Author: Kodagu-admin

ಕೂತಂಡ ಪಿ. ಉತ್ತಪ್ಪ (90) ಮಂಗಳೂರು ಖಾಸಗಿ ಆಸ್ಪತೆಯಲ್ಲಿ ವಿಧಿವಶ. ಟಾಟಾ ಕಾಫಿ ಸಂಸ್ಥೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡವ ವಿದ್ಯಾ ನಿಧಿ, ಭಾರತೀಯ ವಿದ್ಯಾ ಭವನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಕೊಡಗಿನ ಹಿರಿಯ ಕಾಫಿ ಬೆಳೆಗಾರ ಕೆ. ಪಿ. ಉತ್ತಪ್ಪ. ಪಾಲಿಬೆಟ್ಟದಲ್ಲಿ ನೆಲಸಿದ್ಧ ಉತ್ತಪ್ಪ ಅವರು ನಿನ್ನೆ ಮಡಿಕೇರಿಯಲ್ಲಿ ದಿಢೀರ್ ಅಸ್ವಸ್ತಗೊಂಡಿದ್ದರು. ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಇಂದು ಮಧ್ಯಾಹ್ನ ಕೊನೆ ಉಸಿರು ಎಳೆದರು. ಕೊಡಗು ನ್ಯೂಸ್

Read More

ಅಸ್ಸಾಂ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿ:ಪೊಲೀಸ್ ಪ್ರಕಟಣೆ ಈ ಮೂಲಕ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಮಡಿಕೇರಿ ಗ್ರಾಮಾತರ ವ್ಯಾಪ್ತಿಯಲ್ಲಿ ಬರುವ ಮೇಕೇರಿ, ಬಿಳಿಗೇರಿ ಮತ್ತು ಕಗ್ಗೋಡ್ಲು ಗ್ರಾಮದ ಕಾಫಿ ತೋಟದ ಮಾಲೀಕರು, ಹೋಟೆಲ್ ಮಾಲೀಕರು,ಅಂಗಡಿ ಮಾಲೀಕರು,ವ್ಯಾಪಾರಸ್ಥರು,ಮನೆ ಕಟ್ಟಡ ಮಾಲೀಕರು ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಂತಹ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಗೆ ಅವರ ವಿವರಗಳನ್ನು ನೀಡಬೇಕಾಗಿದ್ದು, ಮಾಹಿತಿ ನೀಡಲು ತಪ್ಪಿದ್ದಲ್ಲಿ, ಅಕ್ರಮ/ವಲಸಿಗ ಕೂಲಿ ಕಾರ್ಮಿಕರು ಯಾವುದೇ ರೀತಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಆಶ್ರಯ/ಕೆಲಸ ಕೊಟ್ಟವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಗವುದು ಎಂದು ಈ ಮೂಲಕ ತಿಳಿಸಲಾಗಿದೆ. ಕೊಡಗು ನ್ಯೂಸ್

Read More

ಚೆಂಬು ಗ್ರಾ. ಪಂ.ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಅನೀಮಿಯ ಅರಿವು ಕಾರ್ಯಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ : ಆರೋಗ್ಯ ತಪಾಸಣೆ ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಸಹಕಾರಿ -ಶೀಲಾ ಅಶೋಕ್ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲಯ,ಪನ್ನಡ್ಕ,ಬಾಲಂಬಿ ಅಂಗನವಾಡಿ ಕೇಂದ್ರಗಳಲ್ಲಿ ಅನೀಮಿಯ ಅರಿವು ಕಾರ್ಯಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ರವರು ಪಾಲ್ಗೊಂಡು ಮಾತನಾಡಿ ಅನಿಮಿಯ ಆರೋಗ್ಯ ಪರೀಕ್ಷೆಯಿಂದ ಮಕ್ಕಳಲ್ಲಿ ರಕ್ತಹೀನತೆ,ಅಪೌಷ್ಟಿಕತೆಯ ಮಟ್ಟವನ್ನು ಪರಿಶೀಲಿಸಿ ಅದಕ್ಕೆ ಸರಿಯಾದ ಪೌಷ್ಟಿಕಾಂಶಗಳನ್ನು ಪಡೆದುಕೊಂಡು ಹನೀಮಿಯಾದಿಂದ ಮುಕ್ತರಾಗಲು ಸಹಕಾರಿಯಾಗಲಿದೆ. ಆರೋಗ್ಯವೇ ಭಾಗ್ಯ ಎಂಬಂತೆ ಬೆಳೆಯುವ ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆಗಳನ್ನು ನಡೆಸುವುದರಿಂದ ಅವರ ಸರ್ವತ್ತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ.ಅಂಗನವಾಡಿ ಕೇಂದ್ರದಲ್ಲಿ ಅನ್ನ ಪ್ರಾಶನ ಕಾರ್ಯಕ್ರಮ ನಡೆಸಿ ಆರು ತಿಂಗಳು ತುಂಬಿದ ನಂತರ ಮಗುವಿಗೆ ಎದೆ…

Read More

ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಶಾಲೆಯ ಶಿಕ್ಷಕಿ ಅಜ್ಜೇಟಿರ ಯಮುನಾ ಗಣಪತಿ ಅವರಿಗೆ ಬೀಳ್ಕೊಡುಗೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದ ಶಿಕ್ಷಕಿ ಅಜ್ಜೇಟಿರ ಯಮುನಾ ಗಣಪತಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆಯಲ್ಲಿ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರಿಂದ ಶಿಕ್ಷಕಿ ಯಮುನಾ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಹಾಜರಿದ್ದರು. ಕೊಡಗು ನ್ಯೂಸ್

Read More

ಕೆ ವಿ ರಾಮಕೃಷ್ಣ ರವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪ್ರಧಾನ…. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ, ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ,ಕೆ. ಪಿ. ಎಸ್ ಶಾಲೆ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಸಮಾಜ ಸೇವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ನಿರಂತರವಾಗಿ ಕಾರ್ಯ ಚಟುವಟಿಕೆಯಲ್ಲಿರುವ ಪೊನ್ನಂಪೇಟೆಯ ನಿವಾಸಿ ಕೆ.ವಿ ರಾಮಕೃಷ್ಣರವರಿಗೆ 2025–26ನೇ ಸಾಲಿನ ಕರ್ನಾಟಕ ಸೇವಾ ರತ್ನ ಪ್ರಶಸ್ತಿಯನ್ನು 13-01-2026ರಂದು (ಇಂದು) ಬೆಂಗಳೂರಿನ ಜ್ಞಾನಭಾರತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

Read More

ಉಪನ್ಯಾಸಕಿ ನಳಿನಿ ಅವರಿಗೆ ಡಾಕ್ಟರೆಟ್ ಪದವಿ ನಳಿನಿ ಬಿ.ಯಂ. ಗೆ ಡಾಕ್ಟರೇಟ್ ಪದವಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ನಳಿನಿ ಬಿ.ಯಂ. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮೂಲತಃ ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮದ ಬೊಳ್ಳೇರ ಹೇಮಕುಮಾರ್ ರವರ ಪತ್ನಿಯಾದ ನಳಿನಿ ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಬಸವರಾಜಪ್ಪ ಎಸ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ,”Insect pollinators and the drivers of keystone pollinators honeybees decline in Kodagu district” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ಧನ್ಯವಾದಗಳು . ಪ್ರಾಂಶುಪಾಲರು , ಎಫ್ ಎಂ ಕೆ ಎಂ ಸಿ ಕಾಲೇಜ್ ಮಡಿಕೇರಿ. ಕೊಡಗು ನ್ಯೂಸ್

Read More

ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ ಶಾಸಕ ಎ.ಎಸ್.ಪೊನ್ನಣ್ಣ ತಮಿಳುನಾಡಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಮಿತ್ತ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮಧ್ಯಾಹ್ನ ಆಗಮಿಸಿದ ಎ.ಐ.ಸಿ.ಸಿ ಮುಖಂಡ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್‌ಪೊನ್ನಣ್ಣ ಅವರು ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು

Read More

ಪೊನ್ನಂಪೇಟೆ:-ವಿದ್ಯುತ್ ಕಂಬ ಹಾಗು ಕೇಬಲ್ ಅಳವಡಿಕೆ ಕಾಮಗಾರಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಪೈಪುಗಳಿಗೆ ಹಾನಿ ಪೊನ್ನಂಪೇಟೆ ಪಟ್ಟಣದಾದ್ಯಂತ ಕಳೆದ ಒಂದುವರೆ ತಿಂಗಳಿಂದ ನೂತನ ವಿದ್ಯುತ್ ಕಂಬ ಹಾಗು ಕೇಬಲ್ ಅನ್ನು ಅಳವಡುತ್ತಿದ್ದೂ ಈ ಸಂದರ್ಭ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಪೈಪು ದುರಸ್ತಿಗಿಡಾಗಿ ತೊಂದರೆ ಉಂಟಾಗುತಿರುವುದನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಣ್ಣೀರ ಹರೀಶ್ ರವರು ಖುದ್ದಾಗಿ ಟ್ಯಾಂಕರ್ ಮೂಲಕ ವಿವಿಧ ಭಾಗಗಳಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ವಿದ್ಯುತ್ ಕಂಬ ಅಳವಡಿಸುವ ಗುತ್ತಿಗೆದಾರರು ತರತುರಿಯಲ್ಲಿ ಕಂಬಗಳನ್ನು ನೆಟ್ಟು ನೀರಿನ ಪೈಪುಗಳಿಗೆ ಹಾನಿ ಮಾಡುತ್ತಿರುವುದರಿಂದ ಸುಗಮ ನೀರು ಸರಬರಾಜಿಗೆ ಅಡಚಣೆ ಉಂಟಾಗುತ್ತಿದೆ. ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ಅಳವಡಿಸಿ ಒಂದು ತಿಂಗಳಾದರೂ, ಬೀದಿ ದೀಪಗಳು ಅಳವಡಿಸದೆ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆ ಉಂಟಾಗಿದೆ. ಪಟ್ಟಣದ ಹೃದಯ ಭಾಗ ಬಸ್ ನಿಲ್ದಾಣದಲ್ಲೂ ಕೂಡ ಹೈ ಮಾಸ್ಕ್ ಬಲ್ಬುಗಳು ಹಾಗೂ ವಿದ್ಯುತ್ ದೀಪಗಳು ಉರಿಯದೆ ಇಡೀ ಪಟ್ಟಣದ ಪ್ರದೇಶ ಕತ್ತಲಲ್ಲಿ ಆವರಿಸಿದೆ.…

Read More

ಗುಂಡು ಹೊಡೆದು ಕೊಂಡು ವ್ಯಕ್ತಿ ಆತ್ಮಹತ್ಯೆ. ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ಮೇಲ್ ನಲ್ಲಿ ದುರ್ಘಟನೆ. ಕಣಿಯರ ಬಿ.ನಂಜಪ್ಪ (64) ಮೃತ ದುರ್ದೈವಿ.. ಇಂದು ಬೆಳಗ್ಗೆ ದುರ್ಘಟನೆ. ಬೆಳಕಿಗೆ ಬಂದಿದ್ದು ಘಟನಾ ಸ್ಥಳಕ್ಕೆ ಎಸ್ ಪಿ ಬಿಂದುಮಣಿ ,ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು ತೆರಳಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Read More

ಕೃಪಾ ದೇವರಾಜ್ ಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ.ವಸಂತ ರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ‌ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 22 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. ‌ 2025-26ನೇ ಸಾಲಿನ 23ನೇ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದಾಗ 10 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ‌ ಶ್ರೀಮತಿ ‌ ಪೂಜಾರಿರ ಕೃಪಾ ದೇವರಾಜ್ ರವರು ರಚಿಸಿದ “ಮಂತ್ರ ಪುಷ್ಪ -ಕಥೆಗಳ ಕ್ಯಾನ್ವಾಸ್” ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಹಿತಿ ಮತ್ತು ಕವಿಯತ್ರಿಯಾಗಿರುವ ಶ್ರೀಮತಿ ‌ ಪೂಜಾರಿರ ಕೃಪಾ…

Read More