- ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
Author: Kodagu-admin
ಚೆಯ್ಯಂಡಾಣೆಯಲ್ಲಿ ಗಾಳಿ ಮಳೆಗೆ ಕುಸಿದು ಬಿದ್ದ ಮನೆಯ ತಡೆಗೋಡೆ -ಮೊಬೈಲ್ ಟವರ್ ಸೆಟ್ ಅಪ್ ರೂಮ್ ಗೆ ಹಾನಿ ನಾಪೋಕ್ಲು :ಚೆಯ್ಯಂಡಾಣೆಯಲ್ಲಿ ಸುರಿದ ಗಾಳಿ ಮಳೆಗೆ ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದಲ್ಲಿರುವ ಮನೆಯ ಬೃಹತ್ ತಡೆಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಚೆಯ್ಯಂಡಾಣೆಯ ಬಿ.ಆರ್. ಸುರೇಶ್ ಎಂಬುವವರ ಮನೆಯ ಬೃಹತ್ ತಡೆಗೋಡೆ ಗಾಳಿ ಮಳೆಗೆ ಕುಸಿದು ಬಿದ್ದಿದೆ.ಇದರ ಮಣ್ಣು ಸಮೀಪದಲ್ಲೇ ಇದ್ದ ಮೊಬೈಲ್ ಟವರ್ ನ ಸೆಟ್ಆಪ್ ರೂಮ್ ಗೆ ಅಪ್ಪಳಿಸಿ ನೆಟ್ವರ್ಕ್ ಸಮಸ್ಯೆಉಂಟಾಗಿ ಜನರು ಪರದಾಡುವಂತಾಯಿತು.
ಸಿದ್ದಾಪುರ : ಇಂದು ಬೆಳ್ಳಗ್ಗೆಯಿಂದ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾಡಾನೆಗಳನ್ನು ಅರಣ್ಯಕಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಗಳು ಇಲಾಖೆ ಸಿಬ್ಬಂದಿಗಳ ಮೇಲೆಯೇ ದಾಳಿಗೆ ಮುಂದಾಗಿದ್ದ ಪ್ರಸಂಗ ಕೂಡ ನಡೆದಿದೆ. ಪಳ್ಳಕೆರೆ ವ್ಯಾಪ್ತಿಯಿಂದ ಗುಹ್ಯ ಶಾಲೆ ವರೆಗೂ ತಲುಪಿದ್ದ ಕಾಡಾನೆ ಹಿಂಡು ಕತ್ತಲಾಗುತ್ತಿದ್ದಂತೆ ಮತ್ತದೇ ವ್ಯಾಪ್ತಿಗೆ ಹಿಂದಿರುಗಿದ್ದು ಗುಹ್ಯ ದೇವಾಲಯ ಸಮೀಪದ ದೇವರಕಾಡುವಿನಲ್ಲಿ ಬೀಡುಬಿಟ್ಟಿವೆ ಎನ್ನಲಾಗಿದೆ. ಆದುದ್ದರಿಂದ ಗುಹ್ಯ, ಪಳ್ಳಕೆರೆ, ಕಕ್ಕಟಕಾಡು ಸುತ್ತಮುತ್ತಲ ಪ್ರದೇಶದ ಜನ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮನವಿ ಮಾಡಿದ್ದು , ನಾಳೆ ಕಾರ್ಯಾಚರಣೆ ಮುಂದುವರೆಸುವುದೆಂದು ಮಾಹಿತಿ ನೀಡಲಾಗಿದೆ.
ಮತ್ತೆ ಅದೇ ವ್ಯಾಪ್ತಿಗೆ ಹಿಂದಿರುಗಿದ ಕಾಡಾನೆ ಹಿಂಡು ವ್ಯರ್ಥವಾದ ಕಾರ್ಯಚರಣೆ ಸಿದ್ದಾಪುರ : ಇಂದು ಬೆಳ್ಳಗ್ಗೆಯಿಂದ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾಡಾನೆಗಳನ್ನು ಅರಣ್ಯಕಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಗಳು ಇಲಾಖೆ ಸಿಬ್ಬಂದಿಗಳ ಮೇಲೆಯೇ ದಾಳಿಗೆ ಮುಂದಾಗಿದ್ದ ಪ್ರಸಂಗ ಕೂಡ ನಡೆದಿದೆ. ಪಳ್ಳಕೆರೆ ವ್ಯಾಪ್ತಿಯಿಂದ ಗುಹ್ಯ ಶಾಲೆ ವರೆಗೂ ತಲುಪಿದ್ದ ಕಾಡಾನೆ ಹಿಂಡು ಕತ್ತಲಾಗುತ್ತಿದ್ದಂತೆ ಮತ್ತದೇ ವ್ಯಾಪ್ತಿಗೆ ಹಿಂದಿರುಗಿದ್ದು ಗುಹ್ಯ ದೇವಾಲಯ ಸಮೀಪದ ದೇವರಕಾಡುವಿನಲ್ಲಿ ಬೀಡುಬಿಟ್ಟಿವೆ ಎನ್ನಲಾಗಿದೆ. ಆದುದ್ದರಿಂದ ಗುಹ್ಯ, ಪಳ್ಳಕೆರೆ, ಕಕ್ಕಟಕಾಡು ಸುತ್ತಮುತ್ತಲ ಪ್ರದೇಶದ ಜನ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮನವಿ ಮಾಡಿದ್ದು , ನಾಳೆ ಕಾರ್ಯಾಚರಣೆ ಮುಂದುವರೆಸುವುದೆಂದು ಮಾಹಿತಿ ನೀಡಲಾಗಿದೆ.
ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊದವಾಡ-ಕೇಮಾಡು ರಸ್ತೆ ಇಂದಿಗೂ ದುರಸ್ತಿಯಾಗದೆ ಅಧ್ವಾನವಾಗಿದೆ. ಮೂರು ವರ್ಷಗಳ ಹಿಂದೆಯೇ ವೇದಿಕೆಯೊಂದರಲ್ಲಿ ನಮ್ಮ ಶಾಸಕರು (MLA) ಈ ರಸ್ತೆಯನ್ನು ಶೀಘ್ರದಲ್ಲೇ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ಮೂರು ವರ್ಷ ಕಳೆದರೂ ಇದುವರೆಗೆ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಶಸ್ತಿ ವಿಜೇತ ಪಂಚಾಯತ್ ವ್ಯಾಪ್ತಿಯಲ್ಲೇ ಇಂತಹ ದುಃಸ್ಥಿತಿ ಇರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಕೊಡಗಿನ ಕ್ಷಣ-ಕ್ಷಣ ಸುದ್ದಿಗಾಗಿ ಕೊಡಗು ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ*
ಕುಶಾಲನಗರ: ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈಶಾನ್ಯ ಭಾರತದ ಇಬ್ಬರು ಯುವಕರು ಕುಶಾಲನಗರ ಗಡಿಭಾಗದ ಕಾವೇರಿ ಸೇತುವೆ ಬಳಿ ಜಲ ಸಮಾಧಿಯಾದ ಘಟನೆ ಬುಧವಾರ ಸಂಜೆ 6 ಗಂಟೆ ವೇಳೆ ನಡೆದಿದೆ. ನಾಗಾಲ್ಯಾಂಡ್ ರಾಜ್ಯದ ಬಸೊಸೊ ಕುಚಂಗ್ (23) ಮತ್ತು ಯಾಂಕಂಗ್ (27) ಮೃತ ಯುವಕರು ಎಂದು ತಿಳಿದು ಬಂದಿದೆ. ಕತ್ತಲೆಯಾದ ಹಿನ್ನೆಲೆಯಲ್ಲಿ ಮೃತ ದೇಹಗಳ ಪತ್ತೆಕಾರ್ಯ ಸಾಧ್ಯವಾಗಿಲ್ಲ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳ ಕಾರ್ಯಾಚರಣೆ ನಾಳೆಯೂ ಮುಂದುವರೆಯಲಿದೆ.
ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆಗಳ ಹಾವಳಿ -ಆನೆ ಕಾರ್ಯಾಚರಣೆಗೆ ಬಂದ ತಂಡವನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ನಾಪೋಕ್ಲು :ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಬೆಳೆಗಾರರು ಕಂಗಲಾಗಿದ್ದು ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿದ್ದು ಕಾಡಾನೆ ಹಾವಳಿಯಿಂದ ಗ್ರಾಮದಲ್ಲಿ ಜನರು ಸಂಚರಿಸಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ. ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು ಕೊಳ್ಳುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಘಟನೆ ಚೆಯ್ಯಂಡಾಣೆಯಲ್ಲಿ ನಡೆದಿದೆ. ಚೆಯ್ಯಂಡಾಣೆಯಲ್ಲಿ ನಿರಂತರ ಕಾಡಾನೆ ಹಾವಳಿ ಮರುಕುಳಿಸಿದ್ದು ಕೊಕೇರಿಗ್ರಾಮದಲ್ಲಿ ಇತ್ತೀಚಿಗೆ ಮಾಜಿ ಸೈನಿಕರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು,ಘಟನೆ ಮಾಸುವ ಮುನ್ನವೇ ದಿನನಿತ್ಯ ಬೆಳಿಗ್ಗೆ, ಮಧ್ಯಾಹ್ನ,ಸಂಜೆ ಎನ್ನದೆ ರಸ್ತೆಯಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕೃಷಿ ಕಾರ್ಮಿಕರು ರಸ್ತೆಯಲ್ಲಿ ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ…
ಪ್ರಯಾಣಿಕರಿಂದ ಚಿನ್ನದರೋಡೆ ಯತ್ನ ಕೊಡಗು ಜಿಲ್ಲೆಯ ಯುವಕ ಸೇರಿ ೧೩ ಮಂದಿ ಬಂಧನ ವೀರಾಜಪೇಟೆ : ಸಮಾಜ ಘಾತುಕ ಕೃತ್ಯ ಮಾಡುವ ವೇಳೆಯಲ್ಲಿ ಜಿಲ್ಲೆಯ ಯುವಕನೊಂದಿಗೆ ೧೩ ಮಂದಿ ಬಂಧನವಾದ ಘಟನೆ ಕೋಯಿಕೋಡು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಡೆದಿದೆ. ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಕೇಬಲ್ ಕಾರ್ಮಿಕನಾಗಿದ್ದ ಅಭಿ ಅಲೀಯಸ್ ಅಭೀಲಾಶ್ (೩೧) ಸೇರಿದಂತೆ ಕಣ್ಣೂರು ಮತ್ತು ಕೋಯಿಕೋಡ್ ಜಿಲ್ಲೆಯ ೧೦ ಮಂದಿ ಮಲಪುರಂಜಿಲ್ಲೆಯ ೨ ಮಂದಿ ಬಂಧನವಾಗಿದ್ದಾರೆ. ಬಂಧಿತರಲ್ಲಿ ಕಣ್ಣೂರು ನಿವಾಸಿ ಕೆ.ಪಿ. ಜುನೈದ್ (೨೭), ಕಾಕಯಂಗಾಡ್ ಮುಕ್ಕಕುನ್ನು ನಿವಾಸಿಗಳಾದ ವಿ.ಶರತ್ (೩೫), ಕೆ.ಕೆ. ಕನಕರಾಜ್ (೨೮), ಕೆ.ಕೆ. ಅಕ್ಷಯ್ (೨೬), ಕೆ.ಧನಿಶ್ (೨೯), ತಿಲ್ಲಂಗೇರಿ ಮೂಲದ ಟಿ. ರಂಜಿತ್ (೪೧), ಚಕ್ಕರಕಲ್ಲ್ ನಿವಾಸಿ ತಾಜುದ್ದೀನ್ (೩೨), ವಾರಂ ಮೂಲದ ಶರೊಣ್ (೨೩), ಕೂತುಪರಂಬು ಕೆ.ಸ್ವರಲಾಲ್ (೩೮), ತಿರೂರ್ ಪುದಿಯಕಡಪುರಂ ನಿವಾಸಿ ರೀಯಸ್ (೨೯) ಬೇಪೂರ್ ನಿವಾಸಿ ಪಿ.ಸುಜೀತ್ (೨೬) ಪಿ ವಾಲ್ ಸಂಜೀತ್ (೨೬), ಮತ್ತು…
ಕೊಡಗು ಜಿಲ್ಲೆಯ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಆರ್ಎಫ್ ಅಡಿಯಲ್ಲಿ ₹22 ಕೋಟಿ ಮಂಜೂರು: ಸಂಸದ ಶ್ರೀ ಯದುವೀರ್ ಒಡೆಯರ್ ಮೈಸೂರು/ಮಡಿಕೇರಿ, ಜೂನ್ 10: ಕೊಡಗು ಜಿಲ್ಲೆಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRF) ಅಡಿಯಲ್ಲಿ ಜಿಲ್ಲೆಯ ಮೂರು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹22 ಕೋಟಿ ಮಂಜೂರು ಮಾಡಿದೆ. ಈ ಮಂಜೂರಾತಿಯನ್ನು ಸ್ವಾಗತಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗಿನ ಬಹುಕಾಲದ ರಸ್ತೆ ಅಭಿವೃದ್ಧಿ ಅಗತ್ಯಗಳಿಗೆ ಸ್ಪಂದಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಂಜೂರಾಗಿರುವ ಕಾಮಗಾರಿಗಳು 1. ಕೊಡ್ಲಿಪೇಟೆ–ಹೆಬ್ಬಾಲೆ ರಸ್ತೆ (ಎಸ್ಎಚ್-244) ಕಿ.ಮೀ. 16.70 ರಿಂದ 30.00ರವರೆಗೆ, ಗೋಪಾಲಪುರ–ಬಾಣಾವರ ಹೆಬ್ಬಾಲೆ ಮಾರ್ಗವಾಗಿ ಮುಳ್ಳೂರು ಹಾಗೂ ಮಳಂಬಿ (ಆಯ್ದ…
ಕೊಡಗು ಜಿಲ್ಲೆಯ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಆರ್ಎಫ್ ಅಡಿಯಲ್ಲಿ ₹22 ಕೋಟಿ ಮಂಜೂರು: ಸಂಸದ ಯದುವೀರ್ ಒಡೆಯರ್ ಕೊಡಗು ಜಿಲ್ಲೆಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRF) ಅಡಿಯಲ್ಲಿ ಜಿಲ್ಲೆಯ ಮೂರು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹22 ಕೋಟಿ ಮಂಜೂರು ಮಾಡಿದೆ. ಈ ಮಂಜೂರಾತಿಯನ್ನು ಸ್ವಾಗತಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗಿನ ಬಹುಕಾಲದ ರಸ್ತೆ ಅಭಿವೃದ್ಧಿ ಅಗತ್ಯಗಳಿಗೆ ಸ್ಪಂದಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಂಜೂರಾಗಿರುವ ಕಾಮಗಾರಿಗಳು 1. ಕೊಡ್ಲಿಪೇಟೆ–ಹೆಬ್ಬಾಲೆ ರಸ್ತೆ (ಎಸ್ಎಚ್-244) ಕಿ.ಮೀ. 16.70 ರಿಂದ 30.00ರವರೆಗೆ, ಗೋಪಾಲಪುರ–ಬಾಣಾವರ ಹೆಬ್ಬಾಲೆ ಮಾರ್ಗವಾಗಿ ಮುಳ್ಳೂರು ಹಾಗೂ ಮಳಂಬಿ (ಆಯ್ದ ಭಾಗಗಳು) ಸಂಪರ್ಕಿಸುವ…
ಕುಶಾಲನಗರ ಜೂ. 9: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ರೂ. 26 ಲಕ್ಷ ವೆಚ್ಚದಲ್ಲಿ ಜನತಾ ಕಾಲೋನಿ, ವಿನಾಯಕ ಹಾಗೂ ಮಾರುತಿ ಬಡಾವಣೆಗಳಲ್ಲಿನ ರಸ್ತೆ ಕಾಮಗಾರಿ, ಇದಲ್ಲದೆ ಕೂಡುಮಗಳೂರು ಗ್ರಾ.ಪಂ.ನ ನವಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿಗೂ ಅಧಿಕ ಅನುದಾನ ಒದಗಿಸಲಾಗಿದ್ದು , ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ಜಿಲ್ಲೆಗೆ ಸಾಕಷ್ಟು ಅನುದಾನ ಒದಗಿಸಿದ್ದು , ಅವರ ಸಹಕಾರ ನಮಗೆ ಸದಾ ಇದ್ದು, ಮುಂದೆಯೂ ನಮಗೆ ಅಗತ್ಯವಿರುವ ಅನುದಾನ ಒದಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು. ಆನೆ ಮಾನವ ಸಂಘರ್ಷ ನಿಯಂತ್ರಣ ಸಂಬಂಧ ಎಲ್ಲಾ ರೀತಿಯ ಪರಿಣಾಮಕಾರಿ ಯೋಜನೆಗಳನ್ನು ಈಗಾಗಲೆ ಕಾರ್ಯರೂಪಕ್ಕೆ ತರಲಾಗಿದೆಯಾದರೂ ಕಾಡಾನೆಗಳು ಬೇರೆ ಬೇರೆ ಮಾರ್ಗದ ಮೂಲಕ…
