ಮೆಸ್ಕಾಂ ನೂತನ ನಿರ್ದೇಶಕರಾಗಿ ತೆರೇಸಾ ವಿಕ್ಟರ್ ನೇಮಕ
ಮಡಿಕೇರಿ: ಮೆಸ್ಕಾಂ ನಿಗಮ ಮಂಡಳಿಯ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ಶ್ರೀಮತಿ ತೆರೇಸಾ ವಿಕ್ಟರ್ ಅವರು ಇಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೊನ್ನಣ್ಣ ಅವರು ತೆರೇಸಾ ವಿಕ್ಟರ್ ಅವರಿಗೆ ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಶುಭ ಹಾರೈಸಿ ಅಭಿನಂದಿಸಿದರು.

