- ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
Author: Kodagu-admin
ಗೋಣಿಕೊಪ್ಪ ಹಾತೂರು ಸಮೀಪ ಬೈಕ್ -ಲಾರಿ ನಡುವೆ ಅಪಘಾತ-ಚಿಕಿತ್ಸೆ ಫಲಿಸದೆ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆ ಯಲ್ಲಿ ಸವಾರ ಮೃತ್ಯು ಬೆಕ್ಕೆಸುಡ್ಲೂರು ನಿವಾಸಿ ಸುಳ್ಳಿಮಾಡ ಭಜನ್ ದೇವಯ್ಯ (27)ಮೃತ ದುರ್ದೈವಿ ಸವಾರ ಎಂದು ತಿಳಿದು ಬಂದಿದೆ. ಕೊಡಗಿನಿಂದ ಕೇರಳಕ್ಕೆ ಕೊಡಗು ರೈಡರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಯಾತ್ರೆಯಲ್ಲಿ ಪಾಲ್ಗೊಂಡು ಕೇರಳದಿಂದ ಇಂದು ಸಂಜೆ ವಾಪಸಾಗುತ್ತಿದ್ದಾಗ ರಾತ್ರಿ 8:20ರ ಸಮಯದಲ್ಲಿ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಸಮೀಪ ಕಾರು ಒಂದನ್ನು ಓವರ್ಟೇಕ್ ಮಾಡಿ ಮುನ್ನುಗುತ್ತಿದ್ದಾಗ ಮುಂಭಾಗದಲ್ಲಿ ಬಂದ ಲಾರಿಗೆ ಡಿಕ್ಕಿ ಪಡಿಸಿದ್ದಾನೆ ಎಂದು ಹೇಳಲಾಗಿದೆ. ಮೃತ ಯುವಕನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಬೆಕ್ಕೆಸುಡ್ಲೂರಿನಲ್ಲಿ ತನ್ನ ಮಗಳ ಮದುವೆಯ ಸಂದರ್ಭದಲ್ಲಿ ಅಪಘಾತಕಿಡಾಗಿ ಮೃತಪಟ್ಟಿದ್ದರು. ನಂತರ ಮೃತನ ತಾಯಿ ಕೂಡ ಗೋಣಿಕೊಪ್ಪಲಿನಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಪಡಿಸಿ ಮೃತಪಟ್ಟಿದ್ದರು. ಯುವಕ ಅವಿವಿವಾಹಿತಾನಾಗಿದ್ದ ಇದೀಗ ಇವರ ಕುಟುಂಬದಲ್ಲಿ ವಿವಾಹವಾದ ಇಬ್ಬರು ಸಹೋದರಿಯರು ಮಾತ್ರವಿದ್ದಾರೆ. ಮೃತ ಯುವಕ ಬೆಕ್ಕೆಸುಡ್ಲೂರಿನಲ್ಲಿ 12 ಏಕರಿಗಿಂತಲೂ ಹೆಚ್ಚು ಕಾಫಿ ತೋಟ ಹಾಗೂ ಗದ್ದೆ…
ಜಿಲ್ಲೆಯ ಸಿದ್ದಾಪುರ ಠಾಣೆ ಮತ್ತು ಚೆಟ್ಟಳ್ಳಿ ಉಪ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಠಾಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭ ಸಿದ್ದಾಪುರ ಠಾಣೆಯ ಪೊಲೀಸ್ ವಸತಿ ಗೃಹಗಳಿಗೂ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಯಿತು.
ಮಡಿಕೇರಿ. ಐಗೂರಿನಲ್ಲಿ ನಡೆಯಲಿರುವ ಸೋಮವಾರಪೇಟೆ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಅಚ್ಚುಕಟ್ಟಾಗಿ ಎಲ್ಲರೂ ನೆನಪಿಸಿಕೊಳ್ಳುವಂತ ರೀತಿಯಲ್ಲಿ ನಡೆಸಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮ್ಮೇಳನದ ಗೌರವಾಧ್ಯಕ್ಷರೂ ಆದ ಡಾ. ಮಂತರ್ ಗೌಡ ನುಡಿದರು. ಅವರು ಐಗೂರಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಉಪಸಮಿತಿಗಳ ಸಮ್ಮೇಳನದ ತಯಾರಿ ಕುರಿತು ವಿವರಣೆ ಪಡೆದರು. ಹಣಕಾಸು ಸಮಿತಿಯ ಅಧ್ಯಕ್ಷ ಕೆ ಪಿ ರಾಯ್, ಆಹಾರ ಸಮಿತಿಯ ಅಧ್ಯಕ್ಷ ಮಚ್ಚಂಡ ಅಶೋಕ್, ಮೆರವಣಿಗೆ ಸಮಿತಿಯ ಅಧ್ಯಕ್ಷ ಡಿ.ಎಸ್. ಚಂಗಪ್ಪ, ವೇದಿಕೆ ತಯಾರಿ ಸಮಿತಿಯ ಅಧ್ಯಕ್ಷ ಸಿ.ಕೆ. ರೋಹಿತ್, ಅಲಂಕಾರ ಸಮಿತಿಯ ಅಧ್ಯಕ್ಷ ಕೆ.ಪಿ ದಿನೇಶ್, ಸ್ಮರಣ ಸಂಚಿಕೆಯ ಸಂಪಾದಕ ಎಸ್.ಎಂ ಚಂಗಪ್ಪ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಮ್ಮೇಳನದ ಹೆಚ್.ಕೆ ಉಮೇಶ್ ತಯಾರಿಗಳ ಕುರಿತು ಮಾಹಿತಿ ನೀಡಿದರು. ಇದು ತಾಲೂಕು ಸಮ್ಮೇಳನವಾದರೂ ಐಗೂರು ಮತ್ತು ಸುತ್ತಮುತ್ತಲ…
ಶಾಸಕ ಎ. ಎಸ್ ಪೊನ್ನಣ್ಣನವರಿಂದ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿ ಪರಿಶೀಲನೆ ವಿ ಬಾಡಗದಲ್ಲಿ ಆಯೋಜನೆಗೊಂಡ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ವಿ.ಬಾಡಗದಲ್ಲಿ ನಡೆಯುತ್ತಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಯನ್ನು ಮಾನ್ಯ ಶಾಸಕರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರೊಂದಿಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕಾಮಗಾರಿ ಹಾಗೂ ರೂಪುರೇಷೆಗಳ ಬಗ್ಗೆ ಮಾಹಿತಿ ಒಡಗಿಸಿದರು. ಈ ಸಂದರ್ಭದಲ್ಲಿ ಕೊಲ್ಲಿರ ಬೋಪಣ್ಣ ,ಉಮೇಶ್ ಕೆಚಮಯ್ಯ,ಕಂಜಿತಂಡ ಗಿಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾರ್ಯಪ್ಪ, ತೀತಿಮಾಡ ಸಧಾ, ಕೊಂಗಂಡ ರಚನ್ ಉತಪ್ಪ, ಚೆಂದಂಡ ರಂಜಿತ್, ಚೇಮಿರ ಧವನ್ ದೇವಯ್ಯ, ತೀತಿಮಾಡ ಬೋಸು ಅಯ್ಯಪ್ಪ, ಚೇಮಿರ ಪ್ರಕಾಶ್ ಪೂವಯ್ಯ, ಚಂದುರ ಜಗನ್ ಬೋಪಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಈ ಆತ್ಮೀಯ ನಾಗರೀಕಲ್ಲಿ .. ಮೂಲಕ ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಕೊಡಗು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿರುವ ಬಿಂದು ಮಣಿ ಆರ್. ಎನ್., IPS ರವರು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಸಂಘ -ಸಂಸ್ಥೆಗಳ,ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ದಿನಾಂಕ:-05.01.2026 ರಂದು ಬೆಳಿಗ್ಗೆ 11:00 ಗಂಟೆಗೆ ಮಡಿಕೇರಿ ನಗರದ ಮೈತ್ರಿ ಹಾಲ್ ನಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು ಸದರಿ ಸಭೆಗೆ ತಮ್ಮನ್ನು ನಾವು ಗೌರವ ಪೂರ್ವಕವಾಗಿ ಆಹ್ವಾನಿಸುತ್ತಿದ್ದು ತಾವುಗಳು ಈ ಸಭೆಗೆ ಆಗಮಿಸಿ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಸದರಿ ಜನ ಸಂಪರ್ಕ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೋರಲಾಗಿದೆ…
ಕೊಡವ ಭಾಷೆ 8ನೇ ಪರಿಚ್ಛೇದಕ್ಕೆ ಶೀಘ್ರ ಸೇರ್ಪಡೆ ಆಗುವಂತಾಗಲಿ:ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕೊಡವ ತಕ್ಕ್ ಎಳ್ತ್’ಕಾರಡ ಕೂಟದ 196 ನೇ ಹೆಜ್ಜೆಯ “ಕನ್ಯಾರ್ ಕವನ” ಪುಸ್ತಕ ಬಿಡುಗಡೆ ಕೊಡವ ಭಾಷೆಯ ಸಾಹಿತ್ಯ ಬೆಳವಣಿಗೆಯಾಗುತ್ತಿರುವ ವೇಗ ನೋಡಿದರೆ ಕೊಡವ ಭಾಷೆ ಭಾರತ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರುವ ದಿನ ದೂರವಿಲ್ಲ ಎನಿಸುತ್ತಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡವ ತಕ್ಕ್ ಎಳ್ತ್’ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ‘ಕೂಟ’ ಕೊಡವ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಮಾಡಿದ ಸೇವೆ ಹಾಗೂ ಸಾಧನೆಗಳ ಮಾಹಿತಿ ನೀಡುತ್ತಾ ಕೊಡವರಿಗೆ ಎಡಮ್ಯಾರ್’ನಿಂದ ಮೀನ್ಯಾರ್’ವರೆಗೆ ಅವರದೇ ಆದ ತಿಂಗಳ ಪ್ರತ್ಯೇಕ ಹೆಸರುಗಳಿದ್ದು, ಎಲ್ಲಾ ತಿಂಗಳುಗಳೂ ಈ ಮಣ್ಣಿಗೆ, ಕ್ರಷಿಗೆ, ಕೊಡವರ ಹಬ್ಬಗಳಿಗೆ ಹಾಗೂ ಕೊಡವರ ಬದುಕಿನೊಂದಿಗೆ ಮಿಳಿತಗೊಂಡಿರುವುದಲ್ಲದೆ, ಕೊಡಗಿನ ಪ್ರಕ್ರತಿಯೂ ಇದಕ್ಕೊಪ್ಪುವ ರೀತಿಯ ಬದಲಾವಣೆ ಕಾಣುತ್ತದೆ. ಇದೆಲ್ಲವನ್ನೂ ನಮ್ಮ ಯುವ ಪೀಳಿಗೆಗೆ ಅರ್ಥೈಸುವ…
ಜೋಪಡಿಯಲ್ಲಿದ್ದ ಬೈರಿ ಅಜ್ಜಿಗೆ ಸೂರು ಒದಗಿಸಿ ದೇವರಾದ ಪಿ.ಎಂ. ಲತೀಫ್ ✍️ದೇವಪ್ಪ, ಹರದೂರು ಕೊಡಗು ಜಿಲ್ಲೆಯ ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯಲ್ಲಿ ಬಡ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಾಗಿರುವ ಸುಮಾರು ಇನ್ನೂರು ಮನೆಗಳಿವೆ. ಅವರಲ್ಲಿ ಕೌಟುಂಬಿಕ ಕಲಹದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪರಿಶಿಷ್ಠ ಜಾತಿಯ ಬೈರಿ ಅಜ್ಜಿ ಮತ್ತು ಬುದ್ದಿ ಮಾಂದ್ಯ ಮಗ, ದುಡಿದು ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಸರ್ಕಾರದಿಂದ ಮನೆ ಮಂಜೂರಾಗಿದ್ದರೂ ಕೂಡ ಕಟ್ಟಿಕೊಳ್ಳಲಾಗದೆ ಗುಡಿಸಲಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬದುಕುತಿದ್ದರು. ಅದನ್ನು ಪ್ರಜ್ಞಾವಂತ ನಾಗರಿಕರು ಮಾಧ್ಯಮಗಳ ಮೂಲಕ ಬೆಳಕಿಗೆ ತಂದುದ್ದರಿಂದ ಸರಕಾರ ಮತ್ತು ದಾನಿಗಳ ನೆರವಿನಿಂದ ನೇರವಾಗಿ ಮನೆ ಬಾಗ್ಯ ಒಲಿದು ಬಂತು. ಶಾಸಕರಾದ ಡಾ. ಮಂತರ್ ಗೌಡ ಹಾಗೂ ದಾನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಂಟಿಕೊಪ್ಪದ ಪಿ.ಎಂ. ಲತೀಪ್ ರವರು ಮಾನವೀಯತೆ ಮೆರೆದು ಮನೆ ನಿರ್ಮಿಸಿ ಕೊಟ್ಟು ಅಜ್ಜಿಯ ಬಾಳಿಗೆ ಬೆಳಕಾದರು. ದೇವರು ಅವರಿಗೆ ಬಡವರ ಸೇವೆಗೆ ಇನ್ನಷ್ಟು ಆರೋಗ್ಯ ಐಶ್ವರ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂಬುವುದು ಎಲ್ಲರ ಪ್ರಾರ್ಥನೆ.…
ಗಣಿತ ಪ್ರತಿಭಾ ಪರೀಕ್ಷೆ : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಸಾಧನೆ ಪುಟಾಣಿ ವಿಜ್ಞಾನ ಬಳಗದ ವತಿಯಿಂದ ಅಂತಾರಾಷ್ಟ್ರೀಯ ಗಣಿತ ಪ್ರತಿಭಾ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಶ್ರೀ ರಾಜರಾಜೇಶ್ವರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಿಂದ ಒಟ್ಟು 40 ವಿದ್ಯಾರ್ಥಿಗಳು ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿತ್ತಾರೆ. ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಡಿಂಪನ ಬಿ.ಜೆ ಹಾಗೂ 7ನೇ ತರಗತಿ ವಿದ್ಯಾರ್ಥಿ ದುಶ್ಯಂತ್ ಎಂ.ಎಸ್ ರಾಜ್ಯಮಟ್ಟದಲ್ಲಿ ಐದನೇ ಸ್ಥಾನ, ಹಾಗೂ 6ನೇ ತರಗತಿ ವಿದ್ಯಾರ್ಥಿ ವರ್ಧನ್ ತಾಲೂಕುಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ. ಶಾಲೆಯ ಗಣಿತ ಶಿಕ್ಷಕರಾಗಿರುವ ಶ್ರೀ ಅನಿಲ್ ಯು ಎಂ, ಶ್ರೀಮತಿ ಬೃಂದಾಕವನ್ ಕುದುಪಜೆ ಹಾಗೂ ಶ್ರೀಮತಿ ರಾಜೇಶ್ವರಿ ಡಿ.ಎಂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಕವನ್ ಕುದುಪಜೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವರೂಪ್ ಕೆ ಬಿ ಹಾಜರಿದ್ದು…
ಕಿಗ್ಗಾಲುವಿನ ಎಂ.ಎಸ್. ನಿಧಿಗೆ ತ.ರಾ.ಸು. ಪ್ರಶಸ್ತಿ ಬೆಂಗಳೂರಿನ ಜನ್ಮ ಭೂಮಿ ಸಾಂಸ್ಕೃತಿಕ ನಾಗರೀಕ ವೇದಿಕೆಯ ವತಿಯಿಂದ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ನೀಡುವ ತ.ರಾ.ಸು. ಪ್ರಶಸ್ತಿಯನ್ನು ಕೊಡಗಿನ ನಿಧಿ ಎಂ.ಎಸ್. ಪಡೆದುಕೊಂಡಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕಾರಣ ಈ ಪ್ರಶಸ್ತಿಗೆ ಅವರನ್ನು ಆಯ್ಕೆಗೊಳಿಸಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕಲಾಮಂದಿರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿಧಿ ಎಂ.ಎಸ್. ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ನಿಧಿ ಎಂ.ಎಸ್. ಕಿಗ್ಗಾಲು ನಿವಾಸಿ ಮೊಟ್ಟೆಮನೆ ಶ್ರೀಧರ್ ಮತ್ತು ರೈನಾ ದಂಪತಿಯ ಪುತ್ರಿ. ಕೊಡಗು ನ್ಯೂಸ್
ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಕೊಡಗಿನ ವರ್ಷಿಣಿ ಆಯ್ಕೆಯಾಗಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಈಕೆ, ಮೂರ್ನಾಡುವಿನ ಬಾಲು-ರೇಖಾ ದಂಪತಿಯ ಪುತ್ರಿ.
