- ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
Author: Kodagu-admin
ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ರಿವರ್ ರ್ಯಾಫ್ಟ್ ಫಿಟ್‍ನೆಸ್ ಪ್ರಮಾಣ ಪತ್ರ ಪಡೆದೇ ನಿರ್ವಹಣೆಗೆ ಎಡಿಸಿ ಸೂಚನೆ ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ್ಯಾಪ್ಟಿಂಗ್ ನಡೆಸುವವರು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ(ಜೇತ್ನ) ರ್ಯಾಪ್ಟ್ ಫಿಟ್ಟ್‍ನೆಸ್ ಪ್ರಮಾಣ ಪತ್ರ ಪಡೆಯುವುದರ ಜೊತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ನವೀಕರಣ ಪತ್ರ ಪಡೆದು ರಿವರ್ ರ್ಯಾಪ್ಟಿಂಗ್ (ಜಲಸಾಹಸ ಕ್ರೀಡೆ) ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಿವರ್ ರ್ಯಾಪ್ಟಿಂಗ್ ನಡೆಸುವವರು ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಹಾಗೂ ನವೀಕರಣ ಪತ್ರ ಪಡೆಯದೆ ರಿವರ್ ರ್ಯಾಪ್ಟಿಂಗ್ ನಡೆಸಬಾರದು ಎಂದು ಎಚ್ಚರಿಸಿದರು. ಹಾಗೆಯೇ ರಿವರ್ ರ್ಯಾಪ್ಟಿಂಗ್ ನಡೆಸಲು ಬಳಸುವ ಪ್ರತಿ ರ್ಯಾಪ್ಟ್‍ಗೆ ನಿರ್ವಹಣಾ ಶುಲ್ಕವನ್ನು ಪ್ರತೀ ತಿಂಗಳು ಪಾವತಿಸುವಂತೆ ಸಹನಾ…
ಮೇ 20ರಂದು ದೇಶದಾದ್ಯಂತ ಮೆಡಿಕಲ್ ಸ್ಟೋರ್ ಇರಲ್ಲ. ಗಮನಿಸಿ, ಕೊಡಗಿನಲ್ಲೂ ಮೇ 20 ಕ್ಕೆ ಮೆಡಿಕಲ್ ಸ್ಟೋರ್ ಒಪನ್ ಇರಲ್ಲ. ಮಡಿಕೇರಿ: ಆನ್ಲೈನ್ ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷದಿಗಳ ಮಾರಾಟವನ್ನು ನಿಲ್ಲಿಸಬೇಕೆಂಬ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದರೂ ಹಳೇ ಆದೇಶವನ್ನು ಹಿಂಪಡೆಯದ ಸರಕಾರದ ನೀತಿಯನ್ನು ಖಂಡಿಸಿ ದೇಶದಾದ್ಯಂತ ಮೇ 20 ರಂದು ಮೆಡಿಕಲ್ ಸ್ಟೋರ್ ಗಳನ್ನು ಮುಚ್ಚಲಾಗುವುದು ಮತ್ತು ಬಂಧ್ ಹಿಂಪಡೆಯಲಾಗಿದೆ ಎಂಬ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡುವ ಅವಶ್ಯಕತೆಯಿಲ್ಲ ಎಂದು ಕರ್ನಾಟಕ ಔಷದ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಔಷದ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಸ್ಪಷ್ಟಪಡಿಸಿದ್ದಾರೆ. ಯಾಕೆ ಬಂದ್? ಯಾಕೆ ವಿರೋದ: 2020 ಹಾಗೂ 2021 ರ ಕೋವಿಡ್ ಸಂದರ್ಭ ಇಡೀ ದೇಶವೇ ದಿಗ್ಬಂದನಕ್ಕೊಳಗಾದಾಗ ಸಿಲಿಕಾನ್ ಸಿಟಿಗಳಂತಹ ನಗರ ಪ್ರದೇಶಗಳಲ್ಲಿನ ಜನರಿಗೆ ಸಮಸ್ಯೆಯಾಗದಿರಲಿ ಎಂಬ ಏಕೈಕ ದೃಷ್ಟಿಕೋನದಿಂದ ಆನ್ಲೈನ್ ಪೋರ್ಟಲ್ ಗಳಲ್ಲಿ ಕೋವಿಡ್…
ಮಿಸ್ ಗೌಡತಿ ಸ್ಪರ್ಧೆಯಲ್ಲಿ ಮಿಂಚಿದ ಯುವತಿಯರು ಕೊಡಗು ಗೌಡ ಯುವ ವೇದಿಕೆ ಮಡಿಕೇರಿ,ಆಯೋಜಿದ ಫ್ಯಾಷನ್ ಶೋ, ಮಿಸ್ ಗೌಡತಿ ಸ್ಪರ್ಧೆಯಲ್ಲಿ ಕೊಡಗು ಗೌಡ ಸಮಾಜ ಬೆಂಗಳೂರಿನ ಪರವಾಗಿ ಸ್ಪರ್ದಿಸಿದ ಕಟ್ರತನ ಶ್ರೀಮತಿ ಲತಾ ಮತ್ತು ರಾಜೇಶ್ ಪುತ್ರಿ ದಿಶಾ ದ್ವಿತೀಯ ಸ್ಥಾನ ತಮ್ಮ ಮುಡಿಗೆರಿಸಿಕೊಂಡರು ಹಾಗೆ ವಿನ್ನರ್ ಕಿರೀಟವನ್ನು ಪುದಿಯನೇರವನ ಪಂಚಮಿ ಕಿಶೋರ್ ಮುಡಿಗೆರಿಸಿಕೊಂಡರು ಹಾಗೆ ತೃತೀಯ ಸ್ಥಾನವನ್ನು ನೂಜಿಬೈಲು ಯುಕ್ತ ಕಿರೀಟವನ್ನು ಮುಡಿಗೆರಿಸಿಕೊಂಡರು.
ಹೇರೂರು ಹಾಡಿಯಲ್ಲಿ ತಲೆ ಎತ್ತಿದ ಅಕ್ರಮ ಚರ್ಚ್: ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದವರು ಪೊಲೀಸ್ ವಶಕ್ಕೆ ಗಿರಿಜನ ಹಾಡಿಯೊಳಗೆ ಅಕ್ರಮವಾಗಿ ನಿರ್ಮಾಣಗೊಂಡ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೇರೂರು ಹಾಡಿಯಲ್ಲಿ ನಡೆದಿದೆ.ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಪಂ ಗೆ ಒಳಪಡುವ ಹೇರೂರು ಗಿರಿಜನ ಹಾಡಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಚರ್ಚ್ ಉದ್ಘಾಟನೆ ಸಂದರ್ಭ ಸ್ಥಳೀಯ ನಿವಾಸಿಗಳು ಆಗಮಿಸಿ ಕಾರ್ಯಕ್ರಮ ಮೊಟಕುಗೊಳಿಸಿ ತಮಿಳುನಾಡಿನಿಂದ ಐದಾರು ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ತಡೆಹಿಡಿದು ಪೊಲೀಸರಿಗೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಮಾಹಿತಿನೀಡಿದ್ದಾರೆ. ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್, ಕುಶಾಲನಗರ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿಗಳಾದ ಮೋಹನ್ ರಾಜ್, ರಾಮಚಂದ್ರ, ನಾಕೂರು ಶಿರಂಗಾಲ ಗ್ರಾಪಂ ಆಡಳಿತಾಧಿಕಾರಿ ಶ್ರೀಕಾಂತ್, ಪಿಡಿಒ ಅಸ್ಮಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಇದೇ ಸಂದರ್ಭ ಸ್ಥಳೀಯರು ಮತ್ತು ಹಾಡಿ ನಿವಾಸಿಗಳ ನಡುವೆ ವಾಗ್ವಾದ ನಡೆಯಿತು. ನಮ್ಮಿಷ್ಟದಂತೆ ನಾವು ಪ್ರಾರ್ಥನೆಯಲ್ಲಿ ತೊಡಗಿರುವುದಾಗಿ ಹಾಡಿ ವಾಸಿಗಳು ವಾದಿಸಿದರು. ಈ ಸಂದರ್ಭಗ್ರಾಪಂ ಮೂಲಕ ಯಾವುದೇ…
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅತ್ಯಂತ ಕುಗ್ರಾಮ ಎಂದೇ ಬಿಂಬಿತರಾಗಿರುವ ಗಾಳಿಬೀಡು ಪಂಚಾಯತ್ ವ್ಯಾಪ್ತಿಯ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು 35 ಲಕ್ಷ ರೂಗಳ ಭರಪೂರ ಅನುದಾನವನ್ನು ನೀಡಿದ್ದಾರೆ. ಅತ್ಯಂತ ದುರ್ಗಮವಾದ ಹಾದಿಗಳನ್ನು ಹೊಂದಿರುವ 2 ನೇ ಮೊಣ್ಣಂಗೇರಿ ಗ್ರಾಮ 2018 ರ ಪ್ರಕೃತಿ ವಿಕೋಪದಲ್ಲಿ ಬಹು ಸಂಕಷ್ಟಕ್ಕೆ ಒಳಗಾದ ಪ್ರದೇಶವಾಗಿದ್ದು ಅಲ್ಲಿನ ಜನರ ಕೋರಿಕೆ ಮೇರೆಗೆ ಶಾಸಕರು 35 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿದರು. ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯು ಸರ್ಕಾರದ ಸೌಲಭ್ಯ ಪಡೆಯಲು ಅರ್ಹನಾಗಿದ್ದು ಅದನ್ನು ಒದಗಿಸುವ ಕರ್ತವ್ಯ ಜನಪ್ರತಿನಿಧಿಯ ಜವಾಬ್ದಾರಿ ಎಂದು ಮಾತನಾಡಿದ ಡಾ ಮಂತರ್ ಗೌಡ ರವರು ಕುಗ್ರಾಮ ಎಂದು ಅಪಖ್ಯಾತಿ ಹೊಂದಿರುವ 2 ನೇ ಮೊಣ್ಣಂಗೇರಿ ಗ್ರಾಮವನ್ನು ಸುಗ್ರಾಮವಾಗಿಸಲು ಬದ್ದನಾಗಿದ್ದೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.ಶೀಘ್ರದಲ್ಲಿಯೇ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ…
ಬೆಂಬಲಿಗರಿಗೆ ಔತಣಕೂಟವೋ? ಇಲ್ಲ ಬಲಪ್ರದರ್ಶನವೋ? ಮುತ್ತಪ್ಪ, ಮುದ್ದಪ್ಪ ಸಹೋದರರಿಂದ ಕಾರ್ಯಕರ್ತರಿಗೆ ಔತಣಕೂಟ ಆಯೋಜನೆ ಕುಶಾಲನಗರ: ಕುಶಾಲನಗರ ಕೂಡಿಗೆಯಲ್ಲಿ ಮೇ 12 ರಂದು ನಡೆದ ಮುತ್ತಪ್ಪ ಹಾಗೂ ಮುದ್ದಪ್ಪ ಅಭಿಮಾನೋತ್ಸವ ಔತಣಕೂಟ ಹಲವು ಆಯಾಮಗಳಲ್ಲಿ ಚರ್ಚೆಗೊಳಪಟ್ಟಿದೆ. ಚುನಾವಣೆಯ ಬಳಿಕ ತಮ್ಮ ಬೆಂಬಲಿಗರಿಗಾಗಿ ನಾಪಂಡ ಸಹೋದರರು ಔತಣಕೂಟ ಆಯೋಜಿಸಿದ್ದರು. 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಬಲಿಗರು ಸಹೋದರರಿಗೆ ಅಭಿನಂದನೆ ಸಲ್ಲಿಸುವ ಮೂಲಕ ನಾವಿದ್ದೇವೆ ನಿಮ್ಮೊಂದಿಗೆ ಎಂಬ ಸಂದೇಶವನ್ನು ರವಾನಿಸುವಂತಿತ್ತು. ಇದೆಲ್ಲದರ ಮದ್ಯೆ ನಾಪಂಡ ಮುತ್ತಪ್ಪ ಅವರಿಗೆ ಸರಿಯಾದ ಸ್ಥಾನಮಾನ ನೀಡದೆ ಇರುವುದಕ್ಕೆ ಈ ಬೆಂಬಲಿಗರ ಸಭೆ ಎಂಬ ಬಲವಾದ ಮಾತುಗಳು ಕೇಳಿ ಬಂದಿವೆ. ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ನಾಪಂಡ ಮುತ್ತಪ್ಪ ಅವರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆಯೇ ಎಂಬ ಅಸಮಾಧಾನ ಕೂಡ ಈಗ ಮುತ್ತಪ್ಪ ಬೆಂಬಲಿಗರಿಂದ ವ್ಯಕ್ತವಾಗಿದೆ. 30 ವರ್ಷಗಳಿಂದ ತನ್ನದೇ ತಂಡ ಕಟ್ಟಿದ್ದ ನಾಪಂಡ ಸಹೋದರರು. ಕಳೆದ 30 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಾಪಂಡ ಸಹೋದರರು ಅದರಲ್ಲೂ…
ನಾಪೋಕ್ಲು ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ-ಮೂವರು ಆರೋಪಿಗಳ ಬಂಧನ ನಾಪೋಕ್ಲುವಿನಲ್ಲಿ ಪತ್ರಕರ್ತ ಝಕರಿಯ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ ಪತ್ರಕರ್ತ ಝಕರಿಯ ಅವರ ಮೇಲೆ ಸೋಮವಾರ ಸಂಜೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲುವಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಎಂಬುವರ ಪುತ್ರ ಸಿದ್ದೀಕ್(20), ಇರ್ಫಾನ್ ಪಾಶ ಎಂಬುವರ ಪುತ್ರ ರುಮಾನ್(21) ಮಹಮ್ಮದ್ ಪಿ.ಎಂ. ಎಂಬುವರ ಪುತ್ರ ನಾಫಿ(22) ಎಂಬುವರನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಧಿಸಿದತೆ ಆರೋಪಿಗಳು ಬಳಸಿದ್ದ ಒಂದು ಕಾರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಎಂಬುವರ ಹಿರಿಯ ಪುತ್ರ ಮಹಮ್ಮದ್ ಅಲಿ ತಲೆಮರೆಸಿಕೊಂಡಿದ್ದು,ಕೃತ್ಯಕ್ಕೆ ಬಳ್ಸಿದ್ದ ಮತ್ತೊಂದು ಗೂಡ್ಸ್ ವಾಹನ ಮತ್ತು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಸೋಮವಾರ ಆರೋಪಿ ರುಮಾನ್ ಎಂಬಾತನನ್ನು ಆಟೋ ಬಾಡಿಗೆ ಮಾಡುವ ನೆಪದಲ್ಲಿ…
ಉಪ ಚುನಾವಣೆ ಯಲ್ಲಿ ಗೆಲುವು ಕೊಡಗು ಕಾಂಗ್ರೆಸ್ ನಿಂದ ವಿಜಯೋತ್ಸವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರ ನೇತೃದಲ್ಲಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ ನವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನತೆ ಒಪ್ಪಿದ್ದು ಇದಕ್ಕೆ ಪೂರಕವಾಗಿ ಎರಡೂ ಕ್ಷೇತ್ರದಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದೆ.ನೆರೆಯ ಕೇರಳದಲ್ಲಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿದ್ದು ಸಂತಸ ತಂದಿದೆ ಎಂದು ಹೇಳಿದರು. ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ,ನಗರ ಸಭಾ ಸದಸ್ಯರುಗಳಾದ ಮಂಡಿರ ಸದಾ ಮುದ್ದಪ್ಪ,ಜಿ.ಸಿ.ಜಗದೀಶ್,…
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ: ಗಣ್ಯರ ಅಭಿಮತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರ ಉಪಸ್ಥಿತಿಯಲ್ಲಿ ಮತ್ತು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮತ್ತು ಜನರ ಪಾಲ್ಗೊಳ್ಳುವಿಕೆ ಕುರಿತು ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಜನಪ್ರತಿನಿಧಿಗಳ ಜೊತೆಗೆ ಜನರ ಸಹಭಾಗಿತ್ವವೂ ಪ್ರಮುಖವಾಗಿದೆ ಎಂದರು. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಯೋಜನೆ ರೂಪಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ಆ ದಿಸೆಯಲ್ಲಿ ಎಲ್ಲರ ಜೊತೆ ಚರ್ಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು. ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರು ಮಾತನಾಡಿ ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ಧಿ…
ಗೋಣಿಕೊಪ್ಪ ಅಪರಿಚಿತ ವ್ಯಕ್ತಿ 12 ಅಡಿ ಕಟ್ಟಡದಿಂದ ಜಿಗಿದು ಸಾವು ಗೋಣಿಕೊಪ್ಪ ಸಮೀಪದ K.C ಮುದ್ದಣ ಮಳಿಗೆ ಮುಂಭಾಗ ಇರುವ 12 ಅಡಿ ಕಟ್ಟಡ ಎತ್ತರದಿಂದ ಜಿಗಿದು ಅಪರಿಚಿತ ವ್ಯಕ್ತಿ ಸಾವು ನೊವೀನ ನಡುವೆ ಒದ್ದಾಡುತ್ತಿದ್ದು ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಮಾಹಿತಿ ತಿಳಿದವರು ಗೋಣಿಕೊಪ್ಪ ಪೋಲೀಸ್ ಠಾಣೆಗೆ ಸಂಪರ್ಕಿಸಿ – 9845761703 9480804957
