- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 30 ಕೋಟಿ ರೂ ಲಾಭ: ಬಾಂಡ್ ಗಣಪತಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು 30.46 ಕೋಟಿ ರೂ. ಲಾಭಾಂಶ ಹೊಂದಿದ್ದು, 23.14 ಕೋಟಿ ರೂ. ನಿವ್ವಳ ಲಾಭ ಹೊಂದಿದೆ ಎಂದು ಕೊಡಗು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ತಿಳಿಸಿದ್ದಾರೆ. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕಿನ 17 ವರ್ಷದ ಪ್ರಗತಿಯ ಅಂಕಿ ಅಂಶ ವಿವರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾರ್ಚ್ ಅಂತ್ಯಕ್ಕೆ 255 ಸದಸ್ಯರನ್ನು ಹೊಂದಿದ್ದು, 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ಸೌಲಭ್ಯ ಕಲ್ಪಿಸುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 37 ಕೋಟಿಯಷ್ಟು ಷೇರು ಬಂಡವಾಳ ಹೊಂದಿದ್ದು, 13,293 ಲಕ್ಷ ರೂ. ನಿಧಿ ಹೊಂದಿದೆ. ಹಾಗೆಯೇ 15,608 ಲಕ್ಷ ಸ್ವಂತ ಬಂಡವಾಳ ಹೊಂದಿದ್ದು, 2,04,311 ಠೇವಣಿ ಹೊಂದಿದೆ ಎಂದು ವಿವರಿಸಿದರು. ನಬಾರ್ಡ್‍ನಿಂದ 37,492 ಲಕ್ಷ ರೂ. ಸಾಲವನ್ನು ಪಡೆಯಲಾಗಿದೆ. 73,370 ಲಕ್ಷ ಬಂಡವಾಳ ಹೂಡಿಕೆ ಇದೆ…
ಕಕ್ಕಬ್ಬೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆ ಯಾಗಿದ್ದ ಕೇರಳದ ಮಹಿಳೆ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕಕ್ಕಬ್ಬೆ ಬಳಿಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕಕ್ಕಬ್ಬೆ ಬಳಿಯ ಕಬ್ಬಿನಕಾಡುವಿನ ಹೋಂಸ್ಟೇಗೆ ಕೇರಳದಿಂದ ಬಂದ ಶರಣ್ಯ ಗುರುವಾರ ತಡಿಯಂಡ ಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. 36 ವಷ೯ದ ಶರಣ್ಯ ಒಬ್ಬರೇ ಬಂದಿದ್ದು ಕಾಡಾನೆಗಳ ಹಾವಳಿ ಇರುವ ಸ್ಥಳವಾದರಿಂದ ಹೋಂ ಸ್ಟೇ ಮಾಲೀಕರು ಇತರ ಪ್ರವಾಸಿಗರೊಂದಿಗೆ ಚಾರಣಕ್ಕೆ ಶರಣ್ಯಳನ್ನು ಕಳುಹಿಸಿದ್ದರು. ಮರಳಿ ಬರುವ ಸಂದರ್ಭ ದಾರಿ ತಪ್ಪಿ ಶರಣ್ಯ ನಿಗೂಡವಾಗಿ ನಾಪತ್ತೆಯಾಗಿದ್ದರು. ದಾರಿ ತಪ್ಪಿರುವ ಬಗ್ಗೆ ಹೋಂ ಸ್ಟೇ ಮಾಲೀಕನಿಗೆ ಮಾಹಿತಿ ನೀಡಿದ ಶರಣ್ಯ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕಳೆದ ಗುರುವಾರದಿಂದ ತಡಿಯಂಡಮೋಳ್ ಬೆಟ್ಟದಲ್ಲಿ ಶರಣ್ಯ ಪತ್ತೆಗಾಗಿ ಸ್ಥಳೀಯರ ಸಹಕಾರದಿಂದ ಪೊಲೀಸ್ ,ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಡ್ರೋನ್ ಹಾಗೂ ಶ್ವಾನದಳದೊಂದಿಗೆ ತೀವ್ರ…
KODAGU NEWS UPDATE ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಕೊನೆಗೂ ಪತ್ತೆ ಯುವಕಪಾಡಿಯ ಬೆಟ್ಟ ಪ್ರದೇಶದಲ್ಲಿರುವ ಕುಡಿಯ ಸಮುದಾಯದವರ ಶೋಧ ಕಾರ್ಯ ಸಂದರ್ಭ ಪತ್ತೆ ತಡಿಯಂಡಮೋಳ್ ಬೆಟ್ಟದಲ್ಲಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಕ್ಯಾಲಿಕೇಟ್ ನಿವಾಸಿ ಶರಣ್ಯ(36) ತಡಿಯಂಡಮೋಳ್ ಬೆಟ್ಟಕ್ಕೆ ಕಳೆದ ಗುರುವಾರ ಬೆಳಗ್ಗೆ ಚಾರಣಕ್ಕೆ ತೆರಳಿ ನಾಪತ್ತಯಾಗಿದ್ದ ಶರಣ್ಯ ಅರಣ್ಯ, ಪೊಲೀಸ್, ಇಲಾಖೆ, ಗ್ರಾಮಸ್ಥರು ನಕ್ಸಲ್ ನಿಗ್ರಹ ಪಡೆಯಿಂದ ನಿರಂತರ ಶೋಧ ಕೊನೆಗೂ 4 ದಿನಗಳ ಸತತ ಹುಡುಕಾಟದ ಬಳಿಕ ಇಂದು ಸಂಜೆ ಪತ್ತೆಯಾದ ಶರಣ್ಯ ಶರಣ್ಯ ಪತ್ತೆಗಾಗಿ 4 ದಿನಗಳಿಂದ ಆವಿರತ ಶ್ರಮಿಸಿದ ಪೊಲೀಸ್ ,ಅರಣ್ಯ ಇಲಾಖೆ ,ಗ್ರಾಮಸ್ಥರು ಮತ್ತು ಆಧುನಿಕ ಉಪಕರಣ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸಿದ -ಶಾಸಕ ಎ.ಎಸ್ ಪೊನ್ನಣ್ಣ ಶರಣ್ಯ ಆರೋಗ್ಯ ವಿಚಾರಿಸಿದ – ಶಾಸಕ ಎ.ಎಸ್ ಪೊನ್ನಣ್ಣ. KODAGU NEWS UPDATE ಕೊಡಗಿನ ಕ್ಷಣ-ಕ್ಷಣ ಸುದ್ದಿಗಳಿಗಾಗಿ ಕೊಡಗು ನ್ಯೂಸ್ ವಾಟ್ಸಪ್ ಗ್ರೂಪ್…
ಹುಣ್ಣಿಮೆಯ ಅಂಗವಾಗಿ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ಶ್ರೀ ಕ್ಷೇತ್ರಧರ್ಮಸ್ಥಳ ಸಂಘದಿಂದ ಮಹಾಆರತಿ ಕಾರ್ಯಕ್ರಮ ವರದಿ:ಝಕರಿಯ ನಾಪೋಕ್ಲು : ಹುಣ್ಣಿಮೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯದ ವತಿಯಿಂದ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ಮಹಾ ಆರತಿಯನ್ನು ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು. ನಾಪೋಕ್ಲು ಸಮೀಪದ ಕೊಟ್ಟಮುಡಿ ಸೇತುವೆ ಬಳಿಯ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ್ ಅವರು ಮಾತನಾಡಿ ಪವಿತ್ರ ನದಿ ಕಾವೇರಿಯ ಸ್ವಚ್ಛತೆಯನ್ನು ಕಾಪಾಡಿ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಜನರಿಗೆ ನದಿಯ ಸ್ವಚ್ಛತೆಯ ಅರಿವು ಮೂಡಿಸುತ್ತಾ ಬಂದಿದ್ದೇವೆ. ಎಲ್ಲರೂ ಕೂಡ ತಮ್ಮ ವ್ಯಾಪ್ತಿಯಲ್ಲಿರುವ ನದಿಗಳಿಗೆ ತ್ಯಾಜ್ಯಗಳನ್ನು ಹಾಕದೆ ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಆಯೋಜಿತ ಕಾರ್ಯಕ್ರಮದಲ್ಲಿ ನಾಪೋಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಧರ್ಮಸ್ಥಳ ಸಂಘದ ಕೃಷಿ ಅಧಿಕಾರಿ…
ಕುಶಾಲನಗರದಲ್ಲಿ ಬಹುತೇಕ ಪೂರ್ಣಗೊಂಡಿರುವ ಒಳಚರಂಡಿ(ಯು ಜಿ ಡಿ) ಸಂಸ್ಕರಣಾ ಘಟಕಕ್ಕೆ ಮಾನ್ಯ ಶಾಸಕರಾದ ಡಾ.ಮಂತರ್ ಗೌಡ ರವರು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಹಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ಪಿ ಶಶಿಧರ್ ರವರು, KUDA ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತ್ತಪ್ಪ ರವರು, ಕಾಂಗ್ರೆಸ್ ಮುಖಂಡರಾದ ಶ್ರೀ ನಟೇಶ್ ಗೌಡ ರವರು, ಕುಶಾಲನಗರ ಪುರಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಪ್ರಕಾಶ್ ರವರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಮಹಿಳೆ ನಾಪತ್ತೆ- ಅರಣ್ಯ ಇಲಾಖೆ ಪೊಲೀಸರಿಂದ ಮುಂದುವರೆದ ಶೋಧ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಮಹಿಳೆ ಯೊಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಗ್ರಾಮದ ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಶರಣ್ಯ (36) ಎಂಬುವವರು ನಾಪತ್ತೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ. ಆನ್‌ಲೈನ್ ಮೂಲಕ ಹೋಂಸ್ಟೇ ಬುಕ್ಕಿಂಗ್ ಮಾಡಿ ಬಂದ ಈ ಮಹಿಳೆ ಒಬ್ಬಳೇ ಇರುವುದರಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಇರುವ ಕಾರಣದಿಂದ ಇತರೆ ಪ್ರವಾಸಿಗರೊಂದಿಗೆ ಗುರುವಾರದಂದು ಜೊತೆಯಲ್ಲಿ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ ಕಾರಣ ಅರಣ್ಯ ಇಲಾಖೆ ಹಾಗೂ ಪೋಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು, ಗ್ರಾಮಸ್ಥರ ಸಹಕಾರದಿಂದ ಬೆಟ್ಟದಲ್ಲೆಲ್ಲ ಗುರುವಾರ ಮಧ್ಯರಾತ್ರಿವರೆಗೂ ಹುಡುಕಾಡಿದರೂ ಮಹಿಳೆಯ ಸುಳಿವು…
ಮುಖ್ಯಮಂತ್ರಿಗಳ ಪದಕ ಸ್ವೀಕರಿಸಿದ ಕುಪ್ಪೋಡಂಡ ಎ.ರಫೀಕ್ ಉತ್ತಮ ಕಾರ್ಯಕ್ಷಮತೆ ತೋರಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಕರ್ನಾಟಕ ಅಪರಾಧ ತನಿಖೆ ವಿಭಾಗದ (CID) ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಕುಪ್ಪೋಡಂಡ ಎ. ರಫೀಕ್ ರವರು “ಪೊಲೀಸ್ ಧ್ವಜ ದಿನಾಚರಣೆ”ಯ ಅಂಗವಾಗಿ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಈ ಪ್ರತಿಷ್ಠಿತ ಪದಕವನ್ನು ಸ್ವೀಕರಿಸಿದರು.
ಎಮ್ಮೆಮಾಡು ಮದುವೆ ಸಮಾರಂಭದಲ್ಲಿ ದೈವ ಕೋಲಕ್ಕೆ ಅವಮಾನ ಆರೋಪ – ಯುವಕರಿಂದ ಕ್ಷಮಾಪಣೆ ಪಡೆದು ಎಚ್ಚರಿಗೆ ನೀಡಿದ ಎಮ್ಮೆಮಾಡು ಜಮಾಅತ್ ಆಡಳಿತ ಮಂಡಳಿ- ಸೌಹಾರ್ದತೆಯಿಂದ ಬಾಳುವಂತೆ ಮನವಿ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ದೈವ ಕೋಲಕ್ಕೆ ಅವಮಾನ ಆರೋಪಕ್ಕೆ ಸಂಬಂಧಿಸಿದಂತೆ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ಸ್ಪಷ್ಟನೆ ನೀಡಿದ್ದಾರೆ. ಎಮ್ಮೆಮಾಡು ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಜಮಾಅತ್ ನಿಯಮಗಳಿಗೆ ಅನುಗುಣವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಸಮಿತಿ ಎಚ್ಚರಿಕೆ ನೀಡಿದ್ದಾರೆ. ಎಮ್ಮೆಮಾಡು ಜಮಾಅತ್ ಕಛೇರಿಯಲ್ಲಿ ಮಾಹಿತಿ ನೀಡಿ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಸಯ್ಯದ್ ಝಕರಿಯ ಸಅದಿ ಅಲ್ ಹೈದರೂಸಿ ಅವರು ಮಾತನಾಡಿ ಘಟನೆಗೆ ಸಂಭಂಧಿಸಿದಂತೆ ಜಮಾಅತ್ ತುರ್ತುಸಭೆ ನಡೆಸಿ, ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಜಮಾಅತ್ ಗೆ ಕರೆಸಿ, ವಿಚಾರಣೆ ನಡೆಸಿದ ಸಂದರ್ಭ ಮದುವೆ ಸಮಾರಂಭ ಮುಗಿದ ಬಳಿಕ ಸ್ನೇಹಿತರೆಲ್ಲರೂ ಒಗ್ಗೂಡಿದಾಗ ತಮಾಷೆಗಾಗಿ ಹೀಗೆ…
ಭಾರತದ ಜನಗಣತಿ 2027ರ ಅಂಗವಾಗಿ ಸ್ವಯಂ ಗಣನೆ (Self Enumeration) ಪ್ರಕ್ರಿಯೆ ಏಪ್ರಿಲ್ 1ರಿಂದ ಏಪ್ರಿಲ್ 15, 2026ರವರೆಗೆ ನಡೆಯಲಿದೆ. ನಾಗರಿಕರು https://se.census.gov.in ವೆಬ್‌ಸೈಟ್ ಮೂಲಕ ತಮ್ಮ ಮನೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹಾಗೂ ಸುರಕ್ಷಿತವಾಗಿ ನಮೂದಿಸಬಹುದು. ಮೊಬೈಲ್ ಮತ್ತು OTP ಮೂಲಕ ಲಾಗಿನ್ ಮಾಡಿ, ತಮ್ಮ ಸ್ಥಳವನ್ನು ಆಯ್ಕೆ ಮಾಡಿ, ಮನೆಯ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಿ, ಕುಟುಂಬದ ವಿವರಗಳನ್ನು ಭರ್ತಿ ಮಾಡಿದ ಬಳಿಕ ಸ್ವಯಂ ಗಣನೆ ರೆಫರೆನ್ಸ್ ಐಡಿ ಪಡೆಯಬಹುದು. ಈ ಐಡಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಗಣಕರೊಂದಿಗೆ ಹಂಚಿಕೊಳ್ಳುವುದು ಅಗತ್ಯ. ಇದಾದ ನಂತರ ಏಪ್ರಿಲ್ 16ರಿಂದ ಮೇ 15, 2026ರವರೆಗೆ ಕ್ಷೇತ್ರ ಪರಿಶೀಲನೆ ನಡೆಯಲಿದೆ. ಈ ಅವಧಿಯಲ್ಲಿ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಎಲ್ಲಾ ಮಾಹಿತಿಯೂ ಸಂಪೂರ್ಣ ಗೌಪ್ಯವಾಗಿದ್ದು ಸುರಕ್ಷಿತವಾಗಿರುತ್ತದೆ. ನಾಗರಿಕರು ತಮ್ಮ ಸ್ವಯಂ ಗಣನೆಯನ್ನು ಪೂರ್ಣಗೊಳಿಸಿ, ಜವಾಬ್ದಾರಿಯುತ ನಾಗರಿಕರಾಗಿ ಸಹಕರಿಸಬೇಕು ಎಂದು ಪೊನ್ನಂಪೇಟೆ ತಹಸೀಲ್ದಾರ್ ರವರು ಮನವಿ ಮಾಡಿದ್ದಾರೆ.
ಕೊಯನಾಡು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಕಾರು ಪವಾಡಸದೃಶ ಚಾಲಕ ಪಾರು ಬೆಳಗ್ಗೆ 9 ಗಂಟೆಗೆ ಸಮಯ ರಾಷ್ಟ್ರೀಯ ಹೆದ್ದಾರಿ 275 ಕೊಡಗು ಸಂಪಾಜೆಯ ಸಮೀಪದ ಕೊಯನಾಡು ಎಂಬಲ್ಲಿ ದೊಡ್ಡದಾದ ಶಬ್ದ ಕೇಳಿಸಿತು ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿ ನೋಡಿದಾಗ ರಸ್ತೆಯಲ್ಲಿ ಹೋಗಬೇಕಿದ್ದ ಕಾರು ತೊಡಲ್ಲಿ ಬಿದ್ದದು ಕಂಡು ಬಂತು ತಕ್ಷಣ ಚಾಲಕನನ್ನು ಅರಣ್ಯ ಸಿಬ್ಬಂದಿ ಸ್ಥಳೀಯರು ಸೇರಿಕೊಂಡು ರಕ್ಷಿಸಿದರು. ಗುದ್ದಿದ ರಭಸಕ್ಕೆ ಕಾರು ಪುಡಿಪುಡಿಯಾಗಿತ್ತು. ಚಾಲಕ ಎದೆ ನೋವು ಎನ್ನುತ್ತಿದ್ದ ಕಾರಣ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಕಾರು ಕೇರಳ ಮೂಲದ ವ್ಯಕ್ತಿಯದ್ದು ಅವರು ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
