Author: Kodagu-admin

ಬಿಜೆಪಿಗೆ ತಾಕತ್ತಿದ್ದರೆ 543 ಕ್ಷೇತ್ರದಲ್ಲೇ ಮಹಿಳಾ ಮೀಸಲಾತಿ ನೀಡಲಿ: ಕಾಂಗ್ರೆಸ್ ಮುಖಂಡ ಮುದ್ದಪ್ಪ ಸವಾಲು ಬೆಂಗಳೂರು: ಕೇಂದ್ರ ಸರಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸೋಲು ಕಂಡ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮಹಿಳಾ ಮೀಸಲಾತಿ ತರುವ ನಿಜವಾದ ಕಾಳಜಿ ಇದ್ದಲ್ಲಿ ಹಾಲಿ ಇರುವ 543 ಲೋಕಸಭಾ ಸ್ಥಾನಗಳ ಪೈಕಿ 181 ಸ್ಥಾನಗಳನ್ನು ಮಹಿಳೆಯರಿಗೆ ಮೊದಲು ಮೀಸಲಿಡಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಬಿಜೆಪಿಗೆ ಸವಾಲು ಎಸೆದಿದ್ದಾರೆ. ಮಾಧ್ಯಮ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು ಹಾಲಿ ಇರುವ 543 ಲೋಕಸಭಾ ಸ್ಥಾನಗಳನ್ನು 815 ಕ್ಕೆ ಹೆಚ್ಚಿಸಿ ಅದರಲ್ಲಿ ಮಹಿಳಾ ಮೀಸಲಾತಿಯನ್ನು ಶೇಕಡ 33 ರಷ್ಟು ನೀಡುವ ಬದಲು ಹೀಗಿರುವ 543 ರಲ್ಲೇ ಮಹಿಳಾ ಮೀಸಲಾತಿ ಮುಂದಿನ 2029ರ ಲೋಕಸಭಾ ಜಾರಿಗೆ ತರಲಿ ಎಂದು ಅವರು ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ನಾರಿಶಕ್ತಿ ನಂದನ್ ಅಧಿನಿಯಮ ಮೂರನೇ ಎರಡಷ್ಟು ಬಹುಮತ…

Read More

ನಾಪೋಕ್ಲು ಹಲ್ಲೆ ಪ್ರಕರಣ- ಬ್ಲಾಕ್ ಅಧ್ಯಕ್ಷ,ಆತನ ಪುತ್ರ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲು ಮಡಿಕೇರಿ :ನಾಪೋಕ್ಲು ಮಾರುಕಟ್ಟೆ ಬಳಿಯಲ್ಲಿ ಬೇತು ಗ್ರಾಮದ ಹಮೀದ್ ಹಾಗೂ ಅವರ ಕುಟುಂಬದ ಮಹಿಳೆಯರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ಹಲ್ಲೆ ನಡೆಸಿದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಆತನ ಪುತ್ರ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ದಿನಾಂಕ 18 -03- 2025ರಂದು ನಾಪೋಕ್ಲು ಬೇತು ಗ್ರಾಮದ ನಿವಾಸಿ ಹಮೀದ್ ಎಂಬುವವರ ಸಹೋದರ ಹಂಸ ಎಂಬವವರು ನೀಡಿದ ದೂರಿನ ಸಂಬಂಧ ಹಮೀದ್ ಸೋದರ ಸಂಬಂಧಿ ಮಹಿಳೆಯರೊಂದಿಗೆ ನಾಪೋಕ್ಲು ಠಾಣೆಗೆ ಭೇಟಿ ನೀಡಿದ್ದರು.ಬಳಿಕ ಮನೆಗೆ ಹಿಂತಿರುಗುವ ವೇಳೆ ನಾಪೋಕ್ಲು ಮಾರುಕಟ್ಟೆ ಬಳಿಯಲ್ಲಿ ನಿಂತಿರುವಾಗ ( KA -05 -MM-2022 )ಸಂಖ್ಯೆಯ ಕಾರಿನಲ್ಲಿ ಬಂದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಆತನ ಪುತ್ರ ಮಹಮ್ಮದ್ ಅಲಿ ಹಾಗೂ ಬೇತು ಗ್ರಾಮದ ಕೆ.ಎಚ್. ಅಹಮದ್…

Read More

ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ – ಆಕ್ರೋಶಗೊಂಡ ನಾಗರಿಕರಿಂದ ನಾಪೋಕ್ಲು ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ – 15 ದಿನದ ಗಡುವು -ಉಗ್ರ ಹೋರಾಟದ ಎಚ್ಚರಿಕೆ. ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೂರಿದ್ದು ಇದರಿಂದ ನಾಗರೀಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ನಾಪೋಕ್ಲು ಹೋಬಳಿ ವ್ಯಾಪ್ತಿಯ ನಾಗರೀಕರು ನಾಪೋಕ್ಲು ಚೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ನಾಪೋಕ್ಲು ಚೆಸ್ಕಾಂ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ನಾಗರಿಕರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತಾರಾಟೆಗೆ ತೆಗೆದುಕೊಂಡರು. ಈ ಸಂದರ್ಭ ನಾಪೋಕ್ಲುವಿನ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರು ಮಾತನಾಡಿ ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ನಾಗರಿಕರು ಕಂಗಾಲಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ವಿದ್ಯುತ್ ಫೀಡರ್ ನಲ್ಲಿ ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ನಾಪೋಕ್ಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯ ಉಂಟಾಗಲಿದೆ ಎಂದು ಇಲಾಖೆ…

Read More

ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡು ಮಖಾಂ ಉರೂಸ್ ಗೆ ಶ್ರದ್ಧಾ ಭಕ್ತಿಯ ಚಾಲನೆ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕೊಡಗಿನ ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ ವಲಿಯುಲ್ಲಾಹಿ,ಸಯ್ಯಿದ್ ಹಸನ್ ಸಖಾಫ್ ಹಳ್ರಮಿ ಹಾಗೂ ಇತರ ಮಹಾನುಭಾವರ ಉರೂಸ್ ಸಮಾರಂಭಕ್ಕೆ ಶುಕ್ರವಾರ ಗಣ್ಯರು ಶ್ರದ್ಧಾಭಕ್ತಿಯ ಚಾಲನೆ ನೀಡಿದರು. ಎಮ್ಮೆಮಾಡುವಿನಲ್ಲಿ ಶುಕ್ರವಾರ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಅಬ್ದುಲ್ಲಾ ಫೈಝಿ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಹುಸೈನ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನಾಇಬ್ ಖಾಝಿ ಅಬ್ದುಲ್ಲಾ ಫೈಝಿ ಉದ್ಘಾಟಿಸಿ…

Read More

ಬೆಟ್ಟತ್ತೂರು ಗ್ರಾಮದ ಕೊಂಪುಳಿ ಮನೆಯಲ್ಲಿ ಅದ್ದೂರಿಯಾಗಿ ನಡೆದ “ಧರ್ಮ ದೈವಗಳ” ಆರಾಧನೆ ಮಡಿಕೇರಿ ತಾಲ್ಲೂಕು ಬೆಟ್ಟತೂರು ಗ್ರಾಮದಲ್ಲಿ ಕೊಂಪುಳಿ ಕುಟುಂಬದವರು ಇದೆ ಮೊದಲ ಭಾರಿಗೆ ನಡೆಸಿದ ಎರಡು ದಿನಗಳ ಧರ್ಮ ದೈವಗಳ ಆರಾಧನೆ ಅದ್ದೂರಿಯಾಗಿ ನೆರವೇರಿತು. ಇಲ್ಲಿವರೆಗೆ ಕೇವಲ ಕುಟುಂಬದ ಕುಲದೇವರು ವೆಂಕಟರಮಣ ಹರಿಸೇವೆಗೆ ಸೀಮಿತವಾಗಿದ್ದ ಆಚರಣೆಗಳು ಇದೀಗ ಕುಟುಂಬದ ಅಭಿವೃದ್ಧಿ ಹಾಗೂ ಸಂಕಷ್ಟ ಪರಿಹಾರವಾಗಿ ಕಾರ್ಯಗಳು ಯಶಸ್ವಿಯಾಗಿ ನಡೆದವು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಗುರುಕಾರಣದಿಂದ ಆರಂಭವಾಗಿ ಕುಕ್ಕೆತಿ ಮತ್ತು ಬಲ್ಲು, ಪಾಷಾಣ ಮೂರ್ತಿ ವರ್ಣರ ಪಂಜುರ್ಲಿ, ರಾಜಗುಳಿಗ ಭಾನುವಾರ ಬೆಳಗಿನ ಜಾವದ ವರೆಗೆ ನಡೆದಿದ್ದು, ಮರುದಿನ ರುದ್ರ ಚಾಮುಂಡಿ (ಧರ್ಮ ದೈವ ) ಕೋಲ ನಡೆದು ಕುಟುಂಬಸ್ಥರಿಗೆ ಪರಿಹಾರ ನೀಡಿ ಮುಂದಿನ ದೈವ ಕಾರ್ಯಗಳನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಎರಡು ದಿಂದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಕುಟುಂಬಸ್ಥರು, ನೆಂಟರಿಷ್ಟರು ಸಹಸ್ರ ಸಂಖ್ಯೆಯಲಿ ಬಂದು ಉತ್ಸವಕ್ಕೆ ಸಾಕ್ಷಿಯಾದರು.

Read More

ಸಂಭ್ರಮದಿಂದ ಜರುಗಿದ ಕಕ್ಕಬ್ಬೆ ಬಳಿಯ ವಯಕೋಲ್ ಪುಳಿಙೋಂ ಉರೂಸ್ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಕಕ್ಕಬ್ಬೆ ಸಮೀಪದ ವಯಕೋಲ್ ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪುಳಿಙೋಂ ಔಲಿಯಾಗಳ ಹೆಸರಿನಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು. ಶನಿವಾರ ಮಗ್ರಿಬ್ ನಮಾಜ್ ಬಳಿಕ ವಯಕೋಲ್ ಮಸ್ಜಿದುರ್ರಹ್ಮಾನ್ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಹಾಜಿ ವಿ.ಎ. ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸಿಗೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಅಹ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸದರ್ ಮುಹಲ್ಲಿಂ ಅಬ್ದುಲ್ ನಾಸರ್ ಲತೀಫಿ ಉದ್ಘಾಟಿಸಿ ಮಾತನಾಡಿದರು. ಭಾನುವಾರ ಮಧ್ಯಾಹ್ನ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ವಯಕೋಲ್ ಮಸೀದಿಯಾ ಇಮಾಮರಾದ ರಫೀಕ್ ಸಖಾಫಿ ಅಲ್ ಅಝ್ಹರಿ ಉದ್ಘಾಟಿಸಿದರು. ಪ್ರಖ್ಯಾತ ವಾಗ್ಮಿ ಮೊಹಮ್ಮದ್ ರಾಫಿ ಹಿಮಮಿ ಖಾಮಿಲ್ ಸಖಾಫಿ ಧಾರ್ಮಿಕ ಪ್ರವಚನ ನಡೆಸಿದರು. ಪೈನರಿ ಮುಸ್ಲಿಂ ಜಮಾಅತ್ ಮುದರ್ರಿಸ್ ನಿಝಾರ್…

Read More

ಚಾರಣ ಹಾಗು ಪ್ರವಾಸಿಗರ ಮೇಲೆ ನಿಗಾ ವಹಿಸಲಿ :ವಿಜು ಸುಬ್ರಮಣಿ ಪಾಲಿಬೆಟ್ಟ:-ಹೊರ ರಾಜ್ಯಗಳಿಂದ ಆಗಮಿಸುವ ಚಾರಣಿಗರು ಹಾಗೂ ಪ್ರವಾಸಿಗರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಒತ್ತಾಯಿಸಿದ್ದಾರೆ. ಪ್ರಕೃತಿ ಸೌಂದರ್ಯದಿಂದ ಕೂಡಿರುವ ಕೊಡಗು ಜಿಲ್ಲೆಗೆ ಕಪ್ಪು ಚುಕ್ಕೆ ತರುವ ನಿಟ್ಟಿನಲ್ಲಿ ಕೆಲವು ಚಾರಣಿಗರು ಹಾಗೂ ಪ್ರವಾಸಿಗರು ಮಾಡುತ್ತಿದ್ದು ನಿಯಮ ಪಾಲನೆ ಮಾಡದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದರ ಮೂಲಕ ಎಚ್ಚರಿಕೆ ನೀಡಬೇಕು. ಇತ್ತೀಚೆಗೆ ತಡಿಯಂಡಮೋಳ್ ಬೆಟ್ಟದಲ್ಲಿ ಕಾಣೆಯಾಗಿ ಪತ್ತೆಯಾದ ಶರಣ್ಯ ಅರಣ್ಯ ಇಲಾಖೆಯ ನಿಯಮಗಳನ್ನು ಪಾಲನೆ ಮಾಡದೆ ನಿಗೂಢವಾಗಿ ನಾಪತ್ತೆಯ ನಾಟಕವಾಗಿದ್ದು ಸೂಕ್ತ ತನಿಖೆ ನಡೆಸುವುದರ ಮೂಲಕ ಕ್ರಮ ಕೈಗೊಳ್ಳಬೇಕು. ಕೆಲವು ಪ್ರವಾಸಿಗರು ಧಾರ್ಮಿಕ ಸ್ಥಳಗಳಲ್ಲಿ ಮೋಜು ಮಸ್ತಿ ಯಲ್ಲಿ ತೊಡಗಿಸಿಕೊಂಡು ಪವಿತ್ರ ಸ್ಥಳಗಳಿಗೆ ದಕ್ಕೆ ತರುತ್ತಿದ್ದಾರೆ ಅಂಥವರ ಮೇಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಆಗಮಿಸುವ ಕೆಲ ಪ್ರವಾಸಿಗರಿಂದ ಪರಿಸರ ನೈರ್ಮಲ್ಯಕ್ಕೆ ದಕ್ಕೆಯಾಗುತ್ತಿದ್ದು ಎಲ್ಲೆಂದರಲ್ಲಿ ಮಧ್ಯದ ಬಾಟಲಿಗಳು,…

Read More

ಶಾಸಕ ಪೊನ್ನಣ್ಣ ಉಪಸ್ಥಿತಿಯಲ್ಲಿ ವಿರಾಜಪೇಟೆ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಸಿಡಿಸಿಯ ಅಧ್ಯಕ್ಷರೂ ಆಗಿರುವ ಮಾನ್ಯ ಶಾಸಕರು, ನಿಯಮಿತವಾಗಿ ನಡೆಯುವ ಈ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ವಿವಿಧ ಕ್ರಮಗಳು ಹಾಗೂ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರು ಮದಂಡ ತಿಮ್ಮಯ್ಯ, ಸದಸ್ಯರು ನಾಸಿರ್ ಹಾಗೂ ಸಿಡಿಸಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Read More

ಪಿಯುಸಿಯಲ್ಲಿ ಶೇಕಡ 95 ಅಂಕ ಪಡೆದ ಮೆಕೇರಿಯ ಮೌನ ಮಡಿಕೇರಿ: ಇಲ್ಲಿನ ಸಂತ ಮೈಕಲರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಮೇಕೇರಿ ಗ್ರಾಮದ ಮೌನ 94.5% ಅಂಕ ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾಳೆ. ವಿದ್ಯಾರ್ಥಿ ಮೌನ ಮೆಕೆರಿಯ ಉಷಾ ಹಾಗೂ ರಾಕೇಶ್ ದಂಪತಿಗಳ ಪುತ್ರಿ.

Read More

ಹವಾಮಾನ ಎಚ್ಚರಿಕೆ: ಹಲವೆಡೆ ಮಳೆ ಕೊರತೆ ಸಾಧ್ಯತೆ ಪೆಸಿಪಿಕ್ ಮಹಾ ಸಮುದ್ರ ಪ್ರಕ್ಷುಬ್ದಗೊಂಡಿದ್ದು ಏಕ ಕಾಲದಲ್ಲಿ ಮೂರು ವಿನಾಶಕಾರಿ ಚಂಡಮಾರುತಗಳು ಪೂರ್ವ ಫೆಸಿಪಿಕ್ ಸಾಗರದಲ್ಲಿ ಕಾಣಿಸಿಕೊಂಡಿರುವ ತೀರಾ ಅಪರೂಪದ ವಿಧ್ಯಾಮಾನ ಘಟಿಸಿದೆ. ಇದು ಜಾಗತಿಕ ವಾತಾವರಣವನ್ನು ತಲ್ಲಣಗೊಳಿಸಲಿದೆ. ಸೋಲೋಮನ್ ದ್ವೀಪಗಳ ಸಮೀಪದ ಕೋರಲ್ ಸಮುದ್ರದಲ್ಲಿ ವಿನಾಶಕಾರಿ “ಮೈಲ” (Maila) ಚಂಡ ಮಾರುತ ಸೃಷ್ಟಿಯಾಗಿದ್ದು ಗಂಟೆಗೆ 185ಕಿಮೀ ವೇಗದಲ್ಲಿ ಪಪುವ ನ್ಯೂಗಿನಿ ಮತ್ತು ಉತ್ತರ ಆಸ್ಟ್ರೇಲಿಯಾದ ತೀರದತ್ತ ಧಾವಿಸುತ್ತಿದೆ. ಪಿಜಿ ಮತ್ತು ನ್ಯೂಜಿಲ್ಯಾಂಡ್ ದ್ವೀಪ ಸಮೂಹಗಳ ಸಮೀಪ ವಿನಾಶಕಾರಿ ಸಮುದ್ರ ಸುಂಟರಗಾಳಿ “ವಯಾನು”(Vaianu) ಭಾರಿ ಮಳೆ ಮತ್ತು ಗಾಳಿಯನ್ನು ಸೃಷ್ಟಿಸಿದೆ. ಮೂರನೆಯ ಚಂಡ ಮಾರುತ “ಎಲ್’ನ್ನಿಕೊ” ಪಶ್ಚಿಮ ಫೆಸಿಫಿಕ್ (ಶಾಂತ) ಮಹಾ ಸಾಗರದ ಮೈಕ್ರೊನೇಷಿಯಾ ಭಾಗದಲ್ಲಿ ಉಂಟಾಗಿದ್ದು, ಈ ವಿಧ್ಯಾಮಾನವು ತೀರಾ ಅಪರೂಪದ್ದೆನಿಸಿದೆ. ಶಾಂತ ಮಹಾ ಸಾಗರದ ಗಾಳಿ ಮತ್ತು ಉಷ್ಣಾಂಶದ ವಿಧ್ಯಾಮಾನಗಳು ಜಾಗತಿಕ ಹವಾಮಾನದ ಆಗು ಹೋಗುಗಳನ್ನು ನಿರ್ಧರಿಸುತ್ತವಾದ್ದರಿಂದ ಇದು ಜಾಗತಿಕ ಮಳೆ ಪ್ರಮಾಣ, ಉಷ್ಣಾಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.…

Read More