- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ಮಡಿಕೇರಿ :-ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಅವರು ಜನವರಿ, 17 ಮತ್ತು 18 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಉಪಾಧ್ಯಕ್ಷರು ಜನವರಿ, 17 ರಂದು ಮಧ್ಯಾಹ್ನ 12.30 ಗಂಟೆಗೆ ನಗರದ ವುಡ್ ಸ್ಟಾಕ್ ರೆಸಾರ್ಟ್‍ನಲ್ಲಿ ಕೊಡಗು ಪತ್ರಕರ್ತರ ಸಂಘ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ, 18 ರಂದು ಬೆಳಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕೊಡಗು ಜಿಲ್ಲಾ ಪತ್ರಕರ್ತರ ಸಂಕ್ರಾಂತಿ ಕ್ರಿಕೆಟ್ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಹೊಸ್ಕೇರಿ ತೋಟದ ಲೈನ್ ಮನೆಯಲ್ಲಿ ಕೊಲೆ ಪ್ರಕರಣ – ಎಂಟು ಮಂದಿ ಆರೋಪಿಗಳ ಬಂಧನ ಮಡಿಕೇರಿ : ಕುಡಿದ ಮತ್ತಿನಲ್ಲಿ ತಂದೆಯನ್ನೇ ಹತ್ಯೆ ಮಾಡಿದ ಮಗ ಹಾಗೂ ಉಳಿದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಹೊಸ್ಕೇರಿ ಗ್ರಾಮದ ದೇವಯ್ಯರವರ ತೋಟದ ಲೈನ್‌ಮನೆಯಲ್ಲಿದ್ದ ಪ್ರಶಾಂತ್ ಮುದಿ (27), ದೇವಯ್ಯ ಎಂ ಎಸ್ (71), ಭಾರತಿ ಎಂ.ಡಿ (57), ಶ್ರೀಕಾಂತ್ ಮುದಿ (25), ಸುಧನ್ ಮುದಿ (25), ಲಕ್ಷ್ಮಿ ಮುದಿ (37), ತನುಶ್ರೀ (20), ಬಸಂತಿ ಮುದಿ (49) ಬಂಧಿತ ಆರೋಪಿಗಳು. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿಯಲ್ಲಿ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಬಂಗಾಳ ಮೂಲದ ಕಾರ್ಮಿಕ ಬುರೋ ಎಂಬಾತನನ್ನು ಜ.11 ರಂದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿರುವ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ನಡೆಸಿದ ಸಂದರ್ಭ ಜ.11 ರಂದು ಮಧ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಬುರೋ ಹಾಗೂ ಪ್ರಶಾಂತ್ ಮುದಿ…
ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಾದ ಸೋಮಶೇಖರ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಲಾದ ಬಿಂದುಮಣಿಯವರನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು ಸಮಿತಿಯ ಪದಾಧಿಕಾರಿಗಳಾದ ಪಿ.ಎಲ್. ಸುರೇಶ, ಪರಮಲೆ ಗಣೇಶ ದಂಬೆಕೋಡಿ ರಶ್ಮಿ ಬಿಷ್ಮ, ಪೂಜಾರಿರ ಪ್ರದೀಪ ಕುಮರ್, ಬಂಗಾರ ಕೋಡಿ ತುಳಸಿ ಗಾಂಧಿ ಪ್ರಸಾದ, ಪಟ್ಟಡ ದೀಪಕ್, ಡೆಮ್ಮೆಲೆ ರಿತೀನ್, ಪೂಜಾರಿರದ್ರುವ, ಕವನ್, ಕೊತ್ತೋಳಿ ಮೊದಲಾದವರು ಇದ್ದರು.
ಮಡಿಕೇರಿ: ನಗರದ ಸೈಬರ್ ಕ್ರೈಂ ಠಾಣೆಗೆ ಗುರುವಾರ ಭೇಟಿ ನೀಡಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಭೆ ನಡೆಸಿದರು. ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತನಿಖೆಯ ಕುರಿತು ಸೂಕ್ತ ನಿರ್ದೇಶನಗಳನ್ನು ಎಸ್ಪಿ ಬಿಂದುಮಣಿ ಅವರು ನೀಡಿದರು
ಸಂಪಾಜೆಯಲ್ಲಿ ಬೀಟೆ ಮರ ಸಾಗಾಟ ಒಬ್ಬ ಅಂದರ್ ಮತ್ತೊಬ್ಬ ಪರಾರಿ-ವಾಹನ ಸಹಿತ ಮಾಲು ವಶಕ್ಕೆ ಮಡಿಕೇರಿ: ಅಕ್ರಮವಾಗಿ ಬೀಟೆ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಸಂಪಾಜೆ ಅರಣ್ಯ ತನಿಖಾ ಠಾಣೆ ಯಶಸ್ವಿಯಾಗಿದೆ. ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಸಂರಕ್ಷಣಾಧಿಕಾರಿಗಳು , ಮಡಿಕೇರಿ ಉಪ ವಿಭಾಗದ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಡರಾತ್ರಿ (ಜ.15) ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಟಾಟಾ ಏಸ್ ವಾಹನ ತಡೆದು ಪರಿಶೀಲನೆ ನಡೆಸಿದಾಗ ಅಡಿಭಾಗದಲ್ಲಿ ಭತ್ತದ ಹೊಟ್ಟು ಚೀಲ ಹಾಕಿ ಅದರ ಅಡಿಯಲ್ಲಿ ಬೀಟ ಮರಗಳ 25 ನಾಟ = 2.862 ಘನ ಮೀಟರ್ ಕಂಡು ಬಂದಿದೆ. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ನಾಪೋಕ್ಲಿನ ಬಿಎಂ ಸಜನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಮತ್ತೂರ್ವ ಆರೋಪಿ ಸಿದ್ದಾಪುರದ ಅಬ್ದುಲ್ ಅಬ್ಬುಟ್ಟಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ತಿಳಿದು…
ಮಡಿಕೇರಿಯ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕೊಡಗು ಎಸ್ಪಿ ಬಿಂದುಮಣಿ ಅವರು ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಇನ್ನಿತರ ಕಾರ್ಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಕಾರಾಗೃಹ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಸಲಹೆಗಳನ್ನು ನೀಡಿದರು.
ಜಿಲ್ಲೆಯ ಗಡಿ ಭಾಗವಾದ ಎಸ್ಪಿ ಬಿಂದುಮಣಿ ಅವರು ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. ಬಳಿಕ ಗಡಿ ತಪಾಸಣಾ ಗೇಟ್ ಮತ್ತು ಅಲ್ಲಿನ ಕಾರ್ಯವನ್ನು ಪರಿಶೀಲಿಸಿ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಮಡಿಕೇರಿ ಮಹಿಳಾ ಠಾಣೆಗಳಿಗೆ ಎಸ್ ಪಿ ಬಿಂದುಮಣಿ ಭೇಟಿ ಇಂದು ಮಡಿಕೇರಿಯಲ್ಲಿರುವ ಕೊಡಗು ಮಹಿಳಾ ಠಾಣೆಗೆ ಠಾಣೆಗೆ ಭೇಟಿ ನೀಡಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಭೆ ನಡೆಸಿ ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳುವ ಕುರಿತು ಮುಂತಾದ ವಿಷಯಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು. ಕೊಡಗು ನ್ಯೂಸ್
ರಸ್ತೆ ಸುರಕ್ಷತಾ ಮಾಸಾಚರಣೆ ಸಂಚಾರ ನಿಯಮ ಪಾಲಿಸಿ; ಅಪಘಾತ ತಪ್ಪಿಸಿ: ದಿನೇಶ್ ಕುಮಾರ್ ವಾಹನ ಚಲಾಯಿಸುವ ಪ್ರತಿಯೊಬ್ಬರಲ್ಲಿಯೂ ಸಹ ಸಂಚಾರ ನಿಯಮವನ್ನು ಪಾಲಿಸುತ್ತೇವೆ ಎಂಬ ದೃಢಸಂಕಲ್ಪ ಮಾಡಬೇಕು. ಇದರಿಂದ ಅಪಘಾತವನ್ನು ತಡೆಯಬಹುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ,ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಂಭವಿಸುವ ವಿವಿಧ ರೀತಿಯ ಅಪಘಾತಗಳ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿ ಯುವ ಜನರಲ್ಲಿ ಜಾಗೃತಿ ಮೂಡಿಸಿದರು. ವಾಹನ ಸಂಚಾರ ಸಂಬಂಧಿಸಿದಂತೆ ಎಲ್ಲಾ ನಿಯಮಗಳು ಗೊತ್ತಿದೆ ಎಂದು ಉದಾಸೀನ ಮಾಡಬಾರದು. 18 ವರ್ಷದೊಳಗಿನವರು ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಲಾಯಿಸಬಾರದು. 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಜೊತೆಗೆ ವಾಹನದ ವಿಮೆ ಇರಬೇಕು ಎಂದು ದಿನೇಶ್ ಕುಮಾರ್ ಅವರು ಸಲಹೆ ಮಾಡಿದರು. ಇತ್ತೀಚಿನ…
ಬಾಲಕರ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ದಿಢೀರ್ ಭೇಟಿ ನಗರದ ಬಾಲಕರ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಾಲಕರ ಬಾಲಮಂದಿರದಲ್ಲಿರುವ ಮಕ್ಕಳಿಂದ ವಿದ್ಯಾಭ್ಯಾಸ, ಊಟೋಪಚಾರ, ಬಿಸಿನೀರು ವ್ಯವಸ್ಥೆ, ಗ್ರಂಥಾಲಯ ಸೌಲಭ್ಯ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಕುಂದುಕೊರತೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಸಲಹೆ ಮಾಡಿದರು. ಮೆನು ಪ್ರಕಾರ ಗುಣಮಟ್ಟದ ಆಹಾರ ಪೂರೈಸಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು. ಪ್ರತೀ ತಿಂಗಳು ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿದ್ಯಾರ್ಥಿಗಳು ಪ್ರತೀ ನಿತ್ಯ ದಿನಪತ್ರಿಕೆಯನ್ನು ಓದಬೇಕು. ಗ್ರಂಥಾಲಯ ಸೌಲಭ್ಯವನ್ನು ಪಡೆದು ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಪಾಠದ ಜೊತೆಗೆ ಆಟ ಇರಬೇಕು. ಹೆಚ್ಚು ಅಧ್ಯಯನ ಮಾಡುವುದರಿಂದ ಉನ್ನತ ವ್ಯಾಸಂಗ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ನುಡಿದರು. ವಿದ್ಯಾರ್ಥಿಗಳು ಲಭ್ಯವಿರುವ…
