ಭಾರತದ ಜನಗಣತಿ 2027ರ ಅಂಗವಾಗಿ ಸ್ವಯಂ ಗಣನೆ (Self Enumeration) ಪ್ರಕ್ರಿಯೆ ಏಪ್ರಿಲ್ 1ರಿಂದ ಏಪ್ರಿಲ್ 15, 2026ರವರೆಗೆ ನಡೆಯಲಿದೆ.

ನಾಗರಿಕರು https://se.census.gov.in ವೆಬ್‌ಸೈಟ್ ಮೂಲಕ ತಮ್ಮ ಮನೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹಾಗೂ ಸುರಕ್ಷಿತವಾಗಿ ನಮೂದಿಸಬಹುದು.
ಮೊಬೈಲ್ ಮತ್ತು OTP ಮೂಲಕ ಲಾಗಿನ್ ಮಾಡಿ, ತಮ್ಮ ಸ್ಥಳವನ್ನು ಆಯ್ಕೆ ಮಾಡಿ, ಮನೆಯ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಿ, ಕುಟುಂಬದ ವಿವರಗಳನ್ನು ಭರ್ತಿ ಮಾಡಿದ ಬಳಿಕ ಸ್ವಯಂ ಗಣನೆ ರೆಫರೆನ್ಸ್ ಐಡಿ ಪಡೆಯಬಹುದು. ಈ ಐಡಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಗಣಕರೊಂದಿಗೆ ಹಂಚಿಕೊಳ್ಳುವುದು ಅಗತ್ಯ.
ಇದಾದ ನಂತರ ಏಪ್ರಿಲ್ 16ರಿಂದ ಮೇ 15, 2026ರವರೆಗೆ ಕ್ಷೇತ್ರ ಪರಿಶೀಲನೆ ನಡೆಯಲಿದೆ. ಈ ಅವಧಿಯಲ್ಲಿ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.
ಎಲ್ಲಾ ಮಾಹಿತಿಯೂ ಸಂಪೂರ್ಣ ಗೌಪ್ಯವಾಗಿದ್ದು ಸುರಕ್ಷಿತವಾಗಿರುತ್ತದೆ. ನಾಗರಿಕರು ತಮ್ಮ ಸ್ವಯಂ ಗಣನೆಯನ್ನು ಪೂರ್ಣಗೊಳಿಸಿ, ಜವಾಬ್ದಾರಿಯುತ ನಾಗರಿಕರಾಗಿ ಸಹಕರಿಸಬೇಕು ಎಂದು ಪೊನ್ನಂಪೇಟೆ ತಹಸೀಲ್ದಾರ್ ರವರು ಮನವಿ ಮಾಡಿದ್ದಾರೆ.

