Close Menu
Kodagu News
    ಹೊಸ ಸುದ್ದಿ

    ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!

    August 28, 2026

    ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?

    August 28, 2026

    ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ

    August 28, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
    • ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
    • ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
    • ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
    • ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
    • ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
    • ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
    • ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
    ಅಂತರರಾಷ್ಟ್ರೀಯ

    ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?

    ಧರ್ಮಜ ಉತ್ತಪ್ಪ, ನಾಪಂಡ ಮುತ್ತಪ್ಪ ಹಾಗೂ ಕೆ.ಎಂ. ಲೋಕೇಶ್ ಅಂತಿಮ ಪಟ್ಟಿಯಲ್ಲಿ?

    ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ ಇದೀಗ ಕುತೂಹಲ ಮೂಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೂವರು ಪ್ರಮುಖರ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಹಾಗೂ ಕೆ.ಎಂ. ಲೋಕೇಶ್ ಅವರ ಹೆಸರುಗಳು ಅಂತಿಮ ಪಟ್ಟಿಯಲ್ಲಿದ್ದು, ದೆಹಲಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

    ಮೂವರ ಪೈಕಿ ಧರ್ಮಜ ಉತ್ತಪ್ಪ ಅವರಿಗೆ ಪಕ್ಷದ ಮುಂಚೂಣಿ ನಾಯಕರ ಬೆಂಬಲವಿದ್ದರೆ, ನಾಪಂಡ ಮುತ್ತಪ್ಪ ಅವರಿಗೆ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರ ಒಲವು ವ್ಯಕ್ತವಾಗಿದೆ ಎನ್ನಲಾಗುತ್ತಿದ್ದು, ಮತ್ತೊಂದೆಡೆ, ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂಬ ಚಿಂತನೆ ಹೈಕಮಾಂಡ್‌ನಲ್ಲಿ ಇದ್ದಲ್ಲಿ ಕೆ.ಎಂ. ಲೋಕೇಶ್ ಅವರ ಹೆಸರು ಮುನ್ನೆಲೆಗೆ ಬರುವ ಸಾಧ್ಯತೆಯೂ ಇದೆ.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕೊಡಗು ಕಾಂಗ್ರೆಸ್ ವೀಕ್ಷಕರಾಗಿ ನೇಮಕಗೊಂಡಿರುವ ಕೇರಳದ ಕಾಂಗ್ರೆಸ್ ಶಾಸಕ ಅಭಿಜಿತ್ ಅವರು ಜಿಲ್ಲೆಯ ಕಾರ್ಯಕರ್ತರು, ಮುಖಂಡರು ಹಾಗೂ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ ಅಭಿಪ್ರಾಯಗಳ ಆಧಾರದ ಮೇಲೆಯೇ ಮೂವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

    ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸದ್ಯ ವಿದೇಶ ಪ್ರವಾಸದಲ್ಲಿದ್ದು, ಅವರು ವಾಪಸಾದ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    ಕಾಂಗ್ರೆಸ್ ನಾಯಕತ್ವವು ರಾಹುಲ್ ಗಾಂಧಿ ಅವರ ಚಿಂತನೆಯಂತೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದರೆ ನಾಪಂಡ ಮುತ್ತಪ್ಪ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ.

    ಆದರೆ, ಪಕ್ಷದ ಮುಂಚೂಣಿ ನಾಯಕರ ಅಭಿಪ್ರಾಯ ಹಾಗೂ ಶಿಫಾರಸಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಹಾಲಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರೇ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಇಲ್ಲ, ಈ ಬಾರಿ ಒಕ್ಕಲಿಗ ನಾಯಕತ್ವಕ್ಕೆ ಹೈಕಮಾಂಡ್ ಮಣೆ ಹಾಕಿದರೆ ಸೋಮವಾರಪೇಟೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎಂ ಲೋಕೇಶ್ ಗೆ ಅಧ್ಯಕ್ಷ ಪಟ್ಟ ಒಲಿಯುವ ಸಾಧ್ಯತೆಯನ್ನು ಇಲ್ಲಿ ತಳ್ಳಿ ಹಾಕುವಂತಿಲ್ಲ.

    ಒಟ್ಟಿನಲ್ಲಿ ಕೊಡಗು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರುಗಳು ಹೈಕಮಾಂಡ್ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ, ಯಾರಿಗೆ ಜಿಲ್ಲಾಧ್ಯಕ್ಷ ಪಟ್ಟ ಒಲಿಯಲಿದೆ ಎಂಬುದು ಇದೀಗ ಕೊಡಗು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    Previous Articleಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
    Next Article ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!

    Related Posts

    ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!

    August 28, 2026

    ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ

    August 28, 2026

    ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ

    August 27, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!

    August 28, 2026

    ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?

    August 28, 2026

    ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ

    August 28, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.