Author: Kodagu-admin

ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜ ವರ್ಗಾವಣೆ. ಎಸ್. ಜೆ. ಸೋಮಶೇಖರ್ ನೂತನ ಜಿಲ್ಲಾಧಿಕಾರಿಯಾಗಿ ನೇಮಕ. ಕೊಡಗಿನಲ್ಲಿ ನಿಷ್ಠಾವಂತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ವರ್ಗಾವಣೆಗೊಂಡಿದ್ದಾರೆ ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕೊಡಗು ನ್ಯೂಸ್

Read More

ಕೊಡಗು ಎಸ್ಪಿ ರಾಮರಾಜನ್ ವರ್ಗಾವಣೆ. ಬಿಂದು ಮಣಿ ನೂತನ SP. ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಕೊಡಗು ನೂತನ ಎಸ್ಪಿ ನೇಮಕಖಾಲಿಯಾದ ಸ್ಥಾನಕ್ಕೆ ಶ್ರೀಮತಿ ಬಿಂದುಮಣಿ* ಅವರನ್ನು ಕೊಡಗು ಜಿಲ್ಲೆಯ ನೂತನ ಪೊಲೀಸ್ *ವರಿಷ್ಠಾಧಿಕಾರಿಯಾಗಿ (SP) ನೇಮಕ ಮಾಡಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Read More

ಅರಣ್ಯ ಇಲಾಖೆ ಸಿಬ್ಬಂದಿಯ ಸಾಥ್ ನಿಂದ 18 ತೇಗದ ಮರಕ್ಕೆ ಕೊಡಲಿ ಏಟು ಸೋಮವಾರಪೇಟೆಯಲ್ಲಿ ನಿರಂತರ ಮರಗಳ ಕಳ್ಳತನ ಅರಣ್ಯ ಇಲಾಖೆ ಸಿಬ್ಬಂದಿ ಮನೆ ಮೇಲೆ ದಾಳಿ ನಡೆಸಿದ್ದು ಕಳ್ಳತನಕ್ಕೆ ಅರಣ್ಯ ಇಲಾಖೆಯೇ ಶಾಮಿಲಾಗಿರುವುದು ವಿಪರ್ಯಾಸ ಐಗೂರು ಕಾಜೂರು ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಮರಗಳ ಹನನ 18 ತೇಗದ ಮರಕ್ಕೆ ಕೊಡಲಿ ಏಟು ಉದ್ಯಮಿಯ ಮನೆಯಲ್ಲಿ ಅರಣ್ಯದ ಬೆಲೆಬಾಳುವ ಮರಗಳು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದ ಘಟನೆ ಎಡವಾರೆ ಗ್ರಾಮದಲ್ಲಿ ಭವ್ಯ ಬಂಗಲೆ ನಿರ್ಮಿಸಲು ಮರಗಳ ಬಳಕೆ ಕಳ್ಳತನಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಸಾಥ್ ಆರ್.ಆರ್.ಟಿ ಸಿಬ್ಬಂದಿ ವಿನೋದ್ ಪ್ರಮುಖ ಪಾತ್ರದ ಆರೋಪ ಹಳೆಯ ಕಳ್ಳತನಕ್ಕೆ ಆರ್ ಆರ್ ಟಿ ಸಿಬ್ಬಂದಿ ಸಾಥ್ ಸರ್ಚ್ ವಾರಂಟ್ ಸಹಿತ ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯ ಮೇಲೆ ದಾಳಿ ಪ್ರಭಾವಿ ಉದ್ಯಮಿ ದಯಾನಂದ್ ಗೆ ಸೇರಿದ ಭವ್ಯ ಬಂಗಲೆ ಇದಾಗಿದ್ದು ಭವ್ಯ ಬಂಗಲೆ ನಿರ್ಮಿಸಲು ತೇಗದ ಮರಗಳನ್ನು ಬಳಸಿರುವ ಶಂಕೆ. ಉದ್ಯಮಿ ಕಡೆಯಿಂದ…

Read More

ಶಿವಗಿರಿ ಮಠಕ್ಕೆ ಪೊನ್ನಣ್ಣ ಜೊತೆ ಸಿದ್ದರಾಮಯ್ಯ ಭೇಟಿ ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ಗೌರವ ಸಲ್ಲಿಸಿದರು. ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಜರಿದ್ದರು. ಕೊಡಗು ನ್ಯೂಸ್

Read More

ಕುಶಾಲನಗರದ ಹೆಸರಾಂತ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್ ಇನ್ನಿಲ್ಲ. ಮಡಿಕೇರಿಯಲ್ಲಿ ಹಲವು ವರ್ಷಗಳ ಕಾಲ ಅತಿಥಿ ಹೋಟೆಲ್ ನಡೆಸುತ್ತಿದ್ದರು. ಅನಂತರ ಕುಶಾಲನಗರದ ಪ್ರವೇಶದಲ್ಲಿ ಅತಿಥಿ ರೆಸ್ಟೋರೆಂಟ್ ಆರಂಭ ಮಾಡಿದ್ದರು. ಕ್ರಿಯಾಶೀಲ ಪ್ರವಾಸೋದ್ಯಮಿ ಆಗಿದ್ದ ಭಾಸ್ಕರ್ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ನಲ್ಲಿ ಸಕ್ರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಭಾಸ್ಕರ್ ನಿಧನಕ್ಕೆ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ. ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಆರ್.ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅನೇಕ ದಿನಗಳ ಅನಾರೋಗ್ಯದ ಬಳಿಕ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾದ ಭಾಸ್ಕರ್ ಅವರ ಪಾರ್ಥಿವ ಶರೀರ ಇಂದು ಮಧ್ಯಾನ 3 ಗಂಟೆ ವೇಳೆಗೆ ಕುಶಾಲನಗರ ತಲುಪುವ ನಿರೀಕ್ಷೆ ಇದೆ. ಕೊಡಗು ನ್ಯೂಸ್

Read More

ಅಕ್ರಮ ಬೇಟೆಗೆ ಯತ್ನ ಮೂವರ ಬಂಧನ ಸೋಮವಾರಪೇಟೆ ಸಮೀಪದ ಬಾಣವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆ ನಡೆಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅರಣ್ಯಕ್ಕೆ ನುಗ್ಗಿ ಬೇಟೆ ನಡೆಸುತ್ತಿದ್ದ ವೇಳೆ RFO ಶೈಲೇಂದ್ರ ಅವರ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಬಂಧಿತರನ್ನು ಭಾನು ಪ್ರಕಾಶ್ (46), ಭರತ್ (40) ಹಾಗೂ ಚಿನ್ನಪ್ಪ (38) ಮೂವರು ಯಡೂರು ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಬಂಧಿತರ ಬಳಿ ಇದ್ದ ದೇಶಿ ಮೂರು ಬಂದೂಕು, ಜೀವಂತ ಗುಂಡುಗಳು ಬೇಟೆಗೆ ಬಳಸುವ ಉಪಕರಣಗಳನ್ನು ಹಾಗೂ ಆಲ್ಟೊ ಕಾರ್ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಆರೋಪಿಗಳು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ವನ್ಯಜೀವಿಗಳ ಬೇಟೆಗೆ ಮುಂದಾಗಿದ್ದರೆಂದು ತಿಳಿದುಬಂದಿದೆ. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

Read More

ಕುಶಾಲನಗರ- ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮಾದಕ ವಸ್ತು ಸೇವನೆ, ಮಾರಾಟ ಪ್ರತ್ಯೇಕ ಪ್ರಕರಣ -ಆರೋಪಿಗಳು ಅಂದರ್ ಕುಶಾಲನಗರ, ಡಿ 30:ಡಿಸೆಂಬರ್-2025 ನೇ ತಿಂಗಳಿನಲ್ಲಿ ಜಿಲ್ಲೆ/ ಹೊರಜಿಲ್ಲೆ/ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೆವಾ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ/ ಸರಬರಾಜು/ಬಳಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತ ಕ್ರಮವಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಸುಂಟಿಕೊಪ್ಪ, ಕುಪಾಲನಗರ ಟೌನ್ & ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸರಬಾರಜು ಮಾಡಿರುವ ಕುರಿತು 03 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಒಟ್ಟು 05 ಆರೋಪಿಗಳನ್ನು ದಸ್ತಗಿರಿ ಮಾಡಿ, ಒಟ್ಟು 16.97 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಮಾದಕ ವಸ್ತು ಬಳಕೆ/ಸೇವನೆ ಮಾಡಿರುವ ಕುರಿತು ಸುಂಟಿಕೊಪ್ಪ, ಕುಶಾಲನಗರ ಟೌನ್ & ಗ್ರಾಮಾಂತರ ಪೊಲೀಸ್ ತಾಣೆಯಲ್ಲಿ 16 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 57 ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.…

Read More

ಮಡಿಕೆರಿ: 2026 ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಜಿಲ್ಲೆ/ ಹೊರಜಿಲ್ಲೆ/ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೆವಾ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ಬಳಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿಗೆ ಸಂಖ್ಯೆ: 08272- 228300, 9480804900 ಕ್ಕೆ ಕರೆ ಮಾಡಿ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ. // Noise Pollution (Regulation and Control) Rules- 2000 ರ ಅನ್ವಯ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಂಗಡಿಸಿರುವ ಪ್ರದೇಶಗಳಲ್ಲಿ ನಿಗಧಿಪಡಿಸಿರುವ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಸಿಸ್ಟಂ/ಧ್ವನಿವರ್ಧಕಗಳನ್ನು ಉಪಯೋಗಿಸಬಾರದು ಹಾಗೂ ಪ್ರವಾಸಿಗರು ಬಳಸಲು ಯಾವುದೇ ರೀತಿಯ ಅವಕಾಶಗಳನ್ನು ನೀಡಬಾರದು. ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ಬಳಕೆ ಮಾಡುವುದು ಕಂಡುಬಂದಲ್ಲಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಮತ್ತು ಮಾಹಿತಿ ನೀಡದೇ…

Read More

ಮೂರ್ನಾಡಿನಲ್ಲಿ ಲೆವಿಷ್ಟಾ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿಯ ಫೈನಲ್:- ಮುಖ್ಯ ಅತಿಥಿಗಳಾಗಿ ಎ ಎಸ್ ಪೊನ್ನಣ್ಣ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜನೆಗೊಂಡಿರುವ, ಲೆವಿಷ್ಟಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಭಾಗವಹಿಸಿದರು. ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಈ ಪಂದ್ಯಾಟದ ಫೈನಲ್ ಪಂದ್ಯದ ವೀಕ್ಷಣೆಗೆ ಹಾಗೂ ಪ್ರಶಸ್ತಿ ವಿತರಣೆಗೆ ಮಾನ್ಯ ಶಾಸಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಫೈನಲ್ ಪಂದ್ಯಕ್ಕೆ ಶುಭ ಕೋರುತ್ತಾ ಮಾತನಾಡಿದ ಮಾನ್ಯ ಶಾಸಕರು, ಕೊಡಗಿನ ಅದರಲ್ಲೂ ವಿಶೇಷವಾಗಿ ಕೊಡವ ಜನರ ಉಸಿರಾಗಿರುವ ಹಾಕಿ ಪಂದ್ಯಾಟ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಖ್ಯಾತಿ ಪಡೆಯುತ್ತಿದ್ದು ಇಂತಹ ಪಂದ್ಯಾವಳಿಗಳು ಯುವ ಪ್ರತಿಭೆಯನ್ನು ಲೋಕಕ್ಕೆ ಪರಿಚಯಿಸಲು ತುಂಬಾ ಸಹಕಾರಿಯಾಗುತ್ತದೆ. ಕೊಡವ ಹಾಕಿ ಅಕಾಡೆಮಿಯ ಈ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದ್ದು ನಾಡಿನ ಯುವ ಪ್ರತಿಭೆಯನ್ನು ಲೋಕಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ.…

Read More

ನಿರೂಪಕಿ ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು ಇವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ “2026. ಕೊಡಗಿನ ಬಹಳಷ್ಟು ಕಾರ್ಯಕ್ರಮಗಳಲ್ಲಿ, ಕಾರ್ಯಕ್ರಮದ ನಿರೂಪಣೆಯ ಮೂಲಕ ಜನಮನಗೆದ್ದಿರುವ ಯುವ ಪ್ರತಿಭೆ ನಿರೂಪಕಿ ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಯನ್ನು ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಘೋಷಿಸಿದ್ದಾರೆ ಎಂದು ಕೊಡಗು ಕನ್ನಡ ಭವನದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Read More