Author: Kodagu-admin

ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿ ಸಭೆ ವಿಪತ್ತು ನಿರ್ವಹಣೆ ಉದಾಸೀನ ಮಾಡದೆ ಅಗತ್ಯ ಮುನ್ನೆಚ್ಚರಕ್ಕೆ ಡಾ.ಮಂತರ್ ಗೌಡ ಸೂಚನೆ ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕುಡಿಯುವ ನೀರನ್ನು ಆಗಾಗ ಪರೀಕ್ಷೆ ಮಾಡಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನ ಹರಿಸಬೇಕು ಎಂದು ಶಾಸಕರಾದ ಡಾ|| ಮಂತರ್ ಗೌಡ ಅವರು ಸಲಹೆ ಮಾಡಿದ್ದಾರೆ. ನಗರದ ತಹಶೀಲ್ದಾರ್ ಅವರ ಕಚೇರಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ‘ಕಾರ್ಯಪಡೆ ಸಮಿತಿ ಸಭೆ’ ನಡೆಸಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕು. ತೆಂಗಿನ ಚಿಪ್ಪು, ಟೈರು ಮತ್ತಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತಾಗಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕು. ರಸ್ತೆ ಬದಿ ಚರಂಡಿಯಲ್ಲಿ…

Read More

ಸಾಂದರ್ಭಿಕ ಚಿತ್ರ☝️ ಕೊಡವ ಸಮುದಾಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ಉಮ್ಮತ್ತಾಟ್ – ದಿ ರಿದಮ್ ಆಫ್ ಕೊಡವ’ (Ummathat – The Rhythm of Kodava) ಸಾಕ್ಷ್ಯಚಿತ್ರವು, 2026ರ ಜೂನ್ 15 ರಿಂದ ಜೂನ್ 21 ರವರೆಗೆ ನಡೆಯಲಿರುವ ಪ್ರತಿಷ್ಠಿತ 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (MIFF) ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪ್ರಕಾಶ್ ಕಾರಿಯಪ್ಪ ಕೆ. ಅವರು ಇದನ್ನು ನಿರ್ದೇಶಿಸಿದ್ದು, ಅವರ ಪತ್ನಿ ಕೆ. ಯಶೋದಾ ಪ್ರಕಾಶ್ ಅವರು ತಮ್ಮ ‘ಸ್ವಸ್ತಿಕ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ. ಕೊಡವ ಸಮುದಾಯದ ಸಾಂಪ್ರದಾಯಿಕ ನೃತ್ಯ ಒಂದು ಪ್ರಕಾರವಾದ ‘ಉಮ್ಮತ್ತಾಟ್’ ಅನ್ನು ಸಂರಕ್ಷಿಸುವ ಉದ್ದೇಶದಿಂದ, ಕೇವಲ ಒಂದು ಆರ್ಕೈವಲ್ (ದಾಖಲೀಕರಣ) ಯೋಜನೆಯಾಗಿ ಇದು ಆರಂಭವಾಗಿತ್ತು. ​ಕೊಡವ ಸಂಸ್ಕೃತಿಯ ಆಚಾರ ವಿಚಾರಗಳನ್ನು ದಾಖಲಿಸುವ ಸಣ್ಣ ಪ್ರಯತ್ನವಾಗಿ ಪ್ರಾರಂಭವಾದ ಈ ಯೋಜನೆ, ಕ್ರಮೇಣ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುವ ಮಟ್ಟಿಗೆ ಬೆಳೆದು ನಿಂತಿತು. ಗೋವಾದಲ್ಲಿ ನಡೆದ…

Read More

ಮಡಿಕೇರಿ, ಜೂನ್ 8: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಮುಗ್ಧ ಮನಸ್ಸುಗಳಲ್ಲಿ ಭಾರತೀಯ ಸಂಸ್ಕಾರ, ಉತ್ತಮ ನೈತಿಕ ಮೌಲ್ಯಗಳು ಹಾಗೂ ದೇಶಭಕ್ತಿಯನ್ನು ಬಿತ್ತುವ ಸದುದ್ದೇಶದಿಂದ ಮಡಿಕೇರಿ ನಗರದ ಸಮರ್ಥ ವಸತಿಯಲ್ಲಿ ನೂತನ ‘ಬೃಂದಾವನ ಬಾಲಗೋಕುಲ’ ಶಾಖೆಯನ್ನು ಯಶಸ್ವಿಯಾಗಿ ಉದ್ಘಾಟಿಸಲಾಯಿತು. ಕಳೆದ ಶನಿವಾರ (ಜೂನ್ 6) ನಡೆದ ಉದ್ಘಾಟನಾ ಸಮಾರಂಭಕ್ಕೆ ಪ್ರಮುಖರಾದ ಶ್ರೀ ಮಂಜುನಾಥ್ ಜಿ ಅವರು ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಸಂಸ್ಕಾರ ಕೇಂದ್ರಗಳು ಇಂದಿನ ಅಗತ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ: ಸಮಾರಂಭದಲ್ಲಿ ಪುಟಾಣಿಗಳಿಂದ ಶ್ಲೋಕ ಮತ್ತು ಕಥಾ ಸಮಯದ ಕಾರ್ಯಕ್ರಮಗಳು ಜರುಗಿದವು. ಗೌರಿ ಅವರ ನಿತ್ಯ ಶ್ಲೋಕ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಶ್ರುತಿ ಅವರು ಏಕಲವ್ಯನ ಕಥೆಯನ್ನು ರೋಚಕವಾಗಿ ಪ್ರಸ್ತುತಪಡಿಸಿದರು. ಮೇಘ ಅವರು ಭಗವದ್ಗೀತೆ ಪಠಣ ಮಾಡಿದರು ಹಾಗೂ ಸುಜಾತ ಅವರ ನೇತೃತ್ವದಲ್ಲಿ ಹನುಮಾನ್ ಚಾಲೀಸ ಭಜನೆ ನಡೆಯಿತು. ದಿನೇಶಣ್ಣ ಅವರ ನೇತೃತ್ವದಲ್ಲಿ ಮಕ್ಕಳಿಗೆ ವಿವಿಧ ಸಾಂಪ್ರದಾಯಿಕ…

Read More

ಇನ್ನೆಷ್ಟು ಇನ್ನೆಷ್ಟು ಬಾರಿ ಅಗಗೆಯುತ್ತೀರಿ? ಕುಶಾಲನಗರದ ನಾಗರಿಕರ ಪ್ರಶ್ನೆಗೆ ಉತ್ತರಿಸುವವರಾರು? ವರದಿ: ಶ್ರೀಧರ್ ನಾರಾಯಣ್ ಕುಶಾಲನಗರ : ಕಳೆದ 12 ವರ್ಷಗಳಿಂದ ಸಾಗುತ್ತಿದೆ ಒಂದು ಮಹತ್ವದ ಶತಕೋಟಿ ಹತ್ತಿರದ ಕಾಮಗಾರಿ. ಕುಶಾಲನಗರ ಜನರ ಅನುಕೂಲಕ್ಕೆ , ಉಪಯೋಗಕ್ಕೆ ಬೇಕಾಗಿದ್ದ ಈ ಕಾಮಗಾರಿ ಜನರ ನೆಮ್ಮದಿ ಕಸಿದುಕೊಂಡಿದೆ. ಊರಿನ ಎಲ್ಲಾ ಬಡಾವಣೆಯ ರಸ್ತೆಗಳು, ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ಯಾವುದೂ ಬಗಿಯದೆ ಬಾಕಿಯಾಗಿಲ್ಲ ಎನ್ನುವುದು ಹಳೆಯ ವಿಚಾರ. ಕುಶಾಲನಗರದ ಹೃದಯ ಭಾಗವಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತದಲ್ಲಿ ಇಂದು ‘ಕೊಡಗು ನ್ಯೂಸ್’ ಕಣ್ಣಿಗೆ ಕಂಡಿದ್ದು ಸತತ ಮೂರು ಅಥವಾ ನಾಲ್ಕನೇ ಬಾರಿ ಒಂದೇ ಜಾಗದಲ್ಲಿ ಬಗೆಯುತ್ತಿರುವ ದೃಶ್ಯ. ಇದೇ ಜಾಗದಲ್ಲಿ ಕಳೆದ ಬಾರಿ ಶಾಸಕರು ಹೆದ್ದಾರಿ ಬಗೆದಿರುವುದನ್ನು ಕಂಡು ಸ್ಥಳಕ್ಕೆ ತೆರಳಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಸೂಚಿಸಿದ್ದರು. ಶೀಘ್ರದಲ್ಲೇ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆಯಿರುವುದರಿಂದ ಸಾರ್ವಜನಿಕರು ಕಾಮಗಾರಿ ಸಂಬಂಧ ಪಟ್ಟವರಿಗೆ ಹಿಡಿ ಶಾಪ ಹಾಕುತ್ತಿರುವುದು ಮಾಧ್ಯಮಕ್ಕೆ ಕಂಡು ಬಂತು.…

Read More

ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯ ಕಣ್ಣಾ ಮುಚ್ಚಾಲೆ ಕುಶಾಲನಗರ ಜೂ.6: ವಾರದ ಬಹುತೇಕ ದಿನಗಳಲ್ಲಿ ದಟ್ಟ ಕರಿಮೋಡ. ಆದರೆ ನಿರೀಕ್ಷಿತ ಮಳೆ ಶೂನ್ಯ . ಕುಶಾಲನಗರ ವ್ಯಾಪ್ತಿಯ ರೈತರಿಗೆ ಭ್ರಮನಿರಸನ. ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮಾರ್ಚ್ 1ರಿಂದ ಮೇ 31ರವರೆಗೆ ಶೇಕಡ 20% ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ‘ಎಲ್ ನಿನೊ’ ವಿದ್ಯಮಾನದಿಂದ ಉಷ್ಣಾಂಶ ಹೆಚ್ಚಿದ್ದು ವಾತಾವರಣದಲ್ಲಿ ತ್ವರಿತ ಏರಿಳಿತವಿದ್ದು ರೈತರು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಇಲಾಖೆ ತಿಳಿಸಿದೆ. ಈ ವಾತಾವರಣದ ವ್ಯತ್ಯಾಸ ಕಾಫಿ ಮತ್ತು ಸಾಂಬಾರು ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದೆಂದು ಅಂದಾಜಿಸಿದ್ದಾರೆ. ವರದಿ: ಶ್ರೀಧರ್ ನಾರಾಯಣ್, ಕುಶಾಲನಗರ

Read More

ಭಾರೀ ವಾಹನಗಳ ಸಂಚಾರ ನಿಷೇಧ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಿದ್ದು, ಮುಂದಿನ ಮುಂಗಾರು ಮಳೆಗಾಲದ ದಿನಗಳಲ್ಲಿ ನದಿಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಸಾರ್ವಜನಿಕರ ಸುರಕ್ಷತೆಯ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳ ರಕ್ಷಣೆಯ ಹಿತದೃಷ್ಟಿಯಿಂದ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣೆ ಮತ್ತು ಇತರೆ ಸರಕು ಸಾಗಾಣಿಕೆಯನ್ನು ಕೊಡಗು ಜಿಲ್ಲೆಯಾದ್ಯಂತ ಮಳೆಗಾಲ ಪ್ರಾರಂಭವಾದಾಗಿನಿಂದ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಭಂದಿಸುವ ಬಗ್ಗೆ ತೀರ್ಮಾನಿಸಲಾಗಿರುತ್ತದೆ. ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತದೆಯಲ್ಲದೆ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಭೂಕುಸಿತದಿಂದಾಗಿ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿರುತ್ತದೆ. ಆದ್ದರಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ರ ಕಲಂ 33, ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು…

Read More

ಕುಶಾಲನಗರದಲ್ಲಿ ‘ವಿಶ್ವ ಪರಿಸರ ದಿನ’ ಆಚರಣೆ ವರದಿ – ಶ್ರೀಧರ್ ನಾರಾಯಣ್ ಕುಶಾಲನಗರ. ಕುಶಾಲನಗರ : ಕುಶಾಲನಗರ ತಾಲೂಕು ಕಾನೂನು ಸೇವಾ ಸಮಿತಿಯಿಂದ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ಸಿವಿಲ್ ನ್ಯಾಯಾಧೀಶೆ ಚೈತ್ರ ಎಲ್. ರಿಂದ ಅರಣ್ಯ ಇಲಾಖೆಯ ನಾಟ ಸಂಗ್ರಹಾಲಯದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕುಶಾಲನಗರ ವಕೀಲರ ಸಂಘದ ಉಪಾಧ್ಯಕ್ಷ ಕೆ. ಎಸ್. ವೆಂಕಟರಮಣ ರಾವ್‌, ಕಾರ್ಯದರ್ಶಿ ಕೆ.ಬಿ. ಮೋಹನ್, ಮೋಹನ್ ಕುಮಾರ್, ಅರಣ್ಯ ವಲಯಾಧಿಕಾರಿ ರಕ್ಷಿತ್ ಆರ್.‌, ಮಂಜುನಾಥ್ ಚಿನ್ನಣ್ಣನವರ್, ಡಿ ಆ‌ರ್ ಎಫ್ ಒ ಜಗದೀಶ್, ವೆಂಕಟೇಶ್ ಸೇರಿದಂತೆ ನ್ಯಾಯಾಲಯದ, ಅರಣ್ಯ ಇಲಾಖೆ ಸಿಬ್ಬಂದಿಗಳು , ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಸಿವಿಲ್ ನ್ಯಾಯಾಧೀಶೆ ಚೈತ್ರ ಎಲ್., ವಕೀಲರ ಸಂಘದ ಉಪಾಧ್ಯಕ್ಷ ಕೆ. ಎಸ್. ವೆಂಕಟರಮಣ ರಾವ್‌, ಕಾರ್ಯದರ್ಶಿ ಕೆ.ಬಿ. ಮೋಹನ್, ಅರಣ್ಯ ವಲಯಾಧಿಕಾರಿ…

Read More

ವರದಿ: ಶ್ರೀಧರ್ ನಾರಾಯಣ್, ಕುಶಾಲನಗರ. ಕುಶಾಲನಗರ ಜೂ.6: ಕೊಡಗು ವೃತ್ತ ಮಡಿಕೇರಿ ವಿಭಾಗ ಕುಶಾಲನಗರ ವಲಯ ವ್ಯಾಪ್ತಿಗೆ ಒಳಪಡುವ ಆನೆಕಾಡು ಶಾಖೆಯ 7ನೇ ಹೊಸಕೋಟೆ ಗ್ರಾಮದ ತೊಂಡೂರು ಭಾಗದಲ್ಲಿ ಕೆ.ಟಿ. ಸಲಿಕುಮಾರ್ ರವರ ತೋಟದ ಕೆಳ ಭಾಗದ ಗೊಸರು ಇರುವ ತೋಡುವಿನಲ್ಲಿ ಗಂಡು ಕಾಡಾನೆಯೊಂದು ಮೃತಪಟ್ಟಿದೆ. ಆನೆಯು ಓಡುವ ಸಂದರ್ಭ ಗೊಸರಿನಿಂದ ಕೂಡಿದ್ದ ತೋಡಿನಲ್ಲಿ ಸಿಲುಕಿ ತೋಟಕ್ಕೆ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಗೆ ತಗುಲಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮುಂದಿನ ತನಿಖೆಗಾಗಿ ಆನೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಭಿಷೇಕ್ , ಕೊಡಗು ವೃತ್ತದ ಮುಖ್ಯ ಪಶುವೈದ್ಯಾಧಿಕಾರಿ ಮುಜೀಬುರ್ ರೆಹಮಾನ್ , ಕುಶಾಲನಗರದ ಪಶು ವೈಧ್ಯಾಧಿಕಾರಿಗಳಾದ ಸಂಜೀವ್ ಕುಮಾರ್ ಆರ್. ಶಿಂಧೆ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾ‌ರ್ ಎನ್.ಪಿ , ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್. ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ…

Read More

ಕೊಡಗಿನ ಕುವರಿಗೆ ರಾಷ್ಟ್ರಮಟ್ಟದ ಕಲಾರತ್ನ ಪ್ರಶಸ್ತಿ ಬೆಳಕು ಸಾಹಿತ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಬಳ್ಳಾರಿಯಲ್ಲಿ ನಡೆದ 124ನೇ ಗಡಿನಾಡು ಸಮ್ಮೇಳನ ಕಾರ್ಯಕ್ರಮದಲ್ಲಿ ಕುಶಾಲನಗರದ ಜ್ಞಾನಗಂಗಾ ವಸತಿ ಶಾಲೆಯ 9ನೇ ತರಗತಿ ಆರ್ಯ ಪಿ. ಎಸ್ ಭರತನಾಟ್ಯದಲ್ಲಿ ರಾಷ್ಟ್ರಮಟ್ಟದ ಕಲಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ಕೊಡಗು ಜಿಲ್ಲಾಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ಅಸಾಧಾರಣ ಸಾಧನೆಗೆ ನೀಡುವ ವಾರ್ಷಿಕ ಪ್ರಶಸ್ತಿಗೂ ಇವರು ಬಾಜನರಾಗಿದ್ದು ರೂ 10 ಸಾವಿರ ನಗದು ಕೂಡ ನೀಡಿ ಗೌರವಿಸಲಾಗಿದೆ. ಇವರು ಕೊಡಗು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುವ ಸುನೀಲ್ ಹಾಗೂ ಶ್ರುತಿ ದಂಪತಿಯ ಪುತ್ರಿ..

Read More

ತಿತಿಮತಿಯಲ್ಲಿ ಕಾಡಾನೆ ದಾಳಿ : ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ತಿತಿಮತಿ ಬಳಿಯ ಕೋಣನಕಟ್ಟೆಯಲ್ಲಿ ತಮ್ಮ ಕಾಫಿ ತೋಟ ವೀಕ್ಷಿಸಲು ಹೋಗಿದ್ದಾಗ, ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಎಂಬುವರ ಮೇಲೆ ಹಾಗೂ ಇತರ ನಾಲ್ಕು ಮಂದಿಯ ಮೇಲೆ ಕಾಡಾನೆ ಅಚಾನಕ್ ದಾಳಿ ನಡೆಸಿದೆ. ಆನೆ ದಾಳಿಗೆ ಒಳಗಾಗಿ ಗಾಯಗೊಂಡವರನ್ನು ಲೋಪಾಮುದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ, ಸಂಧ್ಯಾ ಅವರು ದಾಳಿಯ ತೀವ್ರತೆಯಿಂದ ಮೃತಪಟ್ಟರು. ಆಸ್ಪತ್ರೆಯಲ್ಲಿದ್ದ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಮಾನ್ಯ ಶಾಸಕರು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಆಲಿರ ರಶೀದ್, ಪ್ರಮುಖರು ಸೂರಜ್ ಹೊಸೂರು, ರಾಜು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More