ಮಾರಣಾಂತಿಕ ಹಲ್ಲೆಗೊಳದ ವ್ಯಕ್ತಿ ಸಾವು ಪ್ರಕರಣ

ಸಹಪಾಠಿ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹಿನ್ನೆಲೆ
ಪೊನ್ನoಪೇಟೆ ತಾಲೂಕು ಹಾತೂರು ಕುದ್ದಾರಸ್ತೆಯಲ್ಲಿ ಮರಣಾಂತಿಕ ಹಲ್ಲೆಯಲ್ಲಿ ಮೃತಪಟ್ಟ ಡ್ರೈವರ್ ನವಾಜ್ ಎಂಬುವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋಣಿಕೊಪ್ಪಲು ಪೊಲೀಸರು ನಾಲ್ಕರಿಂದ ಐದು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಥಮಿಕ ತನಿಖೆಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಹಾತುರು ಕುಂದ ರಸ್ತೆಯಲ್ಲಿರುವ ಕಾಫಿ ಕ್ಯೂರಿಂಗ್ ಘಟಕದ ಲಾರಿ ಡ್ರೈವರ್ ರವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತಪಟ್ಟ ನವಾಜ್ ಗೆ ಇವನು ಸಹಪಾಠಿ ಡ್ರೈವರ್ ರವರ ಪತ್ನಿ ಯೊಂದಿಗೆ ಸಂಬಂಧವಿರೋ ಬಗೆ ಅನುಮಾನ ವ್ಯಕ್ತವಾಗಿದೆ.
ಈ ಹಿಂದೆ ಈ ಸಂಬಂಧ ಕಲಹ ಏರ್ಪಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದರೆ ನವಾಜ್ ತನ್ನ ಚಾಳಿಯನ್ನು ಮುಂದುವರಿಸಿದ್ದು ನಿನ್ನೆ ರಾತ್ರಿ ಕುಶಾಲನಗರದ ಮೂಲದ ಪ್ರಸ್ತುತ ಕಾಫಿ ಕ್ಯೂರಿಂಗ್ ವರ್ಕ್ನ ಆವರಣದಲ್ಲಿ ವಾಸಿವಿರುವ ಡ್ರೈವರ್ ಪೂರ್ಣಚಂದ್ರ ತೇಜಸ್ವಿ ಹಾಗೂ ಇತರರು ನವಾಜ್ ಕಾರಿನಲ್ಲಿ ರಾತ್ರಿ ನವಾಜ್ ಕಾರಿನಲ್ಲಿ ಆಗಮಿಸಿದಾಗ ಆತನನ್ನು ಸೆರೆ ಹಿಡಿದು ರಾಡುಗಳಲ್ಲಿ ಆತನನ್ನು ತಳಿಸಿ ರಸ್ತೆ ಸಮೀಪ ಬಿಟ್ಟು ಹೋಗಿದ್ದರು. ನಂತರ ಪೊಲೀಸರಿಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಆತನನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದಾಗ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಘಟನೆ ಸಂಭಂದ ಗೋಣಿಕೊಪ್ಪಲು ಪೊಲೀಸರು ಇದೀಗ ಐವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ನಾಳೆ ಸಂಕಿತರಿಂದ ಸಂಪೂರ್ಣ ವಿವರ ಪಡೆದು ಆರೋಪಿಗಳೆಲ್ಲರ ಬಂಧನವಾಗುವ ಸಾಧ್ಯತೆ ಇದೆ.
ಆರೋಪಿಗಳೆಲ್ಲರೂ ಪೂರ್ಣಚಂದ್ರ ತೇಜಸ್ವಿ ಡ್ರೈವರ್ ಹಾಗೂ ಆತನ ಸ್ನೇಹಿತರಾಗಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಮೃತಪಟ್ಟ ನವಾಜ್ ಅನೈತಿಕ ಚಟುವಟಿಕೆಯಲ್ಲಿ ಹಲವು ವರ್ಷಗಳಿಂದ ತೊಡಗಿ ಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ಇವನ ವಿರುದ್ಧ ಹಲವು ದೂರುಗಳು ಕೂಡ ಬಂದಿತ್ತು, ಕೆಲವೊಂದು ದೂರುಗಳಲ್ಲಿ ಈತನನ್ನು ಕರೆಸಿ ಇತ್ಯರ್ಥ ಕೂಡ ಮಾಡಿಸಲಾಗಿತ್ತು. ಈತ ಇದೇ ರೀತಿಯ ಚಾಳಿ ಮುಂದುವರಿಸಿ ಇದೀಗ ಹತ್ಯೆಗಿಡ್ಡಾಗಿದ್ದಾನೆ ಎಂದು ಹೇಳಲಾಗಿದೆ.. ಈ ಘಟನೆಯಲ್ಲಿ ಯಾವುದೇ ರೀತಿಯ ಪೂರ್ವಗ್ರಹ ಅಥವಾ ರಾಜಕೀಯ ಧರ್ಮ ಲೇಪಿತವಾಗದಿದ್ದರೂ, ಎಸ್.ಡಿ.ಪಿ.ಐ ಘಟಕದ ವ್ಯಕ್ತಿ ಒಬ್ಬರು ನೀಡಿರುವ ಹೇಳಿಕೆ ಇದೀಗ ಗೊಂದಲ ಹಾಗೂ ಸಂಶಯಕ್ಕೆ ಎಡೆಮಾಡಿದೆ.
ಅನೈತಿಕ ಸಂಬಂಧದ ಚಾಳಿಯಿಂದ ಈತ ಮೃತಪಟ್ಟಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸರ ಸಮಗ್ರ ತನಿಖೆಯಿಂದ ಸತ್ಯ ಸತ್ಯತೆ ಹೊರಬೀಳಬೇಕಾಗಿದೆ.
ಮೃತಪಟ್ಟ ನವಾಜ್ ಗೋಣಿಕೊಪ್ಪಲಿನ ಖಾಸಗಿ ಸಂಸ್ಥೆಯಲ್ಲಿ ಡ್ರೈವರ್ ಆಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದನು. ಉಳಿದ ಸಮಯದಲ್ಲಿ ತನ್ನ ಸ್ವಂತ ಆಟೋ ಓಡಿಸುತ್ತಿದ್ದನು. ಆದರೆ ಈತ ಯಾವುದೇ ಆಟೋ ಡ್ರೈವರ್ ಹಾಗೂ ಮಾಲೀಕರ ಸಂಘ ಸಂಸ್ಥೆಗಳಲ್ಲಿ ಸದಸ್ಯನಾಗಿರಲಿಲ್ಲ.
ಜನಾಭಿಪ್ರಾಯದಲ್ಲಿ ಈತ ಎಲ್ಲರೊಂದಿಗೆ ಬೆರೆಯುತ್ತಿದ್ದನ್ನು ಆದ್ರೆ ಕೆಲವೊಂದು ದೌರ್ಬಲ್ಯದಿಂದ, ಅದರಿಂದ ಹೊರಬರಲಾಗದೆ ಇಂದು ಹತ್ಯಗಿಡಾಗಿದ್ದಾನೆ.

