ಬೆಂಗಳೂರಿಗೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಬೋಪಯ್ಯ, ರಂಜನ್
ಮಡಿಕೇರಿ: ಇದೇ ಮೊದಲ ಬಾರಿ ಎಂಬಂತೆ ಮಾಜಿ ಸ್ಪೀಕರ್ ಕೊಂಬಾರನ ಬೋಪಯ್ಯ ಹಾಗೂ ಮಾಜಿ ಸಚಿವ ಅಪ್ಪಚುರಂಜನ್ ಒಟ್ಟಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಒಟ್ಟಾಗಿ ಒಂದೇ ಕಾರಿನಲ್ಲಿ ಪಯಣ ಬೆಳೆಸಿದರು.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಗೆ ಒಟ್ಟಾಗಿ ಪಯಣಿಸಿದ ಇಬ್ಬರೂ ಹಿರಿಯ ರಾಜಕಾರಣಿಗಳು ಇಂಧನ ಉಳಿಸುವ ಚಿಂತನೆ ಇದಾಗಿದೆಯೆಂದು ಅವರು ಕೊಡಗು ನ್ಯೂಸ್ ಜೊತೆ ಅಭಿಪ್ರಾಯ ಹಂಚಿಕೊಂಡರು.
“ಇಂದು ನಾನು ಮತ್ತು ಕೆ .ಜಿ.ಬೋಪಯ್ಯರವರು ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಇಂಧನ ಮಿತವ್ಯಕ್ಕೆ ಕರೆ ನೀಡಿರುವುದರಿಂದ ಇಂಧನ ಉಳಿಸುವ ದೃಷ್ಟಿಯಿಂದ ಒಂದೇ ಕಾರಿನಲ್ಲಿ ತೆರಳಿದ್ದು ಪ್ರತಿಯೊಬ್ಬರು ಇಂಧನ ಮತ್ತು ಗ್ಯಾಸ್ ಮಿತವ್ಯಯ ದಿಂದ ಬಳಸುವ ಮೂಲಕ ದೇಶದ ಇಂಧನ ಸಮಸ್ಯೆಯನ್ನು ಪರಿಹರಿಸಲು ತಾವು ಸಹ ಸಹಕರಿಸಬೇಕಾಗಿ ವಿನಂತಿ”
ಎಂಪಿ ಅಪ್ಪಚ್ಚುರಂಜನ್.
ಮಾಜಿ ಕ್ರೀಡಾ ಸಚಿವ.

