- ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
Author: Kodagu-admin
ವಿರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮದಲ್ಲಿ ಆಯೋಜನೆಗೊಂಡ, ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು. ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ಕ್ರಿಶ್ಚಿಯನ್ ಬಾಂಧವರು ಆಯೋಜಿಸಿದ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಕೋರಿ ಮಾತನಾಡಿದ ಮಾನ್ಯ ಶಾಸಕರು, ಎಲ್ಲರನ್ನೂ ಒಂದುಗೂಡಿಸುವ ಕ್ರೀಡೆ ಯಶಸ್ಸು ಕಾಣಲಿ ಎಂದು ಹಾರೈಸಿದರು. ಪ್ರೇಕ್ಷಕರ ಹಾಗೂ ಆಯೋಜಕರ ಕೋರಿಕೆ ಮೇರೆಗೆ ಮಾನ್ಯ ಶಾಸಕರು ಸ್ವತಃ ಬ್ಯಾಟ್ ಮಾಡುವ ಮೂಲಕ ಎಲ್ಲರನ್ನು ಮನರಂಜಿಸಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಪಿ ವಿ ಜಾನ್ಸನ್, ಜಿಮ್ಮಿ, ಪಕ್ಷದ ಮುಖಂಡರು ಚೆಕ್ಕು, ಆಪ್ರು ರವೀಂದ್ರ, ಅನಿಲ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನ ಅರ್ವತೋಕ್ಲು. ✍️ ರಜಿತ ಕಾರ್ಯಪ್ಪ(9481771851) ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಾಲಯ. ಇದರ ಹೆಸರು ಬಹುಶಃ ಕೇಳಿದವರು ಕಡಿಮೆ ಇರಬಹುದು. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರತುಪಡಿಸಿದರೆ ನಮ್ಮ ಕೊಡಗು ಜಿಲ್ಲೆಯಲ್ಲಿ ಮಾತ್ರ ಈ ದೇವಿಯ ಕ್ಷೇತ್ರ ಕಾಣಲು ಸಾಧ್ಯ. ಇಂತಹ ಒಂದು ಅನ್ನಪೂರ್ಣೇಶ್ವರಿ ದೇವಾಲಯ ಗೋಣಿಕೊಪ್ಪದ ಅರ್ವತೋಕ್ಲುವಿನಲ್ಲಿದೆ. ಇದೀಗ ಗೋಣಿಕೊಪ್ಪದ ಅರ್ವತೋಕ್ಲುವಿನಲ್ಲಿ ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. *** ೮೦೦ ವರ್ಷಗಳ ಇತಿಹಾಸ** ಶ್ರೀಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸುಮಾರು ೮೦೦ ವರ್ಷಗಳ ಹಿತಿಹಾಸವಿದ್ದು, ದೇವಸ್ಥಾನ ಪೂರ್ಣ ಶಿಥಿಲಾವಸ್ಥೆಗೊಂಡಿದ್ದು, ಪ್ರಸ್ತುತ ಈ ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಈ ದೇವಿ ಸನ್ನಿಧಿ ಮನೆಯಪಂಡ ಕುಟುಂಬದ ಜಾಗದಲ್ಲಿ ನೆಲೆನಿಂತಿದೆ. *****ದೇವಾಲಯದ ನಿರ್ಮಾಣದ ಬಗ್ಗೆ ಸೂಚನೆ ನೀಡಿದ ತಂತ್ರಿಗಳು**** ಮೂರು ವರ್ಷದ ಹಿಂದೆ ಮನೆಯಪಂಡ ಕುಟುಂಬದ ನಾಗಪ್ರತಿಷ್ಠಾಪನ ಸಂದರ್ಭದಲ್ಲಿ ಇಲ್ಲಿಯ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಮೂಡಬಿದ್ರೆಯಿಂದ ಆಗಮಿಸಿದ ಖ್ಯಾತ…
ದ್ವಿತೀಯ ಪಿಯುಸಿ ಫಲಿತಾಂಶ ಕೊಟ್ಟಮುಡಿ ಮರ್ಕಝ್ ವಿದ್ಯಾ ಸಂಸ್ಥೆಯ ಝಿಯಾ ಝೖನಬಾಗೆ ವಾಣಿಜ್ಯ ವಿಭಾಗಲ್ಲಿ ಡಿಸ್ಟಿಂಕ್ಷನ್ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ರಾಜ್ಯಾದ್ಯಂತ 2025 -26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ನಾಪೋಕ್ಲು ಬಳಿಯ ಕೊಟ್ಟಮುಡಿ ಮರ್ಕಝ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಂ. ಎಚ್. ಝಿಯಾ ಝೖನಬಾ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ578ಅಂಕಗಳನ್ನು ಗಳಿಸಿ ಝಿಯಾ ಝೖನಬಾ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಗೊಂಡಿದ್ದಾರೆ. ಝಿಯಾ ಝೖನಬಾ ಅವರು ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಎಂ.ವೈ. ಹಾರಿಸ್ ಹಾಗೂ ಎಂ.ಎಚ್. ಹಸೀನಾ ದಂಪತಿಗಳ ಪುತ್ರಿಯಾಗಿದ್ದಾರೆ.ಝಿಯಾ ಝೖನಬಾ ಉತ್ತಮ ಅಂಕಗಳನ್ನು ಗಳಿಸಿ ಶಾಲೆ, ಕುಟುಂಬ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿರಾಜಪೇಟೆಯಲ್ಲಿ ಮೂರು ದಿನಗಳ ಕಾಲ ಚಿಣ್ಣರ ಬೇಸಿಗೆ ಶಿಬಿರ ಸಂಭ್ರಮ ಭಾಗವಹಿಸಲು ಆಸಕ್ತಿ ಇರುವ ಚಿಣ್ಣರು ನೊoದಾಯಿಸಲು ಆಹ್ವಾನ ✍🏽ರಜಿತ ಕಾರ್ಯಪ್ಪ ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಜ್ಞಾನಗಂಗಾ ಭವನ’ದಲ್ಲಿ ಏ.೧೧ ರಿಂದ ೧೩ ರವರೆಗೆ ಚಿಣ್ಣರ ಬೇಸಿಗೆ ಸಂಭ್ರಮ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ‘ಜ್ಞಾನಗಂಗಾ ಭವನ’ ಸೇವಾ ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ ಕೋಮಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ೧೦ ರಿಂದ ೧೬ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರವು ಬೆಳಿಗ್ಗೆ ೧೦ರಿಂದ ಸಂಜೆ ೪ ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ವ್ಯಾಯಾಮ, ದ್ಯಾನ, ಸ್ವಚ್ಚ ಮನಸ್ಸು, ಸ್ವಚ್ಛ ಜೀವನದಿಂದ ಸ್ವಚ್ಚ ಭಾರತ, ಗೇಮ್ಸ್, ವ್ಯಕ್ತಿತ್ವ ವಿಕಸನ, ಆಲೋಚನೆಯ ನೆಲೆ, ಏಕಾಗ್ರತೆಯ ಕಲೆ, ಭಯದ ನಿವಾರಣೆ, ಧ್ಯಾನದ ಮಹತ್ವಿಕೆ, ಕ್ರಿಯೆಯಲ್ಲಿ ಆಲೋಚನೆಗಳು, ಮೌಲ್ಯಗಳು, ಗುಂಪು ಚಟುವಟಿಕೆಗಳು, ಒಳಾಂಗಣ, ಹೊರಾಂಗಣ…
ಪೊನ್ನಂಪೇಟೆ:-ರೆಸಾರ್ಟ್, ಹೋಂ ಸ್ಟೇ ಮುಕ್ತ ಪೊರಾಡ್ ಗ್ರಾಮಕ್ಕೆ ಯಾವುದೇ ಪ್ರವಾಸೋದ್ಯಮ ಬೇಡ :ಗ್ರಾಮಸ್ಥರ ಒಕ್ಕೊರಲ ನಿರ್ಣಯ ಪೊನ್ನಂಪೇಟೆ ತಾಲೂಕು ಬಿರುನಾಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ನೂರರಷ್ಟು ಇಲ್ಲಿನ ಮೂಲ ನಿವಾಸಿಗಳು ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದು ಸ್ಥಳೀಯರು ಯಾರು ಪ್ರವಾಸೋದ್ಯಮದ ಮೂಲಕ ಬದುಕು ಅವಲಂಬಿಸಿಲ್ಲ. ಆದ್ದರಿಂದ ಗ್ರಾಮವು ರೆಸಾರ್ಟ್, ಹೋಂ ಸ್ಟೇ ಮುಕ್ತವಾಗಿದೆ.ಆದರೆ ಇತ್ತೀಚೆಗೆ ಕೆಲವರು ಗ್ರಾಮದ ನಿವಾಸಿ ಅಲ್ಲದವರು ಗ್ರಾಮದಲ್ಲಿ ಆಸ್ತಿಯನ್ನು ಖರೀದಿಸಿ ರೆಸಾರ್ಟ್ ಹೋಂಸ್ಟೇ ಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದು ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಈ ಮೂಲಕ ಪ್ರವಾಸೋದ್ಯಮದಿಂದ ಗ್ರಾಮದಲ್ಲಿ ಅನೈತಿಕ ಚಟುವಟಿಕೆ, ಗ್ರಾಮಸ್ಥರ ಪ್ರಶಾಂತತೆಗೆ ಧಕ್ಕೆ,ಪರಿಸರ ಹಾನಿ, ತ್ಯಾಜ್ಯಗಳ ಸಂಗ್ರಹ ಶಬ್ದ,, ಜಲ ಮಾಲಿನ್ಯ ಸ್ಥಳೀಯರು ಹಾಗೂ ಪ್ರವಾಸಿಗಳ ನಡುವೆ ಸಂಘರ್ಷ ಸೇರಿದಂತೆ, ಮಾದಕ ವಸ್ತು ಸರಬರಾಜು, ಇಲ್ಲಿನ ಧಾರ್ಮಿಕ ಪವಿತ್ರತೆಗಳಿಗೂ ಸಹ ಧಕ್ಕೆಯಾಗುವ ನಿಟ್ಟಿನಲ್ಲಿ ಮತ್ತು ಅಕ್ರಮ ಚಟುವಟಿಕೆ ಮತ್ತು ಅಭದ್ರತೆ ನಿಟ್ಟಿನಲ್ಲಿ ಇಂತಹ ಯಾವುದೇ ರೆಸಾರ್ಟ್ ಹಾಗೂ ಹೋಂ…
ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ ಚಿಕ್ಕಮಗಳೂರು, ಏ.10: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು (ಏಪ್ರಿಲ್ 10) ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಸಿಕ್ಕಿರುವುದು ದೃಢಪಟ್ಟಿದೆ. ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದರು. ಈ ಘಟನೆ ನಡೆದ ನಂತರ ಪೊಲೀಸರ ತಂಡ ಹುಡುಗಿಗಾಗಿ ಕಾರ್ಯಚರಣೆಯನ್ನು ನಡೆಸಲಾಗಿತ್ತು . ಇದೀಗ ಹುಡುಗಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಪತ್ತೆಗಾಗಿ ಎಸ್‌ಡಿಆರ್‌ಎಫ್ (SDRF), ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ (ANF) ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು.…
ದ್ವಿತೀಯ ಪಿಯುಸಿ ಫಲಿತಾಂಶ ಪೆರುಂಬಾಡಿ ಎಸ್ಇಎ ಶಾಲೆಯ ಫಾತಿಮತ್ ಫಿದಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ರಾಜ್ಯದ್ಯಂತ 2025 -26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ವಿರಾಜಪೇಟೆ ಸಮೀಪದ ಅರ್ಜಿ ಗ್ರಾಮದ ಪೆರುಂಬಾಡಿ ಎಸ್ಇಎ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ಫಿದಾ ಸಿ.ಎ. ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 581ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ಫಾತಿಮತ್ ಫಿದಾ ಸಾಧನೆ ಮಾಡಿದ್ದಾರೆ. ಇವಳು ಎಡಪಾಲ ಗ್ರಾಮದ ಚೀನಮಾಡತ್ ಅಬೂಬಕ್ಕರ್ ಹಾಗೂ ಝೌರ ದಂಪತಿಗಳ ಪುತ್ರಿಯಾಗಿದ್ದಾಳೆ.
ದ್ವಿತೀಯ ಪಿಯುಸಿ ಫಲಿತಾಂಶ ನಾಪೋಕ್ಲುವಿನ ದೀಕ್ಷಿತಾ ಡಿಸ್ಟಿಂಕ್ಷನ್ ಪಡೆದು ಸಾಧನೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಾಪೋಕ್ಲುವಿನ ಎಸ್.ದೀಕ್ಷಿತಾ 600ಕ್ಕೆ588 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾಳೆ. ದೀಕ್ಷಿತಾ ನಾಪೋಕ್ಲು ಇಂದಿರಾನಗರದ ನಿವಾಸಿ ಸುಬ್ರಮಣಿ ಹಾಗೂ ಶಶಿಕಲಾ ದಂಪತಿಗಳ ಪುತ್ರಿ. ದೀಕ್ಷಿತಾ ಉತ್ತಮ ಅಂಕಗಳನ್ನುಗಳಿಸಿ ಸಾಧನೆಗೈದು ಶಾಲೆ,ಕುಟುಂಬ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ದ್ವಿತೀಯ ಪಿಯುಸಿ ಫಲಿತಾಂಶ ನಾಪೋಕ್ಲುವಿನ ಕೊಂಡೀರ ಸರ್ವಿಕಾಗೆ ಡಿಸ್ಟಿಂಕ್ಷನ್ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಾಪೋಕ್ಲುವಿನ ಕೆ.ಕೆ.ಸರ್ವಿಕಾ 600ಕ್ಕೆ580 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾಳೆ. ಸರ್ವಿಕಾ ನಾಪೋಕ್ಲು ಬೇತು ಗ್ರಾಮದ ನಿವಾಸಿ ಕೊಂಡೀರ ಕಿಶನ್ ಕಾರ್ಯಪ್ಪ ಹಾಗೂ ಕಾವ್ಯ ಕಾವೇರಮ್ಮ ದಂಪತಿಗಳ ಪುತ್ರಿ.ಸರ್ವಿಕಾ ಉತ್ತಮ ಅಂಕಗಳನ್ನು ಗಳಿಸಿ ಸಾಧನೆಗೈದು ಶಾಲೆ,ಕುಟುಂಬ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ದ್ವಿತೀಯ ಪಿಯುಸಿ ಫಲಿತಾಂಶ ನಾಪೋಕ್ಲುವಿನ ಕೆ ಪಿ ಎಸ್ ಶಾಲೆಯ ಶಾಮಿಲಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ರಾಜ್ಯದ್ಯಂತ 2025 -26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೆ. ಎಸ್. ಶಾಮಿಲಾ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 600ಕ್ಕೆ532ಅಂಕದೊಂದಿಗೆ ಶಾಲೆಗೆ ಪ್ರಥಮಸ್ಥಾನ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಶಾಮಿಲಾ ನಾಪೋಕ್ಲು ಬೇತು ಗ್ರಾಮದ ಕೆ.ಎ.ಷರೀಫ್ ಪಾಪ್ರಾಟ್ ಹಾಗೂ ಕದೀಜ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಕರ್ನಾಟಕ ಪಬ್ಲಿಕ್ ಶಾಲೆಯ ಮೇಲುಸ್ತುವಾರಿ ಸಮಿತಿ, ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
