ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ
ಮಡಿಕೇರಿ: ಬಿಳಿಗೇರಿ ಹೊಳೆಯಲ್ಲಿ ಸುಮಾರು 45ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಇಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ, ಬಿಳಿಗೇರಿ ಹೊಳೆಯಲ್ಲಿ ಕುಡೆಕಲ್ಲು ರಾಮಯ್ಯ, ವೇದಾವತಿ ಹಾಗೂ ದಂಬೇಕೋಡಿ ಲವಕುಮಾರ್ ಅವರ ತೋಟದ ಸಮೀಪ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತ ವ್ಯಕ್ತಿಯ ಗುರುತು ಹಾಗೂ ವಾರಸುದಾರರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮೃತದೇಹದ ವಾರಸುದಾರರು ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
📞 ಮಡಿಕೇರಿ ಗ್ರಾಮಾಂತರ ಠಾಣೆ: 9480804956
📞 ಪೊಲೀಸ್ ಕಂಟ್ರೋಲ್ ರೂಮ್: 8272228330

