Author: Kodagu-admin

ವಿರಾಜಪೇಟೆ: ಸಹಾರ ಫ್ರೆಂಡ್ಸ್ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿರಾಜಪೇಟೆಯಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು. ಕೊಡಗು ಜಿಲ್ಲಾ ಆಸ್ಪತ್ರೆ ರಕ್ಷಣಾ ಘಟಕದ ಸಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಎರಡನೇ ವರ್ಷದ ಈ ಬೃಹತ್ ರಕ್ತದಾನ ಶಿಬಿರ ಆಯೋಜನೆಗೊಂಡಿತ್ತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಪೊನ್ನಣ್ಣ , ರಕ್ತದಾನವೇ ಶ್ರೇಷ್ಠದಾನ ವಾಗಿದ್ದು ಇನ್ನೊಬ್ಬರ ಜೀವ ಉಳಿಸುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು. ರಕ್ತದಾನ ಮಹಾದಾನವಾಗಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಹಾಗೂ ಬಡ ಜನತೆಯ ಅವಶ್ಯಕತೆಗಳು ಪೂರೈಕೆಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ಡಾ. ಕರುಂಬಯ್ಯ ,ಸಹಾರ ಫ್ರೆಂಡ್ಸ್ ಸದಸ್ಯರು ಅಬ್ದುಲ್ ರೌಫ್, ಮೊಹಸಿನ್, ಮಹಮ್ಮದ್ ಖಾಜಾ, ಸಮಿಉಲ, ಇರ್ಷಾದ್, ಆರ್ಚಿಪ್, ಪ್ರಮುಖರಾದ ಸೂರಜ್ ಹೊಸುರು, ಮಹಾದೇವ, ಮಹಮ್ಮದ್ ನಯಾಜ್, ಶಶಿ, ಹಾಗೂ…

Read More

ಕುಶಾಲನಗರ ಕಾವೇರಿ ನದಿಯಲ್ಲಿ ಮುಳುಗಡೆಯಾಗಿದ್ದ ಇನ್ನೋರ್ವನ ಮೃತದೇಹ ಪತ್ತೆ ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಡೆಯಾಗಿದ್ದ ಇಬ್ಬರ ಪೈಕಿ ಮೊನ್ನೆ ಒಬ್ಬನ ಹಾಗೂ ಶನಿವಾರ ಸಂಜೆ ಮತ್ತೋರ್ವನ ಮೃತದೇಹ ಪತ್ತೆಯಾಗಿದೆ. ನಾಗಾಲಾಂಡ್ ರಾಜ್ಯದ ಯಾಂಗ್ ಕಂಗ್ (27) ಮೃತದೇಹ ಎಂದು ಗುರುತಿಸಲಾಗಿದೆ. ಕುಶಾಲನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

Ashok,_Madikeri ಮಡಿಕೇರಿ, -ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಶುಕ್ರವಾರ ನಗರದ ಕೋಟೆ ಮಹಿಳಾ ಸಮಾಜ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಯುವಜನರನ್ನು ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಸಮಾಜದ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಡಿಕೇರಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ರಘು ಹೆಬ್ಬಟ್ಟಗೇರಿ, ಉಪಾಧ್ಯಕ್ಷರಾಗಿ ದಿನೇಶ್ ಟಿ., ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಮಡಿಕೇರಿ, ಸಹ ಕಾರ್ಯದರ್ಶಿಯಾಗಿ ದರ್ಶಿತ್, ಖಜಾಂಚಿಯಾಗಿ ಪ್ರಕಾಶ್ ಮೊಗೇರ ಹಾಗೂ ಪ್ರಚಾರಕರಾಗಿ ವಿವೇಕ್ ಮೊಗೇರ ಅವರು ಆಯ್ಕೆಯಾದರು. ಇದೇ ವೇಳೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್, ಶ್ರೀನಿವಾಸ್, ಸುರೇಶ್ ಎಂ.ಕೆ., ರಾಜೇಶ್, ಶಶಿ ಮರ್ಗೋಡು, ವಿಶ್ವನಾಥ್ ಹಾಗೂ ಹರೀಶ್ ಬೆಟ್ಟಗೇರಿ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಸಮಾಜದ ಅಭಿವೃದ್ಧಿಗೆ…

Read More

ಮರಗೋಡುವಿನಿಂದ ಹಾಕತ್ತೂರುಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಳವಡಿಸಲಾಗಿರುವ ನಾಮಫಲಕದ ಬಗ್ಗೆ ಸ್ಥಳೀಯರು, ವಾಹನ ಚಾಲಕರು ಹಾಗೂ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಹಾಗೂ ರಾತ್ರಿ ವೇಳೆಯಲ್ಲಿ ಈ ನಾಮಫಲಕವು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಸಾಧ್ಯತೆ ಇದ್ದು, ಅಪಘಾತಕ್ಕೂ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇಂತಹ ನಾಮಫಲಕ ಅಳವಡಿಸಲು ಅನುಮತಿ ನೀಡಿದವರು ಯಾರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮೋದನೆ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಾರ್ವಜನಿಕರ ಹಾಗೂ ವಾಹನ ಚಾಲಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುಮರಗೋಡುವಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಆಗ್ರಹಿಸಿದೆ. ಒಂದು ವೇಳೆ ಈ ನಾಮಫಲಕವನ್ನು ತೆರವುಗೊಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಆಡಳಿತಕ್ಕೆ ಲಿಖಿತ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಗುವುದು…

Read More

ಬೆಂಗಳೂರಿಗೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಬೋಪಯ್ಯ, ರಂಜನ್ ಮಡಿಕೇರಿ: ಇದೇ ಮೊದಲ ಬಾರಿ ಎಂಬಂತೆ ಮಾಜಿ ಸ್ಪೀಕರ್ ಕೊಂಬಾರನ ಬೋಪಯ್ಯ ಹಾಗೂ ಮಾಜಿ ಸಚಿವ ಅಪ್ಪಚುರಂಜನ್ ಒಟ್ಟಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಒಟ್ಟಾಗಿ ಒಂದೇ ಕಾರಿನಲ್ಲಿ ಪಯಣ ಬೆಳೆಸಿದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಗೆ ಒಟ್ಟಾಗಿ ಪಯಣಿಸಿದ ಇಬ್ಬರೂ ಹಿರಿಯ ರಾಜಕಾರಣಿಗಳು ಇಂಧನ ಉಳಿಸುವ ಚಿಂತನೆ ಇದಾಗಿದೆಯೆಂದು ಅವರು ಕೊಡಗು ನ್ಯೂಸ್ ಜೊತೆ ಅಭಿಪ್ರಾಯ ಹಂಚಿಕೊಂಡರು. “ಇಂದು ನಾನು ಮತ್ತು ಕೆ .ಜಿ.ಬೋಪಯ್ಯರವರು ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಇಂಧನ ಮಿತವ್ಯಕ್ಕೆ ಕರೆ ನೀಡಿರುವುದರಿಂದ ಇಂಧನ ಉಳಿಸುವ ದೃಷ್ಟಿಯಿಂದ ಒಂದೇ ಕಾರಿನಲ್ಲಿ ತೆರಳಿದ್ದು ಪ್ರತಿಯೊಬ್ಬರು ಇಂಧನ ಮತ್ತು ಗ್ಯಾಸ್ ಮಿತವ್ಯಯ ದಿಂದ ಬಳಸುವ ಮೂಲಕ ದೇಶದ ಇಂಧನ ಸಮಸ್ಯೆಯನ್ನು ಪರಿಹರಿಸಲು ತಾವು ಸಹ ಸಹಕರಿಸಬೇಕಾಗಿ ವಿನಂತಿ” ಎಂಪಿ ಅಪ್ಪಚ್ಚುರಂಜನ್. ಮಾಜಿ ಕ್ರೀಡಾ ಸಚಿವ.

Read More

ಕೊಡಗು ಸೈನಿಕ ಶಾಲೆಯಲ್ಲಿ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ ಸಮಾರೋಪ ಕುಶಾಲನಗರ, ಜೂ.12: ‘ದೇಶಭಕ್ತಿ, ಪ್ರಾಮಾಣಿಕತೆ, ನಾಯಕತ್ವ ಗುಣ ಮತ್ತು ರಾಷ್ಟ್ರೀಯ ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಕೇರಳಂ ಮತ್ತು ತಮಿಳುನಾಡು ರಾಜ್ಯಗಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದರು. ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ (ಪೂರ್ವ ಸುಬ್ರೊತೋ ಕಪ್ 2026) ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ಪದಕ, ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಯುವ ಫುಟ್‌ಬಾಲ್ ಆಟಗಾರರ ಶಿಸ್ತು, ಸಮರ್ಪಣೆ, ತಂಡದ ಮನೋಭಾವ ಮತ್ತು ಕ್ರೀಡಾ ಸ್ಫೂರ್ತಿಯನ್ನು ಪ್ರಶಂಸಿಸಿದ ರಾಜ್ಯಪಾಲರು ಸೈನಿಕ ಶಾಲೆ ಕೊಡಗು ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಅಭಿನಂದಿಸಿದರು. ಶಾಲೆಯ ಸಮಗ್ರ ಕಾರ್ಯಗಳನ್ನು ಶ್ಲಾಘಿಸಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಯದುವೀರ್ ಒಡೆಯರ್ ಮಾತನಾಡಿ,…

Read More

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ ಸಾರ್ವಜನಿಕರ ಹಾಗೂ ಪರಿಸರದ ಹಿತದೃಷ್ಟಿಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ಗಿಂತ ಕಡಿಮೆ ಪ್ರಮಾಣದ ಎಲ್ಲಾ ತರಹದ ಕುಡಿಯುವ ನೀರಿನ ಬಾಟಲಿಗಳನ್ನು ಈ ಪ್ರಕಟಣೆ ದಿನಾಂಕದಿಂದ ಮಾರಾಟ, ಖರೀದಿ ಹಾಗೂ ಶೇಖರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಾಗಲೇ ಸರ್ಕಾರದಿಂದ ನಿಷೇಧಿಸಿರುವ ಏಕ ಬಳಕೆ ಪ್ಲಾಸ್ಟಿಕ್ (ಕವರ್, ಇಯರ್ ಬಡ್ಸ್, ಸ್ಟ್ರಾ ಪೈಪ್, ಕ್ಯಾಂಡಿ ಮತ್ತು ಐಸ್ ಕ್ರೀಮ್ ಕಡ್ಡಿಗಳು, ಅಲಂಕಾರ ವಸ್ತುಗಳು, ಪ್ಯಾಕಿಂಗ್ ಸಾಮಾಗ್ರಿಗಳು, ಆಮಂತ್ರಣ ಪತ್ರಿಕೆಗಳು ಹಾಗೂ ಇತ್ಯಾದಿ) ಸಹ ನಿಷೇಧಿಸಿರುವುದರಿಂದ ಸಾರ್ವಜನಿಕರು, ಉದ್ದಿಮೆದಾರರು ಹಾಗೂ ಪ್ರವಾಸಿಗರು ಬಳಸದಂತೆ ಕೋರಲಾಗಿದೆ. ಆದರಿಂದ ಉದ್ದಿಮೆದಾರರು ತಕ್ಷಣದಿಂದ ಜಾರಿಗೆ ಬರುವಂತೆ 2 ಲೀಟರ್ ಗಿಂತ ಕಡಿಮೆ ಪ್ರಮಾಣದ ಎಲ್ಲಾ ತರಹದ ಕುಡಿಯುವ ನೀರಿನ ಬಾಟಲಿಗಳನ್ನು ಮಾರಾಟ ಹಾಗೂ ಸಂಗ್ರಹಿಸದಂತೆ ಹಾಗೆಯೇ ಸರ್ಕಾರದಿಂದ ನಿಷೇಧಿಸಿರುವ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡದಂತೆ, ಸಂಗ್ರಹಿಸುವುದನ್ನು ಕೂಡಲೇ ಸ್ಥಗಿತಗೊಳಿಸುವುದು ತಪ್ಪಿದ್ದಲ್ಲಿ…

Read More

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 40 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಮಡಿಕೇರಿ–ಮೂರ್ನಾಡು ರಸ್ತೆಯಲ್ಲಿ ನಡೆದಿದೆ. ಮೂರ್ನಾಡು ಕಡೆಯಿಂದ ಮಡಿಕೇರಿ ಕಡೆಗೆ ಸಂಚರಿಸುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿನ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ವಾಹನಕ್ಕೆ ಭಾರೀ ಹಾನಿಯಾಗಿದೆ. ಅಪಘಾತದ ವೇಳೆ ಕಾರಿನಲ್ಲಿದ್ದ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

Read More

ಮಡಿಕೇರಿ: ಕೊಡಗಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಇದೀಗ ಮಳೆ ಆರಂಭವಾಗುತ್ತಲೇ ಧ್ವನಿ ಎತ್ತಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯ ಪ್ರಮುಖ ಜಿಲ್ಲಾ ರಸ್ತೆಗಳ ಮೂಲಕ ಪ್ರಯಾಣ ಬೆಳೆಸಿ ರಸ್ತೆಗಳ ಫ್ಯಾಕ್ಟ್ ಚೆಕ್ ಮಾಡುತ್ತಿರುವ ರವಿ ಕುಶಾಲಪ್ಪ ನೇರವಾಗಿ ಕೊಡಗಿನ ಶಾಸಕರನ್ನು, ಅವರ ಫೇಸ್ ಬುಕ್ ಖಾತೆಯಲ್ಲಿ ಹದಗೆಟ್ಟ ರಸ್ತೆಗಳ ಫೋಟೋ ಪೋಸ್ಟ್ ಮಾಡುವ ಮೂಲಕವೇ ಅವರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಯಾವ್ಯಾವ ಊರಿನ ರಸ್ತೆಗಳ ಪೋಸ್ಟ್ ಹಾಕಲಾಗಿದೆ! ರವಿ ಕುಶಾಲಪ್ಪ ಅವರ ಫೇಸ್ಬುಕ್ ಖಾತೆಯಲ್ಲಿ ನಾಲ್ಕು ದಿನಗಳ ಹಿಂದೆ “ಸಿದ್ದಾಪುರ – ಅಮ್ಮತಿ ರಸ್ತೆಯನ್ನು ನೋಡಿ ಕಣ್ತುಂಬಿಕೊಳ್ಳಿ. ಮೂರನೇ ಮಳೆಗಾಲ ಪ್ರಾರಂಭವಾಗಿದೆ. ರಸ್ತೆ ದುರಸ್ಥಿ ಮಾಡಲಿಕ್ಕೆ ನಮ್ಮ ಶಾಸಕರಿಗೆ ಇನ್ನೆಷು ಮಳೆಗಾಲಗಳು ಕಳಿಯಬೇಕ!” ಎಂಬ ಪದಗಳೊಂದಿಗೆ ಒಂದು ಪೋಸ್ಟ್ ಹಾಕಲಾಗಿತ್ತು.. ಆದರೆ ಈ ಫೋಟೋ ಪೋಸ್ಟ್ ಅಲ್ಲಿ ಮುಗಿಯಲಿಲ್ಲ.. ಗಂಟೆ…

Read More

ವಿಪತ್ತು ನಿರ್ವಹಣೆ ಸಹಾಯವಾಣಿ ಕೇಂದ್ರ ಆರಂಭ ನೋಡಲ್ ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ನೇಮಕ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಜೊತೆಗೆ ನೋಡಲ್ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ. ಸಹಾಯವಾಣಿ ಕೇಂದ್ರ ವಿವರ ಇಂತಿದೆ: ಜಿಲ್ಲಾಡಳಿತ ಭವನದಲ್ಲಿರುವ ಸಹಾಯವಾಣಿ ಸಂಖ್ಯೆ 8550001077 ಸಂಪರ್ಕಿಸಬಹುದಾಗಿದೆ. ಹಾಗೆಯೇ ತಾಲ್ಲೂಕು ಮಟ್ಟದಲ್ಲಿ ಮಡಿಕೇರಿ ತಾಲ್ಲೂಕು 08272-228396, ಸೋಮವಾರಪೇಟೆ ತಾಲ್ಲೂಕು 08276-282045, ಕುಶಾಲನಗರ ತಾಲ್ಲೂಕು 08276-200198, ವಿರಾಜಪೇಟೆ ತಾಲ್ಲೂಕು 08274-257328 ಹಾಗೂ ಪೊನ್ನಂಪೇಟೆ ತಾಲ್ಲೂಕು 08274-249700 ನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ ವಿವರ ಇಂತಿದೆ: ಮಡಿಕೇರಿ ನಗರವ್ಯಾಪ್ತಿ ಹಾಗೂ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೋಡಲ್ ಅಧಿಕಾರಿ ಮಡಿಕೇರಿ ನಗರಸಭೆ ಪೌರಾಯುಕ್ತರು ದೂ.ಸಂ. 9845723666, ಸಹಾಯಕ ನೋಡಲ್ ಅಧಿಕಾರಿ…

Read More