Author: Kodagu-admin

ಮಡಿಕೇರಿ: ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನಲೆ ಕ್ಷುಲ್ಲಕ ಕಾರಣಕ್ಕೆ ಗೌತಮ್ ಎಂಬಾತನ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಸುಹೈಲ್ ಎಂಬಾತ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದ ಬಳಿಕ ಪ್ರಚೋದನೆ ಮತ್ತು ಬೆದರಿಕೆ ಒಡ್ಡುವ ರೀತಿಯಲ್ಲಿ ಇನ್ಸ್ಟಾ ದಲ್ಲಿ ರೀಲ್ಸ್ ಮಾಡಿ ಬಿಟ್ಟಿದ್ದ. ರೀಲ್ಸ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಆತನ ಮೇಲೆ ಕ್ರಮ ಜರುಗಿಸಿ ನ್ಯಾಯಾಲಯ ನೀಡಿರುವ  ಜಾಮೀನು ರದ್ದುಪಡಿಸುವಂತೆ ಮನವಿ ಮಾಡಿದೆ. ಸಾಮಾಜಿಕ ಜಾಲತಾಣ ಪರಿಶೀಲನೆ ವೇಳೆಯಲ್ಲಿ ನಾಪೋಕ್ಲು ವ್ಯಾಪ್ತಿಯ ಯುವಕನೊಬ್ಬ ರೀಲ್ಸ್, ವೀಡಿಯೋ ಮತ್ತು ಆಡಿಯೋಗಳನ್ನು ಪ್ರಸಾರ ಮಾಡಿ ಪ್ರಚೋಧನಕಾರಿ ಹೇಳಿಕೆ ನೀಡಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆತ ತನ್ನ ಸಾಮಾಜಿಕ ಜಾಲತಾಣ Instagram ಖಾತೆಯ ಮೂಲಕ ಪ್ರಚೋಧನಕಾರಿ ಬರಹ ಮತ್ತು ವೀಡಿಯೋ ಹಂಚಿಕೊಂಡಿದ್ದು, ಇದನ್ನು ಪರಿಶೀಲಿಸಲಾಗಿ ಇದು ಸಮಾಜದಲ್ಲಿ ಅಶಾಂತಿ, ಸಾರ್ವಜನಿಕ ಸೌಹಾರ್ಧತೆಗೆ ಧಕ್ಕೆಯಾಗುವ ರೀತಿಯ ನಡೆ ಎಂದು ಪರಿಗಣಿಸಿದ್ದು, ಈತನ ಹಿನ್ನೆಲೆಯನ್ನು ಪರಿಶೀಲಿಸಲಾಗಿ…

Read More

ಮಡಿಕೇರಿ ನಗರ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಅವಿರೋಧ ಆಯ್ಕೆಯಾಗಿದ್ದಾರೆ. ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಅವರು ಕೋಚನ ಚೇತನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಿ ಆದೇಶ ಮಾಡಿದ್ದು ಚೇತನ್ ನಗರದ ದೇಚೂರು ನಿವಾಸಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

Read More

ಅಡುಗೆ ಅನಿಲ ಬೆಲೆ ಏರಿಕೆ ಮಡಿಕೇರಿ ನಗರ ಕಾಂಗ್ರೆಸ್ ಪ್ರತಿಭಟನೆ ಕೇಂದ್ರ ಸರ್ಕಾರ ಏಕಾಏಕಿ ಗೃಹಬಳಕೆ ಮತ್ತು ವಾಣಿಜ್ಯ ಅಡುಗೆ ಅನಿಲ ಬೆಲೆ ಏರಿಕೆ ಮಾಡಿದನ್ನು ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನಗರದ ಇಂದಿರಾ ಗಾಂಧಿ ( ಚೌಕಿ) ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ನೂರಾರು ಕಾರ್ಯಕರ್ತರು ಗ್ಯಾಸ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ,ಬಿಜೆಪಿ ಆಡಳಿತ,ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ವಿರುದ್ದ ಧಿಕ್ಕಾರ ಕೂಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು. ನಗರ ಕಾಂಗ್ರೆಸ್ ಪ್ರಕಾಶ್ ಆಚಾರ್ಯ ಮಾತನಾಡಿ ಗ್ಯಾಸ್ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು. ಗ್ಯಾಸ್ ಬೆಲೆ ಇಳಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 430 ಇದ್ದ…

Read More

ಗೌಡ ಹಿತರಕ್ಷಣಾ ಸಮಿತಿಯಿಂದ ಸಾಧಕರಿಗೆ ಸನ್ಮಾನ ಕೊಡಗಿನ ಎಲ್ಲ ಪಂಗಡಗಳ 110 ಐನ್ ಮನೆಗಳ ಅಭಿವೃದ್ಧಿಗಾಗಿ 4.50 ಕೋಟಿ ರು. ಮೀಸಲಿರಿಸಲಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಇಲ್ಲಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಮತ್ತು ಸಮಾರಂಭ ಉದ್ಘಾಟಿಸಿ ಅಭಿನಂದನಾ ಮಾತನಾಡಿದರು. ಕೊಡಗಿನಲ್ಲಿ ಕೊಡವರು, ಕೊಡವ ಭಾಷಿಕ ಮೂಲ ನಿವಾಸಿಗಳು, ಅರೆಭಾಷಿಕ ಗೌಡ ಜನಾಂಗ ಸೇರಿದಂತೆ ಹಲವು ಸಮುದಾಯದವರು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನೂ ಉಳಿಸಿಕೊಳ್ಳಬೇಕು. ಹಿನ್ನೆಲೆಯಲ್ಲಿ ಕೊಡಗಿನ ಎಲ್ಲ ಪಂಗಡಗಳ 110 ಐನ್ ಮನೆಗಳ ಅಭಿವೃದ್ಧಿಗಾಗಿ 4.50 ಕೋಟಿ ರೂ. ಈ ಮೀಸಲಿರಿಸಲಾಗಿದೆ. ಅರೆಭಾಷಿಕ ಗೌಡ ಸಮಾಜದ ಸುಮಾರು 30 ಐನ್ ಮನೆಗಳೂ ಇದರಲ್ಲಿ ಸೇರಿವೆ. ಕೊಡಗು ಗೌಡ ಸಮಾಜಕ್ಕೆ ಮಡಿಕೇರಿ ಸಮೀಪದಲ್ಲಿ 6 ಎಕರೆ ಜಾಗ ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಇನ್ನೂ ಹೆಚ್ಚಿನ ಜಾಗ ಕೊಡಿಸಲು ಪ್ರಯತ್ನ ನಡೆಸಲಾಗುವುದು. ಭಾಗಮಂಡಲ ಗೌಡ ಸಮಾಜ…

Read More

ನಾಪೋಕ್ಲು ಚೆರಿಯಪರಂಬುವಿನಲ್ಲಿ ಮುಸಲ್ಮಾನ ಬಾಂಧವರಿಂದ ಸಂಭ್ರಮದ ಈದುಲ್ ಫಿತರ್ ರಂಝಾನ್ ಹಬ್ಬಾಚರಣೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಬಳಿಯ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಸಲ್ಮಾನ ಭಾಂದವರು ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಆಚರಿಸಲ್ಪಡುವ ಪವಿತ್ರ ಈದುಲ್ ಫಿತರ್ ರಂಝಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಸೀದಿಯ ಖತೀಬರಾದ ಮೊಹಮ್ಮದ್ ಶಫೀಕ್ ಅಲಿ ಸಿರಾಜಿ ಅವರು ಈದ್ ನಮಾಜಿಗೆ ನೇತೃತ್ವ ವಹಿಸಿ ಮಾತನಾಡಿ ಇಸ್ಲಾಂ ಧರ್ಮವು ಸಮಾಜದಲ್ಲಿ ಜಾತಿ,ಮತ ಭೇದವಿಲ್ಲದೆ ಎಲ್ಲರೂ ಪರಸ್ಪರ ಅನ್ಯೂನತೆ,ಶಾಂತಿ ಸಹಬಾಳ್ವೆಗೆ ಪ್ರಾಮುಖ್ಯತೆಯನ್ನು ನೀಡಿದೆ. ಅದೇ ರೀತಿ ಪ್ರಪಂಚದಲ್ಲಿರುವ ಎಲ್ಲಾ ಧರ್ಮವು ಅದನ್ನೇ ಪ್ರತಿಪಾದಿಸುತ್ತದೆ. ನಮ್ಮ ಪೂರ್ವಜರು ನೀಡಿದ ಸಂದೇಶದಂತೆ ಸಮಾಜದಲ್ಲಿ ಎಲ್ಲರೂ ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಈದ್ ಸಂದೇಶ ಸಾರಿದರು. ಮಸೀದಿಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್ ಮಾತನಾಡಿ ಪರಸ್ಪರ ಸೌಹಾರ್ದತೆ ಸಹಬಾಳ್ವೆಗೆ ಪ್ರಾಮುಖ್ಯತೆ ನೀಡುವ ಹಬ್ಬವು ನಾಡಿನಲ್ಲಿ ಶಾಂತಿಯನ್ನು ಕರುಣಿಸಲಿ ಎಂದು ಶುಭ ಕೋರಿದರು. ಬಳಿಕ ಚೆರಿಯಪರಂಬು…

Read More

ಭಾಗಮಂಡಲ; ಜನಸ್ಪಂದನದಲ್ಲಿ ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ ಮಡಿಕೇರಿ ಮಾ.21(ಕ.ವಾ):- ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಭಾಗಮಂಡಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರಿಂದ 85 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 15, ಗ್ರಾಮೀಣಾಭಿವೃದ್ಧಿ 7, ಪಂಚಾಯತ್ ರಾಜ್ ಸಂಬಂಧಿಸಿದಂತೆ 10, ಸೆಸ್ಕ್‌ 3, ಆಹಾರ 3, ರಸ್ತೆ ಸೇರಿದಂತೆ ವಿವಿಧ ಇಲಾಖೆಗಳ‌ 46 ಒಟ್ಟು 85 ಅರ್ಜಿಗಳು ಸಲ್ಲಿಕೆಯಾದವು. ಪ್ರತಿಯೊಬ್ಬ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕರು, ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅರ್ಜಿ ಪರಿಶೀಲಿಸಿ ಒಂದು ವಾರದಲ್ಲಿ ಬಗೆಹರಿಸಬೇಕು ಎಂದು ಸೂಚಿಸಿದರು. ಸಾರ್ವಜನಿಕರ ಅಹವಾಲುಗಳಿಗೆ ಕೂಡಲೇ ಸ್ಪಂದಿಸಬೇಕು, ವಿಳಂಭ ಮಾಡಬಾರದು ಎಂದು ಎ.ಎಸ್.ಪೊನ್ನಣ್ಣ ಅವರು ತಾಕೀತು ಮಾಡಿದರು. ಸಭೆ ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು‌ ಸಾರ್ವಜನಿಕರ ಸಮಸ್ಯೆಯನ್ನು ಕಚೇರಿ ಹಂತದಲ್ಲಿಯೇ ಪರಿಹರಿಸುವಂತಾಗಬೇಕು…

Read More

ಕುಟ್ಟದಲ್ಲಿ ಮಚ್ಚಮಾಡ ಕುಟ್ಟಪ್ಪ ಆತ್ಮಹತ್ಯೆ ಪ್ರಕರಣ ಸಹೋದರಿ ಪುತ್ರ ಕೀಕಣಮಾಡ ಉದಯನಿಂದ ಕಿರುಕುಳ ಆರೋಪದ ಪತ್ರ ಬರೆದಿಟ್ಟು ಆತ್ಮಹತ್ಯೆ ಕುಟ್ಟದಲ್ಲಿ ಮಚ್ಚಮಾಡ ಕುಟ್ಟಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣ. ಮಾರ್ಚ್‌ 17 ರಂದು ತಾವು ಇದ್ದ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕುಟ್ಟಪ್ಪ. ಕುಟ್ಟ ಪೊಲೀಸರಿಗೆ ಪುತ್ರ ಹರ್ಷನಿಂದ ಮಾಹಿತಿ. ಬಳಿಕ ಪರಿಶೀಲನೆ ವೇಳೆ ಕುಟ್ಟಪ್ಪ ಅವರ ಜೇಬಿನಲ್ಲಿದ್ದ ಪತ್ರದಲ್ಲಿ ತನ್ನ ಸಹೋದರಿ ಪುತ್ರ ಕೀಕಣಮಾಡ ಉದಯ ಅವರಿಂದ ಕಿರುಕುಳ ಮತ್ತು ಕೊಲೆ ಬೆದರಿಕೆ, ಮತ್ತು ಉದಯ ಅವರ ಮೊಬೈಲ್ ನಂಬರ್ ದಾಖಲಿಸಿ ಈ ನಂಬರ್ ನಿಂದ ಮೆಸೇಜ್ ಪರಿಶೀಲಿಸಲು ಪತ್ರ ಬರೆದಿಟ್ಟು ಆತ್ಮಹತ್ಯೆ.ಪುತ್ರ, ಪುತ್ರನ ಪತ್ನಿ ಯಿಂದ ಯಾವುದೇ ಸಮಸ್ಯೆ ಇಲ್ಲ, ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರದಲ್ಲಿ ವಿನಂತಿ ಮಾಡಿದ ಕುಟ್ಟಪ್ಪ ಈ ಹಿನ್ನಲೆಯಲ್ಲಿ ಕುಟ್ಟಪ್ಪ ಅವರ ಪುತ್ರ ಹರ್ಷ ಮಾ. 19 ರಂದು ನೀಡಿದ ದೂರಿನ ಮೇಲೆ ಕೀಕಣಮಾಡ ಉದಯ ಅವರ ಮೇಲೆ ಪ್ರಕರಣ ದಾಖಲು ಪೊಲೀಸರಿಂದ…

Read More

ಮಡಿಕೇರಿ: ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚಟ್ಟಿ ಬಳಿ ಸುಂಟಿಕೊಪ್ಪದಿಂದ ಮಾದಾಪುರಕ್ಕೆ ಬೈಕ್ತೆ ನಲ್ಲಿ ತೇರಳುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಾದಾಪುರ ಜಂಬೂರು ಬಾಣೆ ನಿವಾಸಿ 36 ವರ್ಷದ ಅನಿಲ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.    ಸುಂಟಿಕೊಪ್ಪದಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು ಹಿಂಬದಿಯಲ್ಲಿ ಕುಳಿತಿದ್ದ ಹರೀಶ್ ಎಂಬಾತನಿಗೂ ಗಂಬೀರ ಗಾಯವಾಗಿದ್ದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಈಶ್ವರ ಖಂಡ್ರೆ ಸೂಚನೆ ಕೊಡಗು ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಕೊಡಗಿನ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ ಗೌಡ ಮತ್ತು ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಕೊಡಗಿನಲ್ಲಿ ವನ್ಯಜೀವಿಗಳಿಂದ ಅಮೂಲ್ಯ ಜೀವ ಹಾನಿ ಆಗುತ್ತಿರುವುದು ಆತಂಕದ ವಿಷಯವಾಗಿದ್ದು, ಹಾಲಿ ಇರುವ 422 ಕಿ.ಮೀ ಆನೆ ಕಂದಕ ಮತ್ತು 544 ಕಿ.ಮೀ. ತೂಗು ಸೌರಬೇಲಿಯ ಸಮರ್ಪಕ ದುರಸ್ತಿ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಸಂಭವಿಸುವ ಸಾವುಗಳ ಪೈಕಿ ಶೇ.38ರಷ್ಟು ಕೊಡಗು ಜಿಲ್ಲೆಯಲ್ಲಿ ಆಗುತ್ತಿದ್ದು, ಇದನ್ನು ನಿಯಂತ್ರಿಸಲು ಗಸ್ತು ಹೆಚ್ಚಳ ಮಾಡಬೇಕು. ಆನೆ ಕಾರ್ಯಪಡೆ, ತ್ವರಿತ ಸ್ಪಂದನಾ ಪಡೆ ಸೇರಿದಂತೆ…

Read More

ಪ್ರಸಿದ್ಧ ಎಮ್ಮೆಮಾಡು ಉರುಸ್ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಆಹ್ವಾನ ಎಮ್ಮೆಮಾಡುವಿನಲ್ಲಿ ಪ್ರತಿ ವರ್ಷ ನಡೆಯುವ ಉರುಸ್ ಕಾರ್ಯಕ್ರಮಕ್ಕೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ, ತಾಜಲ್ ಇಸ್ಲಾಂ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಕೆ.ಎಂ ಹುಸೇನ್ ಶಾಫಿ, ಮಾಜಿ ಅಧ್ಯಕ್ಷರಾದ ಅಬೂಬಕರ್ ಸಕಾಪಿ, ಆಡಳಿತ ಮಂಡಳಿ ಸದಸ್ಯರಾದ ಮೆನ್ ಮಹಮ್ಮದ್, ಹನೀಫ್ ಎಮ್.ಎ ಹಾಗೂ ಧರ್ಮ ಗುರುಗಳು ಆಹ್ವಾನ ಪತ್ರಿಕೆಯನ್ನು ನೀಡಿ ಉರುಸ್ ಸಮಾರಂಭಕ್ಕೆ ಆಹ್ವಾನಿಸಿದರು. ಎಮ್ಮೆಮಾಡು ಉರುಸ್ ಪ್ರಾಮುಖ್ಯತೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ವಿವರಿಸಿದ ಮಾನ್ಯ ಶಾಸಕರು, ಸುಮಾರು 400 ವರ್ಷಕ್ಕೂ ಅಧಿಕ ಇತಿಹಾಸ ಇರುವ ಈ ಉತ್ಸವಕ್ಕೆ, ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದ ಎಲ್ಲಾ ಧರ್ಮದ ಭಕ್ತರು ಆಗಮಿಸಿ ಪ್ರಾರ್ಥಿಸುತ್ತಾರೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಸಭಾಪತಿಗಳಾದ ಯು.ಟಿ ಖಾದರ್, ಅಲ್ಪಸಂಖ್ಯಾತ ಸಚಿವರಾದ ಜಮೀರ್ ಅಹ್ಮದ್,…

Read More