Close Menu
Kodagu News
    ಹೊಸ ಸುದ್ದಿ

    ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ

    September 15, 2026

    ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ

    September 15, 2026

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ
    • ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ
    • 76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
    • ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
    • ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
    • ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅಚ್ಚುಕಟ್ಟಾಗಿ ನಡೆಸಬೇಕು:- ಶಾಸಕ ಮಂತರ್ ಗೌಡ
    ಜಿಲ್ಲೆ

    ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅಚ್ಚುಕಟ್ಟಾಗಿ ನಡೆಸಬೇಕು:- ಶಾಸಕ ಮಂತರ್ ಗೌಡ

    ಮಡಿಕೇರಿ. ಐಗೂರಿನಲ್ಲಿ ನಡೆಯಲಿರುವ ಸೋಮವಾರಪೇಟೆ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಅಚ್ಚುಕಟ್ಟಾಗಿ ಎಲ್ಲರೂ ನೆನಪಿಸಿಕೊಳ್ಳುವಂತ ರೀತಿಯಲ್ಲಿ ನಡೆಸಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮ್ಮೇಳನದ ಗೌರವಾಧ್ಯಕ್ಷರೂ ಆದ ಡಾ. ಮಂತರ್ ಗೌಡ ನುಡಿದರು. ಅವರು ಐಗೂರಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಉಪಸಮಿತಿಗಳ ಸಮ್ಮೇಳನದ ತಯಾರಿ ಕುರಿತು ವಿವರಣೆ ಪಡೆದರು. ಹಣಕಾಸು ಸಮಿತಿಯ ಅಧ್ಯಕ್ಷ ಕೆ ಪಿ ರಾಯ್, ಆಹಾರ ಸಮಿತಿಯ ಅಧ್ಯಕ್ಷ ಮಚ್ಚಂಡ ಅಶೋಕ್, ಮೆರವಣಿಗೆ ಸಮಿತಿಯ ಅಧ್ಯಕ್ಷ ಡಿ.ಎಸ್. ಚಂಗಪ್ಪ, ವೇದಿಕೆ ತಯಾರಿ ಸಮಿತಿಯ ಅಧ್ಯಕ್ಷ ಸಿ.ಕೆ. ರೋಹಿತ್, ಅಲಂಕಾರ ಸಮಿತಿಯ ಅಧ್ಯಕ್ಷ ಕೆ.ಪಿ ದಿನೇಶ್, ಸ್ಮರಣ ಸಂಚಿಕೆಯ ಸಂಪಾದಕ ಎಸ್.ಎಂ ಚಂಗಪ್ಪ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಮ್ಮೇಳನದ ಹೆಚ್.ಕೆ ಉಮೇಶ್ ತಯಾರಿಗಳ ಕುರಿತು ಮಾಹಿತಿ ನೀಡಿದರು.

    ಇದು ತಾಲೂಕು ಸಮ್ಮೇಳನವಾದರೂ ಐಗೂರು ಮತ್ತು ಸುತ್ತಮುತ್ತಲ ಹಳ್ಳಿಗಳ ಮನೆಯ ಉತ್ಸವವಾಗಬೇಕು ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತಾಗಲು ಸಮಿತಿಯವರು ಎಲ್ಲಾ ಗ್ರಾಮಗಳಲ್ಲಿ ಸಭೆ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಬೇಕು. ಅಲ್ಲದೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮತ್ತು ಗಡಿಭಾಗದಲ್ಲಿ ಪ್ರಚಾರದ ಬ್ಯಾನರ್ ಗಳನ್ನು ಅಳವಡಿಸಬೇಕು ಎಂದು ಶಾಸಕರು ನುಡಿದರು.

    ಸಾಹಿತ್ಯ ಸಮ್ಮೇಳನದ ವಿವಿಧ ಉಪಸಮಿತಿಗಳಲ್ಲಿರುವ 200ಕ್ಕೂ ಹೆಚ್ಚು ಸದಸ್ಯರು ಸ್ವತಃ ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡಬೇಕು. ಕೊನೆಯ ಪಕ್ಷ ಪ್ರತಿಯೊಬ್ಬ ಸದಸ್ಯರು ತಮ್ಮ ಕೈಲಾಗುವ ಹಣ ನೀಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಹಣಕಾಸು ಸಮಿತಿ ಅಧ್ಯಕ್ಷ ಕೆ ಪಿ ರಾಯ್ ಮನವಿ ಮಾಡಿದರು.

    ಮಧ್ಯಾಹ್ನ ಮತ್ತು ರಾತ್ರಿ ಸೇರಿ ಸುಮಾರು 6,000 ಜನರಿಗೆ ಊಟ ಉಪಹಾರಗಳ ವ್ಯವಸ್ಥೆ ಮಾಡಲಿರುವುದಾಗಿ ಆಹಾರ ಸಮಿತಿಯ ಅಧ್ಯಕ್ಷ ಮಚ್ಚಂಡ ಅಶೋಕ್ ನುಡಿದರು.

    ಮಡಿಕೇರಿ ಸೋಮವಾರಪೇಟೆ ರಸ್ತೆಯ ಸಂಪರ್ಕ ಸೇತುವೆಯಾಗಿದ್ದ ಕಬ್ಬಿಣದ ಸೇತುವೆಯನ್ನು ಬದಲಾಯಿಸುವ ಕೆಲಸ ನಡೆಯುತ್ತಿದ್ದು ಮೆರವಣಿಗೆಯನ್ನು ಸಾಂಕೇತಿಕವಾಗಿ ಐಗೂರಿನಲ್ಲಿ ನಡೆಸಿ ನಂತರ ಕಾಜೂರು ಜಂಕ್ಷನ್ ನಿಂದ ಸಮ್ಮೇಳನ ನಡೆಯುವ ಸರಕಾರಿ ಪ್ರಾಥಮಿಕ ಶಾಲೆಯವರೆಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯನ್ನು ವಿವಿಧ ಕಲಾತಂಡಗಳು, ಡೊಳ್ಳು ಕುಣಿತ, ಕಳಸ ಹೊತ್ತ ಮಹಿಳೆಯರು, ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ಒಳಗೊಂಡಂತೆ ಮೆರವಣಿಗೆಯ ಮೂಲಕ ಸಮ್ಮೇಳನದ ವೇದಿಕೆಗೆ ಕರೆದುಕೊಂಡು ಹೋಗಲಾಗುವುದು ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರಾದ ಡಿ.ಎಸ್.ಚಂಗಪ್ಪ ನುಡಿದರು.

    ಆಕರ್ಷಣೀಯವಾದ ವೇದಿಕೆ ಮತ್ತು 2,000 ಜನ ಕುಳಿತುಕೊಳ್ಳುವಂತಹ ಸಭಾಂಗಣವನ್ನು ರಚಿಸಲಾಗುವುದು. ವೇದಿಕೆಯಲ್ಲಿ ಎಲ್.ಇ.ಡಿ ಪರದೆಯನ್ನು ಹಾಕಲಾಗುವುದು ಮತ್ತು ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಜನಪದ ಪಾರಂಪರಿಕ ವಸ್ತುಗಳ ಮಳಿಗೆಗಳನ್ನು ರಚಿಸಲಾಗುವುದು ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರಾದ ಸಿ.ಕೆ.ರೋಹಿತ್ ನುಡಿದರು. ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ನಾಡಿಗೆ ಸೇವೆ ಸಲ್ಲಿಸಿ ಮರೆಯಾದ 9 ಹಿರಿಯರ ನೆನಪಿನ ದ್ವಾರಗಳನ್ನು ರಚಿಸಲಾಗುವುದು ಮತ್ತು ನಗರ ಅಲಂಕಾರ ಮತ್ತು ಮೆರವಣಿಗೆ ನಡೆಯುವ ಸ್ಥಳವನ್ನು ಸುಂದರವಾಗಿ ಸಜ್ಜುಗೊಳಿಸಲಾಗುವುದು ಎಂದು ಅಲಂಕಾರ ಸಮಿತಿ ಅಧ್ಯಕ್ಷ ಕೆ.ಪಿ ದಿನೇಶ್ ನುಡಿದರು.

    ಸ್ಮರಣ ಸಂಚಿಕೆಯ ಸಂಪಾದಕ ಎಸ್.ಎಮ್ ಚಂಗಪ್ಪ ರವರು ಮಾತನಾಡುತ್ತಾ ಸ್ಮರಣ ಸಂಚಿಕೆಯಲ್ಲಿ ನಾಡಿನ ಹಿರಿಯರ, ಶಾಸಕರ ಸಂದೇಶಗಳನ್ನು ಅಳವಡಿಸಲಾಗುವುದು. ಸೋಮವಾರಪೇಟೆ ತಾಲೂಕಿನ ಐತಿಹ್ಯ ಮತ್ತು ಪ್ರವಾಸೋದ್ಯಮ ಸ್ಥಳಗಳ ಕುರಿತು ಲೇಖನಗಳನ್ನು ಮತ್ತು ಕಾರ್ಯಕ್ರಮದ ಫೋಟೋಗಳನ್ನು ಕೂಡ ಅಳವಡಿಸಲಾಗುವುದು ಎಂದರು.

    ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಹ

    ಎಚ್.ಕೆ ಉಮೇಶ್ ಸೋಮವಾರಪೇಟೆ ತಾಲೂಕಿನ ಎಲ್ಲಾ ಶಾಲೆ ಕಾಲೇಜುಗಳಿಗೆ ಮತ್ತು ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಆದರೆ ಐಗೂರು ಸುತ್ತು ಮುತ್ತಲ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

    ಐಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಜಿ.ಕೆ ವಿನೋದ್ ಮಾತನಾಡುತ್ತಾ ನಮ್ಮ ಗ್ರಾಮದಲ್ಲಿ ಆಗುತ್ತಿರುವ ಈ ಸಮ್ಮೇಳನ ನಮ್ಮೆಲ್ಲರ ಪ್ರತಿಷ್ಠೆಯಾಗಿದ್ದು ಇದನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಪಂಚಾಯಿತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಮತ್ತು ಗ್ರಾಮಸ್ಥರು ಸಹ ತನು ಮನ ಧನ ಸಹಾಯ ನೀಡುವ ಮೂಲಕ ಸಮ್ಮೇಳನವನ್ನು ಯಶಸ್ವಿ ಮಾಡಿಕೊಡಬೇಕು ಎಂದರು.

     

    Previous Articleವಿ ಬಾಡಗದಲ್ಲಿ ಕ್ರೀಡಾ ತರಬೇತಿ ಕೇಂದ್ರದ ಪರಿಶೀಲನೆ
    Next Article ಸಿದ್ದಾಪುರ ಮತ್ತು ಚೆಟ್ಟಳ್ಳಿ ಠಾಣೆಗಳಿಗೆ ಎಸ್ಪಿ ಬಿಂದು ಮಣಿ ಭೇಟಿ

    Related Posts

    ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ

    September 15, 2026

    ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ

    September 15, 2026

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ

    September 15, 2026

    ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ

    September 15, 2026

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.