ಜೀವನಪೂತಿ೯
ಕೈಗೊಳ್ಳುತ್ತಲೇ ಬಂದಿದ್ದ ತನ್ನ ಮೇಲೆ ಅನಗತ್ಯ ಆರೋಪ – ಶ್ರೀ ಎಂ. ಮುಮ್ತಾಜ್ ಆಲಿ ಬೇಸರ
ಮಲ್ಮ ಬೆಟ್ಟದ ಜಾಗದಲ್ಲಿ ಯಾವುದೇ ಯೋಜನಾ ಕಾಮಗಾರಿ ಕೈಗೊಳ್ಳುವುದಿಲ್ಲ – ಶ್ರೀ ಎಂ. ಘೋಷಣೆ
ಧ್ಯಾನಕೇಂದ್ರ, ಗೋಶಾಲೆ ರೂಪಿಸುವ ಉದ್ದೇಶದಿಂದ ಮಲ್ಮಬೆಟ್ಟದಿಂದ 2.50 ಕಿ.ಮೀ. ದೂರದಲ್ಲಿ ಸುಂದರವಾದ ಜಾಗ ಖರೀದಿಸಿದ್ದೆ.
ಸ್ತಳೀಯರು ಮಲ್ಮಬೆಟ್ಟದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಹೀಗಾಗಿ ತನಗೆ ಸ್ಥಳೀಯರ ಧಾಮಿ೯ಕ ಭಾವನೆಗಳಿಗೆ ಚ್ಯುತಿ ಉಂಟಾಗುವ ಬಗ್ಗೆ ತಿಳಿದಿರಲಿಲ್ಲ – ಎಂ. ಸ್ಪಷ್ಟನೆ
58 ಎಕ್ರೆ ಜಮೀನಿನ ಪೈಕಿ 10 ಎಕ್ರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂಪರಿವತ೯ನೆ ಮಾಡಲು ಅಜಿ೯ ಸಲ್ಲಿಸಿದ್ದೆ. ಇದೀಗ ಆ ಉದ್ದೇಶದಿಂದ ಹಿಂದಕ್ಕೆ ಸರಿದಿದ್ದೇನೆ.
ಸ್ಥಳೀಯರಿಂದ ಖರೀದಿಸಿರುವ 58 ಎಖ್ರೆ ಜಾಗವನ್ನು ಖರೀದಿಸಿದ ಮೌಲ್ಯವಾದ .6.25 ಕೋಟಿ ರು.ಗೆ ಕೊಡವರಿಗೆ ಮಾರಾಟ ಮಾಡಲು ಸಿದ್ದ.
ಯಾರೂ ಖರೀದಿಗೆ ಬಾರದೇ ಹೋದರೆ ಸಕಾ೯ರಕ್ಕೆ ನೀಡುವುದಾಗಿ ಎಂ. ಹೇಳಿಕೆ.
ಧ್ಯಾನಕೇಂದ್ರ ಮಾಡಬಹುದು ಎಂದು ಜಾಗ ಮಾರಿದವರೇ ತನಗೆ ಸಲಹೆ ನೀಡಿ ಜಾಗ ಮಾರಾಟ ಮಾಡಿದ್ದರು.
ಇನ್ನು ಮುಂದೆ ಕೊಡಗಿನಲ್ಲಿ ತನಗೆ ನೆಲೆಸಲು ಇಚ್ಚೆಯಿಲ್ಲ – ಕೊಡಗಿನಲ್ಲಿರುವ ಕಾಫಿ ತೋಟವನ್ನೂ ಮಾರಾಟ ಮಾಡಲು ಚಿಂತಿಸುತ್ದಿದ್ದೇನೆ – ಎಂ. ಹೇಳಿಕೆ
ತನ್ನ ಹೆಸರು ಮುಸ್ಲಿಂ ಹೆಸರಾಗಿದ ಎಂಬ ಕಾರಣಕ್ಕೆ ನನ್ನನ್ನು ವಿರೋಧಿಸುತ್ತಿರುವುದೂ, ಟೀಕೆ ಮಾಡುತ್ತಿರುವುದು ಬೇಸರ ತಂದಿದೆ. ತಾನು ಅನೇಕ ಹಿಂದೂ ದೇವಾಲಯಗಳನ್ನು ನಿಮಿ೯ಸಿದ್ದೇನೆ. ಉಪನಿಷತ್, ರಾಮಾಯಣ, ವೇದಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದೇನೆ. ಹೀಗಿರುವಾಗ ಮುಸ್ಲಿಂ ಹೆಸರಿದೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಅನಗತ್ಯ ಟೀಕೆ ಮಾಡುತ್ತಿರುವುದು ಬೇಸರ ತಂದಿದೆ. ನಾನಿನ್ನು ಕೊಡಗಿನಿಂದ ದೂರವಾಗುತ್ತೇನೆ. ಖರೀದಿಸಿದ ಆಸ್ತಿ ನೋಡಲೂ ಆ ಜಾಗಕ್ಕೆ ಹೋಗಲಾರೆ ಎಂದು ಶ್ರೀ ಎಂ ಹೇಳಿಕೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಶ್ರೀ ಎಂ. ಹೇಳಿಕೆ.
ಸ್ಥಳೀಯರಿಗೆ ಜಾಗ ಖರೀದಿಗೆ ವಿರೋಧವಿದ್ದರೆ ಗ್ರಾಮಸಭೆಗೆ ತಮ್ಮನ್ನು ಕರೆದು ಮಾಹಿತಿ ಪಡೆಯಬಹುದಿತ್ತು. ಸಂವಹನದ ಕೊರತೆಯಿಂದ ಇಂಥ ವಿವಾದ ಸೖಷ್ಟಿಯಾಗಿದೆ ಎಂದು ಶ್ರೀ ಎಂ ಅನುಯಾಯಿ ಬಿದ್ದಂಡ ಲಾಲ್ ಕುಶಾಲಪ್ಪ ಹೇಳಿಕೆ.
ಸುದ್ದಿಗೋಷ್ಟಿಯಲ್ಲಿ ಬಿದ್ದಂಡ ಬೋಪಣ್ಣ ಹಾಜರಿದ್ದರು.
ಇಂದು ಮಧ್ಯಾಹ್ನ 2 ಗಂಟೆಗೆ ಮಡಿಕೇರಿಯಲ್ಲಿ ಮಲ್ಮ ಬೆಟ್ಟ ವ್ಯಾಪ್ತಿಯ ನಿವಾಸಿಗಳೊಂದಿಗೆ ಶ್ರೀ ಎಂ. ಅವರಿಂದ ಮಹತ್ವದ ಸಭೆ. ಖರೀದಿಸಿದ ಜಾಗದಲ್ಲಿ ಒಂದು ಇಂಚು ಕೂಡ ಕಾಮಗಾರಿ ನಡೆಸುವುದಿಲ್ಲ ಎಂದು ಹೇಳಿಕೆ ನೀಡಲಿರುವ ಶ್ರೀ ಎಂ.

