Author: Kodagu-admin

ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವು ತಿತಿಮತಿ ಬಳಿಯ ಕೋಣನಕಟ್ಟೆಯಲ್ಲಿ ಕಾಫಿ ತೋಟ ವೀಕ್ಷಿಸಲು ಹೋಗಿದ್ದಾಗ ಘಟನೆ. ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ದುರ್ಮರಣ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಏಕಾಏಕಿ ದಾಳಿ ನಡೆಸಿದ ಕಾಡಾನೆ. ಆನೆ ದಾಳಿಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡ ಇಬ್ಬರು ಕಾಫಿ ತೋಟದ ಕಾರ್ಮಿಕರು. ಚಿಕಿತ್ಸೆಗಾಗಿ ಗೋಣಿಕೊಪ್ಪಲು ಲೋಪಾಮುದ್ರಾ ಆಸ್ಪತ್ರೆಗೆ ರವಾನೆ ವೇಳೆ ಸಂಧ್ಯಾ ಅವರು ಮೃತಪಟ್ಟಿದ್ದಾರೆ. ಗಾಯಾಳು ಕಾರ್ಮಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ; ಪ್ರಾಣಾಪಾಯದಿಂದ ಪಾರು

Read More

ನಾ೯ಟಕದ 25 ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಲೋಕಭವನದ ಗಾಜಿನ ಮನೆ ವೇದಿಕೆಯಲ್ಲಿ ನಡೆದ ಸರಳ, ಸಂಭ್ರಮದ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ತಾನು ಬಹಳ ಪ್ರೀತಿಸುವ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಸಂಜೆ 4.05 ಗಂಟೆಗೆ ಸರಿಯಾಗಿ ವೇದಿಕೆಯಲ್ಲಿ ಧೀರ್ಘ ದಂಡ ನಮಸ್ಕಾರ ಮಾಡಿ, ಪ್ರಮಾಣ ವಚನ ಸ್ವೀಕರಿಸಿದ ಶಿವಕುಮಾರ್ ರಾಜ್ಯ ಪಾಲ ಗೆಹ್ಲೋಟ್ ಅವರಿಂದ ಪ್ರತಿಜ್ಞಾ ವಿಧಿ ಬೋಧನೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾಜು೯ನ ಖಗೆ೯, ರಣದೀಪ್ ಸುಜಿ೯ವಾಲ, ಕೇರಳಂ ಸಿಎಂ ವಿ.ಡಿ. ಸತೀಶ್, ಕೆ.ಸಿ. ವೇಣುಗೋಪಾಲ್, ನಿಕಟಪೂವ೯ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪ್ರಮುಖರು, ವಿವಿಧ ಧರ್ಮ ಗುರುಗಳು, ಸಿನಿ ತಾರೆಯರು ಬಾಗಿ. ಕಾಂಗ್ರೆಸ್ ಕಾಯಕತ೯ರ ಙಷೋ೯ದ್ಘಾರದ ನಡುವೇ ಮುಖ್ಯಮಂತ್ರಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕಾರ. ಕೊಡಗಿನ ಶಾಸಕಧ್ವಯರಾದ ಎ. ಎಸ್ ಪೊನ್ನಣ್ಣ ಮತ್ತು ಡಾ. ಮಂಥರ್ ಗೌಡ ಅವರಿಂದ ನೂತನ ಮುಖ್ಯಮಂತ್ರಿ ಗೆ ಅಭಿನಂದನೆ ಸಲ್ಲಿಕೆ. ಕೊಡಗಿನಲ್ಲಿ ಎಲ್ ಇ ಡಿ ಪರದೆಯ ಮೂಲಕ ಡಿ.ಕೆ.ಶಿವಕುಮಾರ್…

Read More

ಆಸ್ತಿ ವಿವಾದವೇ ಚೂರಿ ಇರಿತಕ್ಕೆ ಕಾರಣವಾಯಿತೇ….? ಮಡಿಕೇರಿ ಜೈಲಿನಲ್ಲಿ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಮೈಸೂರಿನ ಆಸ್ಪತ್ರೆಯಲ್ಲಿ ಸಾವು…. ಟಿ ಶೆಟ್ಟಿಗೇರಿ ಗ್ರಾಮದ ನಿವಾಸಿ ಹೇಮಂತ್ ತನ್ನ ಬಂಧುವಿನಿಂದಲೇ ಕೊಲೆಯಾದ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಜೈಲಿನಲ್ಲಿ ಚೂರಿ ಇರಿತಕ್ಕೆ ಒಳಗಾದ ಟಿ ಶೆಟಿಗೇರಿ ಗ್ರಾಮದ ನಿವಾಸಿ ಹೇಮಂತ್ (, 26) ಎಂಬಂತ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರು ಮೊನ್ನೆ ಜೈಲಿನಲ್ಲಿ ಹೇಮಂತ್ ನಿಗೆ ಚೂರಿ ಇರಿದವನು ಆತನ ಸಂಬಂಧಿ, ಕೊಲೆಯಾದ ಹೇಮಂತನ ತಾತನ ತಂಗಿ ಮಗ ರಾಜೇಶ್ ನೆ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಜಾಗದ ವಿವಾದ ಏರ್ಪಟ್ಟು ಮನೆಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧಿಸಿದಂತೆ, ಹಾಗೆ ಜೀಪು ಮೂಲಕ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಜೇಶನ ಸಹೋದರ ಗಣೇಶನು ಕೂಡ ಜೈಲು ವಾಸ ಅನುಭವಿಸಿ ಹೊರಬಂದಿದ್ದಾನೆ . ಕಳೆದ ಎರಡು ವರ್ಷಗಳ ಹಿಂದೆ ತನ್ನ…

Read More

ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ ಸಂಸದ ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸ್ಪಷ್ಟೀಕರಣವು ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ನಂತರ ಹೊರಬಂದಿದ್ದು, ಈ ಸಂದರ್ಭದಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಲಾಯಿತು. ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿರುವ ಕೆಲವು ವರದಿಗಳು ಮತ್ತು ಚರ್ಚೆಗಳು ಕೊಡಗಿನ ಮೂಲಕ ರೈಲು ಮಾರ್ಗ ಹಾದುಹೋಗುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರ ಒಂದು ವಲಯದಲ್ಲಿ ಆತಂಕವನ್ನು ಉಂಟುಮಾಡಿವೆ ಎಂದು ಯದುವೀರ್ ತಿಳಿಸಿದ್ದಾರೆ. ಆದರೆ, ರೈಲ್ವೆ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ಇಂತಹ ಯಾವುದೇ ಪ್ರಸ್ತಾವನೆ ಪ್ರಸ್ತುತ ಸಚಿವಾಲಯದ…

Read More

KODAGU NEWS BRAKING ಮಡಿಕೇರಿ: ಮಡಿಕೇರಿ ಕಾರಾಗೃಹದಲ್ಲಿ ಚೂರಿ ಇರಿತ ಪ್ರಕರಣ ಗಂಭೀರ ಸ್ವರೂಪದ ಗಾಯ ಮೈಸೂರು ಆಸ್ಪತ್ರೆಗೆ ದಾಖಲು ಮಡಿಕೇರಿ ಕಾರಾಗೃಹದಲ್ಲಿ ಚೂರಿ ಇರಿತ ಘಟನೆ ಸಂಭವಿಸಿದೆ. ಶ್ರೀಮಂಗಲ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ ಗಲಭೆ ಸಂಬಂಧ ಹೇಮಂತ್ ಎಂಬತಾ ವಿಚಾರಧೀನ ಕೈದಿ ಯಾಗಿ ಜೈಲು ಪಾಲಾಗಿದ್ದ. ಹೇಮಂತನ ಸ್ಥಿತಿ ಚಿಂತಜನಕವಾಗಿದ್ದು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಕಾರಾಗೃಹದಲ್ಲಿ ಶಸ್ತ್ರಗಳು ಕಂಡುಬಂದದ್ದು ಅಚ್ಚರಿಯ ಸಂಗತಿಯಾಗಿದೆ

Read More

ಮೂರ್ನಾಡುವಿನಲ್ಲಿ ಅರಮನೆಪಾಲೆ ಸಮಾಜದ ಮರಣ ಧನ ಸಹಾಯ ನಿಧಿಯ ಮಹಾಸಭೆ ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕರಾದ ಮಂದಣ್ಣ ಪಿ.ಕೆ.ಸಮುದಾಯ ಭಾoದವರು ಮರಣ ಹೊಂದಿದ ಸಮಯದಲ್ಲಿ ಸಮುದಾಯದ ಪ್ರತೀ ಸದಸ್ಯರಿಂದ ರೂಪಾಯಿ 25/ರಂತೆ ಸಂಗ್ರಹಿಸಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ತಲಾ ಹತ್ತು ಸಾವಿರದಂತೆ 2015 ನೇ ಇಸವಿಯಿಂದ ಇಲ್ಲಿಯವರೆಗೆ ಅರಮನೆಪಾಲೆ ಸಮಾಜದಿಂದ ವಿತರಿಸಲಾಗುತ್ತಿದ್ದು, ಇಲ್ಲಿಯವರೆಗೆ ಸುಮಾರು ಏಳು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳನ್ನು ವಿತರಿಸಲಾಗಿದ್ದು, ಇದು ಅರಮನೆಪಾಲೆ ಸಮಾಜದ ಅತ್ಯುನ್ನತ ಸೇವಾ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಸಮುದಾಯ ಬಾಂಧವರನ್ನು ರಕ್ಷಿಸುತ್ತಿದೆ. ಸಮಾಜದ ಅಧೀನದಲ್ಲಿ ಸುಮಾರು 32 ಗ್ರಾಮಗಳಿಗೆ ಸಂಬಂಧಿಸಿದಂತೆ ಒಂಬತ್ತು ಗ್ರಾಮಸಮಿತಿಗಳನ್ನು ರಚಿಸಿಕೊಂಡಿದ್ದು, ಪ್ರತೀ ಗ್ರಾಮ ಸಮಿತಿಗಳ ಅಭ್ಯುದಯಕ್ಕಾಗಿ ಸಮಾಜದ ಪರವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಮಾಜ ಭಾoದವರನ್ನು ಮುಖ್ಯವಾಹಿನಿಯಲ್ಲಿ ತರುವಲ್ಲಿ ಸತತ ಪ್ರಯತ್ನ ಗಳನ್ನು ಕೈ ಗೊಳ್ಳಲಾಗುತ್ತಿದೆ ಎಂದರು.. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ಕಕ್ಕಬ್ಬೆ ಸಮುದಾಯ ಭಾoದವರ ಅಭಿವೃದ್ಧಿಗಾಗಿ ಅರಮನೆಪಾಲೆ ಸಮಾಜದ ಮೂಲಕ ದುಡಿಯುತಿದ್ದು, ಸಮುದಾಯ ಬಾಂಧವರು ಸಮಾಜದ ಎಲ್ಲಾ…

Read More

ಗೋಣಿಕೊಪ್ಪ ನಿವಾಸಿ ಹಾಸನ ಲಾಡ್ಜ್ ನಲ್ಲಿ ನೇಣಿಗೆ ಶರಣು 4 ಪುಟಗಳ ಡೆತ್ ನೋಟ್ ಪತ್ತೆ ಕರ್ತಮಾಡ ತಿಮ್ಮಯ್ಯ (52) ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್ ಗೋಣಿಕೊಪ್ಪ ತೂಚಮಕೇರಿ ನಿವಾಸಿ ಕರ್ತಮಾಡ ತಿಮ್ಮಯ್ಯ ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ಘಟನೆ ಶನಿವಾರ ರಾತ್ರಿ ನಡೆದ ಘಟನೆ ಮೈಸೂರು ಜಿಲ್ಲೆ, ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿದ್ದ ತಿಮ್ಮಯ್ಯ ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದ ತಿಮ್ಮಯ್ಯ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ತಿಮ್ಮಯ್ಯ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದ ತಿಮ್ಮಯ್ಯ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Read More

ಮಂಥರ್ ಗೌಡ ಅವರಿಗೆ ದೆಹಲಿಗೆ ಕರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನಲೆ ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಂದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರಿಗೆ ತುತು೯ ಬುಲಾವ್ ಇಂದು ಸಂಜೆ ದೆಹಲಿಗೆ ತೆರಳಲಿರುವ ಮಂಥರ್ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಹೊಸಬ್ಬರಿಗೆ, ಯುವಕರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಹುಲ್ ಗಾಂಧಿ ಅಭಿಲಾಷೆ. ಈ ಹಿನ್ನಲೆಯಲ್ಲಿ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರಿಗೆ ಸಚಿವ ಸ್ಥಾನ ದೊರಕುವ ನಿರೀಕ್ಷೆ. ಡಿ.ಕೆ. ಶಿವಕುಮಾರ್ ಅವರ ನಿಕಟವತಿ೯ಯಾಗಿರುವ ಡಾ.ಮಂಥರ್ ಕುಟುಂಬ ಮಂಥರ್ ಗೌಡ ಅವರಿಗೆ ಸಚಿವ ಸ್ಥಾನ ದೊರಕಿದ್ದೇ ಆದಲ್ಲಿ ಕೊಡಗು, ಹಾಸನ, ವ್ಯಾಪ್ತಿಯಲ್ಲಿಯೂ ಕಾಂಗ್ರೆಸ್ ಪಕ್ಷ ಸಂಘಟನೆಗೆ ನೆರವಾಗುವ ವಿಶ್ವಾಸ ಕೊಡಗಿನಲ್ಲಿ ಜನಪ್ರಿಯರಾಗಿರುವ ಯುವ ಮತ್ತು ಕ್ರಿಯಾಶೀಲ ಶಾಸಕ ಡಾ.ಮಂಥರ್ ಗೌಡ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಬೆಂಬಲಿಗರಿಂದ ಒತ್ತಾಯ. ಕುತೂಹಲ ಮೂಡಿಸಿರುವ ಡಾ.ಮಂಥರ್ ದೆಹಲಿ ಭೇಟಿ.

Read More

ಅಮ್ಮತಿಯಲ್ಲಿ ಮೇ 30 ಹಾಗೂ 31ರಂದು ರಾಜ್ಯ ಮಟ್ಟದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ : ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿದ ಸಂಭ್ರಮ ಅಮ್ಮತಿ, ಮೇ 28 : ಅಮೃತ ಯುವ ಮೊಗೇರ ಸೇವಾ ಸಮಿತಿ ಇವರ ಸಹಭಾಗಿತ್ವದಲ್ಲಿ, ಶ್ರೀ ಕಲ್ಲುರ್ಟಿ ಮೊಗೇರ ಫುಟ್ಬಾಲ್ ಅಮ್ಮತಿ ವತಿಯಿಂದ ರಾಜ್ಯ ಮಟ್ಟದ *“ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ – 2026”* ಪಂದ್ಯಾವಳಿಯನ್ನು ಮೇ 30 ಹಾಗೂ 31ರಂದು ಅಮ್ಮತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಮೊಗೇರ ಸಮುದಾಯದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿರುವ ಈ ರಾಜ್ಯ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು 8 ಮಾಲೀಕತ್ವದ ತಂಡಗಳು ಭಾಗವಹಿಸಲಿದ್ದು, ಎರಡು ದಿನಗಳ ಕಾಲ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಕೊಡಗು ಸೇರಿದಂತೆ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದು, ಪ್ರತಿಯೊಂದು ಪಂದ್ಯವೂ ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ…

Read More

ಕರಿಕೆ ಅರಣ್ಯಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ. ಭಾಗಮಂಡಲ: ಕರಿಕೆ ಗ್ರಾಮದ ಮೇಲೆಡ್ಕ ಅರಣ್ಯದಲ್ಲಿ ಒಂದು ಅನಾಥ ಶವ ಪತ್ತೆಯಾಗಿದ್ದು ಕರಿಕೆ ವಲಯ ಅರಣ್ಯಾಧಿಕಾರಿಗಳು ಮಂಗಳವಾರ ಬೀಟು ಹೋಗುವ ಸಂದರ್ಭದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡಿದಾರೆ. ತಕ್ಷಣ ಕರಿಕೆ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿ ಕರಿಕೆ ಪೊಲೀಸ್ ಠಾಣಾಧಿಕಾರಿಗಳು ಮತ್ತು ಭಾಗಮಂಡಲ ಪೊಲೀಸ್ ಠಾಣಾಧಿಕಾರಿಗಳು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಶವವನ್ನು ಸರಕಾರಿ ಆಸ್ಪತ್ರೆಗೆ ಮರೋಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಯತ್ನ ನಡೆಸಿದ್ದು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶವ ನೇಣು ಬಿಗಿದಾ ಸ್ಥಿತಿಯಲ್ಲಿದ್ದು ಸ್ಥಳದಲ್ಲಿ ನೀಲಿ ಬಣ್ಣದ ಶರ್ಟ್, ಕಾವಿ ಬಣ್ಣದ ಪಂಚೆಯಲ್ಲಿ ನೇಣು ಬಿಗಿದ ಶವವು ಕಂಡು ಬಂದಿದೆ. ಮಾಹಿತಿ ಗಿರೀಶ್ ಕರಿಕೆ

Read More