Author: Kodagu-admin

ಕೊಡಗು ಜಿಲ್ಲೆಗೆ ಕ್ರೀಡೆಯಲ್ಲಿ ಲಭಿಸಿದ ಕೀರ್ತಿ ದೇಶದ ಯಾವ ಜಿಲ್ಲೆಗಳಿಗೆ ಲಭಿಸಲಿಲ್ಲ ಕ್ರೀಡೆಯಲ್ಲಿ ಕೊಡಗು ಜಿಲ್ಲೆ ಗಳಿಸಿದ ಯಶಸ್ಸು, ಕೀರ್ತಿ, ಸಾಧನೆ ಭಾರತ ದೇಶದ ಬೇರೆ ಯಾವ ಜಿಲ್ಲೆಗಳಿಗೆ ಲಭಿಸಲಿಲ್ಲ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡವ ಕೌಟುಂಬಿಕ ಹಾಕಿ ನಮ್ಮೆ 2026 ಚೇನಂಡ ಕಪ್ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡಗು ದೇಶದಲ್ಲಿ ಪುಟ್ಟ ಜಿಲ್ಲೆಯಾಗಿದ್ದರೂ 18 ಒಲಂಪಿಯನ್ ಗಳನ್ನು ದೇಶಕ್ಕೆ ಕೊಡಗೆಯಾಗಿ ನೀಡಿದೆ.ಪುಟ್ಟ ಜಿಲ್ಲೆ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದರೆ ಅದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು 30 ಕೋಟಿ ರೂಗಳ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಿದ್ದು ರಾಜ್ಯ ಸಭಾ ಸದಸ್ಯರಾದ ಅಜಯ್ ಮಾಕನ್ ರವರು ಈ ಯೋಜನೆಗೆ ವರ್ಷಕ್ಕೆ 5 ಕೋಟಿ ರೂಗಳಂತೆ ಒಟ್ಟು…

Read More

ಹಾಕಿ ಕ್ರೀಡೆಗೆ ಸರ್ಕಾರದಿಂದ ಪ್ರೋತ್ಸಾಹ ಮಡಿಕೇರಿ ಮೇ,02(ಕರ್ನಾಟಕ ವಾರ್ತೆ):-ಕ್ರೀಡೆಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಮನ್ ಸುಖ್ ಮಾಂಡವಿಯಾ ಅವರು ಇದು ಕೊಡುಗೆಯಲ್ಲ, ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ನಾಪೆÇೀಕ್ಲುವಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 26 ದಿನಗಳ ಕಾಲ ನಡೆದ ಹಾಕಿ ಉತ್ಸವ ಫೈನಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಕೊಡವ ಕುಟುಂಬ ಹಾಕಿ ಕ್ರೀಡೆ ಬಗ್ಗೆ ಕೇಳಿದ್ದೆ. ಈಗ ನೋಡಿ ಸಂತೋಷವಾಯಿತು. ಅಂತರರಾಷ್ಟ್ರೀಯ ಒಲಂಪಿಕ್ ಕೌನ್ಸಿಲ್ ಕ್ರೀಡೆ ಒಂದು ಸಮುದಾಯದ ಒಗ್ಗೂಡುವಿಕೆಗೆ ಸಹಕಾರಿಯಾಗಬೇಕು ಎಂದಿದೆ. ಆದರೆ ಕೊಡವ ಸಮುದಾಯದ ಪೂರ್ವಜರು ಇದನ್ನು ಈ ಹಿಂದೆ ಮಾಡಿ ತೋರಿಸಿದ್ದಾರೆ ಇದು ಶ್ಲಾಘನೀಯ ಎಂದರು. 18 ಜನ ಒಲಂಪಿಯನ್ ನೀಡಿದ ಈ ಕೊಡವ ಭೂಮಿಗೆ ವಂದನೀಯ ಎಂದರು. ಕ್ರೀಡಾ ಪ್ರತಿಭೆಗಳಿರುವ ಕೊಡಗಿಗೆ ಪೆÇ್ರೀತ್ಸಾಹ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು…

Read More

ನಾಳೆಯಿಂದ ಇತಿಹಾಸ ಪ್ರಸಿದ್ಧ ನಾಪೋಕ್ಲು ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬ ಆರಂಭ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕೊಡಗಿನ ಇತಿಹಾಸ ಪ್ರಸಿದ್ದ ನಾಪೋಕ್ಲು ಬಳಿಯ ಬೇತುಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬವು ಮೇ 2 ರಿಂದ 4ರವರೆಗೆ ನಡೆಯಲಿದೆ. ದಿನಾಂಕ 02 ರಂದು ರಾತ್ರಿ 9 ಗಂಟೆಗೆ ಶ್ರೀ ದೇವರನ್ನು ಕೊಟ್ಟಿ ಹಾಡುವುದು, ದಿನಾಂಕ 3 ರಂದು ಬೆಳಿಗ್ಗೆ 11.30 ಗಂಟೆಗೆ ಎತ್ತು ಪೋರಾಟ ಅಂದು ರಾತ್ರಿ 9.30 ಗಂಟೆಗೆ ಶ್ರೀ ಶಾಸ್ತಾವು ದೇವರ ಪ್ರಸಿದ್ದ ದೀಪಾರಾಧನೆ ( ಅಂದಿ ಬೊಳಕು) ನಡೆಯಲಿದೆ. ದಿನಾಂಕ 4 ರಂದು ಬೆಳಿಗ್ಗೆ 9.30 ಗಟೆಗೆ ಶ್ರೀ ಕಲ್ಯಾಟ ಅಜ್ಜಪ್ಪ ದೇವರ ಕೋಲ ನಡೆಯಲಿದೆ. ಅಪರಾಹ್ನ 12.30 ಗಂಟೆಗೆ ಭಕ್ತಾಧಿಗಳಿಗೆ ಮಹಾ ಅನ್ನದಾನ ನಡೆಯಲಿದೆ. ಅಪರಾಹ್ನ1 ಗಂಟೆಗೆ ಶ್ರೀ ವಿಷ್ಣು ಮೂರ್ತಿದೇವರ ಕೋಲ ನಡೆಯಲಿದೆ. ನಾಡಿನ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ…

Read More

ಮೇ.2 ರಂದು ನಡೆಯಲಿರುವ “ಮಾದರಿ ಮದುವೆ” ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿಗೆ ಕೊಡಗು ಜಿಲ್ಲಾ ಎಸ್ ವೈ ಎಸ್ ಸಮಿತಿ ಕರೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ವತಿಯಿಂದ ಕೈಗೊಳ್ಳಲಾದ ‘ಮಾದರಿ ಮದುವೆ’ ಅಭಿಯಾನದ ಸಮಾರೋಪ ಸಮ್ಮೇಳನ ಹಾಗೂ ಬೃಹತ್ ಜನಜಾಗೃತಿ ಜಾಥಾ ಮೇ.2ರ ಶನಿವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಎಸ್ ವೈಎಸ್ ಕೊಡಗು ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮದುವೆಗಳನ್ನು ಅನಾಚಾರ ಮುಕ್ತಗೊಳಿಸಲು ಮತ್ತು ಆರ್ಥಿಕ ಭಾರವನ್ನು ಹಗುರಗೊಳಿಸಲು ಎಂಬ ದೇಯವಾಕ್ಯದೊಂದಿಗೆ ಎಸ್ ವೈ ಎಸ್ ಸಂಘಟನೆಯು ನಾಲ್ಕು ತಿಂಗಳುಗಳಿಂದ ‘ಮಾದರಿ ಮದುವೆ’ ಅಭಿಯಾನವನ್ನು ನಡೆಸಿಕೊಂಡು ಬರುತಿದ್ದು, ಮದುವೆಯಲ್ಲಿ ನಡೆಯುತ್ತಿರುವ ಅನಾಚಾರ, ಆಧಾರ್ಮಿಕತೆ ಮತ್ತು ದುಂದುವೆಚ್ಚದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಮೇ. 2 ರಂದು ಸಂಜೆ 4 ಗಂಟೆಗೆ ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡಿಯಲಿದ್ದು ಸಂಜೆ 5:30ಕ್ಕೆ ಖುರತ್ತುಸ್ಸಾದಾತ್ ವೇದಿಕೆಯಲ್ಲಿ ಸಮಾರೋಪ ಸಮಾರಂಭ…

Read More

ಚೇಲಾವರ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ತೃತೀಯ ವರ್ಷದ ನೇಮೋತ್ಸವ ಕಾರ್ಯಕ್ರಮ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಮೇ.2 ಹಾಗೂ 3 ರಂದು ತೃತೀಯ ವರ್ಷದ ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮೇ.2ರ ಶನಿವಾರ ಬೆಳಗ್ಗೆ 7 ಗಂಟೆಗೆ ಗಣಪತಿ ಪೂಜೆ,10 ಗಂಟೆಗೆ ಮೊಗೇರ ದೈವಗಳಿಗೆ ಮಂಜಸೇವೆ, ಸಂಜೆ 6ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಮಂತ್ರವಾದಿ ಗುಳಿಗ ದೈವದ ಕೋಲ,ರಾತ್ರಿ 9 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಪಾಷಾಣ ಮೂರ್ತಿ ದೈವದ ಕೋಲ,ವಯೊಂತಿ ದೈವದ ಕೋಲ ನಡೆಯಲಿದೆ. ಮೇ. 3ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ 1ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ,ದೈವಗಳ ಕೃಪೆಗೆ ಪಾತ್ರರಾಗುವಂತೆ ಚೇಲಾವರ ಶ್ರೀ ಕೊರಗಜ್ಜ ದೈವ ಸನ್ನಿದಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ವಾರ್ಷಿಕ ಮಹಾಸಭೆ –ನೂತನ ಪದಾಧಿಕಾರಿಗಳ ಆಯ್ಕೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಜಿ.ಸಿ.ಸಿ.ರಾಷ್ಟ್ರಗಳ ವಿವಿಧ ಭಾಗಗಳಿಂದ ಸದಸ್ಯರು ಉತ್ಸಾಹಭರಿತವಾಗಿ ಸಭೆಯಲ್ಲಿ ಭಾಗವಹಿಸಿದರು. ವೆಲ್ಫೇರ್ ಜಿಸಿಸಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಆಡಳಿತ ವಿಭಾಗದ ಅಧ್ಯಕ್ಷರಾದ ಸಯ್ಯಿದ್ ಆಬಿದ್ ತಂಙಳ್ ಎಮ್ಮೆಮಾಡು ಉದ್ಘಾಟಿಸಿ ಮಾತನಾಡಿ ಸಂಘಟನೆಯ ಏಕತೆ,ಸೇವಾ ಮನೋಭಾವ ಹಾಗೂ ಸಮುದಾಯದ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರವನ್ನು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ (ಕುವೈತ್)ಕಳೆದ ಸಾಲಿನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸಂಘಟನೆಯ ಸೇವಾ ಕಾರ್ಯಕ್ರಮಗಳು, ಶಿಕ್ಷಣ ಸಹಾಯ,ದಾನಧರ್ಮ ಕಾರ್ಯಗಳು ಮತ್ತು ಸಾಮಾಜಿಕ ಚಟುವಟಿಕೆಗಳ ವಿವರಗಳನ್ನು ವಿವರಿಸಿದರು. ಕೋಶಾಧಿಕಾರಿ ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಲೆಕ್ಕಪತ್ರಗಳನ್ನು ಮಂಡಿಸಿ ಆದಾಯ-ವ್ಯಯದ ವಿವರಗಳನ್ನು ಸ್ಪಷ್ಟಪಡಿಸಿದರು. ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಲೆಕ್ಕಪತ್ರಗಳನ್ನು ಅಂಗೀಕರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಅಬೂಬಕ್ಕರ್…

Read More

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಪದವಿ ಪ್ರದಾನ ಸಮಾರಂಭ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಐದನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವು ಕಾಲೇಜು ಆವರಣದಲ್ಲಿ ನಡೆಯಿತು. ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ರಾಜ್‌ ನಾರಯಣ್‌ ತಿವಾರಿ ನಿರ್ದೇಶಕರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) – ಪರಿಸರ ಆರೋಗ್ಯ ಸಂಶೋಧನಾ ರಾಷ್ಟ್ರೀಯ ಸಂಸ್ಥೆ ಭೂಪಾಲ್‌ ರವರು ವೈದ್ಯಕೀಯ ಪದವೀಧರರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು. ವೈದ್ಯಕೀಯ ವೃತ್ತಿ ಕೇವಲ ಚಿಕಿತ್ಸೆ ನೀಡುವುದಲ್ಲದೆ, ಸಮಾಜದತ್ತ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ರೋಗಿಗಳೊಂದಿಗೆ ಸಹಾನುಭೂತಿ ಮತ್ತು ಮಾನವೀಯತೆ ವೈದ್ಯರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದರು. ಜನರು ವೈದ್ಯರನ್ನು ಕೇವಲ ಆರೋಗ್ಯ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ, ವಿಶ್ವಾಸದ ಆಧಾರದ ಮೇಲೆ ಸಂಪರ್ಕಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಪಿಜಿ ಅಧ್ಯಯನದಲ್ಲಿ ಸಮುದಾಯ ವೈದ್ಯಕೀಯದ ಮಹತ್ವವನ್ನು…

Read More

ಚೆಯ್ಯಂಡಾಣೆ ಮುಖ್ಯ ರಸ್ತೆ ಬದಿಯ ಗದ್ದೆಯಲ್ಲೇ ಪ್ರತ್ಯಕ್ಷವಾದ ಕಾಡಾನೆ ಹಿಂಡು -ಕಾಡಿಗಟ್ಟಿದ ಅರಣ್ಯ ಇಲಾಖೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು.ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ,ಬಾಳೆ,ಅಡಿಕೆ,ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿದೆ. ಮಂಗಳವಾರ ಮಧ್ಯಾಹ್ನ ನಾಪೋಕ್ಲು,ವಿರಾಜಪೇಟೆ ಮುಖ್ಯ ರಸ್ತೆಯ ಬೊವ್ವೇರಿಯಂಡ ರಮೇಶ್ ರವರ ಗದ್ದೆಯಲ್ಲಿ ಕಾಣಿಸಿಕೊಂಡ 6 ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕರಡ ಕೀಮಲೆ ಕಾಡು ಮೂಲಕ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರಾದ ಬೊವ್ವೇರಿಯಂಡ ಮೋಹನ್ ಅವರು ಮಾಹಿತಿ ನೀಡಿ ನಮ್ಮಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ವಿತಿಮೀರಿದ್ದು ಬೆಳಿಗ್ಗೆ ಹಾಗೂ ಮಧ್ಯಾಹ್ನ ಸಮಯದಲ್ಲಿ ಮುಖ್ಯ ರಸ್ತೆಯ ಮೂಲಕವೇ ಕಾಡಾನೆಗಳು ಸಂಚರಿಸುತ್ತಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಬೇಕು, ಆನೆಗಳನ್ನು ಕಾಡಿಗಟ್ಟಿ ಯಾವುದೇ ಪ್ರಯೋಜನವಿಲ್ಲ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಿ ಹಿಂತಿರುಗುವ ಮುನ್ನ ಕಾಡಾನೆಗಳು ಮರಳಿ ತೋಟಕ್ಕೆ ಲಗ್ಗೆ ಇಡುತ್ತಿದೆ.…

Read More

ಕುಂದಾಪುರದಿಂದ ದರ್ಗಾ ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಎಮ್ಮೆಮಾಡು ಬಳಿಯ ಕಾವೇರಿ ನದಿ ದಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ-ಹಸೈನಾರ್ ಮೃತ ದುರ್ದೈವಿ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ಉಡುಪಿ ಜಿಲ್ಲೆಯ ಕುಂದಾಪುರದಿಂದ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆಂದು ತೆರಳಿ ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಎಮ್ಮೆಮಾಡು ಗ್ರಾಮದ ಕಾವೇರಿ ನದಿಯ ದಡದ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುರ್ಕಂಜೆ ಗ್ರಾಮದ ನಿವಾಸಿ ಹಸೈನಾರ್ ಸಾಹೇಬ್ (65) ಮೃತ ದುರ್ದೈವಿ. ಮೃತ ಹಸೈನಾರ್ ಏ.13ರಂದು ಕುಂದಾಪುರದಿಂದ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆ ತೆರಳಿದ್ದರು.ಏ 15ರಂದು ರಾತ್ರಿ 11.30ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮಕ್ಕೆ ತಲುಪಿದ್ದರು. ಎಮ್ಮೆಮಾಡುವಿನಲ್ಲಿ ರೂಮ್ ಸಿಗದ ಕಾರಣ ಮಸೀದಿಯ ಆವರಣದಲ್ಲಿ ಹಸೈನಾರ್ ಮಲಗಿದ್ದರು.ರಾತ್ರಿ ಮಲಗಿದ್ದ ಜಾಗದಲ್ಲಿ ಹಸೈನಾರ್ ಅವರು ಕಾಣದೆ ಇದ್ದಕಾರಣ ಸಂಬಂಧಿಕರು ಇವರನ್ನು ಹುಡುಕಾಡಿದ್ದರು.ಬಳಿಕ ಮಸೀದಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಮಸೀದಿಯ ಮುಖ್ಯ ದ್ವಾರದ…

Read More

ವಿಷ ಸೇವಿಸಿ ನಾಪೋಕ್ಲು ಗ್ರಾಮ ಪಂಚಾಯಿತಿ ಪೌರಕಾರ್ಮಿಕ ವಿಶ್ವನಾಥ್ ಆತ್ಮಹತ್ಯೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ನಿವಾಸಿ ವಿಶ್ವನಾಥ್ (33) ಆತ್ಮಹತ್ಯೆ ಮಾಡಿಕೊಂಡ ಪೌರಕಾರ್ಮಿಕ.ವಿಶ್ವನಾಥ್ ಹಲವು ವರ್ಷಗಳಿಂದ ನಾಪೋಕ್ಲು ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕನಾಗಿ ಹಾಗೂ ಟ್ರ್ಯಾಕ್ಟರ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು.ನಾಪೋಕ್ಲು ಮಾರುಕಟ್ಟೆ ಬಳಿಯಲ್ಲಿ ಪತ್ನಿ ಎರಡು ಮಕ್ಕಳೊಂದಿಗೆ ವಾಸವಿದ್ದ ವಿಶ್ವನಾಥ್ ಶುಕ್ರವಾರ ಮಧ್ಯರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.ಬಳಿಕ ಇವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾನುವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ವಿಶ್ವನಾಥ್ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More