Author: Kodagu-admin

ಮಡಿಕೇರಿ ಜೂನ್ 24 –  ನಗರದ ಕೊಡಗು ವಿದ್ಯಾಲಯದಲ್ಲಿ  ಹೆಸರಾಂತ ನಾಣ್ಯ ಸಂಗ್ರಹಕಾರ   ಪಿ.ಕೆ. ಕೇಶವಮೂರ್ತಿ    ಅವರಿಂದ   177 ನೇ ನಾಣ್ಯ ಮತ್ತು ನೋಟುಗಳ ಪ್ರದರ್ಶನ  ಆಯೋಜಿತವಾಗಿತ್ತು. ಕೊಡಗು ವಿದ್ಯಾಲಯದ ಗ್ರಂಥಾಲಯದಲ್ಲಿ ಖ್ಯಾತ ನಾಣ್ಯಶಾಸ್ತ್ರಜ್ಞ ಹಾಗೂ ಅಂಚೆಚೀಟಿ ಸಂಗ್ರಹಕಾರರಾದ   ಪಿ.ಕೆ. ಕೇಶವಮೂರ್ತಿ ತಮ್ಮ 177ನೇ ನಾಣ್ಯ ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಿದ್ದರು. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು   ಅಪರೂಪದ ಹಾಗೂ ಐತಿಹಾಸಿಕ ಮಹತ್ವವುಳ್ಳ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ವೀಕ್ಷಿಸಿದರು.   ವಿವಿಧ ಕಾಲಘಟ್ಟಗಳ ಇತಿಹಾಸ, ಸಂಸ್ಕೃತಿ ಹಾಗೂ ಆರ್ಥಿಕ ಬೆಳವಣಿಗೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಪ್ರದಶ೯ನ  ನೆರವಾಯಿತು. ಹಳೆಯ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿತ್ತು. ಸಂಗ್ರಹವನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಸ್ಫೂರ್ತಿ ಹೊಂದಿ, ತಮ್ಮ ಅಧ್ಯಯನಕ್ಕೆ ಪೂರಕವಾದ ಅಮೂಲ್ಯ ಮಾಹಿತಿಯನ್ನು ಪಡೆದುಕೊಂಡರು.…

Read More

ಮಡಿಕೇರಿ ಜೂನ್ 24 – ಅತ್ಯುತ್ತಮ ಸಾಮಾಜಿಕ ಸೇವಾ ಕಾಯ೯ಗಳಿಗಾಗಿ ರೋಟರಿ ಮಿಸ್ಟಿ ಹಿಲ್ಸ್  ಸಂಸ್ಥೆಯುವ ರೋಟರಿ ಜಿಲ್ಲಾ ಮಟ್ಟದ  ಡೈಮಂಡ್ ಪ್ಲಸ್   ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೈಸೂರಿನ ಮೈಸೂರು ಯೂನಿಯನ್ ಸಭಾಂಗಣದಲ್ಲಿ ರೋಟರಿ ಜಿಲ್ಲೆ 3181 ನ ವಾಷಿ೯ಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿಯ ವಿವಿಧ ಜಿಲ್ಲಾ ಯೋಜನೆಗಳ ಅತ್ಯುತ್ತಮ ಕಾಯ೯ನಿವ೯ಹಣೆಗಾಗಿ ಮಡಿಕೇರಿಯ ಮಿಸ್ಟಿ ಹಿಲ್ಸ್ ಸಂಸ್ಥೆಗೆ  ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ಪ್ರಶಸ್ತಿಯನ್ನು ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೖಷ್ಣ ಅವರಿಂದ ಪಡೆದುಕೊಂಡರು. ರೋಟರಿಯ ಮುಂದಿನ ಸಾಲಿನ ಗವನ೯ರ್ ಸತೀಶ್ ಬೋಳಾರ್, ನಿಯೋಜಿತ ಗವನ೯ರ್ ಯಶಸ್ವಿನಿ ಸೋಮಶೇಖರ್, ಪ್ರಶಸ್ತಿ ಸಮಿತಿ ಪ್ರಮುಖರಾದ ವಿಕ್ರಂದತ್ತ, ಅರವಿಂದ್ ಭಟ್, ರಿತೇಶ್ ಭಾಳಿಗ, ಉಮೇಶ್ ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನ ನಿದೇ೯ಶಕರು ಪ್ರಶಸ್ತಿ ಸ್ವೀಕಾರ ಸಂದಭ೯ ಇದ್ದರು.

Read More

ಕುಶಾಲನಗರ ತಾಲ್ಲೂಕು ಆಸ್ಪತ್ರೆ ಅವ್ಯವಸ್ಥೆಯ ಆಗರ ಡಿಎಚ್‌ಒ ದಿಢೀರ್ ಭೇಟಿ, ಶೀಘ್ರ ಸುಧಾರಣೆಯ ಭರವಸೆ ಕುಶಾಲನಗರ ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯು ತೀವ್ರ ಅವ್ಯವಸ್ಥೆಯಿಂದ ಕೂಡಿದ್ದು, ಬಡ ರೋಗಿಗಳು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿ ಜಂಟಿಯಾಗಿ ಧ್ವನಿ ಎತ್ತಿವೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಉಭಯ ಸಂಘಟನೆಗಳ ಮುಖಂಡರು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿಗಳಾದ (DHO) ಅವರಿಗೆ ದೂರವಾಣಿ ಮೂಲಕ ಆಸ್ಪತ್ರೆಯ ದುಃಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಡಿಎಚ್‌ಒ ಅವರಿಗೆ ಮುಖಂಡರು ಪ್ರತಿ ವಾರ್ಡ್‌ಗಳಿಗೂ ಖುದ್ದಾಗಿ ಕರೆದೊಯ್ದು ಸಾರ್ವಜನಿಕರು ಎದುರಿಸುತ್ತಿರುವ ನರಕಯಾತನೆಯನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿದರು. ಹೊರಗಡೆ ಮಾತ್ರೆ ಖರೀದಿಸದಂತೆ ರೋಗಿಗಳಿಗೆ ತಾಕೀತು ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಾಧಿಕಾರಿಗಳು ಚೀಟಿ ಬರೆದುಕೊಟ್ಟರೂ ಆಸ್ಪತ್ರೆಯ ಫಾರ್ಮಸಿಯಲ್ಲಿ ಅಗತ್ಯ ಮಾತ್ರೆಗಳು ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ “ಮಾತ್ರೆಗಳ ದಾಸ್ತಾನಿಲ್ಲ, ಹೊರಗಡೆ ಮೆಡಿಕಲ್ ಸ್ಟೋರ್‌ಗಳಲ್ಲಿ ತೆಗೆದುಕೊಳ್ಳಿ” ಎಂದು ಉಡಾಫೆಯಾಗಿ ಉತ್ತರಿಸುತ್ತಿದ್ದಾರೆ.…

Read More

ಗಾಂಜಾ ಸೇವನೆ ಆರೋಪ 4 ಜನರನ್ನು ಬಹಿಷ್ಕರಿಸಿದ ಕೊಳಕೇರಿ ಜಮಾಅತ್ ಸಮಿತಿ -ಸಾರ್ವಜನಿಕರಿಂದ ಮೆಚ್ಚುಗೆ ನಾಪೋಕ್ಲು: ಕೊಳಕೇರಿ ಸುನ್ನಿ ಮುಸ್ಲಿಮ್ ಜಮಾಅತ್ ಸಮಿತಿಯು ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ 4 ಜನರನ್ನು ಊರಿನಿಂದ ಬಹಿಷ್ಕರಿಸಿದ್ದು ಜಮಾಅತ್ ಸಮಿತಿಯ ದಿಟ್ಟ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಂಜಾ ಸೇವನೆ ಆರೋಪವಿರುವ ಜಮಾಅತ್ ಸದಸ್ಯರನ್ನು ಜೂನ್ 20ರಿಂದ ಸೆಪ್ಟೆಂಬರ್ 20ರವರೆಗೆ 3 ತಿಂಗಳು ಊರಿನಿಂದ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.ಈ ಕುರಿತು ಸಮಿತಿಯು ಮಸೀದಿಯಲ್ಲಿ ಅಳವಡಿಸಿದ ನೋಟೀಸ್ ಜಾಲ ತಾಣದಲ್ಲಿ ವೈರಲ್ ಆಗಿದ್ದು ಜಮಾಅತ್ ಸಮಿತಿಯ ನಿರ್ಧಾರಕ್ಕೆ ವ್ಯಾಪಾಕ ಪ್ರಶಂಸೆ ವ್ಯಕ್ತವಾಗಿದ್ದು ಜಿಲ್ಲೆಯ ಎಲ್ಲಾ ಜಮಾಅತ್ ಗಳು ಮಾದಕ ವ್ಯಸನಕ್ಕೆ ಇಂತಹ ಕ್ರಮಕೈಗೊಂಡರೆ ಮಾದಕವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಳಕೇರಿ ಜಮಾಅತ್ ಮಹಾಸಭೆಯ ತೀರ್ಮಾನದಂತೆ ಈ ಕ್ರಮ ಕೈಗೊಂಡಿರುವುದಾಗಿ ಸಮಿತಿ ತಿಳಿಸಿದೆ. ಬಹಿಷ್ಕೃತರೊಂದಿಗೆ ಯಾವುದೇ ವ್ಯಾಪಾರ ವ್ಯವಹಾರ ಅಥವಾ ಒಡನಾಟ ಇಟ್ಟುಕೊಳ್ಳಬಾರದು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ತೀರ್ಮಾನ…

Read More

ಯೋಗಭಾರತಿಗೆ ರಜತ ಮಹೋತ್ಸವದ ಸಂಭ್ರಮ ಯೋಗಪಟುಗಳಿಂದ ಯೋಗಪ್ರದಶ೯ನ. ಶಾಲೆಗಳಲ್ಲಿ ಯೋಗಭ್ಯಾಸ ಕಡ್ಡಾಯ ಮಾಡಬೇಕು –  ಜಿ ಚಿದ್ವಿಲಾಸ್ ಸಲಹೆ ಮಡಿಕೇರಿ.ಜೂ 18…  ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲದ ಯೋಗವು , ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮತೋಲನಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಇಂಥ ಯೋಗ ವಿದ್ಯೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು ಯೋಗ ಭಾರತಿ ಸಂಸ್ಥೆಯ ಪೋಷಕರಾದ ಡಾಕ್ಟರ್ ಎಂ. ಜಿ. ಪಾಟ್ಕರ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನಿರಂತರ ಯೋಗ ಅಭ್ಯಾಸ ಮಾಡುವಂತೆ ಕರೆ ನೀಡಿದರು. ಮಾನವ,ಪ್ರಕೃತಿಯ ಅಂಶವಾಗಿದ್ದು ಪ್ರಕೃತಿ ಮತ್ತು ಪರಮಾತ್ಮನ ಜೋಡಣೆಗೆ ಯೋಗಾಭ್ಯಾಸ ಅತ್ಯಂತ ಸಹಕಾರಿ ಎಂದು ಅವರು ಹೇಳಿದರು. ಭಾರತದ ಕೊಡುಗೆಯಾದ ಯೋಗ ವಿದ್ಯೆ, ಮನುಷ್ಯನ ಶಾರೀರಿಕ ಮತ್ತು ಆಂತರಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಶೈಲಜಾ  , ಜೂನ್ 21 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಬೆಳಿಗ್ಗೆ ಆರು ಗಂಟೆಗೆ ವಿಶ್ವ ಯೋಗ…

Read More

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟವ ಆಯೋಗದಲ್ಲಿ ಮತ್ತಷ್ಟು ಸುಧಾರಣೆ ತರಲು ಸೂಕ್ತ ಶಿಫಾರಸ್ಸುಗಳೊಂದಿಗೆ ವರದಿ ನೀಡಲು  ಆರ್ ವಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿ ಶಾಸಕ ಪೊನ್ನಣ್ಣ ಭಾಗವಹಿಸಿ ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಈ ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಶ್ರೀ ಎಸ್ .ಸುರೇಶ್ ಕುಮಾರ್, ಶ್ರೀ ಹಂಪನಗೌಡ ಬಾದರ್ಲಿ, ಶ್ರೀ ಅರಗ ಜ್ಜಾನೇಂದ್ರ ,ಶ್ರೀ ರಾಘವೇಂದ್ರ ಬಸವರಾಜು ಹಿಟ್ನಾಳ್ ,ಶ್ರೀ ರೂಪಕಲಾ ಎಂ, ಹಾಗೂ ಉನ್ನತ ಅಧಿಕಾರಿಗಳು, ಸರ್ಕಾರದ ನಿವೃತ್ತ ಮುಖ್ಯ ಮುಖ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ:-12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷದಂತೆ ಜೂನ್, 21 ರಂದು ಆಯುಷ್ ಮಂತ್ರಾಲಯ, ಭಾರತ ಸರ್ಕಾರ, ಆಯುಷ್ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳವಾರ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕೊಡಗು ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ, ಯೋಗ ಒಕ್ಕೂಟ, ಮಡಿಕೇರಿ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಪೋಲೀಸ್ ಇಲಾಖೆರವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಿಂದ ಹಳೆಯ ಖಾಸಗಿ ಬಸ್ ನಿಲ್ದಾಣ ಮೂಲಕ ಗಾಂಧಿ ಮೈದಾನದವರೆಗೆ ಜಾಥಾ ನಡೆಯಿತು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಜಾಥಾಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಶ್ರೀನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ|| ಶೈಲಜಾ.ಜಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ|| ರಾಮಚಂದ್ರ ಕಾಮತ್, ಶಾಲಾ ಶಿಕ್ಷಣ ಇಲಾಖೆ, ಡಿ.ಪಿ.ಓ ಶ್ರೀನಿವಾಸ,…

Read More

ಕುಶಾಲನಗರದಲ್ಲಿ ಮಹಿಳೆಯ ಮತಾಂತರ ಹಾಗೂ ಅಪ್ರಾಪ್ತ ಬಾಲಕನಿಗೆ ಸುನ್ನತ್ ಖಂಡಿಸಿ ಪತ್ರಿಕಾಘೋಷ್ಟಿ.. ಪತ್ರಿಕಾ ಪ್ರಕಟಣೆಯ ಸಾರಾಂಶ ಇಲ್ಲಿದೆ.. ಕುಶಾಲನಗರದಲ್ಲಿ ನಡೆದಿರುವ ಅಪ್ರಾಪ್ತ ಬಾಲಕ ಸಂಬಂಧಿತ ಘಟನೆ ಹಾಗೂ ಸಂಶಯಾಸ್ಪದ ಚಟುವಟಿಕೆಗಳ ಕುರಿತು ಹಿಂದು ಹಿತ ರಕ್ಷಣಾ ಸಮಿತಿ ವತಿಯಿಂದ ಪತ್ರಿಕಾ ಗೋಷ್ಠಿ ನಡೆಸಲಾಗಿದೆ. ಈ ಪ್ರಕರಣವು ಪೀಡಿತ ವ್ಯಕ್ತಿಯಾದ ಶ್ರೀ ರಾಜೀವ್ ಅವರ ದೂರಿನ ಆಧಾರದ ಮೇಲೆ ಗಮನಕ್ಕೆ ಬಂದಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಾರ್ವಜನಿಕ ಗಮನಕ್ಕೆ ತರುತ್ತಿದ್ದೇವೆ. ಈ ಪ್ರಕರಣದಲ್ಲಿ ಮೊದಲು ಅಪ್ರಾಪ್ತ ಬಾಲಕ ಮತ್ತು ಮಹಿಳೆ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದ್ದು, ನಂತರ ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಸುರಕ್ಷಿತವಾಗಿ ಹಿಂತಿರುಗಿಸಿರುವುದು ಗಮನಾರ್ಹವಾಗಿದೆ. ಈ ಸಂಬಂಧ ಪೊಲೀಸ್‌ ಇಲಾಖೆಯ ತ್ವರಿತ ಕ್ರಮಕ್ಕೆ ಅಭಿನಂದನೆ ಸಲ್ಲಿಸಲಾಗುತ್ತದೆ. ಆದಾಗ್ಯೂ, ಪ್ರಕರಣದಲ್ಲಿ ಇನ್ನೂ ಅನೇಕ ಗಂಭೀರ ವಿಚಾರಗಳು ಬೆಳಕಿಗೆ ಬರುತ್ತಿವೆ. ಕುಟುಂಬದ ಆಸ್ತಿ ಮಾರಾಟದ ಮೂಲಕ ಬಂದ ಹಣವನ್ನು ಬಾಲಕನ ಪಾಲನೆಗಾಗಿ ಮಹಿಳೆಗೆ ನೀಡಲಾಗಿದೆ ಎಂಬ ಮಾಹಿತಿ ಇದ್ದರೂ, ಆ ಹಣದ ಬಳಕೆ…

Read More

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ವಿ ಬಾಡಗದಲ್ಲಿ ನಿರ್ಮಾಣ ಆಗುತ್ತಿರುವ ಕ್ರೀಡಾ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರದ ಕಾಮಗಾರಿಯ ಪ್ರಗತಿಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಇಂದು ಪರಿಶೀಲಿಸಿದರು. ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುವ ಮೊದಲು ನೇರವಾಗಿ ಕ್ರೀಡಾ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿದ ಮಾನ್ಯ ಶಾಸಕರು, ಕಾಮಗಾರಿಯ ಪ್ರಗತಿಯ ಬಗ್ಗೆ ಸ್ಥಳದಲ್ಲಿ ಉಪಸ್ಥಿತರಿದ್ದ ಇಂಜಿನಿಯರ್ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಬಳಿಕ ಸ್ಥಳೀಯರು ಹಾಗೂ ಇಂಜಿನಿಯರ್ ರವರರೊಂದಿಗೆ ಚರ್ಚಿಸಿದ ಮಾನ್ಯ ಶಾಸಕರು, ಹಂತ ಹಂತವಾಗಿ ಸದ್ರಿ ಕಾಮಗಾರಿಯೂ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎಂದು ಭರವಸೆ ನೀಡಿದರು. ಬಳಿಕ ಸ್ಥಳದಲ್ಲಿದ್ದ ಉಪಸ್ಥಿತರಿದ್ದ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ನಿರ್ಗಮಿತ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯರವರು ಬಜೆಟ್ ನಲ್ಲಿ ನೀಡಿದ ಅನುದಾನದ ಬಗ್ಗೆ ಸ್ಮರಿಸುತ್ತಾ, ರಾಜ್ಯಸಭಾ ಸದಸ್ಯರಾದ ಅಜಯ್ ಮಾರ್ಕನ್ ರವರು ನೀಡಿರುವ ಹಣಕಾಸಿನ ನೆರವಿನ ಬಗ್ಗೆ ಪ್ರಸ್ತಾಪಿಸಿದರು. ಮಾಧ್ಯಮದವರಿಗೆ ಕ್ರೀಡಾ…

Read More

ಮಂಡ್ಯ ಬಳಿ ಭೀಕರ ಅಫಗಾತ: ಮಡಿಕೇರಿಯ ಎಸ್ಪಿ ಕಚೇರಿಯ ಉದ್ಯೋಗಿ ತಿಮ್ಮಯ್ಯ ದಂಪತಿಗಳು ಗಂಬೀರ ನಂದಿನೆರವಂಡ ತಿಮ್ಮಯ್ಯ ,ಕಾವ್ಯ ದಂಪತಿಗಳಿಗೆ ತೀವ್ರ ಗಾಯ ತಿಮ್ಮಯ್ಯ ಮಡಿಕೇರಿ ಎಸ್‌.ಪಿ ಕಚೇರಿಯ ಉದ್ಯೋಗಿ. ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ದಾಖಲು

Read More