ಹೆಂಡತಿಗೆ ಗುಂಡಿಕ್ಕಿ ಬಳಿಕ ಪತಿ ಆತ್ಮಹತ್ಯೆ
76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಸೋಮವಾರಪೇಟೆ ತಾಲೂಕಿನ ಮಾದಾಪುರ ಹೋಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ವೃದ್ಧ ದಂಪತಿ ಮೃತಪಟ್ಟಿರುವ ಘಟನೆ ನಡೆದಿದೆ.
ಕನ್ನಿಕಂಡ ಮನೆತನಕ್ಕೆ ಸೇರಿದ ಸುಬ್ಬಯ್ಯ (76) ಎಂಬವರು ತಮ್ಮ ಪತ್ನಿ ಭೋಜಮ್ಮ (74) ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ, ತಮ್ಮ ಬಳಿಯಿದ್ದ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕಾರಣ ಹಾಗೂ ಇತರೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

