ಕೊಯನಾಡು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಕಾರು ಪವಾಡಸದೃಶ ಚಾಲಕ ಪಾರು

ಬೆಳಗ್ಗೆ 9 ಗಂಟೆಗೆ ಸಮಯ ರಾಷ್ಟ್ರೀಯ ಹೆದ್ದಾರಿ 275 ಕೊಡಗು ಸಂಪಾಜೆಯ ಸಮೀಪದ ಕೊಯನಾಡು ಎಂಬಲ್ಲಿ ದೊಡ್ಡದಾದ ಶಬ್ದ ಕೇಳಿಸಿತು ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿ ನೋಡಿದಾಗ ರಸ್ತೆಯಲ್ಲಿ ಹೋಗಬೇಕಿದ್ದ ಕಾರು ತೊಡಲ್ಲಿ ಬಿದ್ದದು ಕಂಡು ಬಂತು ತಕ್ಷಣ ಚಾಲಕನನ್ನು ಅರಣ್ಯ ಸಿಬ್ಬಂದಿ ಸ್ಥಳೀಯರು ಸೇರಿಕೊಂಡು ರಕ್ಷಿಸಿದರು. ಗುದ್ದಿದ ರಭಸಕ್ಕೆ ಕಾರು ಪುಡಿಪುಡಿಯಾಗಿತ್ತು.
ಚಾಲಕ ಎದೆ ನೋವು ಎನ್ನುತ್ತಿದ್ದ ಕಾರಣ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಕಾರು ಕೇರಳ ಮೂಲದ ವ್ಯಕ್ತಿಯದ್ದು ಅವರು ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

