Author: Kodagu-admin

ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಸೋಮಶೇಖರ್ ರವರು ಇಂದು ವಿರಾಜಪೇಟೆಯ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಹೂಗುಚ್ಚ ನೀಡಿಸುವುದರ ಮೂಲಕ ಅಭಿನಂದಿಸಿದರು. ಜಿಲ್ಲಾಧಿಕಾರಿ ರವರನ್ನು ಅಧಿಕೃತವಾಗಿ ಜಿಲ್ಲೆಗೆ ಸ್ವಾಗತಿಸಿದ ಮಾನ್ಯ ಶಾಸಕರು ಜನಸಾಮಾನ್ಯರ ಹಿತದೃಷ್ಟಿಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಶುಭ ಕೋರಿದರು. ಕೊಡಗು ನ್ಯೂಸ್

Read More

ಕೊಡಗಿನ ಸಾಧಕರಿಗೆ ಗಡಿನಾಡ ಪ್ರಶಸ್ತಿ ಪ್ರಕಟ ಮಡಿಕೇರಿ ಜ.5 ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಭವನ ಸಂಘಟನೆಯು ಜ.18 ರಂದು ರಜತ ಮಹೋತ್ಸವ ಆಚರಿಸುತ್ತಿದ್ದು, ಈ ಸಂದರ್ಭ ಹಲವು ರಾಜ್ಯಗಳ ಕನ್ನಡ ಹರಿಕಾರರು, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ವಾಮನ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ. ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಶಕ್ತಿಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರನ್ನು ಆಯ್ಕೆ ಮಾಡಲಾಗಿದೆ. ಹಲವು ಪ್ರಶಸ್ತಿಗಳಿಗೆ ಭಾಗಜರಾಗಿರುವ ಬಿ.ಜಿ.ಅನಂತಶಯನ ಅವರನ್ನು ಆಯ್ಕೆ ಮಾಡಲಾಗಿದೆ. “ಕನ್ನಡ ಪಯಶ್ವಿನಿ” ಅಂತರರಾಜ್ಯ ಪ್ರಶಸ್ತಿಯನ್ನು ಕೊಡಗಿನ ಹಿರಿಯ ಸಾಹಿತಿ, ನಿವೃತ್ತ ಸೇನಾನಿ ಕಿಗ್ಗಾಲು ಗಿರೀಶ್, ಸಾಹಿತಿ ಭಾರಧ್ವಜ್ ಕೆ.ಆನಂದತೀರ್ಥ ಬರಹ ಮತ್ತು ಸಿನಿಆ ಕ್ಷೇತ್ರಗಳಲ್ಲಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಈರಮಂಡ ಹರಿಣಿ ವಿಜಯ್, ಲೇಖಕಿ, ನಿರೂಪಕಿ, ಪ್ರಾಧ್ಯಾಪಕಿ ಪ್ರತಿಮಾ ರೈ, ಗೌರಮ್ಮ ಪ್ರಶಸ್ತಿ ವಿಜೇತೆ ಸಾಹಿತಿ ಸಂಗೀತ ರವಿರಾಜ್ ಅವರುಗಳಿಗೆ ನೀಡಿ ಗೌರವಿಸಲಾಗುತ್ತಿದೆ. ಜಿಲ್ಲೆಯ ಮಾಧ್ಯಮ ಹಾಗೂ…

Read More

ಮಡಿಕೇರಿ:-ಕೊಡಗು ಜಿಲ್ಲೆಯ ನೂತನ ಪೊಲೀಸ್ ಅಧಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಬಿಂದುಮಣಿ ಆರ್. ಎನ್ ಹಾಗೂ ದಿನೇಶ್ ಕುಮಾರ್ ಬಿ.ಪಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಇವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಸಂಭಂಧಿಸಿದಂತೆ ಜನ ಸಂಪರ್ಕ ಸಭೆಯು ನಗರದ ಮೈತ್ರಿ ಹಾಲ್ ನಲ್ಲಿ ಅಚ್ಚುಕಟ್ಟಾಗಿ ಜರುಗಿತು. ಪೊಲೀಸ್ ಅಧಿಕ್ಷಕರಾದ ಬಿಂದುಮಣಿ ಮಾತನಾಡಿ ಕೊಡಗು ಚೊಕ್ಕದಾದ-ಚಿಕ್ಕ ನಾಡು ಬೇರೆಡೆಗೆ ಹೋಲಿಸಿದರೆ ಇಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ.ಹೋಮ್ ಸ್ಟೇ, ರೆಸಾರ್ಟ್, ಹೋಟೆಲ್ ನಲ್ಲಿ ವಾಸಿಸುತ್ತಿರುವ ಕೆಲಸಗಾರರ ಹಿನ್ನಲೆ ಹಾಗೂ ದಾಖಲಾತಿಯನ್ನು ಕಾಡ್ಡಾಯವಾಗಿ ಪಡೆದುಕೊಳ್ಳಬೇಕು, ತೋಟದಲ್ಲಿ ವಾಸಿಸುತ್ತಿರುವ ಕಾರ್ಮಿಕರ ಕುರಿತಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಎಂದು ಸೂಚಿಸಿದರು. ಹೋಂ ಸ್ಟೇ ನಡೆಸಲು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಬೇಕು.ಪಡೆದುಕೊಳ್ಳದೆ ಹೋಂ ಸ್ಟೇ ನಡೆಸಿದರೆ ಕಾನೂನಿನ ಕ್ರಮಕ್ಕೆ ಖಂಡಿತವಾಗಿಯೂ ಒಳಾಗಾಗುವಿರಿ ಎಂದು ಎಚ್ಚರಿಸಿದರು. ಮುಂದೆ ಮಾತನಾಡಿ ಮಕ್ಕಳ ಮತ್ತು ಮಹಿಳಾ ಸಹಾಯವಾಣಿ ಕುರಿತು ಸಾರ್ವಜನಿಕರಿಗೆ ತಿಳಿಸಿದರು. ಪ್ರವಾಸ ಕೈಗೊಳ್ಳುವ ಸಮಯದಲ್ಲಿ ಮನೆಯಿಂದ ಹೊರಗುಳಿಯುವ ಸಂಧರ್ಭ ಇದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ…

Read More

ಹುಣ್ಣಿಮೆಯ ಅಂಗವಾಗಿ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ನಾಪೋಕ್ಲು ಪಂಚಾಯತ್ ಹಾಗೂ ಧರ್ಮಸ್ಥಳ ಸಂಘದಿಂದ ಮಹಾಆರತಿ ಕಾರ್ಯಕ್ರಮ ವರದಿ:ಝಕರಿಯ ನಾಪೋಕ್ಲು : ಹುಣ್ಣಿಮೆಯ ಅಂಗವಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯದ ವತಿಯಿಂದ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ 181ನೇ ಮಹಾ ಆರತಿಯನ್ನು ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು. ನಾಪೋಕ್ಲು ಸಮೀಪದ ಕೊಟ್ಟಮುಡಿ ಸೇತುವೆ ಬಳಿಯ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು. ಆಯೋಜಿತ ಕಾರ್ಯಕ್ರಮ ದಲ್ಲಿ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಧರ್ಮಸ್ಥಳ ಸಂಘದ ನಾಪೋಕ್ಲು ಸುಭಾಷ್ ನಗರ ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಬಿ. ಎಂ. ಪ್ರತೀಪ್ ಅವರುಗಳು ಮಾತನಾಡಿ ಕಾವೇರಿ ತಾಯಿಯ ಮಣ್ಣಿನಲ್ಲಿ ಹುಟ್ಟಿರುವುದು ನಮ್ಮಪುಣ್ಯ. ಕಾವೇರಿ ಬ್ರಹ್ಮಗಿರಿಯಲ್ಲಿ ಹುಟ್ಟಿ ಕರ್ನಾಟಕದ ಜೀವನದಿಯಾಗಿ ನಾಲಕ್ಕು ರಾಜ್ಯಗಳ ಜನರಿಗೆ ನೀರನ್ನು ನೀಡುತ್ತಿದ್ದಾಳೆ. ನಮ್ಮ ಜೀವನದಿ ಕಾವೇರಿಯನ್ನು ಸಂರಕ್ಷಣೆ ಮಾಡುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಂಡು ಉತ್ತರ…

Read More

ಸಮಾಜದ ಸಮಸ್ಯೆ ಆಲಿಸಿದ ನೂತನ ಎಸ್ಪಿ ಆರ್ ಬಿಂದುಮಣಿ ಮಡಿಕೇರಿ:-ಕೊಡಗು ಜಿಲ್ಲೆಯ ನೂತನ ಪೊಲೀಸ್ ಅಧಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಬಿಂದುಮಣಿ ಆರ್. ಎನ್ ಹಾಗೂ ದಿನೇಶ್ ಕುಮಾರ್ ಬಿ.ಪಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಇವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಸಂಭಂಧಿಸಿದಂತೆ ಜನ ಸಂಪರ್ಕ ಸಭೆಯು ನಗರದ ಮೈತ್ರಿ ಹಾಲ್ ನಲ್ಲಿ ಅಚ್ಚುಕಟ್ಟಾಗಿ ಜರುಗಿತು. ಪೊಲೀಸ್ ಅಧಿಕ್ಷಕರಾದ ಬಿಂದುಮಣಿ ಮಾತನಾಡಿ ಕೊಡಗು ಚೊಕ್ಕದಾದ-ಚಿಕ್ಕ ನಾಡು ಬೇರೆಡೆಗೆ ಹೋಲಿಸಿದರೆ ಇಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ.ಹೋಮ್ ಸ್ಟೇ, ರೆಸಾರ್ಟ್, ಹೋಟೆಲ್ ನಲ್ಲಿ ವಾಸಿಸುತ್ತಿರುವ ಕೆಲಸಗಾರರ ಹಿನ್ನಲೆ ಹಾಗೂ ದಾಖಲಾತಿಯನ್ನು ಕಾಡ್ಡಾಯವಾಗಿ ಪಡೆದುಕೊಳ್ಳಬೇಕು, ತೋಟದಲ್ಲಿ ವಾಸಿಸುತ್ತಿರುವ ಕಾರ್ಮಿಕರ ಕುರಿತಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಎಂದು ಸೂಚಿಸಿದರು. ಹೋಂ ಸ್ಟೇ ನಡೆಸಲು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಬೇಕು.ಪಡೆದುಕೊಳ್ಳದೆ ಹೋಂ ಸ್ಟೇ ನಡೆಸಿದರೆ ಕಾನೂನಿನ ಕ್ರಮಕ್ಕೆ ಖಂಡಿತವಾಗಿಯೂ ಒಳಾಗಾಗುವಿರಿ ಎಂದು ಎಚ್ಚರಿಸಿದರು. ಮುಂದೆ ಮಾತನಾಡಿ ಮಕ್ಕಳ ಮತ್ತು ಮಹಿಳಾ ಸಹಾಯವಾಣಿ ಕುರಿತು ಸಾರ್ವಜನಿಕರಿಗೆ ತಿಳಿಸಿದರು. ಪ್ರವಾಸ ಕೈಗೊಳ್ಳುವ ಸಮಯದಲ್ಲಿ ಮನೆಯಿಂದ…

Read More

ನಾಪೋಕ್ಲುವಿನಲ್ಲಿ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಗಣ್ಯರಿಂದ ಚಾಲನೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ 10ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚೆರಿಯಪರಂಬುವಿನಲ್ಲಿ ಗಣ್ಯರು ಚಾಲನೆ ನೀಡಿದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಚೆರಿಯ ಪರಂಬುವಿನಲ್ಲಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಆಟದ ಮೈದಾನದಲ್ಲಿ ಆಯೋಜಿಸಲಾದ ಪಂದ್ಯಾವಳಿಯನ್ನು ನಾಪೋಕ್ಲುವಿನ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಎ.ಹಾರಿಸ್ ಹಾಗೂ ನಾಪೋಕ್ಲು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ, ಕಾಫಿ ಬೆಳೆಗಾರ ಶಿವಚಾಳಿಯಂಡ ಅಂಬಿ ಕಾರ್ಯಪ್ಪನವರು ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿಗೆ ಅಧಿಕೃತ ಚಾಲನೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ಆಯೋಜನೆಯಿಂದ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಲಿದೆ. ಅದರಂತೆ ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಇಂತಹ ಕ್ರೀಡಾಕೂಟದಿಂದ ಮಾತ್ರ ಸಾಧ್ಯ. ಕ್ರೀಡಾಪಟುಗಳು ಶಿಸ್ತು ಸಂಯಮವನ್ನು ಪಾಲಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವಂತ್ತಾಗಬೇಕೆಂದು ಹಾರಿಸ್ ಹಾಗೂ ಅಂಬಿಕಾರ್ಯಪ್ಪ ಅವರು ಕ್ರೀಡಾಕೂಟಕ್ಕೆಶುಭ ಹಾರೈಸಿದರು. ಮೂರು ದಿನಗಳ ಕಾಲ ನಡೆಯಲಿರುವ…

Read More

ಗೋಣಿಕೊಪ್ಪ ಹಾತೂರು ಸಮೀಪ ಬೈಕ್ -ಲಾರಿ ನಡುವೆ ಅಪಘಾತ-ಚಿಕಿತ್ಸೆ ಫಲಿಸದೆ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆ ಯಲ್ಲಿ ಸವಾರ ಮೃತ್ಯು ಬೆಕ್ಕೆಸುಡ್ಲೂರು ನಿವಾಸಿ ಸುಳ್ಳಿಮಾಡ ಭಜನ್ ದೇವಯ್ಯ (27)ಮೃತ ದುರ್ದೈವಿ ಸವಾರ ಎಂದು ತಿಳಿದು ಬಂದಿದೆ. ಕೊಡಗಿನಿಂದ ಕೇರಳಕ್ಕೆ ಕೊಡಗು ರೈಡರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಯಾತ್ರೆಯಲ್ಲಿ ಪಾಲ್ಗೊಂಡು ಕೇರಳದಿಂದ ಇಂದು ಸಂಜೆ ವಾಪಸಾಗುತ್ತಿದ್ದಾಗ ರಾತ್ರಿ 8:20ರ ಸಮಯದಲ್ಲಿ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಸಮೀಪ ಕಾರು ಒಂದನ್ನು ಓವರ್ಟೇಕ್ ಮಾಡಿ ಮುನ್ನುಗುತ್ತಿದ್ದಾಗ ಮುಂಭಾಗದಲ್ಲಿ ಬಂದ ಲಾರಿಗೆ ಡಿಕ್ಕಿ ಪಡಿಸಿದ್ದಾನೆ ಎಂದು ಹೇಳಲಾಗಿದೆ. ಮೃತ ಯುವಕನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಬೆಕ್ಕೆಸುಡ್ಲೂರಿನಲ್ಲಿ ತನ್ನ ಮಗಳ ಮದುವೆಯ ಸಂದರ್ಭದಲ್ಲಿ ಅಪಘಾತಕಿಡಾಗಿ ಮೃತಪಟ್ಟಿದ್ದರು. ನಂತರ ಮೃತನ ತಾಯಿ ಕೂಡ ಗೋಣಿಕೊಪ್ಪಲಿನಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಪಡಿಸಿ ಮೃತಪಟ್ಟಿದ್ದರು. ಯುವಕ ಅವಿವಿವಾಹಿತಾನಾಗಿದ್ದ ಇದೀಗ ಇವರ ಕುಟುಂಬದಲ್ಲಿ ವಿವಾಹವಾದ ಇಬ್ಬರು ಸಹೋದರಿಯರು ಮಾತ್ರವಿದ್ದಾರೆ. ಮೃತ ಯುವಕ ಬೆಕ್ಕೆಸುಡ್ಲೂರಿನಲ್ಲಿ 12 ಏಕರಿಗಿಂತಲೂ ಹೆಚ್ಚು ಕಾಫಿ ತೋಟ ಹಾಗೂ ಗದ್ದೆ…

Read More

ಜಿಲ್ಲೆಯ ಸಿದ್ದಾಪುರ ಠಾಣೆ ಮತ್ತು ಚೆಟ್ಟಳ್ಳಿ ಉಪ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಠಾಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭ ಸಿದ್ದಾಪುರ ಠಾಣೆಯ ಪೊಲೀಸ್ ವಸತಿ ಗೃಹಗಳಿಗೂ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಯಿತು.

Read More

ಮಡಿಕೇರಿ. ಐಗೂರಿನಲ್ಲಿ ನಡೆಯಲಿರುವ ಸೋಮವಾರಪೇಟೆ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಅಚ್ಚುಕಟ್ಟಾಗಿ ಎಲ್ಲರೂ ನೆನಪಿಸಿಕೊಳ್ಳುವಂತ ರೀತಿಯಲ್ಲಿ ನಡೆಸಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮ್ಮೇಳನದ ಗೌರವಾಧ್ಯಕ್ಷರೂ ಆದ ಡಾ. ಮಂತರ್ ಗೌಡ ನುಡಿದರು. ಅವರು ಐಗೂರಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಉಪಸಮಿತಿಗಳ ಸಮ್ಮೇಳನದ ತಯಾರಿ ಕುರಿತು ವಿವರಣೆ ಪಡೆದರು. ಹಣಕಾಸು ಸಮಿತಿಯ ಅಧ್ಯಕ್ಷ ಕೆ ಪಿ ರಾಯ್, ಆಹಾರ ಸಮಿತಿಯ ಅಧ್ಯಕ್ಷ ಮಚ್ಚಂಡ ಅಶೋಕ್, ಮೆರವಣಿಗೆ ಸಮಿತಿಯ ಅಧ್ಯಕ್ಷ ಡಿ.ಎಸ್. ಚಂಗಪ್ಪ, ವೇದಿಕೆ ತಯಾರಿ ಸಮಿತಿಯ ಅಧ್ಯಕ್ಷ ಸಿ.ಕೆ. ರೋಹಿತ್, ಅಲಂಕಾರ ಸಮಿತಿಯ ಅಧ್ಯಕ್ಷ ಕೆ.ಪಿ ದಿನೇಶ್, ಸ್ಮರಣ ಸಂಚಿಕೆಯ ಸಂಪಾದಕ ಎಸ್.ಎಂ ಚಂಗಪ್ಪ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಮ್ಮೇಳನದ ಹೆಚ್.ಕೆ ಉಮೇಶ್ ತಯಾರಿಗಳ ಕುರಿತು ಮಾಹಿತಿ ನೀಡಿದರು. ಇದು ತಾಲೂಕು ಸಮ್ಮೇಳನವಾದರೂ ಐಗೂರು ಮತ್ತು ಸುತ್ತಮುತ್ತಲ…

Read More

ಶಾಸಕ ಎ. ಎಸ್ ಪೊನ್ನಣ್ಣನವರಿಂದ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿ ಪರಿಶೀಲನೆ ವಿ ಬಾಡಗದಲ್ಲಿ ಆಯೋಜನೆಗೊಂಡ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ವಿ.ಬಾಡಗದಲ್ಲಿ ನಡೆಯುತ್ತಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಯನ್ನು ಮಾನ್ಯ ಶಾಸಕರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರೊಂದಿಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕಾಮಗಾರಿ ಹಾಗೂ ರೂಪುರೇಷೆಗಳ ಬಗ್ಗೆ ಮಾಹಿತಿ ಒಡಗಿಸಿದರು. ಈ ಸಂದರ್ಭದಲ್ಲಿ ಕೊಲ್ಲಿರ ಬೋಪಣ್ಣ ,ಉಮೇಶ್ ಕೆಚಮಯ್ಯ,ಕಂಜಿತಂಡ ಗಿಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾರ್ಯಪ್ಪ, ತೀತಿಮಾಡ ಸಧಾ, ಕೊಂಗಂಡ ರಚನ್ ಉತಪ್ಪ, ಚೆಂದಂಡ ರಂಜಿತ್, ಚೇಮಿರ ಧವನ್ ದೇವಯ್ಯ, ತೀತಿಮಾಡ ಬೋಸು ಅಯ್ಯಪ್ಪ, ಚೇಮಿರ ಪ್ರಕಾಶ್ ಪೂವಯ್ಯ, ಚಂದುರ ಜಗನ್ ಬೋಪಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More