- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ರಜಿತ ಕಾರ್ಯಪ್ಪ, (೯೪೮೧೭೭೧೮೫೧) ವಿರಾಜಪೇಟೆ:ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಏಪ್ರಿಲ್ ೩ ಮತ್ತು ೪ ರಂದು ನಡೆಯಲಿದೆ. ಕೆದಮುಳ್ಳೂರು ಚಾಮುಂಡಿ ಹಬ್ಬ ಎಂದರೆ ಎಲ್ಲೆಡೆ ಪ್ರಚಲಿತದಲ್ಲಿದ್ದು ಅತ್ಯಂತ ಹೆಸರುವಾಸಿಯಾಗಿದೆ. ಹಾಗೂ ಅತ್ಯಂತ ಶಕ್ತಿಯನ್ನು ಹೊಂದಿರತಕ್ಕAತಹ ಚಾಮುಂಡಿ ದೇವಿಯ ಕ್ಷೇತ್ರವಾಗಿದೆ. ಹಾಗಾಗಿ ಈ ಉತ್ಸವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ತರು, ದೂರ ದೂರದ ಊರುಗಳಿಂದ ಭಕ್ತರು, ಆಗಮಿಸಿ ದೇವರಲ್ಲಿ ಹರಕೆ ಹೊತ್ತುಕೊಂಡು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ೨ ರಂದು ರಾತ್ರಿ ೮:೩೦ ಗಂಟೆಗೆ ಕೊಟ್ಟಿಪಾಡೋ, ೩ ರಂದು ರಾತ್ರಿ ೮:೩೦ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಇಳಿಯುವುದು, ಹಾಗೂ ರಾತ್ರಿ ವಿವಿದ ಕೋಲಗಳು, ೪ರಂದು ಬೆಳಿಗ್ಗೆ ೭:೩೦ ಗಂಟೆಗೆ ವಿಷ್ಣುಮೂರ್ತಿ ತೆರೆ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ಚಾಮುಂಡಿ ತೆರೆ ನಡೆಯಲಿದೆ. ಬೆಳಿಗ್ಗೆ ೪ ರಂದು ಪ್ರಮುಖವಾದ ವಿಷ್ಣುಮೂರ್ತಿ ಕೋಲವು ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೆಂಡದ ಮೇಲೆ ೧೦೧ ಬಾರಿ…
ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಮಾನ್ಯ ಶಾಸಕರ ಅನುದಾನದ ₹ 28. ಲಕ್ಷದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ವಲಯ ಅಧ್ಯಕ್ಷರು ರಾಮಕೃಷ್ಣ, ಮಾಜಿ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ವಲಯ ಅಧ್ಯಕ್ಷರು ನವೀನ್, ಪಕ್ಷದ ಮುಖಂಡರು ಪಾಲ್ವಿನ್, ತಿತೀರ ಮಂದಣ್ಣ, ಕೆ ಬಾಡಗ ವಲಯ ಅಧ್ಯಕ್ಷರು ರವಿ, ನಾಲ್ಕೇರಿ ವಲಯ ಅಧ್ಯಕ್ಷರು ಕಟ್ಟಿ ಕಾರ್ಯಪ್ಪ, ರಾಜನ್, ಫಾರ್ದಿನ್, ಅಜ್ಜಿಕುಟ್ಟಿರ ಪೊನ್ನು ಗಿರೀಶ್, ಪಮ್ಮು, ಮಚ್ಚಮಾಡ ಮನು, ಸಿದ್ದು ನಾಚಪ್ಪ, ಸುರೇಶ್, ವಿಜಯ, ವಿನು, ಜೆನೂ, ಮಜೀದ್, ಅಶ್ರಫ್, ಮುಸ್ತಾಫಾ, ಹಾಗೂ ಪ್ರಮುಖರು…
ಕುಟ್ಟ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಪೊನ್ನಣ್ಣ ದಿಡೀರ್ ಭೇಟಿ ಆಸ್ಪತ್ರೆಯಲ್ಲಿದ್ದ ವೈದ್ಯರ ಕೊರತೆ ಹಾಗೂ ಸೌಲಭ್ಯಗಳ ಕೊರತೆಯನ್ನು ಸರಿಪಡಿಸಲು ಉನ್ನತ ಅಧಿಕಾರಿಗಳಿಗೆ ತಿಳಿಸಿದರು *KODAGU NEWS UPDATE* ಕೇರಳ ಚುನಾವಣಾ ಪ್ರಚಾರದ ಜವಾಬ್ದಾರಿ ನಡುವೆ, ಇಂದು ಕ್ಷೇತ್ರಕ್ಕೆ ಆಗಮಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಕುಟ್ಟ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕುಟ್ಟ ಆಸ್ಪತ್ರೆಯಲ್ಲಿದ್ದ ವೈದ್ಯರ ಕೊರತೆ ಹಾಗೂ ಸೌಲಭ್ಯಗಳ ಕೊರತೆಯನ್ನು ಗಮನಿಸಿದ ಮಾನ್ಯ ಶಾಸಕರು, ಅಲ್ಲಿಂದಲೇ ಉನ್ನತ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಇಲ್ಲಿನ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ. ಬಳಿಕ ಅಲ್ಲೆ ಇದ್ದ ರೋಗಿಗಳನ್ನು ಮಾತನಾಡಿಸಿದ ಮಾನ್ಯ ಶಾಸಕರು ಅವರಿಂದ ಚಿಕಿತ್ಸೆಯ ಬಗ್ಗೆ ವಿವರಗಳನ್ನು ಪಡೆದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಕುಟ್ಟ ವಲಯ ಅಧ್ಯಕ್ಷರು ರಾಮಕೃಷ್ಣ,…
🩸 ಮರಗೋಡಿನಲ್ಲಿ ಭಾರೀ ರಕ್ತದಾನ ಶಿಬಿರ ಸಾರ್ವಜನಿಕರಿಂದ ಹೆಚ್ಚಿನ ಸ್ಪಂದನೆ ನಿರೀಕ್ಷೆ ಮರಗೋಡು: ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಮತ್ತು ಕೊಡಗು ಬ್ಲಡ್ ಡೋನರ್ಸ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 30 ರಂದು ಮರಗೋಡಿನಲ್ಲಿ ಭಾರೀ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಜಿಲ್ಲಾ ರಕ್ತ ನಿಧಿ ಕೇಂದ್ರ ಇವರ ಸಹಕಾರದೊಂದಿಗೆ ನಡೆಯುವ ಈ ಶಿಬಿರವು ವಿವೇಕಾನಂದ ಯುವಕ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಸಂಘಟನೆಗಳು ರಕ್ತದ ಕೊರತೆಯನ್ನು ನೀಗಿಸಲು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಂಡಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಆಯೋಜಕರು ಮನವಿ ಮಾಡಿದ್ದಾರೆ. ರಕ್ತದಾನವು ಜೀವ ಉಳಿಸುವ ಮಹತ್ವದ ಕಾರ್ಯವಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7760284500 ಹಾಗೂ 7624875662 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ✍🏻ಅಶೋಕ್_ಮಡಿಕೇರಿ
ಧರ್ಮಸ್ಥಳ ಸಂಘದಿಂದ ಎಮ್ಮೆಮಾಡು ಗ್ರಾಮದ ರೋಗಿಯೊಬ್ಬರಿಗೆ ವಾಕರ್ ಕೊಡುಗೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಮ್ಮೆಮಾಡು ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಸಂಕಷ್ಟ ಎದುರಿಸುತ್ತಿದ್ದ ಸಂಘದ ಸದಸ್ಯರೊಬ್ಬರ ಪತಿಗೆ ವಾಕರ್ ಅನ್ನು ಕೊಡುಗೆಯಾಗಿ ವಿತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಪೋಕ್ಲು ಶುಭಾಷ್ ನಗರ ಕಾರ್ಯಕ್ಷೇತ್ರದ ಎಮ್ಮೆಮಾಡು ಗ್ರಾಮದ ಅಲ್ ಅನ್ಸಾರ್ ಸಂಘದ ಸದಸ್ಯರಾದ ಆಮಿನ ಎಂಬುವವರ ಪತಿ ಕರೀಮ್ ಎಂಬುವವರು ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಕಷ್ಟಕರವಾಗಿದ್ದು ಸಂಘದಿಂದ ವಾಕರ್ ಕೊಡಿಸುವಂತೆ ಸಂಘದ ಸದಸ್ಯೆಯಾಗಿರುವ ಪತ್ನಿ ಆಮಿನ ಅವರು ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ್ ಅವರಿಗೆ ಮನವಿ ಸಲ್ಲಿಸಿದ್ದರು.ಮನವಿಯನ್ನು ಸ್ವೀಕರಿಸಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಗಮನಕ್ಕೆ ತರಲಾಗಿತ್ತು.ಧರ್ಮಾಧಿಕಾರಿಯವರ ನಿರ್ದೇಶನದಂತೆ ಸಂಘದ ಮೇಲ್ವಿಚಾರಕರಾದ ಸುನಿಲ್ ಅವರು ಕರೀಮ್ ಅವರ ಮನೆಗೆ ಭೇಟಿ ನೀಡಿ ವಾಕರ್ ಅನ್ನು ವಿತರಿಸಿದರು. ಈ ಸಂದರ್ಭ ನಾಪೋಕ್ಲು ಸುಭಾಷ್ ನಗರ…
ಕುಂಜಿಲ ಪೈನರಿ ಮಖಾಂ ಉರೂಸ್ ಗೆ ಶ್ರದ್ದಾಭಕ್ತಿಯ ಚಾಲನೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ಉರೂಸ್ ಸಮಾರಂಭಕ್ಕೆ ಗಣ್ಯರು ಶ್ರದ್ಧಾ ಭಕ್ತಿಯ ಚಾಲನೆ ನೀಡಿದರು. ಶುಕ್ರವಾರ ಜುಮಾ ನಮಾಜಿನ ಬಳಿಕ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಜಮಾಅತ್ ಖತೀಬರಾದ ನಿಝಾರ್ ಅಹ್ಸನಿ ಕಕ್ಕಡಿಪುರಂ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎ.ಶೌಕತ್ ಅಲಿ ಧ್ವಜಾರೋಹಣ ನೆರವೇರಿಸಿದರು. ಉರೂಸ್ ಸಮಾರಂಭವು ಮಾ.31ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೋಂದಿಗೆ ಜರುಗಲಿದ್ದು ಮಾ.30ರಂದು ಸೋಮವಾರ ಮಧ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಲಿದೆ.ಅಂದು ಸಂಜೆ 4.ಗಂಟೆಗೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಭಕ್ತಾಧಿಗಳಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದೆ. ಈ ಸಂದರ್ಭ ಜಮಾಅತ್ ಉಪಾಧ್ಯಕ್ಷರಾದ ವಿ.ಎ.ಅಬ್ದುಲ್…
ನಾಳೆಯಿಂದ ಕುಂಜಿಲ ಪೈನರಿ ಮಖಾಂ ಉರೂಸ್ ಆರಂಭ -ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಉರೂಸ್ ಆಚರಿಸಲು ನಿರ್ಧಾರ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರಂಭವು ಮಾ.27 ರಿಂದ 31ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ತಿಳಿಸಿದ್ದಾರೆ. ಕುಂಜಿಲ ಪೈನರಿ ಜಮಾಅತ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದು ಜಾತಿ,ಧರ್ಮ, ಭೇದ ಮರೆತು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸೌಕತ್ ಅಲಿ ಮನವಿ ಮಾಡಿದರು. ಜಮಾಅತ್ ಕಾರ್ಯದರ್ಶಿ ಸಹೀದ್ ಪಯ್ಯಡತ್ ಮಾತನಾಡಿ ಮಾ.27ರ ಶುಕ್ರವಾರ ಜುಮಾ ನಮಾಜಿನ ಬಳಿಕ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ.ಸೌಕತ್ ಅಲಿ ದ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕುಂಜಿಲ ಮುದರ್ರಿಸ್…
ಸೋಮವಾರಪೇಟೆಯಲ್ಲಿ ತೆನೆ ಬರಿತ ಗಾಂಜ ಸೇವನೆ ಹಾಗೂ ಮಾರಾಟ ಇಬ್ಬರ ಬಂಧನ ಹೊರ ಜಿಲ್ಲೆಯಿಂದ ತೆನೆ ಬರಿತ ಗಾಂಜಾವನ್ನು ತರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಅಬಕಾರಿ ಇಲಾಖೆ ಯಶಸ್ವಿಯಾಗಿದೆ. ನಗರದ ಕರ್ಕಳ್ಳಿ ಬಾಣೆ ನಿವಾಸಿಗಳಾದ ಎ.ಡಿ ಯಶವಂತ ಹಾಗೂ ಎಸ್.ಡಿ ಚೇತನ್ ಬಂದಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ದಿನದ ಬೆಳಗಿನ ಹೊತ್ತಿನಲ್ಲಿ ಗಾಂಜಾ ಮಾರಾಟಕ್ಕೆ ತೊಡಗಿದ್ದಾರೆ ಎಂಬ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಆರೋಪಿಗಳು ಸ್ವತಃ ಗಾಂಜಾ ಸೇವನೆ ಮಾಡುತ್ತಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಅಧಿಕಾರಿಗಳು ಅವರ ಬಳಿಯಿಂದ ಸುಮಾರು 335 ಗ್ರಾಂ ತೆನೆ ಬರಿತ ಗಾಂಜಾ ಹಾಗೂ ಮಾರಾಟಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕೊಡಗು ಪತ್ರಕರ್ತರ ಸಂಘ( ರಿ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆ, ನೂತನ ಪದಾಧಿಕಾರಿಗಳ ನೇಮಕ. ಸುಂಟಿಕೊಪ್ಪ, ಮಾ.23: ಕೊಡಗು ಪತ್ರಕರ್ತರ ಸಂಘ( ರಿ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆಯು ದಿನಾಂಕ ಮಾರ್ಚ್ 21 ರ ಶನಿವಾರದಂದು ಸುಂಟಿಕೊಪ್ಪ ಪಟ್ಟಣದ ಹೋಟೆಲ್ ದ್ವಾರಕ ಸಭಾಂಗಣದಲ್ಲಿ ಅಧ್ಯಕ್ಷರಾದ ಬಿ.ಸಿ. ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆದು, ಉಪಾಧ್ಯಕ್ಷರನ್ನಾಗಿ ನವೀನ್ ಚಿನ್ನಪ್ಪ, ಖಜಾಂಜಿಯಾಗಿ ಕೆ.ಎಸ್.ಅನಿಲ್ ಕುಮಾರ್ , ಸಹ ಕಾರ್ಯದರ್ಶಿಯಾಗಿ ರವಿಕುಮಾರ್ ಬಿ.ಎನ್ ಆವರುಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಜಿಲ್ಲಾ ಖಜಾಂಜಿಗಳಾದ ಟಿ.ಕೆ.ಸಂತೋಷ್, ಸಂಘದ ಹಿರಿಯ ಸಲಹೆಗಾರರಾದ ಕೆ.ತಿಮ್ಮಪ್ಪ, ಆರ್.ಕೆ.ಬಾಲಚಂದ್ರ, ಕಾರ್ಯದರ್ಶಿ ವಿನ್ಸೆಂಟ್,ಸದಸ್ಯರಾದ ಶಿವಣ್ಣ,ಆಲ್ಫ್ರೆಡ್,ಸುನೀಲ್,ಸಿಲ್ವರ್ ಸ್ಟಾರ್, ಸಭೆಯಲ್ಲಿ ಉಪಸ್ಥಿತರಿದ್ದರು.
