Author: Kodagu-admin

ಎಮ್ಮೆಮಾಡು ಭಾಗದಲ್ಲಿ ಶಾಸಕ ಪೊನ್ನಣ್ಣನವರಿಂದ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ನಾಪೋಕ್ಲು ಹೋಬಳಿಯ ಎಮ್ಮೆಮಾಡು ಗ್ರಾಮಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಎಮ್ಮೆಮಾಡು ಭಾಗದಲ್ಲಿ ಶಾಸಕರ ರೂ 35ಲಕ್ಷ ವೆಚ್ಚದ ಅನುದಾನದಲ್ಲಿ ಪ್ರಾರಂಭವಾಗಲಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಬಳಿಕ, ಈಗಾಗಲೇ ಈ ಭಾಗದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮಾನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ಮೂಸಾ, ಮಾಜಿ ವಲಯ ಅಧ್ಯಕ್ಷರು ಹಂಸ, ಉಪಾಧ್ಯಕ್ಷರು ಅಯ್ಸಮ, ಸದಸ್ಯರು ಟಿ ಕೆ ಉಸಫ್, ಮಾಹಿನೇ, ಬೂತ್ ಅಧ್ಯಕ್ಷರು ಹನೀಫ್, ಅಶ್ರಫ್, ಅದ್ರಮ್, ದಯಾ ಚಿನ್ನಪ್ಪ, ಮಾಚೇಟೀರ ಕುಶಾಲಪ್ಪ, ಸಿರಾಜ್ ಪರವಂಡ, ವಾಸಿಮ್, ಬಲ್ಲಮಾವಟಿ ಬೂತ್ ಅಧ್ಯಕ್ಷರು ಮಿಥುನ್, ಕುಂಡಚ್ಚಿರ ಮಂಜು ದೇವಯ್ಯ, ಅಯೂಬ್, ಸಂತೋಷ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ…

Read More

ಶ್ರೀ ಮಕ್ಕಿ ಶಾಸ್ತ್ರವು ದೇವಸ್ಥಾನಕ್ಕೆ ಇಂದು ಶಾಸಕ ಎಸ್ ಪೊನ್ನಣ್ಣನವರು ಭೇಟಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು, ನಾಪೋಕ್ಲು ಹೋಬಳಿಯ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಶಾಸಕರು ಸ್ಥಳೀಯರ ಕೋರಿಕೆ ಮೇರೆಗೆ ದೇವಸ್ಥಾನದ ಕೆರೆಗೆ ಭೇಟಿ ನೀಡಿ, ಬಹು ಪುರಾತನವಾದ ಈ ಕೆರೆಯು ಶಿಥಿಲಾವಸ್ತೆಗೆ ತಲುಪಿರುವುದನ್ನು ಪರಿಶೀಲಿಸಿದರು. ಭಕ್ತರ ಹಾಗೂ ಸಮಿತಿಯವರ ದುರಸ್ತಿ ಕೋರಿಕೆಯನ್ನು ಮನ್ನಿಸಿದ ಮಾನ್ಯ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ ಈ ಕೆರೆಯ ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಮಾಹಿತಿ ಬಂದೊಡನೆ ಕೆರೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ಕುಶಾಲಪ್ಪ, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರು…

Read More

ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆ ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ದೇಶಕರ ಪಟ್ಟಿ ಪರಿಷ್ಕರಣೆಗೆ ತೀರ್ಮಾನ ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘಕ್ಕೆ ಈಗಾಗಲೇ ತಾಲ್ಲೂಕುವಾರು ಆಯ್ಕೆ ಮಾಡಿರುವ ಪಟ್ಟಿಯನ್ನು ಪರಿಷ್ಕರಿಸಲು ಸೋಮವಾರ ನಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಕುರಿತು ವಿಷಯ ಪ್ರಸ್ತಾಪಿಸಿದ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅವರು ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಸಮಿತಿ ಸದಸ್ಯರ ಗಮನಕ್ಕೆ ಬಾರದೆ ಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು, ಈ ಪಟ್ಟಿಯನ್ನು ಪರಿಷ್ಕರಿಸುವಂತಾಗಬೇಕು ಎಂದು ಸಭೆಯ ಗಮನಕ್ಕೆ ತಂದರು. ಈ ಕುರಿತು ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಪಟ್ಟಿಯಲ್ಲಿ ಲೋಪಗಳಿದ್ದಲ್ಲಿ ಪರಿಷ್ಕರಿಸುವಂತಾಗಬೇಕು. ಆದರೆ ಜಿಲ್ಲಾ…

Read More

ಮಾಕುಟ್ಟಕ್ಕೆ ಶಾಸಕ ಪೊನ್ನಣ್ಣ ರವರ ದಿಡೀರ್ ಭೇಟಿ : ಕೇಂದ್ರ ಬಿಜೆಪಿ ಸರಕಾರದ ಸ್ವಚ್ಛ ಭಾರತ್ ಅಭಿಯಾನದ ವೈಫಲ್ಯ ಬಹಿರಂಗ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಮುಂಜಾನೆ ಮಾಕುಟ್ಟ ಭಾಗಕ್ಕೆ ಭೇಟಿ ನೀಡಿದರು. ಸ್ಥಳೀಯರ ಕೋರಿಕೆ ಮೇರೆಗೆ ಇಂದು ಮಾಕುಟ್ಟ ಭಾಗದ ವಾಸಿಸುತ್ತಿರುವ ನಿವಾಸಿಗಳ ಕಾಲೋನಿಗೆ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ದಿಢೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಿವಾಸಿಗಳೊಡನೆ ಮಾತನಾಡುತ್ತಾ ಅಲ್ಲಿಯ ವಾಸ್ತವಂಶವನ್ನು ಪರಿಶೀಲಿಸಿದ ಮಾನ್ಯ ಶಾಸಕರು, ಅಲ್ಲಿಯ ನಿವಾಸಿಗಳಿಗೆ ಸರಿಯಾದ ಸೂರು ಇಲ್ಲದೆ, ಕೇಂದ್ರ ಬಿಜೆಪಿ ಸರಕಾರ ಅಬ್ಬರದ ಪ್ರಚಾರ ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದಡಿ ಒಂದೇ ಒಂದು ಸೌಚಾಲಯ ಕೂಡ ನಿರ್ಮಿಸದೆ ಇರುವುದನ್ನು ಗಮನಿಸಿದರು. ಕಡೆಗಣಿಸಲ್ಪಟ್ಟ ಈ ಭಾಗದ ಜನರ ಏಳಿಗೆಗೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರು…

Read More

ಪತ್ರಕರ್ತರ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಗೆ ಮಡಿಕೇರಿಯಲ್ಲಿ ಚಾಲನೆ. ಪತ್ರಕರ್ತರು ಸಮಾಜದ ಕೇಂದ್ರ ಬಿಂದು. – ಶಾಸಕ ಎ. ಎಸ್ ಪೊನ್ನಣ್ಣ ಶ್ಲಾಘನೆ. ಮಡಿಕೇರಿ ಜ 18- ಸುದ್ದಿ-ಸಂದೇಶ ರವಾನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿದಿನವೂ ಕಾರ್ಯನಿರತವಾಗಿರುವ ಪತ್ರಕರ್ತರ ಅರೋಗ್ಯ ಹಾಗೂ ಮನರಂಜನೆಗೆ ಕ್ರೀಡೆ ತುಂಬಾ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪತ್ರಕರ್ತರ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾoಗಣದಲ್ಲಿ ಕ್ರಿಕೆಟ್ ಆಡುವ ಮೂಲಕ ಉದ್ಘಾಟಿಸಿ ಹೇಳಿದರು ಪತ್ರಕರ್ತರು ಸಮಾಜದ ಕೇಂದ್ರಬಿಂದು. ಪತ್ರಕರ್ತರಿಂದಲೇ ದೇಶ-ವಿದೇಶದಲ್ಲಾಗುವ ವಿವಿಧ ಬದಲಾವಣೆಗಳು ವಿಷಯ-ವಿನಿಮಯ ತಿಳಿಯುತ್ತದೆ, ಪತ್ರಕರ್ತರು ಪತ್ರಕರ್ತರಿಗಿರುವ ಮೂಲಭೂತ ಹಕ್ಕುಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸುಸ್ಥಿತಿಯ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಅಂತೆಯೇ ಆರ್ಥಿಕ,ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಕೂಡ ಪತ್ರಕರ್ತರದ್ದು ಮುಖ್ಯ ಪಾತ್ರ ಎಂದು ಪತ್ರಕರ್ತರನ್ನು ಉದ್ದೇಶಿಸಿ ಪೊನ್ನಣ್ಣ…

Read More

ಬಿಲ್ಲವ ಸಮುದಾಯ ಆಯೋಜಿಸಿದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರಾದ ಪೊನ್ನಣ್ಣ ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ಬಿಲ್ಲವ ಸಮುದಾಯದವರು ಆಯೋಜಿಸಿದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಹಾಗೂ ಮನರಂಜನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಕಾಂಗ್ರೆಸ್ ನಾಯಕರು ಹಾಗೂ ಬಿಲ್ಲವ ಸಮಾಜದ ಮುಖಂಡರಾದ ಅಪ್ರು ರವೀಂದ್ರರವರು ಮಾನ್ಯ ಶಾಸಕರನ್ನು ವೇದಿಕೆಯತ್ತ ಬರಮಾಡಿಕೊಂಡರು. ಇತ್ತೀಚೆಗೆ ಮಾನ್ಯ ಶಾಸಕರು ಬಿಲ್ಲವ ಸಮಾಜಕ್ಕೆ ಮಡಿಕೇರಿಯಲ್ಲಿ ಸರಕಾರದ ವತಿಯಿಂದ ಜಾಗ ಮಂಜೂರು ಮಾಡಿ ಕೊಟ್ಟಿರುವುದಕ್ಕೆ ಗೌರವಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜದವರಿಂದ ಗೌರವ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕರು, ನಾಡು ಸುಭಿಕ್ಷೆ ಹಾಗೂ ಸಮೃದ್ಧಿ ಆಗಬೇಕೆಂದರೆ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾಡಿನ ಪ್ರತಿಯೊಂದು ಸಮುದಾಯದವರಿಗೆ ಅವರದೇ ಆದ ಜಾಗ ಇರುವ ಅವಶ್ಯಕತೆಯನ್ನು ತಾನು ಮನಗಂಡು ಬಿಲ್ಲವ ಸಮಾಜದವರ ಮನವಿಗೆ ಮನ್ನಣೆ ನೀಡಿ ಈ ಜಾಗವನ್ನು…

Read More

ಮಡಿಕೇರಿ :-ಚಂದನ್ ನಂದರಬೆಟ್ಟು ಅವರಿಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪತ್ರಕರ್ತ, ಸಮಾಜಸೇವಕ ಚಂದನ್ ನಂದರಬೆಟ್ಟು ಅವರಿಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ವೇದಿಕೆಯಲ್ಲಿ ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದವರಾದ ನಿವೃತ್ತ ಪೊಲೀಸ್ ಎ ಎಸ್ ಐ, ಕೃಷ್ಣ ಎನ್ ಎಂ ಹಾಗು ಜಯಲಕ್ಷ್ಮಿ ಎನ್ ಕೆ ಅವರ ಪುತ್ರರಾಗಿರುವ ಚಂದನ್ ನಂದರಬೆಟ್ಟು ಸಾಹಿತ್ಯ ಹಾಗು ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಈ ಗೌರವ ಲಭಿಸಿದೆ.

Read More

ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಗಳಲ್ಲಿ ‘ನೀರಿನ ಗಂಟೆ’ (ವಾಟರ್‌ ಬೆಲ್‌) ಬಾರಿಸುವುದನ್ನು ಕಡ್ಡಾಯಗೊಳಿಸಿ, ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಆರೋಗ್ಯ, ಬೆಳವಣಿಗೆ ದೃಷ್ಟಿಯಿಂದ ಮಕ್ಕಳು ನಿತ್ಯವೂ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ, ಮಕ್ಕಳಿಗೆ ಈ ಕುರಿತು ಸೂಕ್ತ ಅರಿವು ಇರುವುದಿಲ್ಲ. ಅದಕ್ಕಾಗಿ ಶಾಲಾ ಅವಧಿಯಲ್ಲಿ ಮಕ್ಕಳು ನಿಯಮಿತವಾಗಿ ನೀರು ಕುಡಿಯುವುದನ್ನು ನೆನಪಿಸಬೇಕಾದುದು ಶಿಕ್ಷಕರು ಮತ್ತು ಸಿಬ್ಬಂದಿಯ ಜವಾಬ್ದಾರಿಯೂ ಆಗಿದೆ. ಮಧ್ಯಾಹ್ನದ ಬಿಸಿಯೂಟ, ಆಟದ ಸಮಯದಲ್ಲಿ ನೀರು ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಎಲ್‌ಕೆಜಿ, ಯುಕೆಜಿ ಒಳಗೊಂಡಂತೆ ಎಲ್ಲ ಹಂತದಲ್ಲೂ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಈ ನಿಯಮ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕೊಡಗು ನ್ಯೂಸ್

Read More

ಮಡಿಕೇರಿ:-ಶಾಸಕರಾದ ಎ. ಎಸ್ ಪೊನ್ನಣ್ಣ ವರಿಂದ ಬಾಬು ಚಂದ್ರ ಉಳ್ಳಾಗಡ್ಡಿ ಅವರ ಅಂತಿಮ ದರ್ಶನ ಶನಿವಾರ ನಿಧಾನರಾದ ಮಡಿಕೇರಿ ನಿವಾಸಿ ಬಾಬು ಚಂದ್ರ ಉಳ್ಳಾಗಡ್ಡಿ ರವರ ಅಂತಿಮ ದರ್ಶನವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪಡೆದರು. ಹಿರಿಯ ಏಲಕ್ಕಿ ವರ್ತಕರಾಗಿದ್ದ ಇವರು, ಚೇಂಬರ್ ಆಫ್ ಕಾಮರ್ಸ್ ನ ಹಿರಿಯ ನಿರ್ದೇಶಕರು ಆಗಿದ್ದರು. ಲಯನ್ಸ್ ಸಂಸ್ಥೆಯಲ್ಲಿ ಅನೇಕ ದಶಕಗಳು ಸದಸ್ಯರಾಗಿ ಸಾಮಾಜಿಕ ಸೇವಾ ಕಾರ್ಯ ಕೈಗೊಂಡಿದ್ದ ಇವರ ಸೇವೆಯನ್ನು ಮಾನ್ಯ ಶಾಸಕರು ಈ ಸಂಧರ್ಭದಲ್ಲಿ ಸ್ಮರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಸಮಿತಿಯ ಉಪಾಧ್ಯಕ್ಷರು ಮೆಹರೋಜ್ ಖಾನ್ ರವರು ಉಪಸ್ಥಿತರಿದ್ದರು. ಕೊಡಗು ನ್ಯೂಸ್

Read More

ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕೊಡಗಿನ ಕಂಟ್ರೋಲ್ ರೂಂ ಉಪನಿರೀಕ್ಷಕರಾದ ಕೆ ಜೋಷಿ ಗೆ ಪ್ರಥಮ ಸ್ಥಾನ ರಾಜ್ಯ ಪೊಲೀಸ್ ವಾರ್ಷಿಕ ‌ಕ್ರೀಡಾಕೂಟದಲ್ಲಿ ಅನುಭವಿ ಮತ್ತು ಬಲಾಡ್ಯರೊಂದಿಗೆ (45 + ವಿಭಾಗದಲ್ಲಿ) ಸ್ಪರ್ಧಿಸಿ 100 mtrs & 200 mtrs ಎರಡರಲ್ಲೂ ಪ್ರಥಮ ಸ್ಥಾನ ಪಡೆದ ಕೊಡಗು ಪೊಲೀಸ್ ಕಂಟ್ರೋಲ್ ರೂಂ ನ ಸಹಾಯಕ ಉಪ ನಿರೀಕ್ಷಕರಾದ ಕೆ ಜೋಷಿ. ಕೊಡಗು ನ್ಯೂಸ್

Read More