Author: Kodagu-admin

ಮಡಿಕೇರಿಯಲ್ಲಿ ಚುರುಕುಗೊಂಡ SIR ಅಧಿಕಾರಿಗಳಿಗೆ ಯಾವ ಮಾಹಿತಿ ಕೊಡ್ಬೇಕು? ಮಡಿಕೇರಿ (ಜೂ.30) ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಬಿಎಲ್‌ಒಗಳು ಜುಲೈ 29ರವರೆಗೆ ರಾಜ್ಯದ ಮನೆ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆಯ ಎನ್ಯುಮರೇಷನ್ ಫಾರ್ಮ್ ನೀಡಲಿದ್ದಾರೆ. BLO ಅಧಿಕಾರಿಗಳಿಗೆ ಯಾವ ಯಾವ ಮಾಹಿತಿ ನೀಡ್ಬೇಕು ಮತದಾರರು ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿ ಬಿಎಲ್‌ಒಗಳಿಗೆ ಮರಳಿ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದಿನಿಂದ ಜುಲೈ 29ರ ವರೆಗೆ ಮನೆ ಮನೆಗೆ ತೆರಳಿ ಬಿಎಲ್‌ಒಗಳು ಮತದಾರರಿಗೆ Enumeration form ಕೊಡಲಿದ್ದಾರೆ. ಎಲ್ಲಾ ಬಿಎಲ್‌ಒಗಳಿಗೆ ಫಾರ್ಮ್ ವಿತರಿಸಲಾಗಿದೆ. ಮನೆ ಮನೆಗೆ ತೆರಳಿ ಬಿಎಲ್‌ಒಗಳು ಎರಡು ಪ್ರತಿ ಫಾರ್ಮ್ ಅನ್ನು ಮತದಾರರಿಗೆ ವಿತರಿಸಲಿದ್ದಾರೆ. ಈಗಾಗಲೇ 59,050 BLOಗಳು ತಮ್ಮ ಮೊಬೈಲ್‌ನಲ್ಲಿ ಲಾಗ್ ಇನ್ ಆಗಿ ಪ್ರಕ್ರಿಯೆ ಆರಂಭಿಸಿದ್ದು ಫಾರ್ಮ್ ಭರ್ತಿ ಮಾಡದಿದ್ರೆ ಏನಾಗುತ್ತೆ? ಮತದಾರರು ಅಧಿಕಾರಿಗಳು ಕೊಡುವ ಎನ್ಯುಮರೇಟ್…

Read More

ಪಲ್ಸ್ ಪೊಲಿಯೊ ಮನೆ ಮನೆ ಭೇಟಿ ನಿನ್ನೆ ನಡೆದ ರಾಷ್ಟ್ರೀಯ ಪಲ್ಸ್ ಪೆÇೀಲಿಯೊ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗೆ ಪತ್ತೆ ಹಚ್ಚಲು 2 ದಿನ ಮನೆ ಮನೆಗಳಿಗೆ ಭೇಟಿ ಮಾಡುವ 2ನೇ ದಿನ ಮೂರ್ನಾಡು ವ್ಯಾಪ್ತಿಯ ಹೂಕಾಡು ಪೈಸಾರಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಲಸಿಕೆ ಪಡೆಯಾದ ಮಕ್ಕಳಿಗೆ ಪತ್ತೆ ಹಚ್ಚಿ ಲಸಿಕೆ ನೀಡುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ ತಂಡಗಳು ಕಾರ್ಯನಿರ್ವಹಿಸಿದರು. ತಂಡಗಳ ಕಾರ್ಯವನ್ನು ಮೇಲ್ವಿಚಾರಣೆಗಾಗಿ ಡಾ.ಸನತ್ ಕುಮಾರ್ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಮತ್ತು ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು. ಜೊತೆಯಲ್ಲಿ ಟಿ.ಎನ್.ಪಾಲಾಕ್ಷ ಆರೋಗ್ಯ ಶಿಕ್ಷಣಾಧಿಕಾರಿ, ಜಿ.ವಿ.ಶ್ರೀನಾಥ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ನಿಲಿಮ್ ಕಾರ್ಯಕ್ರಮ ವ್ಯವಸ್ಥಾಪಕರು, ಹಾಗೂ ಶಿಲ್ಪಾ ಪ್ರಾ.ಆ.ಸುರಕ್ಷಾಧಿಕಾರಿ ಜಯಶ್ರೀ ಅಂಗನವಾಡಿ ಕಾರ್ಯಕರ್ತೆ ಹಾಜರಿದ್ದರು.

Read More

KODAGU NEWS UPDATE ಮುಗಿಯದ ಆನೆ ಮಾನವ ಸಂಘರ್ಷ ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ ಇತ್ತೀಚೆಗಷ್ಟೇ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿಗೆ ಮುಂದಾಗಿತ್ತು. ಪ್ರಕರಣದ ಗಂಭೀರತೆ ಅರಿತರು ಎಚ್ಚೆತ್ತುಕೊಳ್ಳದ ಇಲಾಖೆ. ವಾರಗಳೇ ಕಳೆದರು ಆನೆಗಳನ್ನು ಅರಣ್ಯಕಟ್ಟಲು ಕ್ರಮ ಕೈಗೊಂಡಿಲ್ಲ. ಕಾಫಿ ತೋಟದಲ್ಲಿ ಬೀಡುಬಿಟ್ಟಿರೋ ಕಾಡಾನೆ ಹಿಂಡು. ಸಂಜೆ ಮನೆಗೆ ವಾಪಸ್ ಹೋಗ್ತೇವೋ, ಇಲ್ಲವೋ ಅನ್ನೋ ಭೀತಿಯಲ್ಲಿ ಕೆಲಸಕ್ಕೆ ತೆರಳಿರೋ ಕಾರ್ಮಿಕರು. ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ. ಕಾಡಾನೆಗಳಿಂದ ಪ್ರಾಣ ಹಾನಿ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆ ಹಾಗೂ ಸರಕಾರವೇ ನೇರ ಹೊಣೆ. ನಿಮ್ಮ ಪರಿಹಾರ ನಮಗೆ ಬೇಡ, ಹೋದ ಜೀವ ನಿಮ್ಮಿಂದ ಕೊಡೋಕೆ ಆಗುತ್ತಾ.. ನಮಗೆ ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕಷ್ಟೇ ಅದನ್ನು ಮಾಡಿಕೊಡಿ. ಸಾವು ನೋವುಗಳಾದರೂ ಬಡ ಜನರಿಗಷ್ಟೇ ಲಾಸ್. ಅಧಿಕಾರಿದಲ್ಲಿರುವವರು ಅವರ ಮಕ್ಕಳು ಸೇಫ್ ಇರ್ತಾರೆ ಅದಕ್ಕೆ ಇದರ ಗಂಭೀರತೆ ಅರಿತರು ಕ್ರಮ ಕೈಗೊಳ್ತಾ ಇಲ್ಲ. ಸರಕಾರವೇ ಕೈಕಟ್ಟಿ ಕುಳಿತರೆ ನಮ್ಮ ಸಮಸ್ಯೆಯನ್ನು…

Read More

ಬಸ್ ಡಿಕ್ಕಿ ಪಡಿಸಿದ ಪರಿಣಾಮ ಪಲ್ಟಿಯಾಗಿ ಮಗುಚಿಬಿದ್ದ ಆಟೋ ಪಲ್ಟಿಯಾದ ರಭಸಕ್ಕೆ ಜಖಂಗೊಂಡ ಆಟೋ ರಿಕ್ಷಾ ಘಟನೆಯಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯ *ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಪ್ರಯಾಣಿಕ ಮಹಿಳೆ.* ಸಿದ್ದಾಪುರ ಠಾಣಾ ವ್ಯಾಪ್ತಿಯ ಇಂಜಲಗೆರೆ ಬಳಿ ಘಟನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಸ್ಥಳೀಯರು.

Read More

ಕರ್ನಾಟಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಡಿಐಜಿಪಿಯಾಗಿರುವ ಹಿರಿಯ ಐಪಿಎಸ್ ವರ್ತಿಕಾ ಕಟಿಯಾರ್ ಕೊಡಗು ಜಿಲ್ಲೆಗೆ ಭೇಟಿ ನೀಡಿದರು. ಶುಕ್ರವಾರ ಮಡಿಕೇರಿಯ DCRE ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಜನರ ನಾಗರಿಕ ಹಕ್ಕುಗಳ ರಕ್ಷಣೆ ಹಾಗೂ ಅವರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡರು. ಇದೆ ವೇಳೆ ಡಿಸಿಆರ್ಇ ಡಿಎಸ್ಪಿ ಮೇದಪ್ಪ ಹಾಗೂ ಪಿಎಸ್ಐ ನವೀನ್ ಅವರು ಇದ್ದರು.

Read More

ಜೀವನಪೂತಿ೯ ಕೈಗೊಳ್ಳುತ್ತಲೇ ಬಂದಿದ್ದ ತನ್ನ ಮೇಲೆ ಅನಗತ್ಯ ಆರೋಪ – ಶ್ರೀ ಎಂ. ಮುಮ್ತಾಜ್ ಆಲಿ ಬೇಸರ ಮಲ್ಮ ಬೆಟ್ಟದ ಜಾಗದಲ್ಲಿ ಯಾವುದೇ ಯೋಜನಾ ಕಾಮಗಾರಿ ಕೈಗೊಳ್ಳುವುದಿಲ್ಲ – ಶ್ರೀ ಎಂ. ಘೋಷಣೆ ಧ್ಯಾನಕೇಂದ್ರ, ಗೋಶಾಲೆ ರೂಪಿಸುವ ಉದ್ದೇಶದಿಂದ ಮಲ್ಮಬೆಟ್ಟದಿಂದ 2.50 ಕಿ.ಮೀ. ದೂರದಲ್ಲಿ ಸುಂದರವಾದ ಜಾಗ ಖರೀದಿಸಿದ್ದೆ. ಸ್ತಳೀಯರು ಮಲ್ಮಬೆಟ್ಟದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಹೀಗಾಗಿ ತನಗೆ ಸ್ಥಳೀಯರ ಧಾಮಿ೯ಕ ಭಾವನೆಗಳಿಗೆ ಚ್ಯುತಿ ಉಂಟಾಗುವ ಬಗ್ಗೆ ತಿಳಿದಿರಲಿಲ್ಲ – ಎಂ. ಸ್ಪಷ್ಟನೆ 58 ಎಕ್ರೆ ಜಮೀನಿನ ಪೈಕಿ 10 ಎಕ್ರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂಪರಿವತ೯ನೆ ಮಾಡಲು ಅಜಿ೯ ಸಲ್ಲಿಸಿದ್ದೆ. ಇದೀಗ ಆ ಉದ್ದೇಶದಿಂದ ಹಿಂದಕ್ಕೆ ಸರಿದಿದ್ದೇನೆ. ಸ್ಥಳೀಯರಿಂದ ಖರೀದಿಸಿರುವ 58 ಎಖ್ರೆ ಜಾಗವನ್ನು ಖರೀದಿಸಿದ ಮೌಲ್ಯವಾದ .6.25 ಕೋಟಿ ರು.ಗೆ ಕೊಡವರಿಗೆ ಮಾರಾಟ ಮಾಡಲು ಸಿದ್ದ. ಯಾರೂ ಖರೀದಿಗೆ ಬಾರದೇ ಹೋದರೆ ಸಕಾ೯ರಕ್ಕೆ ನೀಡುವುದಾಗಿ ಎಂ. ಹೇಳಿಕೆ. ಧ್ಯಾನಕೇಂದ್ರ ಮಾಡಬಹುದು ಎಂದು ಜಾಗ ಮಾರಿದವರೇ ತನಗೆ ಸಲಹೆ ನೀಡಿ…

Read More

ಸಿದ್ದಾಪುರ ಸಮೀಪದ ತೋಬನಕೊಲ್ಲಿ  ಎಂಬಲ್ಲಿ ಮಣಿಕಂಠ ಎಂಬ 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದ್ದು ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ, ಆತ್ಮ ಹತ್ಯೆಯ ಕಾರಣ ಪೊಲೀಸ್ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.

Read More

ಕಾರ್ಮಿಕರ ಮೇಲೆ ಕಾಡಾನೆ ದಾಳಿ ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ. ಸಿದ್ದಾಪುರ : ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಒಂಟಿ ಸಲವೊಂದು ಏಕಾಏಕಿ ದಾಳಿಗೆ ಮುಂದಾಗಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಪಾಯದಿಂದ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ನಡೆದಿದೆ. ಎಂದಿನಂತೆ ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಪ್ರತ್ಯಕ್ಷವಾದ ಆನೆಯೊಂದು ಕಾರ್ಮಿಕರನ್ನು ಅಟ್ಟಾಡಿಸಿದೆ. ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಎದ್ದುಬಿದ್ದು ಓಡಿದ್ದು, ಗಿಡಗಳ ನಡುವೆ ಓಡುವ ಸಂದರ್ಭ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಮಹಿಳೆಯ ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ನಿವಾಸಿ ನಾಗರಾಜು ಎಂಬುವವರ ಪತ್ನಿ ಸೌಮ್ಯ ಎಂಬುವವರೇ ಗಾಯಗೊಂಡಿರುವ ಮಹಿಳೆ. ಗಾಯಾಳುವನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಸುತ್ತಮುತ್ತಲ ಪ್ರದೇಶದ ಕಾರ್ಮಿಕರಲ್ಲಿ ಭೀತಿ ಹೆಚ್ಚಾಗಿದ್ದು ,ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಈ…

Read More

karim rowthar ಎಂಬ ಮುಖಪುಟದಿಂದ. ಈ ಹಾಳಾದ್ದ ಮಿನುಟ್ ಚಾಳಿಯನ್ನು ತೆಗೆದು ಹಾಕಿ, ಪೊಲೀಸ್ ಇಲಾಖೆಯು ಸುಧಾರಿಸುತ್ತದೆ. +++++++++++++++++++++++++++++++++++ ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಲಂಚ ಮತ್ತು ಬ್ರಷ್ಟಾಚಾರದ ದುನರ್ಡತೆಗಳು ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಪೊಲೀಸ್ ಮಾತ್ರವಲ್ಲ, ಎಲ್ಲಾ ಇಲಾಖೆಯೂ ಭ್ರಷ್ಟಾಚಾರದಿಂದ ಕುಲಗೆಟ್ಟಿದೆ. ದೇಶದ ಅತ್ಯಂತ ಬ್ರಷ್ಟರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರಿದೆ. ಹಲವು ಪ್ರಕರಣಗಳಲ್ಲಿ ಈ ವಿಷಯವು ಬಹಿರಂಗವಾಗಿವೆ. ಬೇರೆ ಇಲಾಖೆಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆಯೆಂಬ ನಂಬಿಕೆ ಹಿಂದೆ ಇತ್ತು. ಆದರೆ ಇತ್ತೀಚಿಗಿನ ಪ್ರಕರಣಗಳಲ್ಲಿ ವರದಿಯಾಗುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಬ್ರಷ್ಟಾಚಾರ ಮತ್ತು ದುರ್ನಡತೆಗಳು ಮುಜುಗರವನ್ನುಂಟು ಮಾಡುತ್ತಿದೆ. ಇಲಾಖೆಗೆ ತಗುಲುತ್ತಿರುವ ಕಳಂಕವಾಗಿದೆ. ಇಲಾಖೆಯಲ್ಲಿರುವ ದಕ್ಷತೆ ಮತ್ತು ಪ್ರಾಮಾಣಿಕತೆಯ ಮಟ್ಟವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೊಳಗಾಗುತ್ತಿದೆ. ಇಲಾಖೆಯು ಎಚ್ಚೆತ್ತುಕೊಂಡು ಈಗಲೇ ಸುಧಾರಣಾ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದೆ ಇಲಾಖೆ ಜನಸಾಮಾನ್ಯರ ವಿಶ್ವಾಸವನ್ನು ಕಳೆದುಕೊಂಡು ಬಿಡುವ ಆತಂಕವಿದೆ. ಈ ಖಾಯಿಲೆ ಮುಂದೆ ಬೆಳೆಯುವ ದೊಡ್ಡ ರೋಗದ ಸಂಕೇತವಾಗಿದೆ ಈಗಲೇ ಚಿಕಿತ್ಸೆ ಕ್ರಮ…

Read More

ಕುಶಾಲನಗರ ನಿಸರ್ಗದಮ ಟೂರಿಸ್ಟ್ ಸೆಂಟರ್ ನಲ್ಲಿ ಅಂಗಡಿ ಮಾಲೀಕ ಹಿಂದೂ ಧರ್ಮಕ್ಕೆ ಸೇರಿದ ತಾಯಿ ಮತ್ತು ಅಪ್ರಾಪ್ತ ಮಗುವನ್ನು ಮತಾಂತರ ಮಾಡಿದ ಪ್ರಕರಣದಲ್ಲಿ ಕುಶಾಲನಗರ ಪೊಲೀಸ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪವುಳ್ಳ ಪತ್ರ ಹಾಗೂ ಸಂದೇಶ ಕೆಲವು ವಾಟ್ಸಾಪ್ ಬಳಗಗಳಲ್ಲಿ ಹರಿದಾಡುತ್ತಿದ್ದು ವೈಜ್ಞಾನಿಕ ತನಿಕೆಗಾಗಿ ಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚೆಗಳು ಎದ್ದಿದೆ. ವಾಟ್ಸಾಪ್ ಬಳಗದಲ್ಲಿ ಚರ್ಚೆಯಾದ ಪತ್ರದ ಸಾರಾಂಶ.. ಕುಶಾಲನಗರ ಕೇಸಲ್ಲಿ ಬಾಲಕನ ವೈದ್ಯಕೀಯ ಪರೀಕ್ಷೆ(ಅವೈಜ್ಞಾನಿಕ ಶಸ್ತ್ರ ಕ್ರಿಯೆ )ಅಥವಾ ಮರ್ಮಾಂಗಕ್ಕೆ ಘಾಸಿಯಾಗುವ ಅಥವಾ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತೇ? ಎಂಬ ಬಗ್ಗೆ ಅಭಿಪ್ರಾಯ ಪಡೆದು ಗಂಭೀರ ಗಾಯದ ಕಲಂ ಅಳವಡಿಸಬೇಕಿದೆ. ಕೋಲೆ ಯತ್ನ ಕಲಂ 109 BNS ಕೂಡ ಅಳವಡಿಸಲು ಸಾಧ್ಯತೆ ಇದೆಯೇ ಎಂದು ನೋಡಬೇಕು) • ವೈದ್ಯಕೀಯ ಪರೀಕ್ಷೆಯ ನಂತರ ಕೊಡಲೇ ಜಿ.ಜಿ. ಕಾಯ್ದೆ ಮತ್ತು ಮತಾಂತರ ಕೇಂದ್ರದಲ್ಲಿ ಅಕ್ರಮ ದಿಗ್ಬಂಧನ, ವೈದ್ಯಕೀಯ ಕಾನೂನು ಉಲ್ಲಂಘನೆ (ಬಗ್ಗೆ ವರದಿ ಪಡೆದು…

Read More