Author: Kodagu-admin

ಎಸ್ಸೆಸ್ಸೆಲ್ಸಿ ಪರೀಕ್ಷೆ*: ಜಿಲ್ಲೆಗೆ ಉತ್ತಮ ಫಲಿತಾಂಶ ನಿರೀಕ್ಷೆ: ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಮಾರ್ಚ್‌ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಮೂಲಕ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಲು ಕ್ರಮ ವಹಿಸಬೇಕು ಎಂದು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯ ಪ್ರಾಂಶುಪಾಲರೂ ಆದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ( ಅಭಿವೃದ್ಧಿ ) ರಾಮಚಂದ್ರರಾಜೇ ಅರಸ್ ಹೇಳಿದರು. ಶಾಲಾ ಶಿಕ್ಷಣ ಇಲಾಖೆಯ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ-3 ರ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ನಡೆಸಿ ಮಾ.18 ರಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಕುರಿತು ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ…

Read More

ಚೇಲಾವರ ಗ್ರಾಮದ ತೋಟಗಳಲ್ಲಿ ಕಾಡಾನೆ ದಾಂಧಲೆ – ಆನೆ ಹಾವಳಿ ನಿಯಂತ್ರಿಸಲು ಗ್ರಾಮಸ್ಥರ ಒತ್ತಾಯ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದಲ್ಲಿ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ನಷ್ಟಉಂಟು ಮಾಡಿದೆ. ಚೇಲಾವರ ಗ್ರಾಮದ ಮುಂಡಿಯೊಳಂಡ ಮಿಟ್ಟು ಅಪ್ಪಯ್ಯ ಹಾಗೂ ಮುಂಡಿಯೋಳಂಡ ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ,ಬಾಳೆ ಹಾಗೂ ಮತ್ತಿತರರ ಕೃಷಿ ಗಿಡಗಳನ್ನು ತುಳಿದು ನಾಶ ಪಡಿಸಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.ಈ ವ್ಯಾಪ್ತಿಯಲ್ಲಿ ಗ್ರಾಮಸ್ಥರು,ರೈತರು ಜೀವ ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಹಲವು ಬಾರಿ ಕಾಡಾನೆ ಈ ವ್ಯಾಪ್ತಿಯ ರೈತರ ಹಾಗೂ ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ಆದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಿಸಲು ಯಾವುದೇ ಶಾಶ್ವತ…

Read More

ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ-ಸಾಧಕಿ ಶೈಲಾ ಮೊಣ್ಣಪ್ಪಾಗೆ ಸನ್ಮಾನ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ಮಡಿಕೇರಿ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ಹಾಗೂ ಕೊಡಗಿನ ಪ್ರಥಮ ಆಟೋ ಚಾಲಕಿ ಪಾಂಡನ ಶೈಲಾ ಮೊಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಪಾಂಡನ ಶೈಲಾ ಮೊಣ್ಣಪ್ಪ ಅವರು ತಮ್ಮ ಸಾಧನೆಯ ಬಗ್ಗೆ ವಿವರಿಸಿ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಕುಮುದ ರಶ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ವಿನಿರಾಯ್,ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಕವಿತಾ ಬೆಳ್ಯಪ್ಪ,ಉಮಾ ಪ್ರಭು,ಮಹಿಳಾ ಮೋರ್ಚಾದ ಸರ್ವ ಸದಸ್ಯರು ಹಾಜರಿದ್ದರು. ಉಮಾಪ್ರಭು ಸ್ವಾಗತಿಸಿ, ವಿನಿರಾಯ್ ಸರ್ವರನ್ನು ವಂದಿಸಿದರು.

Read More

ನಾಪೋಕ್ಲುವಿನ ಶ್ರೀಪೊನ್ನು ಮುತ್ತಪ್ಪ ದೇವಾಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಎ.ಕೆ. ಚಂದ್ರನ್ ನೇಮಕ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು: ಇತಿಹಾಸ ಪ್ರಸಿದ್ಧ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯಕ್ಕೆ 2026 -27 ನೇ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಅಧ್ಯಕ್ಷರಾಗಿ ಎ.ಕೆ.ಚಂದ್ರನ್ ಅವರು ನೇಮಕವಾಗಿದ್ದಾರೆ. ದೇವಾಲಯದ ಸುಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯಲ್ಲಿ ಭಕ್ತಾದಿಗಳ ಹಾಗೂ ಪ್ರಮುಖರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಕೆ.ಅನಿಲ್,ಉಪಾಧ್ಯಕ್ಷರಾಗಿ ಎಂ.ಕೆ.ತಂಗ,ಸಹ ಕಾರ್ಯದರ್ಶಿಯಾಗಿ ಟಿ. ಕೆ.ಸುಕುಮಾರ್,ಕೋಶಾಧಿಕಾರಿಯಾಗಿ ಮಹೇಶ್ ಮೇನೋನ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಆಡಳಿತ ಮಂಡಳಿಯ ಸದಸ್ಯರುಗಳಾಗಿ ಕೆ.ಕೆ.ವಿಜಯ ಕೆ.ಕೆ.ಅನಿಲ್, ಎಂ. ಪಿ. ಹರಿದಾಸ್,ಪಿ.ವಿ.ಅನಿಲ್ ಪಿ.ಕೆ.ಸುನಿಲ್,ಟಿ.ಕೆ. ರಘು ಟಿ. ಆರ್ ಮೋನಿಶ್,ಎ.ವಿ.ಸತೀಶ್, ಎ. ಕೆ.ಮಹೇಶ್,ಸತೀಶ್,ಟಿ. ಎಂ.ಸುನಿಲ್, ಸಂದೇಶ್, ಎ.ಎಂ. ಚೇತನ್, ಪ್ರಕಾಶ್ ಪಟ್ಟಾಭಿ ಅವರುಗಳು ಆಯ್ಕೆಯಾದರು. ಮುಂಬರುವ ವರ್ಷದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಈತನ ತಂಡವು…

Read More

ಅಖಿಲ ಅಮ್ಮ ಕೊಡವ ಸಮಾಜ ಅಭಿವೃದ್ಧಿ ಗೆ ಎ.ಎಸ್.ಪೊನ್ನಣ್ಣ ನವರಿಂದ 20 ಲಕ್ಷದ ಚೆಕ್ ವಿತರಣೆ ಕೊಡಗು ಅಖಿಲ ಅಮ್ಮಕೊಡವ ಸಮಾಜದ ಅಭಿವೃದ್ದಿಗೆ ಸರ್ಕಾರದಿಂದ ಬಿಡುಗಡೆಯಾದ 20 ಲಕ್ಷ ರೂಗಳ ಚೆಕ್ ನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಸಮಾಜದ ಅಧ್ಯಕ್ಷರಾದ ಬಾನಂಡ ಪ್ರಥ್ಯು ರವರಿಗೆ ವಿಧಾನ ಸೌಧದಲ್ಲಿ ಹಸ್ತಾಂತರ ಮಾಡಿದರು. ಈ ಸಂಧರ್ಭದಲ್ಲಿ ಅಮ್ಮ ಕೊಡವ ಸಮಾಜದ ಪ್ರಮುಖರಾದ ಪುತ್ತಾಮನೆ ಅನಿಲ್ ಪ್ರಸಾದ್,ನೇರಿಯಂಡಮ್ಮನ ಸುಬ್ರಮಣಿ,ಜನಾರ್ದನ, ಬಾನಂಡ ಸುನೀತ್,ಸೂದನ್,ಹೆಮ್ಮಚ್ಚಿಮನೆ ಎನ್ ಹರೀಶ್,ಹೆಚ್.ಎಂ.ಹರೀಶ್,ಮನ್ನಕಮನೆ ಎ ಬಾಲಕೃಷ್ಣ, ಎಂ.ಎಂ.ಬಾಲಕೃಷ್ಣ,ಹೆಚ್.ಆರ್.ಮದನ್,ಪುತ್ತಾಮನೆ ಪರ್ವತ್,ಯತೀಶ್, ಹೆಚ್.ಎಂ.ಪ್ರಶಾಂತ್,ಕೊಡಿಂಜಮ್ಮನ ಬಾಲಕೃಷ್ಣ,ಶರಣು, ವಿಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More

ಕರಡಿಗೋಡುವಿನಲ್ಲಿ ಒಂಟಿ ಸಲಗ ಹಾವಳಿ ಕರಡಿಗೋಡಿನಲ್ಲಿ ಒಂಟಿ ಸಲಗ ಹಾವಳಿ ಮುಂಜಾನೆ ಸಮಯ 4ರ ಹೊತ್ತಿನಲ್ಲಿ ಕರಡಿಗೋಡುವಿನ ಕೃಷಿಕ ಕುಕ್ಕುನೂರು ಚಿದಾನಂದ ರವರ ಕಾಫಿ ತೋಟಕ್ಕೆ ಬೃಹತ್ ಗಾತ್ರದ ಒಂಟಿ ಸಲಗವೊಂದು ಲಗ್ಗೆ ಇಟ್ಟು ಕಾಫಿ, ಕರಿಮೆಣಸು ಗಿಡಮರ ಹಾಗು ತೋಟದಲ್ಲಿ ಹಾದು ಹೋದ ಸ್ಪೀoಕ್ಲರ್ ಅಲ್ಯೂಮಿನಿಯಂ ಪೈಪನ್ನು ತುಳಿದು ನಾಶಪಡಿಸಿದೆ. ತುಂಬಾ ರೋಷದಿಂದ ಕೂಡಿದ ಈ ಒಂಟಿ ಸಲಗ ತೋಟದಲ್ಲಿ ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿದ್ದು ಇದೀಗ ಮಳೆ ಇಲ್ಲದ ಕಾರಣ ತೋಟದಲ್ಲಿ ಕಾಫಿ ಗಿಡಗಳಿಗೆ ನೀರಾವರಿ ವ್ಯವಸ್ಥೆ ಕೈಗೊಳ್ಳಲು ಕಷ್ಟಕರವಾಗುತ್ತಿದೆ ಎಂದು ಕೃಷಿಕ ಚಿದಾನಂದ ರವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಪಟ್ಟ ಅರಣ್ಯ ಇಲಾಖೆ ಯವರು ಆದಷ್ಟು ಬೇಗ ಒಂಟಿ ಸಲಗವನ್ನು ಸೆರೆ ಹಿಡಿದು ನಾಡಿನಿಂದ ಬೇರೆಡೆಗೆ ಸ್ಥಳಾoತರಿಸಬೇಕೆಂದು ಒತ್ತಾಯಿಸಿದ್ದಾರೆ.

Read More

ಓ ಈಶ್ವರನೇ.. ಈಶ್ವರ್ ಖಂಡ್ರೆಯನ್ನು ಕಂಡರೆ ಹೇಳುವೆಯ! ಆನೆ ಮಾನವ ಸಂಘರ್ಷಕ್ಕೆ ಇಂದು ಮತ್ತೊಂದು ಜೀವ ಬಲಿಯಾಗಿದೆ. ಮೂರು ದಿನದ ಹಿಂದೆಯಷ್ಟೇ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಜಲಜ ಎಂಬಾಕೆಯನ್ನು ಆನೆ ತುಳಿದು ಕೊಂದಿತ್ತು.. ಮದೆನಾಡು ಬೆಟ್ಟತ್ತೂರುವಿನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಒಂಟಿ ಆನೆಯೊಂದು ತುಳಿದು ಕೊಂದ ಬೆನ್ನಲ್ಲೇ ಈಗ ಮತ್ತೊಂದು ಸಾವಿನ ಆಘಾತಕಾರಿ ಸುದ್ದಿ ಕೊಡಗಿನ ಜನರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿದ್ದಾಪುರದ ಚೌರಿರ ಗಣಪತಿ ಎಂಬ ಬೆಳೆಗಾರನನ್ನು ಇಂದು ಹಾಡ ಹಗಲೇ ಒಂಟಿ ಸಲಗವೊಂದು ತುಳಿದು ಕೊಂದಿದ್ದು ಕೊಡಗಿನ ಜನ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ. *ಯಾಕಿಷ್ಟು ನಿರ್ಲಕ್ಷ್ಯ?* ಕಳೆದ ಹಲವಾರು ವರ್ಷಗಳಿಂದ ನೂರಾರು ಸಾವು ನೋವುಗಳಾಗುತ್ತಿದ್ದರೂ ಕರ್ನಾಟಕವನ್ನು ಆಡಳಿತ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳು ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿದೆ. ಹೊರ ಜಿಲ್ಲೆಗೆ ನೀಡುವ ಪ್ರಾತಿನಿಧ್ಯವನ್ನು ಕೊಡಗಿನ ಕಾರ್ಮಿಕರ ಮತ್ತು ಕಾಫಿ ಬೆಳೆಗಾರರ ಜೀವಕ್ಕೆ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಈಗಿನ ಜನಪ್ರತಿನಿಧಿಗಳ ಬಳಿಯೂ ಉತ್ತರವಿಲ್ಲ, ಹಿಂದಿನವರ…

Read More

ನಗರ ಆರ್ಥಿಕ ವಲಯ” ಯೋಜನೆಗೆ ಮೈಸೂರು ಸೇರ್ಪಡೆಗೆ ಯದುವೀರ್‌ ಆಗ್ರಹ *ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮೈಸೂರು-ಕೊಡಗು ಸಂಸದರು* ಮೈಸೂರು, ಮಾ. 11: ಸಾಂಸ್ಕೃತಿಕ ನಗರಿ ಮೈಸೂರಿಗೆ ಇದು ಖುಷಿ ಕೊಡುವ ಸುದ್ದಿ. ದೇಶದ ಆರ್ಥಿಕತೆ ಕೊಡುಗೆಗಳನ್ನು ನೀಡಲು ಪ್ರಮುಖ ಪಾತ್ರ ವಹಿಸುವ ನಗರಗಳ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಈಗ ಮೈಸೂರಿಗೂ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದೆ ಮೈಸೂರನ್ನು “ನಗರ ಆರ್ಥಿಕ ವಲಯ” ಯೋಜನೆಗೆ ಸೇರ್ಪಡೆಗೊಳಿಸಲು *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌* ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಸಿದ್ದಾರೆ. ನವದೆಹಲಿಯಲ್ಲಿ ವಿತ್ತ ಸಚಿವರನ್ನು ಭೇಟಿ ಮಾಡಿದ ಸಂಸದ ಯದುವೀರ್‌ ಒಡೆಯರ್‌, ಬಜೆಟ್‌ನಲ್ಲಿ ಘೋಷಣೆ ಮಾಡಿರುವ “ನಗರ ಆರ್ಥಿಕ ವಲಯ” ಯೋಜನೆಗೆ ಮೈಸೂರು ನಗರವನ್ನೂ ಸೇರ್ಪಡೆ ಮಾಡಬೇಕು. ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಅದನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಈ ಕ್ರಮ…

Read More

ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಂದ ಹಿಡಿದು ರೋಬೋಟಿಕ್ ಬೆನ್ನುಮೂಳೆ ಚಿಕಿತ್ಸೆವರೆಗೆ:-ನಾರಾಯಣ ಹೆಲ್ತ್ ಸಿಟಿಯಿಂದ 10,000 ಯಶಸ್ವಿ ಶಸ್ತ್ರಚಿಕಿತ್ಸೆಗಳ ಮೈಲಿಗಲ್ಲು ಸಾಧನೆ ನಾರಾಯಣ ಹೆಲ್ತ್ ಸಿಟಿಯಲ್ಲಿ 10,000ಕ್ಕೂ ಹೆಚ್ಚು ಆರ್ಥೊಪೆಡಿಕ್ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ರೋಬೋಟಿಕ್ ವ್ಯವಸ್ಥೆಗಳು ಆಧುನಿಕ ಕೀಲು ಮತ್ತು ಬೆನ್ನುಮೂಳೆ ಚಿಕಿತ್ಸೆಯನ್ನು ಸಂಪೂರ್ಣವಾಗಿ ಬದಲಿಸುತ್ತಿವೆ. 10 ಮಾರ್ಚ್, ಮಡಿಕೇರಿ: ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗೆ ಹೊಸ ಭಾಷ್ಯ ಬರೆದಿರುವ ನಾರಾಯಣ ಹೆಲ್ತ್ ಸಿಟಿಯು, ಕಳೆದ ಮೂರು ವರ್ಷಗಳಲ್ಲಿ 10,000ಕ್ಕೂ ಹೆಚ್ಚು ಮೂಳೆ ಶಸ್ತ್ರಚಿಕಿತ್ಸೆಗಳನ್ನು ಪೂರೈಸುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧನೆ ಮಾಡಿದೆ. ಈ ಸಾಧನೆಯಲ್ಲಿ 1,000ಕ್ಕೂ ಅಧಿಕ ರೋಬೋಟಿಕ್ ನೆರವಿನ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಗಳು ಸೇರಿವೆ ಎಂಬುದು ವಿಶೇಷ. ಕ್ಷೀಣಿಸುತ್ತಿರುವ ಕೀಲು ಕಾಯಿಲೆಗಳಿಂದ ಹಿಡಿದು ಸಂಕೀರ್ಣ ಬೆನ್ನುಮೂಳೆ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗಳವರೆಗೆ ವಿವಿಧ ಸ್ನಾಯುಸಂಬಂಧಿ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಆಸ್ಪತ್ರೆಯು ಅತ್ಯುತ್ಕೃಷ್ಟ ಪರಿಣತಿ ಹೊಂದಿರುವುದನ್ನು ಈ ಸಾಧನೆಯು ಪ್ರತಿಬಿಂಬಿಸುತ್ತದೆ. ಇಂದು ಆರ್ಥೊಪೆಡಿಕ್ ಶಸ್ತ್ರಚಿಕಿತ್ಸೆಗಳನ್ನು ಯೋಜಿಸುವ ಮತ್ತು ನಿರ್ವಹಿಸುವ ವಿಧಾನದಲ್ಲಿ ಬಹಳ ದೊಡ್ಡ…

Read More

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ತಂಡ ✍🏻ಅಶೋಕ್_ಮಡಿಕೇರಿ ಮಡಿಕೇರಿ: ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಸಾಯಿ ಹಾಕಿ ತರಬೇತಿ ಕೇಂದ್ರ ಮಡಿಕೇರಿ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಪರಿಕಲ್ಪನೆಯೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮಡಿಕೇರಿ ತಾಲೂಕಿನ ಐದು ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ನಡೆದ ಪಂದ್ಯಾವಳಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ತಂಡವು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಯಿ ಹಾಕಿ ತರಬೇತಿ ಕೇಂದ್ರ ಮಡಿಕೇರಿಯ ತರಬೇತಿದಾರರು ಮತ್ತು ಉಸ್ತುವಾರಿಯಾದ ಶ್ರೀಮತಿ ಮಿನಿ ಉನ್ನಿ ರಾಜ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮೇಜರ್ ರಾಘವ ಬಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊಫೆಸರ್ ತಿಪ್ಪೇಸ್ವಾಮಿ, ಭಾರತ ಹಾಕಿ ತಂಡದ ಕ್ಯಾಂಪರ್…

Read More