Close Menu
Kodagu News
    ಹೊಸ ಸುದ್ದಿ

    ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದು: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

    June 12, 2026

    ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ

    June 11, 2026

    40 ಅಡಿ ಕಂದಕಕ್ಕೆ ಉರುಳಿದ ಕಾರು

    June 11, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದು: ರಾಜೇಂದ್ರ ವಿಶ್ವನಾಥ್ ಅರ್ಲೇಕರ್
    • ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ
    • 40 ಅಡಿ ಕಂದಕಕ್ಕೆ ಉರುಳಿದ ಕಾರು
    • ರಸ್ತೆಗಾಗಿ ರಸ್ತೆಗಿಳಿದ ರವಿಕುಶಾಲಪ್ಪ: ಹದಗೆಟ್ಟ ರಸ್ತೆಗಳ ಬಗ್ಗೆ ನಿರಂತರ ಪೋಸ್ಟ್.
    • ವಿಪತ್ತು ನಿರ್ವಹಣೆ ಸಹಾಯವಾಣಿ ಕೇಂದ್ರ ಆರಂಭ ನೋಡಲ್ ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ನೇಮಕ
    • ಚೆಯ್ಯಂಡಾಣೆಯಲ್ಲಿ ಗಾಳಿ ಮಳೆಗೆ ಕುಸಿದು ಬಿದ್ದ ಮನೆಯ ತಡೆಗೋಡೆ -ಮೊಬೈಲ್ ಟವರ್ ಸೆಟ್ ಅಪ್ ರೂಮ್ ಗೆ ಹಾನಿ
    • ಕಾಡಾನೆ ಕಾರ್ಯಾಚರಣೆ ವ್ಯರ್ಥ : ಮತ್ತೆ ಅದೇ ವ್ಯಾಪ್ತಿಗೆ ಹಿಂದಿರುಗಿದ ಕಾಡಾನೆ ಹಿಂಡು 
    • ಮತ್ತೆ ಅದೇ ವ್ಯಾಪ್ತಿಗೆ ಹಿಂದಿರುಗಿದ ಕಾಡಾನೆ ಹಿಂಡು ವ್ಯರ್ಥವಾದ ಕಾರ್ಯಚರಣೆ
    Facebook X (Twitter) Instagram
    Kodagu NewsKodagu News
    Demo
    Demo
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Demo
    Kodagu News
    Home»ಉದ್ಯೋಗವಕಾಶ»ಕುಶಾಲನಗರದಲ್ಲಿ ಶಾಸಕ ಮಂತರ್ ಅವರಿಂದ ಹಲವು ಕಾಮಗಾರಿಗಳಿಗೆ ಚಾಲನೆ
    ಉದ್ಯೋಗವಕಾಶ

    ಕುಶಾಲನಗರದಲ್ಲಿ ಶಾಸಕ ಮಂತರ್ ಅವರಿಂದ ಹಲವು ಕಾಮಗಾರಿಗಳಿಗೆ ಚಾಲನೆ

    ಕುಶಾಲನಗರ ಜೂ. 9: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ರೂ. 26 ಲಕ್ಷ ವೆಚ್ಚದಲ್ಲಿ ಜನತಾ ಕಾಲೋನಿ, ವಿನಾಯಕ ಹಾಗೂ ಮಾರುತಿ ಬಡಾವಣೆಗಳಲ್ಲಿನ ರಸ್ತೆ ಕಾಮಗಾರಿ, ಇದಲ್ಲದೆ ಕೂಡುಮಗಳೂರು ಗ್ರಾ.ಪಂ.ನ ನವಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿಗೂ ಅಧಿಕ ಅನುದಾನ ಒದಗಿಸಲಾಗಿದ್ದು , ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ಜಿಲ್ಲೆಗೆ ಸಾಕಷ್ಟು ಅನುದಾನ ಒದಗಿಸಿದ್ದು , ಅವರ ಸಹಕಾರ ನಮಗೆ ಸದಾ ಇದ್ದು, ಮುಂದೆಯೂ ನಮಗೆ ಅಗತ್ಯವಿರುವ ಅನುದಾನ ಒದಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

    ಆನೆ ಮಾನವ ಸಂಘರ್ಷ ನಿಯಂತ್ರಣ ಸಂಬಂಧ ಎಲ್ಲಾ ರೀತಿಯ ಪರಿಣಾಮಕಾರಿ ಯೋಜನೆಗಳನ್ನು ಈಗಾಗಲೆ ಕಾರ್ಯರೂಪಕ್ಕೆ ತರಲಾಗಿದೆಯಾದರೂ ಕಾಡಾನೆಗಳು ಬೇರೆ ಬೇರೆ ಮಾರ್ಗದ ಮೂಲಕ ಕಾಡಿನಿಂದ ಹೊರಬಂದು ಅಪಾಯ ಉಂಟು ಮಾಡುತ್ತಿರುವ ಕಾರಣ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದರಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಕಾರ್ಯೋನ್ಮುಖರಾಗಿರುವ ಮೂಲಕ ಸಂಭಾವ್ಯ ಜೀವ ಹಾನಿ ತಡೆಗಟ್ಟಲು ಪ್ರಯತ್ನಿಸಬೇಕಿದೆ ಎಂದರು.

    ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮುಳ್ಳುಸೋಗೆ ಗ್ರಾ.ಪಂ. ಕುಶಾಲನಗರ ಪುರಸಭೆಗೆ ವಿಲೀನಗೊಂಡ ಬಳಿಕ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಕ್ಕೆ ವಿರುದ್ದವಾಗಿ ಗೊಂದಿಬಸವನಹಳ್ಳಿ ಮತ್ತು ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

    ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ‌ಮುತ್ತಪ್ಪ, ನಗರ ಕಾಂಗ್ರೆಸ್‌ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್‌, ಪುರಸಭೆ ಮಾಜಿ ಸದಸ್ಯ ವಿ.ಜೆ. ನವೀನ್ ಗೌಡ, ವಿ.ಎಸ್. ಆನಂದಕುಮಾ‌ರ್, ಗ್ರಾ.ಪಂ. ಮಾಜಿ ಸದಸ್ಯ ಮಣಿ ಸೇರಿದಂತೆ ಪ್ರಮುಖರಾದ ರಂಜನ್, ಆದಂ, ಗಯಾಜ್, ಆನಂದ್‌ ಸೇರಿದಂತೆ ಬಡಾವಣೆ ನಿವಾಸಿಗಳು ಇದ್ದರು.

    ಕುಶಾಲನಗರದಲ್ಲಿ ಶಾಸಕ ಡಾ. ಮಂತರ್ ಗೌಡ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ , ಕಾಂಗ್ರೆಸ್ ಪಕ್ಷದ ನಾಯಕರು ಇನ್ನಿತರರಿದ್ದರು.

    Previous Articleಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿ ಸಭೆ ವಿಪತ್ತು ನಿರ್ವಹಣೆ ಉದಾಸೀನ ಮಾಡದೆ ಅಗತ್ಯ ಮುನ್ನೆಚ್ಚರಕ್ಕೆ ಡಾ.ಮಂತರ್ ಗೌಡ ಸೂಚನೆ
    Next Article ಕೊಡಗು ಜಿಲ್ಲೆಯ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಆರ್ಎಫ್ ಅಡಿಯಲ್ಲಿ ₹22 ಕೋಟಿ ಮಂಜೂರು: ಸಂಸದ ಯದುವೀರ್ ಒಡೆಯರ್

    Related Posts

    ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದು: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

    June 12, 2026

    ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ

    June 11, 2026

    40 ಅಡಿ ಕಂದಕಕ್ಕೆ ಉರುಳಿದ ಕಾರು

    June 11, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಚಿಕಿತ್ಸೆ ನೀಡದೆ ಶಾಸಕರ ಆಪ್ತರಿಂದ ಅಪಪ್ರಚಾರ: ಅಳಲು ತೋಡಿಕೊಂಡ ವೈಭವ್

    February 2, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025

    ಮಡಿಕೇರಿಗೆ ನಕಲಿ ಪೊಲೀಸರ ಎಂಟ್ರಿ

    December 13, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದು: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

    June 12, 2026

    ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ

    June 11, 2026

    40 ಅಡಿ ಕಂದಕಕ್ಕೆ ಉರುಳಿದ ಕಾರು

    June 11, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಚಿಕಿತ್ಸೆ ನೀಡದೆ ಶಾಸಕರ ಆಪ್ತರಿಂದ ಅಪಪ್ರಚಾರ: ಅಳಲು ತೋಡಿಕೊಂಡ ವೈಭವ್

    February 2, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.