Author: Kodagu-admin

ತೊರೆನೂರು ಶ್ರೀ ಶನೇಶ್ವರ ದೇವಾಲಯ ಸಮಿತಿ ವತಿಯಿಂದ ಆಯೋಜಿಸಲಾದ ನಾಟಕ ಪ್ರದರ್ಶನಕ್ಕೆ ಶಾಸಕ ಮಂತರ್ ಗೌಡರಿಂದ ಉದ್ಘಾಟನೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಅಳುವಾರ (ಭೈರಪ್ಪನಗುಡಿ) ಗ್ರಾಮದ ಶ್ರೀ ಶನೇಶ್ವರ ದೇವಾಲಯ ಸಮಿತಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ “ಶ್ರೀ ಶನಿಪ್ರಭಾವ ಅಥವಾ ರಾಜವಿಕ್ರಮ” ಎಂಬ ಪೌರಾಣಿಕ ನಾಟಕ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಮಂತರ್ ಗೌಡ ರವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ಪಿ ಶಶಿಧರ್, ಶ್ರೀ ಶನೇಶ್ವರ ದೇವಾಲಯ ಸಮಿತಿಯ ಅರ್ಚಕರಾದ ಶ್ರೀ ಅಣ್ಣಯ್ಯ, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಟಿ ಬಿ, ನಿರ್ದೇಶಕರಾದ ಶ್ರೀಮತಿ ಹೇಮಾ ಮಹಾದೇವ್,ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶ್ರೀ ಸಂಜೀವಯ್ಯ, ಶ್ರೀ ಅಳುವಾರದಮ್ಮ ದೇವಾಲಯ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ್, ಕಾಂಗ್ರೆಸ್ ಮುಖಂಡರಾದ ರಾಮೇಗೌಡ , ಮೂರ್ತಿ ಏ.ಎಲ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Read More

ವಿಶೇಷಚೇತನರಿಗೆ ಕ್ರೀಡಾಕೂಟ ಕ್ರೀಡಾಕೂಟದಲ್ಲಿ 8 ವಸತಿ ಶಾಲೆಯ 150 ಕ್ಕೂ ಹೆಚ್ಚು ವಿಶೇಷಚೇತನರು ಭಾಗಿ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಚೇತನರಿಗೆ ರಾಜ್ಯಮಟ್ಟದ ಕ್ರೀಡಾಕೂಟವು ಸೋಮವಾರ ನಡೆಯಿತು. ಪಾಲಿಬೆಟ್ಟ, ಮಂಗಳೂರು, ಮಡಿಕೇರಿ, ಮಂಡ್ಯ, ಮೈಸೂರು, ಕೊಡಗು ಮತ್ತು ಬೈಲುಕುಪ್ಪೆಯ ಟಿಬೇಟಿಯನ್ ವಸತಿ ಶಾಲೆ ಸೇರಿದಂತೆ ಸುಮಾರು 8 ಶಾಲೆಯ 150 ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. 8 ರಿಂದ 11 ವರ್ಷ, 12 ರಿಂದ 15 ವರ್ಷ, 16 ರಿಂದ 21 ವರ್ಷ, 22 ರಿಂದ 29 ವರ್ಷ ಹಾಗೂ 30 ವರ್ಷದಿಂದ ಮೇಲ್ಪಟ್ಟ ವಿಶೇಷಚೇತನರು 100 ಮೀಟರ್ ಓಟ, 200 ಮೀಟರ್ ಓಟ, ಶಾಟ್‍ಫೂಟ್, ಲಾಂಗ್ ಜಂಪ್, ರಿಲೇ ಮತ್ತಿತರ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದು, ಎದ್ದು ಕಂಡಿತು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ವಿಶೇಷಚೇತನರು…

Read More

ನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ- ಕಳೆದ ಸಾಲಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮನ್ಸೂರ್ ಗೆ ಸನ್ಮಾನ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಎಂ. ಎಸ್. ಶಿವಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಂಡು ಹಿರಿಯರಿಗೆ, ಶಿಕ್ಷಕರಿಗೆ ಗೌರವವನ್ನು ಕೊಟ್ಟು ಉತ್ತಮ ಅಂಕ ಪಡೆಯುವ ನಿಟ್ಟಿನಲ್ಲಿ ನಿರಂತರ ಶ್ರಮ ಪಡಬೇಕು.ಶಿಕ್ಷಕರು ಕೂಡ ನಿರಂತರ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸವನ್ನು ಮಾಡುತ್ತೇವೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಸಹಕಾರ ಕೊಟ್ಟು ಉತ್ತಮ ಅಂಕದೊಂದಿಗೆ ತೇರ್ಗಡೆಯಾದರೆ ಮಾತ್ರ ಶಿಕ್ಷಕರ ಪ್ರಯತ್ನಕ್ಕೆ ಫಲ ಸಿಗಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಸಿವಿಲ್ ಕಾಮಗಾರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ…

Read More

ಇಂದಿನಿಂದ ಕೊಳಕೇರಿ ಬೊಮ್ಮಂಜಿಕೇರಿ ಭದ್ರಕಾಳಿ ದೇವರ ಉತ್ಸವ ಆರಂಭ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿ ಕೇರಿಯಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಶ್ರೀ ಭದ್ರಕಾಳಿ ದೇವರ ಉತ್ಸವವು ಮಾ. 16ಮತ್ತು17ರಂದು ವಿವಿಧ ದೈವ ಕೋಲಗಳೊಂದಿಗೆ ನಡೆಯಲಿದೆ. ಉತ್ಸವದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೊರಿದ್ದಾರೆ.

Read More

ಮಡಿಕೇರಿ: ಕ್ರಿಸ್ತ ಪೂರ್ವದ ಕೊನೆಯ ಶತಮಾನ ಹಾಗೂ ಕ್ರಿಸ್ತ ಶಕದ ಮೊದಲನೇ ಶತಮಾನದಲ್ಲಿ ಕೊಡಗು, ಕರಾವಳಿ, ಕೇರಳ ಹಾಗೂ ತಮಿಳು ನಾಡಿನ ಧರ್ಮಪುರಿವರೆಗೂ ತನ್ನ ಸಾಮೃಜ್ಯವನ್ನು ಸ್ಥಾಪಿಸಿ ಪ್ರಾಚೀನ ತಮಿಳಗಂ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೊಡಗಿನ ವೀರ ನಣ್ಣನ್ ನ ಕಥೆಗಳ “ಬೆಟ್ಟಗಳ ಒಡೆಯ ನಣ್ಣನ್” ಎಂಬ ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಕೊಡಗಿನ ಉದ್ಯಮಿ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಬರೆದಿರುವ 210 ಪುಟಗಳ “ಬೆಟ್ಟಗಳ ಒಡೆಯ ನಣ್ಣನ್” ಪುಸ್ತಕ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಾಹಿತಿ ನಾಪಂಡ ಮುದ್ದಪ್ಪ “ಕೊಡಗು ನ್ಯೂಸ್”ಗೆ ಮಾಹಿತಿ ನೀಡಿದ್ದಾರೆ. ನಾಪಂಡ ಮುದ್ದಪ್ಪ ಅವರ ಐದನೇ ಕೃತಿ ಇದಾಗಿದ್ದು ಈ ಕೃತಿಯೂ ಕೊಡಗಿನ ವೀರನ ರೋಚಕ ಸತ್ಯ ಕಥೆಯನ್ನು ಹೇಳಲಿದೆ. ಕೊಡಗಿನ ಪ್ರಾಚೀನ ವೀರ ನಣ್ಣನ್ ಕುರಿತು ತಮಿಳುನಾಡಿನ 25ಕ್ಕೂ ಹೆಚ್ಚು ಶಂಗಂ ಕವಿಗಳು ತಾವು ರಚಿಸಿರುವ ಕಾವ್ಯಗಳಲ್ಲಿ ನಣ್ಣನ್ ಬಗ್ಗೆ ಉಲ್ಲೇಕ ಮಾಡಿದ್ದಾರೆ. ಕೊಡಗಿನ ವೀರನ ರೋಚಕ ಕಥೆಯಾದಾರಿತ ಕಾದಂಬರಿ ಏಪ್ರಿಲ್ ತಿಂಗಳಿನಲ್ಲಿ…

Read More

ಮಂಗಳೂರಿನಲ್ಲಿ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ 2025ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶನಿವಾರ ನಡೆಯಿತು. ‌ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಡಾ.ಯು.ಟಿ.ಖಾದರ್ ಫರೀದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸುಳ್ಯ ಲಯನ್ಸ್ ಮಾಜಿ ರಾಜ್ಯಪಾಲರಾದ ಎಂ.ಬಿ.ಸದಾಶಿವ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ.ಶಾಹೀದ್ ತೆಕ್ಕಿಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ…

Read More

ಪೊನ್ನಂಪೇಟೆ ಮೂಲದ ಯುವತಿಯನ್ನು ಬೆಂಗಳೂರಿನಲ್ಲಿ ಕೇಬಲ್ ವೈಯರ್ ನಿಂದ ಕುತ್ತಿಗೆ ಬಿಗಿದು ಕೊಲೆಗೈದ ಪ್ರಿಯಕರ….!!!! ಬೆಂಗಳೂರು ರಾಜಧಾನಿಯ ವರ್ತೂರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದೆ. ಲಿವಿಂಗ್ ಟು ಗೆದರ್ ಸಂಬಂಧದಲ್ಲಿ ಯುವತಿಯನ್ನು ಆಕೆಯ ಪ್ರಿಯಕರನೆ ಕೇಬಲ್ ವೈಯರ್ ನಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಎರಡು ದಿನಗಳ ಹಿಂದೆಯೇ ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಕೊಡಗು ಮೂಲದ ರಂಜಿತ (23) ಕೊಲೆಯಾದ ದುರ್ದೈವಿ ಅದೇ ಊರಿನ ಅಯ್ಯಪ್ಪ ಎಂಬಾತನೇ ಈ ಕೊಲೆ ಮಾಡಿದ ಆರೋಪಿ ಕೊಡಗಿನ ಪೊನ್ನಂಪೇಟೆ ಮೂಲದ ಇವರಿಬ್ಬರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ವರ್ತೂರ್ ವ್ಯಾಪ್ತಿಯಲ್ಲಿ ಒಟ್ಟಿಗೆ ವಾಸವಿದ್ದರು. ಆರೋಪಿ ಅಯ್ಯಪ್ಪ ನಗರದ ಡ್ರೈಫ್ರೂಟ್ಸ್ ಅಂಗಡಿ ಒಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು ಪತ್ನಿಯ ಜೊತೆಗೆ ಜಗಳದಿಂದಾಗಿ ಕೆಲವು ವರ್ಷಗಳ ಹಿಂದೆ ಆಕೆಯಿಂದ ದೂರವಾಗಿದ್ದನು ನಂತರ ತನ್ನದೇ ಊರಿನ ರಂಜಿತಾಳನ್ನು…

Read More

ಇಸ್ರೋ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC) ಅಹಮದಾಬಾದ್‌ಗೆ ಆಯ್ಕೆ ಗೋಣಿಕೊಪ್ಪದ ಕಾವೇರಿ ಹಿಲ್ಸ್ ಬಡಾವಣೆಯ ನಿವಾಸಿ ಮಾಜಿ ಸೈನಿಕರಾದ ಪಿ.ಎಂ. ಇಬ್ರಾಹಿಂ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಪುರದ ಶಿಕ್ಷಕಿಯಾಗಿರುವ ಶ್ರೀಮತಿ ಕೆ.ಇ. ಸಪೂರ ಅವರ ಪುತ್ರ ಪಿ.ಇ. ಮನ್ಸೂರ್ ಅವರು ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC), ಅಹಮದಾಬಾದ್‌ಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಆಯ್ಕೆಯಾಗಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಲಯನ್ಸ್ ಶಿಕ್ಷಣ ಸಂಸ್ಥೆ ಗೋಣಿಕೊಪ್ಪಳಿಯಲ್ಲಿ ಶಿಕ್ಷಣ ಪಡೆದಿದ್ದು, ನಂತರ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮೂಡಬಿದ್ರೆಯಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ 2025ರಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಫರ್ನ್ಸ್ (Foundation for Education and Research in Nature Science and Sustainability) ಎಂಬ ನಾನ್ ಗವರ್ನ್ಮೆಂಟಲ್ ಆರ್ಗನೈಸೇಶನ್ (NGO) ಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ವಿಷಯದಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ. ಇವರು ಎಸ್.ಎಸ್.ಎಲ್.ಸಿ.ಯಲ್ಲಿ 90.08% ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದು, ಪಿಯುಸಿಯಲ್ಲಿ 85.6% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇಂಜಿನಿಯರಿಂಗ್‌ನಲ್ಲಿ 8.9 ಸಿಜಿಪಿಎ…

Read More

ಕೊಡಗು ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಮಡಿಕೇರಿ ನಗರ ಮಹಿಳಾ ಮೋರ್ಚಾ ಸಹಯೋಗದಲ್ಲಿ ಇಂದು ಬಾಲಭವನದಲ್ಲಿ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗಯ್ದ ಸಾಧಕಿಯರನ್ನು ಮಂಡಲವಾರು ಆಯ್ಕೆ ಮಾಡಿ ಅವರನ್ನು ಸನ್ಮಾನ ಮಾಡಲಾಯಿತು ಮಡಿಕೇರಿ ನಗರ ಮಂಡಲದಿಂದ ಕೊಡಗು ವಿದ್ಯಾಲಯದ ಹಾಕಿ ತರಭೇತುದಾರರದ ಕು. ಪಾರ್ವತಿ ಕೆ ಎ ಹಾಗೂ ಮಡಿಕೇರಿ ಗ್ರಾಮಾಂತರ ಮಂಡಲದಿಂದ ಶ್ರೀಮತಿ. ಮಲ್ಲಮಾಡ(ಕಂಬಿರಂಡ ) ಪೊನ್ನಮ್ಮ ಹಾಗೂ ಸೋಮವಾರಪೇಟೆ ಮಂಡಲದಿಂದ ಶ್ರೀಮತಿ ಇವರನ್ನು ಸನ್ಮಾನಿಸಲಾಯಿತು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಅನಿತಾ ಪೂವಯ್ಯ, ಪ್ರಧನ ಕಾರ್ಯದರ್ಶಿಗಳಾದ ಶಿಲ್ಪಾ ಅಪ್ಪಣ್ಣ, ಪುಷ್ಪ ನಾಗೇಶ್ ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸೌಮ್ಯಸುನಿಲ್ ಪ್ರಧಾನ ಕಾರ್ಯದರ್ಶಿಗಳಾದ ನವ್ಯಾ, ಸಂಗೀತ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ವಿನಿರಾಯ್, ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Read More

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಿ.ಸಿ ದಿನೇಶ್ ಅವಿರೋಧ ಆಯ್ಕೆ. ಮಡಿಕೇರಿ.ಮಾ.14-ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಿ.ಸಿ .ದಿನೇಶ್ ಅವರು ಆಯ್ಕೆಯಾಗಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್. ಟಿ .ಅನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕುಶಾಲನಗರ ತಾಲೂಕು ಸಂಘದ ಉಪಾಧ್ಯಕ್ಷರಾದ ಬಿ ಸಿ ದಿನೇಶ್ ಅವರನ್ನು ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಡಿಕೇರಿಯ ಖಾಸಗಿ ಹೋಟೆಲ್ ಸಭಾನಗಮದಲ್ಲಿ ನಡೆದ ಸಭೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕೊಡಗು ಪತ್ರಿಕಾ ಭವನದ ಸ್ಥಾಪಕ ಅಧ್ಯಕ್ಷರ ಹಾಗೂ ಕೊಡಗು ಪತ್ರಕರ್ತರ ಸಂಘದ ಹಿರಿಯ ಸಲಹೆಗಾರ ಟಿ.ಪಿ. ರಮೇಶ್, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಿ.ವಿ. ರವಿ ಕುಮಾರ್, ಖಜಾಂಚಿ ಟಿ ಕೆ ಸಂತೋಷ್ ಹಾಗೂ ಸಂಘದ ಪದಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Read More