- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
- ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ
- ರಸ್ತೆ ಬದಿ ಮದ್ಯದ ಬಾಟಲಿ ಬಾಕ್ಸ್ ಎಸೆದ ಆಸ್ಪತ್ರೆ ಸಿಬ್ಬಂದಿ?
Author: Kodagu-admin
ರಾಷ್ಟ್ರ ಮಟ್ಟದ ಸರ್ಕಲ್ ಕಬಡ್ಡಿಗೆ ಆಯ್ಕೆ ದಿನಾಂಕ 10/01/2026 ರಿಂದ 13/01/2026 ರ ವರೆಗೆ ಉತ್ತರಾಖಂಡದ ನೈನಿತಾಲ್ ನ ಬಾಜ್ ಪುರದ ಶ್ರೀ ಗುರುದ್ವಾರ ಸಾಹಿಬ್ ನಲ್ಲಿ ನಡೆಯುವ 19ನೇ ಸೀನಿಯರ್ ಸರ್ಕಲ್ ಸ್ಟೈಲ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಗಳಲೆ ಗ್ರಾಮದ ರವಿ ಡಿ ಆರ್ ಮತ್ತು ಜ್ಯೋತಿ ಎನ್ ಆರ್ ದಂಪತಿಯರ ಪುತ್ರ ಜ್ಞಾನೇಶ್ ಡಿ ಆರ್ ಆಯ್ಕೆಯಾಗಿರುತ್ತಾರೆ ಎಂದು ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಕಪಿಲ್ ಕುಮಾರ್ ಬಿ. ಡಿ. ತಿಳಿಸಿರುತ್ತಾರೆ. ಕೊಡಗು ನ್ಯೂಸ್
ದಿಯಾ ಭೀಮಯ್ಯಗೆ ರಾಷ್ಟ್ರೀಯ ಮಟ್ಟದ ಜೂನಿಯರ್ ಬ್ಯಾಡ್ಮಿಂಟನ್ ಎರಡು ಚಿನ್ನದ ಪ್ರಶಸ್ತಿ ಮತ್ತು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಹೈದರಾಬಾದಿನ ಹಾರ್ಟ್ ಫುಲ್ನೆಸ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಜನವರಿ ತಿಂಗಳು 3 ರಿಂದ 10ನೇ ತಾರೀಖಿನವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಆಲ್ ಇಂಡಿಯ ಜೂನಿಯರ್ (19 ವರ್ಷದೊಳಗಿನ)ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ರಲ್ಲಿ ಕೊಡಗಿನ ದಿಯಾ ಭೀಮಯ್ಯ ಮಿಶ್ರ ಡಬಲ್ಸ್ ನಲ್ಲಿ ಕೇರಳದ ಜೊರ್ನ್ ಜೇಸನ್ ಜೊತೆಯಾಟದಲ್ಲಿ ಪ್ರಥಮ ಹಾಗು ಬಾಲಕಿಯರ ಡಬಲ್ಸ್ ನಲ್ಲಿ ಹರಿಯಾಣದ ಬಾರುನಿ ಪರುಸ್ವಾಲ್ ಜೊತೆಗೂಡಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಈ ವಿಜಯ ಅವರಿಗೆ ಯೋನೆಕ್ಸ್ ಡಚ್ ಜೂನಿಯರ್ ಇಂಟರ್ ನ್ಯಾಷನಲ್ 2026 25ನೇ ಫೆಬ್ರುವರಿಯಿಂದ 1ನೇ ಮಾರ್ಚ್ ವರೆಗೆ ಮತ್ತು ಯೋನೆಕ್ಸ್ ಜರ್ಮನ್ ಜೂನಿಯರ್ 2026 4ನೇ ಮಾರ್ಚ್ ರಿಂದ 8ನೇ ಮಾರ್ಚ್ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಒದಗಿಸಿದೆ.
ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ? ಕೊಡಗು, ಜನವರಿ 10: ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿ ವಿಷಯವಾಗಿ ಹೊರಹೊಮ್ಮಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ತೀರ್ಮಾನದ ಹೆಸರಿನಲ್ಲಿ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾವು-ಸಮಾರಂಭಕ್ಕೂ ಬಾರದಂತೆ ಆದೇಶ ಗ್ರಾಮದ ಅಜಂತ ಮತ್ತು ನವೀನ್ ಎಂಬುವವರ ಎರಡು ಕುಟುಂಬಗಳನ್ನು ಸಮಿತಿಯ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಹಿಷ್ಕಾರದ ಪರಿಣಾಮವಾಗಿ ಗ್ರಾಮಸ್ಥರು ಆ ಕುಟುಂಬಗಳೊಂದಿಗೆ ಮಾತನಾಡುವಂತಿಲ್ಲ, ಸಾವು–ಸಮಾರಂಭ, ಸಭೆ, ಮದುವೆ ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಅಲ್ಲದೆ, ಈ ಕುಟುಂಬಗಳ ತೋಟದ ಕೆಲಸಗಳಿಗೆ ಕಾರ್ಮಿಕರು ತೆರಳದಂತೆ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪ ತಳ್ಳಿಹಾಕಿದ ಸಮಿತಿ ಬಹಿಷ್ಕಾರದ ವಿರುದ್ಧ ಜಿಲ್ಲಾಧಿಕಾರಿ…
ವೆನಿಜಾವೆಲಾದಲ್ಲಿ ನಡೆಯುತ್ತಿರುವ ಅಟ್ಟಹಾಸ ವನ್ನು ಖಂಡಿಸಿ ನೆಲ್ಲಿಹುದಿಕೇರಿ ಸಿಪಿಐ ಎಂ ಶಾಖಾ ವತಿಯಿಂದ ಪ್ರತಿಭಟನೆ ವೆನಿಜವೆಲಾ ಅಧ್ಯಕ್ಷರಾದ ವಡೂರ ಮತ್ತು ಅವರ ಪತ್ನಿಯನ್ನು ಕಿಡ್ನಾಪ್ ಮಾಡಿರುವ ಕ್ರಮವನ್ನು ವಿರೋಧಿಸಿ, ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಗ್ಗೊಲೆ ಮಾಡುತ್ತಿರುವ ಮತ್ತು ಡೊನಾಲ್ಡ್ ಟ್ರಂಪ್ ಅವರ ಗೂಂಡಾಗಿರಿಯನ್ನು ಖಂಡಿಸಿ, ಅಮೆರಿಕದ ಸಾಮ್ರಾಜ್ಯ ಶಾಹಿ ನೀತಿಯನ್ನು ವಿರೋಧಿಸಿ ನೆಲ್ಲಿಹುದಿಕೇರಿ ಸಿಪಿಐಎಂ ಶಾಖಾವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಸಿ ಪಿ ಐ (ಎಂ) ಕಾರ್ಯದರ್ಶಿಯಾದ ಎಚ್. ಬಿ .ರಮೇಶ್ ಭಾಗವಹಿಸಿದ್ದರು ಮತ್ತು ನೇಲ್ಲಿಹುದಿಕೇರಿ ಶಾಖಾ ಕಾರ್ಯದರ್ಶಿಯಾದ ಪಿಆರ್ ಭರತ್, ಹಾಗೂ ಟಿ .ಟಿ. ಉದಯಕುಮಾರ್, ಶೌಖತ್ ಅಲಿ, ಚಂದ್ರ ,ಯೂಸಫ್ ,ನಾರಾಯಣ ,ಶಂಸುದ್ದೀನ್, ಶಿವರಾಮ, ಎಂ.ಜಿ. ಜೋಸ್, ರವಿ,ಮತ್ತು ಪಕ್ಷದ ಕಾರ್ಯಕರ್ತರು ಹಿತೈಷಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊಡಗು ನ್ಯೂಸ್
ವಿಶೇಷ ಮಕ್ಕಳ ಪೊಲೀಸ್ ಘಟಕದ ಸಿಬ್ಬಂದಿಗಳಿಂದ ಕಾನೂನು ಅರಿವು ಮತ್ತು ಅಕ್ಕಪಡೆಯ ಬಗ್ಗೆ ಮಾಹಿತಿ ಶುಕ್ರವಾರ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಮತ್ತು ನಗರದ ಜೂನಿಯರ್ ಕಾಲೇಜ್ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮದ ಜೊತೆ ಅಕ್ಕ ಪಡೆಯ ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕೊಡಗು ನ್ಯೂಸ್
ಪೊನ್ನಂಪೇಟೆ ತಾಲೂಕಿನ ಜನರ ಸಮಸ್ಯೆ ಕೇಳುವವರಿಲ್ಲ ವರ್ಷ ಕಳೆದರೂ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಗಿಲ್ಲ ಕರುಡು ನಕ್ಷೆ ಭಾಗ್ಯ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡು ಎರಡು ವರ್ಷ ಕಳೆದರೂ ಕೂಡ, ಕರುಡು ನಕ್ಷೆ ಅನುಮೋದನೆ ಗೊಳ್ಳದೆ, ವಾಸ ವಾಣಿಜ್ಯ ಕೈಗಾರಿಕೆ ಹಾಗೂ ಹಸಿರು ನಿವೇಶನ ವಲಯ ವಿಂಗಡಿಸಿದ ಕರಡು ಪ್ರತಿ ಅನುಮೋದನೆಗೊಳ್ಳದರಿಂದ ಹಾಗೂ ಖಾಯಂ ಸಿಬ್ಬಂದಿಗಳ ಕೊರತೆಯಿಂದ ಯಾವುದೇ ಕಾರ್ಯಗಳು ಸುಗಮವಾಗಿ ನಡೆಯದೆ ಪೊನ್ನಂಪೇಟೆ ವ್ಯಾಪ್ತಿಯ ಜನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ತಾತ್ಕಾಲಿಕವಾಗಿ ವಿರಾಜಪೇಟೆ ಅಥವಾ ಕುಶಾಲನಗರದಿಂದ ವಾರಕ್ಕೆ ಮೂರು ದಿನವಾದರೂ ಇಲ್ಲಿಗೆ, ಅನುಭವಿ ಇಂಜಿನಿಯರ್ ಹಾಗೂ, ಎಫ್ ಡಿ ಸಿ, ಎಸ್‌ಡಿಸಿಗಳನ್ನು ನೇಮಿಸಿದರೆ ಸ್ವಲ್ಪ ಮಟ್ಟಿಗೆ ಪರಿಹಾರ ಕಾಣಬಹುದಾಗಿದೆ. ಇಡೀ ಪೊನ್ನಂಪೇಟೆ ಪ್ರದೇಶ ಮಾರ್ಕಿಂಗ್ ಕಾರ್ಯ ನಡೆದು ಕರಡು ಪ್ರತಿ ಅನುಮೋದನೆಗುಳ್ಳದರಿಂದ ಇ. ಸೊತ್ತು ಸರ್ವಾಜನಿಕರಿಗೆ ವಿತರಣೆ ಆಗುತ್ತಿಲ್ಲ. ಇ. ಸೊತ್ತು ಸಮರ್ಪಕವಾಗಿ ವಿತರಣೆಯಾಗದೆ ಸರ್ಕಾರದ ಬೊಕ್ಕಸಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಯಾಕೆ? ಎಂಬುದು ಅರ್ಥವಾಗದ ಕಗಂಟ್ಟು.…
ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ₹ 10.77 ಕೋಟಿಗೂ ಅಧಿಕ ಮಟ್ಟದ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದ ಮಾನ್ಯ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಕೈಗೊಂಡರು. ಮೊದಲಿಗೆ, ಮೈಸೂರು -ಗೋಣಿಕೊಪ್ಪ ಮುಖ್ಯರಸ್ತೆಯ, ಆಯ್ದ ಭಾಗಗಳಲ್ಲಿ ₹ 3.80 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ತಿತಿಮತಿ ಸೇತುವೆಯಿಂದ ದೇವರಪುರದವರೆಗಿನ ಈ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ತಿತಿಮತಿ ಪಟ್ಟಣ ವ್ಯಾಪ್ತಿಯಲ್ಲಿ ಮಾನ್ಯ ಶಾಸಕರು ನೆರವೇರಿಸಿ, ಈ ಕಾಮಗಾರಿ ಅತಿ ಶೀಘ್ರದಲ್ಲಿ ಗುಣಮಟ್ಟ ಕಾಯ್ದುಕೊಂಡು ಮುಗಿಸಬೇಕೆಂದು ಗುತ್ತಿಗೆದಾರರಿಗೆ ಹೇಳಿದರು. ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆ ಇದಾಗಿರುವುದರಿಂದ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ ಎಂದು ಮಾನ್ಯ ಶಾಸಕರು ಸೂಚನೆ ನೀಡಿದರು. ಬಳಿಕ, ಮೈಸೂರು-ಪೊನ್ನಂಪೇಟೆ…
ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ವಿವಿಧ ಕಾರ್ಮಿಕ ಕಾಯ್ದೆಗಳದಡಿಯಲ್ಲಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ಉದ್ಯೋಗದಾತರು ನೀಡಬೇಕು ಮತ್ತು ಮಹಿಳಾ ನೌಕರರು ಪಡೆಯಬೇಕು ಎಂದು ಮಡಿಕೇರಿ ವೃತ್ತ, ಮಡಿಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ. ಕಾರ್ಖಾನೆಗಳ ಕಾಯ್ದೆ 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961, ತೋಟ ಕಾರ್ಮಿಕರ ಕಾಯ್ದೆ 1951, ಬೀಡಿ ಮತ್ತು ಸಿಗಾರ ಕಾರ್ಮಿಕರ ಕಾಯ್ದೆ 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ಕಾರ್ಮಿಕರುಗಳಿಗೆ ಅವರ ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು…
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಹ್ವಾನ ಕೊಡಗು ಜಿಲ್ಲೆಯ 2026-27 ನೇ ಸಾಲಿಗೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಆಸಕ್ತಿಯುಳ್ಳ ಅನುಭವವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್.ಜಿ.ಓ) ಆಸಕ್ತ ಅಭಿವ್ಯಕ್ತಿ ಸ್ವ-ಇಚ್ಛೆ (ಎಕ್ಸ್‍ಪ್ರೆಸನ್ ಆಪ್ ಇಂಟ್ರೆಸ್ಟ್) ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ‘ಎಕ್ಸ್‍ಪ್ರೆಸನ್ ಆಪ್ ಇಂಟ್ರೆಸ್ಟ್’ ಅನ್ನು ಜನವರಿ, 30 ರವರೆಗೆ ಕರೆಯಲಾಗಿದ್ದು, ಹೆಚ್ಚಿನ ಮಾಹಿತಿಗೆ https://kppp.karnataka.gov.in/ ಅಲ್ಲಿ ನೋಡಬಹುದಾಗಿದೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಛೇರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಮಡಿಕೇರಿ , ಕೊಡಗು ಜಿಲ್ಲೆ ವಿಳಾಸ: dbcskodagu@gmail.com ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.
ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕರು ಮತ್ತು ತಾಲ್ಲೂಕು ಆದಿವಾಸಿ ಆರೋಗ್ಯ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ ಅರಣ್ಯಾಧಾರಿತ ಬುಡಕಟ್ಟು ಸಮುದಾಯದವರಿಗೆ ಆರೋಗ್ಯ ಸೇವೆಗಳನ್ನು ಪಡೆಯಲು ಇರುವ ನ್ಯೂನ್ಯತೆ/ ಅಡೆತಡೆಗಳನ್ನು ನಿವಾರಿಸಿ ಹಾಗೂ ಉತ್ತಮ ಸೇವೆಯನ್ನು ದೊರೆಯುವಂತೆ ಮಾಡಲು ಟ್ರೈಬಲ್ ಹೆಲ್ತ್ ನ್ಯಾವಿಗೇಟರ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಂಬಂಧ ಅರಣ್ಯಾಧಾರಿತ ಬುಡಕಟ್ಟು ಸಮುದಾಯದವರಿಂದ ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕರು (1 ಹುದ್ದೆ) ಹಾಗೂ ತಾಲ್ಲೂಕು ಆದಿವಾಸಿ ಆರೋಗ್ಯ ಕಾರ್ಯಕರ್ತೆಯರ(03 ಹುದ್ದೆ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕವು ತಾತ್ಕಾಲಿಕವಾಗಿದೆ. ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕರ ಹುದ್ದೆಗೆ ಮಾಸಿಕ ವೇತನ ರೂ.25 ಸಾವಿರ ಮತ್ತು ತಾಲ್ಲೂಕು ಆದಿವಾಸಿ ಆರೋಗ್ಯ ಕಾರ್ಯಕರ್ತೆಯರ ಹುದ್ದೆಗೆ ಮಾಸಿಕ ವೇತನ ರೂ.20 ಸಾವಿರ ಆಗಿರುತ್ತದೆ. ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಆರೋಗ್ಯ/ ಸಮಾಜ ಸೇವೆ ವಿಷಯದಲ್ಲಿ ಪದವಿ ಪಡೆದವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಆರೋಗ್ಯ ವಿಷಯದಲ್ಲಿ ಯಾವುದೇ ಸಂಘ ಸಂಸ್ಥೆಗಳಲ್ಲಿ ಅಥವಾ ಸರ್ಕಾರದ…
