಟೋ ಚಾಲಕನಿಗೆ ₹12 ಸಾವಿರ ದಂಡ ಸಿದ್ದಾಪುರ: ಮದ್ಯಪಾನ ಮಾಡಿ ಆಟೋ ರಿಕ್ಷಾ ಚಲಾಯಿಸುತ್ತಿದ್ದ ಚಾಲಕನ ವಿರುದ್ಧ ಕೊಡಗು ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ನ್ಯಾಯಾಲಯವು ₹12,000 ದಂಡ ವಿಧಿಸಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಆಟೋ ಚಾಲಕ ಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪಿಸಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ, ಮಡಿಕೇರಿ ₹12 ಸಾವಿರ ದಂಡ ವಿಧಿಸಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಚಾಲಕನಷ್ಟೇ ಅಲ್ಲದೆ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೂ ಅಪಾಯ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸರು ಎಚ್ಚರಿಸಿದ್ದಾರೆ. “ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ – ನಿಮ್ಮ ಜೀವ, ಮತ್ತೊಬ್ಬರ ಜೀವದ ಜೊತೆ ಆಟವಾಡಬೇಡಿ” ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಾಲ್ದಾರೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ; ಗ್ರಾಮಸ್ಥರಲ್ಲಿ ನಿಟ್ಟುಸಿರು ಮಾಲ್ದಾರೆ: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗದ್ದೆ ಜಯಾ ಅವರ ತೋಟದಲ್ಲಿ ಆ.6ರಂದು ಚಿರತೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದು, ಆ.7ರಂದು ಶುಕ್ರವಾರ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಕುಶಾಲನಗರ ವಲಯ, ಆನೆಚೌಕೂರು ವಲಯ ಹಾಗೂ ತಿತಿಮತಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆರ್‌ಆರ್‌ಟಿ ತಂಡದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆ ಸೆರೆ ಸಿಕ್ಕಿರುವುದರಿಂದ ಮಾಲ್ದಾರೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಮುಂದೆ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಯಾವುದೇ ಆತಂಕವಿಲ್ಲದೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆ.7: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅತ್ತೂರು ಗ್ರಾಮದ ತಿರುಮಲ ಎಸ್ಟೇಟ್‌ನಲ್ಲಿ ಕಾನೂನುಬಾಹಿರವಾಗಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಐವರು ವಲಸೆ ಕಾರ್ಮಿಕರನ್ನು ಗೋಣಿಕೊಪ್ಪಲು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 6 ಕೆ.ಜಿ. 950 ಗ್ರಾಂ ಒಣಗಿದ ಗಾಂಜಾ ಹಾಗೂ ಪ್ಯಾಕಿಂಗ್‌ಗೆ ಬಳಸುತ್ತಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ 2026ರ ಆಗಸ್ಟ್ 5ರಂದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಮೊ.ಸಂ.100/2026 ದಾಖಲಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆ ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್ ಎಸ್. ಅವರ ಉಸ್ತುವಾರಿಯಲ್ಲಿ, ಗೋಣಿಕೊಪ್ಪಲು ವೃತ್ತದ ಸಿಐ ಶಿವರಾಜ್ ಆರ್. ಹಾಗೂ ಪಿಎಸ್‌ಐ ಕಾಳೇಗೌಡ ಅವರ ನೇತೃತ್ವದಲ್ಲಿ ನಡೆದಿದ್ದು, ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ…
