ಹವಾಮಾನ ಎಚ್ಚರಿಕೆ: ಹಲವೆಡೆ ಮಳೆ ಕೊರತೆ ಸಾಧ್ಯತೆ
ಪೆಸಿಪಿಕ್ ಮಹಾ ಸಮುದ್ರ ಪ್ರಕ್ಷುಬ್ದಗೊಂಡಿದ್ದು ಏಕ ಕಾಲದಲ್ಲಿ ಮೂರು ವಿನಾಶಕಾರಿ ಚಂಡಮಾರುತಗಳು ಪೂರ್ವ ಫೆಸಿಪಿಕ್ ಸಾಗರದಲ್ಲಿ ಕಾಣಿಸಿಕೊಂಡಿರುವ ತೀರಾ ಅಪರೂಪದ ವಿಧ್ಯಾಮಾನ ಘಟಿಸಿದೆ. ಇದು ಜಾಗತಿಕ ವಾತಾವರಣವನ್ನು ತಲ್ಲಣಗೊಳಿಸಲಿದೆ.
ಸೋಲೋಮನ್ ದ್ವೀಪಗಳ ಸಮೀಪದ ಕೋರಲ್ ಸಮುದ್ರದಲ್ಲಿ ವಿನಾಶಕಾರಿ “ಮೈಲ” (Maila) ಚಂಡ ಮಾರುತ ಸೃಷ್ಟಿಯಾಗಿದ್ದು ಗಂಟೆಗೆ 185ಕಿಮೀ ವೇಗದಲ್ಲಿ ಪಪುವ ನ್ಯೂಗಿನಿ ಮತ್ತು ಉತ್ತರ ಆಸ್ಟ್ರೇಲಿಯಾದ ತೀರದತ್ತ ಧಾವಿಸುತ್ತಿದೆ.
ಪಿಜಿ ಮತ್ತು ನ್ಯೂಜಿಲ್ಯಾಂಡ್ ದ್ವೀಪ ಸಮೂಹಗಳ ಸಮೀಪ ವಿನಾಶಕಾರಿ ಸಮುದ್ರ ಸುಂಟರಗಾಳಿ “ವಯಾನು”(Vaianu) ಭಾರಿ ಮಳೆ ಮತ್ತು ಗಾಳಿಯನ್ನು ಸೃಷ್ಟಿಸಿದೆ.
ಮೂರನೆಯ ಚಂಡ ಮಾರುತ “ಎಲ್’ನ್ನಿಕೊ” ಪಶ್ಚಿಮ ಫೆಸಿಫಿಕ್ (ಶಾಂತ) ಮಹಾ ಸಾಗರದ ಮೈಕ್ರೊನೇಷಿಯಾ ಭಾಗದಲ್ಲಿ ಉಂಟಾಗಿದ್ದು, ಈ ವಿಧ್ಯಾಮಾನವು ತೀರಾ ಅಪರೂಪದ್ದೆನಿಸಿದೆ. ಶಾಂತ ಮಹಾ ಸಾಗರದ ಗಾಳಿ ಮತ್ತು ಉಷ್ಣಾಂಶದ ವಿಧ್ಯಾಮಾನಗಳು ಜಾಗತಿಕ ಹವಾಮಾನದ ಆಗು ಹೋಗುಗಳನ್ನು ನಿರ್ಧರಿಸುತ್ತವಾದ್ದರಿಂದ ಇದು ಜಾಗತಿಕ ಮಳೆ ಪ್ರಮಾಣ, ಉಷ್ಣಾಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪ್ರಸ್ತುತ ಈ ತ್ರಿವಳಿ ಚಂಡಮಾರುತಗಳು ಒಂದೇ ಮಹಾ ಸಾಗರದಲ್ಲಿ ಏಕಕಾಲಕ್ಕೆ ಘಟಿಸಿದ್ದು. ಸಾಗರದ ಮೇಲ್ಮೈ ಅಧಿಕ ಉಷ್ಣಾಂಶದ ಕಾರಣಕ್ಕೆ ಪ್ರಕ್ಷುಬ್ದಗೊಂಡಿದೆ. ತತ್ಪರಿಣಾಮವಾಗಿ ಜಾಗತಿಕವಾಗಿ ಉಷ್ಣಾಂಶ ಏರಿಕೆಯಾಗಿ ಬಹುತೇಕ ಕಡೆ ಮಳೆ ಕೊರತೆ ಉಂಟಾಗಬಹುದು ಮತ್ತು ಕೆಲವಡೆ ವಿಪರೀತ ಮಳೆ ಸುರಿಯಬಹುದು.
ಮಹಾ ಸಾಗರದ ಗುಂಟ ಉಂಟಾಗಿರುವ ಪ್ರಕ್ಷುಬ್ದತೆ ತಣ್ಣಗಾಗುವ ವರೆಗೆ ದಕ್ಷಿಣ ಭಾರತದಾಧ್ಯಂತ ವಿಪರೀತ ಶೆಕೆ ಮತ್ತು ಶುಷ್ಕತೆ ಇರಲಿದೆ. ಕೊಡಗಿನ ಹಲವು ಬಾಗಗಳಲ್ಲಿ ಉಷ್ಣಾಂಶವು 38ಡಿಗ್ರಿ ಮೀರಬಹುದು. ಈ ಭಾರಿ “ಎಲ್ ನಿನೊ”ಕಾರಣಕ್ಕೆ ಮಳೆ ಕೊರತೆ ಉಂಟಾಗಬಹುದಾದ್ದರಿಂದ ನೀರಿಗೆ ಹಾಹಾಕಾರ ಉಂಟಾಗಬಹುದು. ರೈತರು ಎಚ್ಚರಿಕೆವಹಿಸ ಬೇಕು.
2015ರಲ್ಲಿ ಇದೇ ರೀತಿಯ ವಿಧ್ಯಾಮಾನ ಸಂಭವಿಸಿತ್ತು.
ನಾಪಂಡ ಎಂ ಮುದ್ದಪ್ಪ

