Author: Kodagu-admin

ಕುಟ್ಟ-ಶ್ರೀಮಂಗಲ ಭಾಗಮಂಡಲ ಮತ್ತು ತಲಕಾವೇರಿ ಉಪಠಾಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್ ಬಿಂದುಮಣಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಭೆ ನಡೆಸಿದರು. ನಂತರ ಠಾಣಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆಯ ಅಕ್ರಮ ಚಟುವಟಿಗಳ ಮೇಲೆ ನಿಗಾ ಇಡುವುದು ಮುಂತಾದ ವಿಷಯಗಳ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು ಕೊಡಗು ನ್ಯೂಸ್

Read More

ಪೊನ್ನಂಪೇಟೆಯ ಕುಂದ-ಈಚೂರು ಡಾಂಬರಿಕರಣ ಘಟಕದ ವಿರುದ್ಧ ಗ್ರಾಮಸ್ಥರ ದೂರು:ಶಾಸಕ ಎ. ಎಸ್. ಪೊನ್ನಣ್ಣ ಪರಿಶೀಲನೆ ಪೊನ್ನಂಪೇಟೆ ತಾಲೂಕು ಈಚೂರ್ ಕುಂದ ಗ್ರಾಮದಲ್ಲಿರುವ, ಖಾಸಗಿ ಡಾಂಬರಿಕರಣ ಘಟಕ ಕಂಪನಿ ಎನ್‌ಬಿಎನ್ ಕನ್ಸ್’ಟ್ರಕ್ಷನ್ ಕಾರ್ಯ ಚಟುವಟಿಕೆಗಳ ವಿರುದ್ಧ, ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ದೂರು ಈ ಹಿಂದೆ ಸಾರ್ವಜನಿಕ ವಲಯದಿಂದ ಬಂದಿತ್ತು. ಸಾರ್ವಜನಿಕರು ಪ್ರತಿಭಟನೆ ಸಹ ಮಾಡಿದರು. ಈ ಮಾಹಿತಿ ಪಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರಿರ ನವೀನ್, ಹಾತ್ತೂರು ವಲಯ ಅಧ್ಯಕ್ಷರು ಕೊಕ್ಕಂಡ ರೋಷನ್, ಅರ್ವತೋಕ್ಲು ವಲಯ ಅಧ್ಯಕ್ಷ ತೀತಿಮಾಡ ಯಶ್ವಿನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಕುಪ್ಪಣ್ಣಮಾಡ ಪ್ರೀತಮ್, ಕಾಳಿಮಾಡ ದೀಪು, ಕುಂಡಚ್ಚಿರ ಮಂಜು ದೇವಯ್ಯ,ಅಯೂಬ್, ಸ್ಥಳೀಯರು ಉಪಸ್ಥಿತರಿದ್ದರು. ಕೊಡಗು ನ್ಯೂಸ್

Read More

ತಪ್ಪು ಮಾಹಿತಿಗಿಲ್ಲ ಅವಕಾಶವಿಲ್ಲ ಬಹಿರಂಗ ಚರ್ಚೆಗೆ ಬನ್ನಿ ಶಾಸಕ ಎ ಎಸ್ ಪೊನ್ನಣ್ಣರವರಿಂದ ಸವಾಲ್ ಜಮ್ಮಾ ತಿದ್ದುಪಡಿ ವಿಧೇಯಕದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ರವರಿಗೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಸವಾಲ್ ಹಾಕಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ರವರು ರಾಜಕೀಯ ಕಾರಣಕ್ಕೆ ಮಾಧ್ಯಮ ಗೋಷ್ಠಿಯಲ್ಲಿ ತಪ್ಪು ಮಾಹಿತಿ ಒದಗಿಸಿದ್ದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಜಮ್ಮಾ ಹಿಡುವಳಿದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ತಾವು ಮತ್ತು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಮಾನ್ಯ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಕಂದಾಯ ಸಚಿವರು,ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರ ನೆರವನ್ನು ಪಡೆದು ತಿದ್ದುಪಡಿ ವಿಧೇಯಕ ಮಂಡನೆಗೆ ಶ್ರಮವಹಿಸಿದನ್ನು ವಿವರಿಸಿದರು. ಕೊಡಗಿನ ಜಮ್ಮಾ ಬಾಣೆ…

Read More

ಕೊಡಗು ಪತ್ರಕರ್ತರ ಸಂಘದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣ ಮಡಿಕೇರಿ: ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಜ.೧೮ ರಂದು ನಡೆಯಲಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣ ನಡೆಯಿತು. ಸುಂಟಿಕೊಪ್ಪ ಸಮೀಪದ ೭ನೇ ಹೊಸಕೋಟೆಯಲ್ಲಿರುವ ನೇಚರ್ ಪಾರ್ಕ್ ಹೋಂ ಸ್ಟೇಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಗೋ ಅನಾವರಣ ಮಾಡಲಾಯಿತು. ಈ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಸ್ಥಾಪಕಾಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ.ಸಂತೋಷ್, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ. ರವಿಕುಮಾರ್, ಕಾರ್ಯದರ್ಶಿ ಅರುಣ್ ಕೂರ್ಗ್ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜ.೧೮ ರಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ (ರಾಜಕಾರಣಿಗಳು) ಶಾಸಕಾಂಗ ವರ್ಸಸ್ (ಅಧಿಕಾರಿ ವರ್ಗ) ಕಾರ್ಯಾಂಗದ ನಡುವೆ ಸೌಹಾರ್ದ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘದ “ಹೊನ್ನು, ಸುಗ್ಗಿ, ಸಿರಿ,…

Read More

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀಮತಿ ಜಲಜಾ ಶೇಖರ್ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 09.02.2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೋಮವಾರಪೇಟೆಯ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆಯಾಗಿದ್ದಾರೆ. ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶ್ರೀಮತಿ ಜಲಜಾ ಶೇಖರ್ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಇಲ್ಲಿಯವರೆಗೆ ಏಳು ಪುಸ್ತಕಗಳನ್ನು ಇವರು ಹೊರತಂದಿದ್ದು ಇವರ ಎಂಟನೆಯ ಪುಸ್ತಕವು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ. ವಿಚಾರದೆಡೆಗೆ, ನೆಲಮುಗಿಲು, ಅಗ್ನಿಕುಂಡ, ಪ್ರತಿಕ್ಷ, ವಿಲೋಕನ ವೈಚಾರಿಕ ಲೇಖನಗಳು, ದೂರ ತೀರ ಯಾನ ಪ್ರವಾಸ ಕಥನ, ಕನ್ನಡಿಯ ಬಿಂಬ ಕೃತಿಗಳನ್ನು ರಚಿಸಿದ್ದಾರೆ. ಶೈಕ್ಷಣಿಕ, ಸಾಹಿತ್ಯ ಅಲ್ಲದೆ ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಸೋಮವಾರಪೇಟೆಯ ಅಕ್ಕನ ಬಳಗದ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೊಡಗು ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು…

Read More

ಕಕ್ಕಬ್ಬೆ ಕುಂಜಿಲ ಗ್ರಾಮದ ಕೆ.ಪಿ.ಬಾಣೆ ಸರ್ಕಾರಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಮಕ್ಕಳ ಸಂತೆ ಹಾಗೂ ಆಹಾರ ಮೇಳ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಬಳಿಯ ಕಕ್ಕಬ್ಬೆ ಕುಂಜಿಲ ಗ್ರಾಮದ ಕೆ.ಪಿ. ಬಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ಸಂತೆ ಹಾಗೂ ಆಹಾರ ಮೇಳ ವಿವಿಧ ಪೌಷ್ಟಿಕ ಆಹಾರಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟದೊಂದಿಗೆ ಯಶಸ್ವಿಯಾಗಿ ನಡೆಯಿತು. ಶಾಲೆಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಫಿಯಾ ಅವರು ಮಾತನಾಡಿ ಜೀವನದಲ್ಲಿ ಮಕ್ಕಳ ವ್ಯವಹಾರ ಜ್ಞಾನ ವೃದ್ಧಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ. ಅದರಂತೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವೃದ್ಧಿಯಾಗಲಿದ್ದು ಪೋಷಕರು ತಮ್ಮ ವಿದ್ಯಾರ್ಥಿಗಳ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸವಿತ ಅವರು ಕಾರ್ಯಕ್ರಮದ ಆಯೋಜನೆಯ ಕುರಿತು ಮಾಹಿತಿ ನೀಡಿ ಸರ್ವರನ್ನು ಸ್ವಾಗತಿಸಿದರು.…

Read More

ಅಮ್ಮತ್ತಿ ಹಾಗೂ ಪಾಲಿಬೆಟ್ಟ ಭಾಗಗಳಲ್ಲಿ ನೂತನ ರಸ್ತೆಯ ಲೋಕಾರ್ಪಣೆ ಅಮ್ಮತ್ತಿ-ತಿತಿಮತಿ ರಸ್ತೆಯ ಅಮ್ಮತಿಯಿಂದ ಪಾಲಿಬೆಟ್ಟ ಕಡೆಗೆ ಹೋಗುವ, ನೂತನ ರಸ್ತೆಯ ಭೂಮಿ ಪೂಜೆ ಹಾಗೂ ಮುಕ್ತಾಯಗೊಂಡ ರಸ್ತೆ ಕಾಮಗಾರಿಯ ಲೋಕಾರ್ಪಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು. ಲೋಕೋಪಯೋಗಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿರುವ ಶಾಸಕರು, ಮಳೆಯಿಂದಾಗಿ ಹದಗೆಟ್ಟ ಈ ರಸ್ತೆಯನ್ನು ದುರಸ್ತಿಗೊಳಿಸಿ ಮರುಡಾಮರೀಕರಣ ಕಾಮಗಾರಿ ಕೈಗೊಂಡಿದ್ದರು. ಮುಕ್ತಾಯಗೊಂಡ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವುಗೊಳಿಸಿದರು. ಅಮ್ಮತ್ತಿಯಿಂದ ಪಾಲಿಬೆಟ್ಟ ಕಡೆಗೆ ಹೋಗುವ ಹಾಗೂ ಇತ್ತೀಚೆಗೆ ಪೂರ್ಣಗೊಂಡ ರಸ್ತೆಯ ಉದ್ಘಾಟನೆಯನ್ನು ಅಮ್ಮತ್ತಿಯಲ್ಲಿ ಶಾಸಕರು ನೆರವೇರಿಸಿದರು. ಬಳಿಕ ಬೈರಂವಾಡ ಭಾಗದಲ್ಲಿ ಇದೇ ರಸ್ತೆಯ ಮುಂದುವರಿದ ಭಾಗದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಗಳ ಪೈಕಿ, ಉದ್ಘಾಟನೆಗೊಂಡ ಅಮ್ಮತಿ-ಪಾಲಿಬೆಟ್ಟ ರಸ್ತೆಗೆ ₹ 2.00 ಕೋಟಿ ಅನುದಾನ ಒದಗಿದೆ ಹಾಗೂ ಅಮ್ಮತಿ-ಮೂರ್ನಾಡ್ ರಸ್ತೆಯ, ಅಮ್ಮತಿಯಿಂದ ಕೊಂಡಂಗೇರಿ ಕಡೆಗೆ, ಬೈರಂಬಡ ಹತ್ತಿರ ₹ 1…

Read More

ನಾಪೋಕ್ಲು :ಆಕ್ರಮ ಮರಳು ಸಾಗಾಟ ಮಾಲುಸಹಿತ ಟಿಪ್ಪರ್ ವಾಹನ ವಶಕ್ಕೆ -ಮಾಲೀಕನಿಗೆ ಭಾರಿ ದಂಡ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಸಾಗಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ಭಾರಿ ದಂಡ ವಿಧಿಸಿದ ಘಟನೆ ನಡೆದಿದೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತು ಗ್ರಾಮದ ಕಾರೆಕಾಡು ಬಳಿಯ ಕಾವೇರಿ ನದಿ ದಡದಿಂದ ಟಿಪ್ಪರ್ (KA12C5394 )ವಾಹನದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಮಾಲು ಸಹಿತ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆಡಿದ್ದಾರೆ. ಬಳಿಕ ಪ್ರಕರಣವನ್ನು ಜಿಲ್ಲಾಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ವಾಹನದ ಮಾಲೀಕರಾದ ಡಿ.ಕೆ.ನಂದೀಶ್ ಎಂಬುವವರಿಗೆ ಸುಮಾರು 37,320ರೂಗಳ ದಂಡವನ್ನು ವಿಧಿಸಿ ಕ್ರಮಕೈಗೊಂಡಿದ್ದಾರೆ. ಕಾರೆಕಾಡುವಿನಿಂದ ಕಾವೇರಿ ನದಿ ದಡಕ್ಕೆ ಮರಳು…

Read More

ಅಮ್ಮತ್ತಿ-ಪಾಲಿಬೆಟ್ಟ ಭಾಗದಲ್ಲಿ ನೂತನ ರಸ್ತೆಯ ಉದ್ಘಾಟನೆ ಹಾಗೂ ಮುಕ್ತಾಯಗೊಂಡ ರಸ್ತೆಯ ಲೋಕಾರ್ಪಣೆ ಅಮ್ಮತ್ತಿ-ತಿತಿಮತಿ ರಸ್ತೆಯ ಅಮ್ಮತಿಯಿಂದ ಪಾಲಿಬೆಟ್ಟ ಕಡೆಗೆ ಹೋಗುವ, ನೂತನ ರಸ್ತೆಯ ಭೂಮಿ ಪೂಜೆ ಹಾಗೂ ಮುಕ್ತಾಯಗೊಂಡ ರಸ್ತೆ ಕಾಮಗಾರಿಯ ಲೋಕಾರ್ಪಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು. ಲೋಕೋಪಯೋಗಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿರುವ ಶಾಸಕರು, ಮಳೆಯಿಂದಾಗಿ ಹದಗೆಟ್ಟ ಈ ರಸ್ತೆಯನ್ನು ದುರಸ್ತಿಗೊಳಿಸಿ ಮರುಡಾಮರೀಕರಣ ಕಾಮಗಾರಿ ಕೈಗೊಂಡಿದ್ದರು. ಮುಕ್ತಾಯಗೊಂಡ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವುಗೊಳಿಸಿದರು. ಅಮ್ಮತ್ತಿಯಿಂದ ಪಾಲಿಬೆಟ್ಟ ಕಡೆಗೆ ಹೋಗುವ ಹಾಗೂ ಇತ್ತೀಚೆಗೆ ಪೂರ್ಣಗೊಂಡ ರಸ್ತೆಯ ಉದ್ಘಾಟನೆಯನ್ನು ಅಮ್ಮತ್ತಿಯಲ್ಲಿ ಶಾಸಕರು ನೆರವೇರಿಸಿದರು. ಬಳಿಕ ಬೈರಂವಾಡ ಭಾಗದಲ್ಲಿ ಇದೇ ರಸ್ತೆಯ ಮುಂದುವರಿದ ಭಾಗದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಗಳ ಪೈಕಿ, ಉದ್ಘಾಟನೆಗೊಂಡ ಅಮ್ಮತಿ-ಪಾಲಿಬೆಟ್ಟ ರಸ್ತೆಗೆ ₹ 2.00 ಕೋಟಿ ಅನುದಾನ ಒದಗಿದೆ ಹಾಗೂ ಅಮ್ಮತಿ-ಮೂರ್ನಾಡ್ ರಸ್ತೆಯ, ಅಮ್ಮತಿಯಿಂದ ಕೊಂಡಂಗೇರಿ ಕಡೆಗೆ, ಬೈರಂಬಡ ಹತ್ತಿರ…

Read More

ವಿರಾಜಪೇಟೆ ವ್ಯಾಪ್ತಿಯ ಕೆದಮುಳ್ಳೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಎ. ಎಸ್ ಪೊನ್ನಣ್ಣನವರಿಂದ ಭೂಮಿ ಪೂಜೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆದ ಮುಳ್ಳೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು. ಬಳಿಕ ಮಾತನಾಡಿದ ಮಾನ್ಯ ಶಾಸಕರು, ಒಟ್ಟು ₹ 16.83 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಹೆಸರು ಮಾಡಿದೆ. ಇಲ್ಲಿ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಅನೇಕ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಈ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ ವಿದ್ಯಾರ್ಜನೆ ಮಾಡಲು ಬರುವ ಮಕ್ಕಳಿಗೆ ಅನುಕೂಲ ಆಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಕೆಡಿಪಿ…

Read More