Close Menu
Kodagu News
    ಹೊಸ ಸುದ್ದಿ

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ
    • ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ
    • ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಉಲ್ಲಂಗಿಸಿದರೆ ಕಠಿಣ ಕ್ರಮ: ಎಸ್ಪಿ, ಕೆ ರಾಮರಾಜನ್
    ಅಡುಗೆ ಮನೆ

    ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಉಲ್ಲಂಗಿಸಿದರೆ ಕಠಿಣ ಕ್ರಮ: ಎಸ್ಪಿ, ಕೆ ರಾಮರಾಜನ್

    ಮಡಿಕೆರಿ: 2026 ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಜಿಲ್ಲೆ/ ಹೊರಜಿಲ್ಲೆ/ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೆವಾ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ಬಳಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿಗೆ ಸಂಖ್ಯೆ: 08272- 228300, 9480804900 ಕ್ಕೆ ಕರೆ ಮಾಡಿ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ.

    // Noise Pollution (Regulation and Control) Rules- 2000 ರ ಅನ್ವಯ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಂಗಡಿಸಿರುವ ಪ್ರದೇಶಗಳಲ್ಲಿ ನಿಗಧಿಪಡಿಸಿರುವ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಸಿಸ್ಟಂ/ಧ್ವನಿವರ್ಧಕಗಳನ್ನು ಉಪಯೋಗಿಸಬಾರದು ಹಾಗೂ ಪ್ರವಾಸಿಗರು ಬಳಸಲು ಯಾವುದೇ ರೀತಿಯ ಅವಕಾಶಗಳನ್ನು ನೀಡಬಾರದು.

    ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ಬಳಕೆ ಮಾಡುವುದು ಕಂಡುಬಂದಲ್ಲಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಮತ್ತು ಮಾಹಿತಿ ನೀಡದೇ ಮಾದಕ ವಸ್ತುಗಳನ್ನು ಮಾರಟ/ಬಳಕೆ ಮಾಡಲು ಸಹಕರಿಸಿರುವುದು ಕಂಡುಬಂದಲ್ಲಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳ ಮಾಲೀಕರು ಹಾಗೂ ಮಧ್ಯವರ್ತಿಗಳ ವಿರುದ್ಧ ಕಲಂ: 25 ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಪರವಾನಿಗೆ ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

    ದಿನಾಂಕ: 31-12-2025 ರಂದು ಹೊಸ ವರ್ಷದ ಸಂಬಂಧ ಜಿಲ್ಲಾದ್ಯಂತ ಸಂಭ್ರಮಾಚರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿರುತ್ತಾರೆ. ಸದರಿ ಸಂಭ್ರಮಾಚರಣೆಯ ಸಮಯದಲ್ಲಿ ವಿದೇಶಿಯರೂ ಸೇರಿದಂತೆ ಜಿಲ್ಲೆಯ, ರಾಜ್ಯದ ಹಾಗೂ ಹೊರರಾಜ್ಯಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದುದರಿಂದ ಹೊಸ ವರ್ಷಾಚರಣೆ ವೇಳೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಕೆಳಕಂಡಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿರುತ್ತದೆ.

    1. ದಿನಾಂಕ 31-12-2025 ಹಾಗೂ ದಿನಾಂಕ 01-01-2026 ರಂದು ಹಗಲು ಮತ್ತು ರಾತ್ರಿ ತಪ್ಪದೆ ಗಸ್ತು ಕರ್ತವ್ಯಕ್ಕೆ ಹಾಗೂ ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆಯುವ ಸಂದರ್ಭದಲ್ಲಿ ಅಗತ್ಯ ಸಿಬ್ಬಂದಿಯವರನ್ನು ನೇಮಿಸಲಾಗಿರುತ್ತದೆ.

    2. ಠಾಣಾ ಸರಹದ್ದಿನಲ್ಲಿರುವ ಎಲ್ಲಾ ಕ್ಲಬ್, ಲಾಡ್ಜ್, ರೆಸಾರ್ಟ್, ಹೋಂಸ್ಟೇ, ಗಳನ್ನು ಮುಂಚಿತವಾಗಿ ಪರಿಶೀಲನೆ ನಡೆಸಿ ಸಮರ್ಪಕ ರಿಜಿಸ್ಟರ್ ನಿರ್ವಹಿಸುವ ಕುರಿತು ಹಾಗೂ ರಿಜಿಸ್ಟರ್ ನಿರ್ವಹಿಸದೇ ಇದ್ದಲ್ಲಿ ಕಡ್ಡಾಯವಾಗಿ ನಿರ್ವಹಣೆ ಮಾಡುವಂತೆ ಸೂಕ್ತ ತಿಳುವಳಿಕೆ ನೀಡಲಾಗಿದೆ. ಅಲ್ಲದೆ ಸದರಿ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಟಿವಿಗಳು ಸುಸ್ಥಿತಿಯಲ್ಲಿರುವ ಬಗ್ಗೆ ಸೂಚನೆಗಳನ್ನು ನೀಡಲಾಗಿರುತ್ತದೆ.

    3. ಕ್ಲಬ್, ಲಾಡ್ಜ್, ರೆಸಾರ್ಟ್, ಹೋಂಸ್ಟೇ ಗಳಿಗೆ ಆಗಮಿಸುವ ಪ್ರವಾಸಿಗರ ಪೂರ್ಣ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ನಮೂದಿಸುವಂತೆ ಹಾಗೂ ಭಾವಚಿತ್ರವಿರುವ ಯಾವುದಾದರೊಂದು ಮಾನ್ಯತೆ ಪಡೆದ ದಾಖಲಾತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ತಿಳುವಳಿಕೆ ನೀಡಲಾಗಿರುತ್ತದೆ.

    4. ಮದ್ಯದಂಗಡಿಗಳನ್ನು ನಿಗದಿತ ಸಮಯದಲ್ಲಿ ತೆರೆಯುವಂತೆ ಹಾಗೂ ಮುಚ್ಚುವಂತೆ ಸಂಬಂಧಪಟ್ಟ ಮಾಲೀಕರು / ವ್ಯವಸ್ಥಾಪಕರು / ಮಾರಾಟಗಾರರಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವುದು.
    5. ಕ್ಲಬ್, ಲಾಡ್ಜ್, ರೆಸಾರ್ಟ್, ಹೋಂಸ್ಟೇಗಳಲ್ಲಿ ನಡೆಸುವ ಮನೋರಂಜನಾ ಕಾರ್ಯಕ್ರಮಗಳನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಸುವಂತೆ ಮಾಲೀಕರಿಗೆ ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ.

    6. ಕ್ಲಬ್, ಲಾಡ್ಜ್, ರೆಸಾರ್ಟ್, ಹೋಂಸ್ಟೇಗಳಲ್ಲಿ ಹೊಸ ವರ್ಷಾಚರಣೆಯ ನೆಪದಲ್ಲಿ ಯಾವುದೇ ರೀತಿಯ ನಿಷೇದಿತ ಮಾದಕ ವಸ್ತುಗಳನ್ನು ಬಳಸುವ ಬಗ್ಗೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು.

    7. ಮಾದಕ ವಸ್ತುಗಳ ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದಲ್ಲಿ ಸಂಬಂದಪಟ್ಟ ಕ್ಲಬ್, ಲಾಡ್ಜ್, ರೆಸಾರ್ಟ್, ಹೋಂಸ್ಟೇಗಳ ಮಾಲೀಕರು / ವ್ಯವಸ್ಥಾಪಕರ / ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

    8. ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಳ್ಳುವಂತೆ ಹಾಗೂ ಘನ ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನು ಹಾಗೂ ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

    9. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಿಡಿ ಮದ್ದುಗಳನ್ನು ಸಿಡಿಸದಂತೆ ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿ / ಸಿಬ್ಬಂದಿಯವರನ್ನು ನೇಮಿಸಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿರುತ್ತದೆ.

    10. ಹೊಸ ವರ್ಷಾಚರಣೆಯ ವೇಳೆಯಲ್ಲಿ ನಡೆಸುವ ಕಾರ್ಯಕ್ರಮಗಳಿಂದ ನೆರೆಹೊರೆಯವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವುದು.

    11. ಠಾಣಾ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶ, ನದಿ ತೀರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಸಮಾರಂಭಗಳನ್ನು, ಡಿ.ಜೆ ಬಳಸುವುದನ್ನು ಅಥವಾ ಪಾರ್ಟಿ ಆಯೋಜಿಸುವುದನ್ನು ನಿಷೇದಿಸಲಾಗಿದೆ.

    12. ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಚೆಕ್‌ ಪೋಸ್ಟ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ | ಸಿಬ್ಬಂದಿಯವರನ್ನು ನೇಮಿಸಿ ಯಾವುದೇ ರೀತಿಯ ಕಾನೂನು ಬಾಹಿರ / ನಿಷೇಧಿತ ವಸ್ತುಗಳ ಸಾಗಾಟವಾಗದಂತೆ ಆಯಕಟ್ಟಿನ ಸ್ಥಳಗಳಲ್ಲಿ ಹೊಸದಾಗಿ ಚೆಕ್‌ ಪೋಸ್ಟ್‌ಗಳನ್ನು ತೆರೆದು ತಪಾಸಣಾ ಕಾರ್ಯವನ್ನು ಕೈಗೊಳ್ಳಲಾಗುವುದು.

    ವಿಶೇಷ ಸೂಚನೆ: ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು

    ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.

    Previous Articleಮೂರ್ನಾಡಿನಲ್ಲಿ ಲೆವಿಷ್ಟಾ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿಯ ಫೈನಲ್
    Next Article ಕುಶಾಲನಗರ MDMA ಮಾರಾಟ ಸೇವನೆ ಆರೋಪಿಗಳು ಅಂದರ್

    Related Posts

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.