Close Menu
Kodagu News
    ಹೊಸ ಸುದ್ದಿ

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • 76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
    • ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
    • ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
    • ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    • ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
    • ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ವಿಶೇಷಚೇತನರಿಗೆ ಕ್ರೀಡಾಕೂಟ ಕ್ರೀಡಾಕೂಟದಲ್ಲಿ 8 ವಸತಿ ಶಾಲೆಯ 150 ಕ್ಕೂ ಹೆಚ್ಚು ವಿಶೇಷಚೇತನರು ಭಾಗಿ
    ಜಿಲ್ಲೆ

    ವಿಶೇಷಚೇತನರಿಗೆ ಕ್ರೀಡಾಕೂಟ ಕ್ರೀಡಾಕೂಟದಲ್ಲಿ 8 ವಸತಿ ಶಾಲೆಯ 150 ಕ್ಕೂ ಹೆಚ್ಚು ವಿಶೇಷಚೇತನರು ಭಾಗಿ

    ವಿಶೇಷಚೇತನರಿಗೆ ಕ್ರೀಡಾಕೂಟ

    ಕ್ರೀಡಾಕೂಟದಲ್ಲಿ 8 ವಸತಿ ಶಾಲೆಯ 150 ಕ್ಕೂ ಹೆಚ್ಚು ವಿಶೇಷಚೇತನರು ಭಾಗಿ

    ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಚೇತನರಿಗೆ ರಾಜ್ಯಮಟ್ಟದ ಕ್ರೀಡಾಕೂಟವು ಸೋಮವಾರ ನಡೆಯಿತು.

    ಪಾಲಿಬೆಟ್ಟ, ಮಂಗಳೂರು, ಮಡಿಕೇರಿ, ಮಂಡ್ಯ, ಮೈಸೂರು, ಕೊಡಗು ಮತ್ತು ಬೈಲುಕುಪ್ಪೆಯ ಟಿಬೇಟಿಯನ್ ವಸತಿ ಶಾಲೆ ಸೇರಿದಂತೆ ಸುಮಾರು 8 ಶಾಲೆಯ 150 ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

    8 ರಿಂದ 11 ವರ್ಷ, 12 ರಿಂದ 15 ವರ್ಷ, 16 ರಿಂದ 21 ವರ್ಷ, 22 ರಿಂದ 29 ವರ್ಷ ಹಾಗೂ 30 ವರ್ಷದಿಂದ ಮೇಲ್ಪಟ್ಟ ವಿಶೇಷಚೇತನರು 100 ಮೀಟರ್ ಓಟ, 200 ಮೀಟರ್ ಓಟ, ಶಾಟ್‍ಫೂಟ್, ಲಾಂಗ್ ಜಂಪ್, ರಿಲೇ ಮತ್ತಿತರ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದು, ಎದ್ದು ಕಂಡಿತು.

    ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ವಿಶೇಷಚೇತನರು ಯಾವುದೇ ಕಾರಣಕ್ಕೂ ವಿಚಲಿತರಾಗದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ದೃಢತೆ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

    ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಪಾಲ್ಗೊಳ್ಳುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಮುಂದೆ ಬರಬೇಕು ಎಂದು ಹೇಳಿದರು.

    ಯಾವುದೇ ಕ್ಷೇತ್ರದಲ್ಲಿ ಯಾರೇ ಆದರೂ ಸಹ ತಂಡವಾಗಿ ಕೆಲಸ ಮಾಡಿದಾಗ ಯಶಸ್ಸುಗಳಿಸಲು ಸಾಧ್ಯ. ಆ ದಿಸೆಯಲ್ಲಿ ಸುಂದರ ಬದುಕು ಹಾಗೂ ಆರೋಗ್ಯಯುತ ಜೀವನ ನಡೆಸಲು ಕ್ರೀಡೆ, ಸಾಹಿತ್ಯ, ಕಲೆ, ಬರವಣಿಗೆ ಹೀಗೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಕ್ರೀಯಾಶೀಲ ಹಾಗೂ ಸೃಜನಶೀಲವಾಗಿ ಬದುಕಬಹುದು ಎಂದರು.

    ಪ್ರತಿಯೊಬ್ಬರಿಗೂ ವ್ಯಾಯಾಮ ಅತ್ಯಗತ್ಯ. ಆದ್ದರಿಂದ ಒಂದಲ್ಲ ಒಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಲಹೆ ಮಾಡಿದರು.

    ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚಂಗಪ್ಪ ಅವರು ಮಾತನಾಡಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಆಯಸ್ಸು ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

    ಟಾಟಾ ಕಾಫಿ ಸಂಸ್ಥೆಯ ಜನರಲ್ ಮ್ಯಾನೇಜರ್ ಕೆ.ಜಿ.ರಾಜೀವ್ ಅವರು ಮಾತನಾಡಿ ವಿಶೇಷ ಚೇತನರು ಲವಲವಿಕೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ಮೆಚ್ಚುವಂತದ್ದು ಎಂದು ಹೇಳಿದರು.

    ಟಾಟಾ ಕಾಫಿ ಸಂಸ್ಥೆಯ ಉಪ ವ್ಯವಸ್ಥಾಪಕರಾದ ಬೋಪಯ್ಯ ಅವರು ಮಾತನಾಡಿ ಕ್ರೀಡಾ ಚಟುವಟಿಕೆಯಲ್ಲಿ ವಿಶೇಷ ಚೇತನರು ಉತ್ಸ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದರು.

    ಸಮಾರೋಪ ಸಮಾರಂಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಲೋಕೇಶ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಜಿಲ್ಲಾ ವಿಶೇಷ ಚೇತನರ ಅಧಿಕಾರಿ ಕೆ.ಜಿ.ವಿಮಲ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಎನ್‍ಟಿ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ, ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕರಾದ ಗೌತಮ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಸ್ವಸ್ಥ ಸಂಸ್ಥೆಯ ವಿಶೇಷಚೇತನರ ಶಿಕ್ಷಕರಾದ ಬಿಜು ಇತರರು ಪಾಲ್ಗೊಂಡಿದ್ದರು.

    ನಿವೃತ್ತ ಪ್ರಾಂಶುಪಾಲರಾದ ಪುಷ್ಪ ಕುಟ್ಟಣ್ಣ ಅವರು ಮಾತನಾಡಿದರು. ಸ್ವಪ್ನ ಪ್ರಾರ್ಥಿಸಿದರು. ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ನಿರ್ದೇಶಕರಾದ ಆರತಿ ಸೋಮಯ್ಯ ಸ್ವಾಗತಿಸಿದರು. ಅನಿತಾ ಪ್ರವೀಣ್ ಚೋಕೀರ ನಿರೂಪಿಸಿ, ವಂದಿಸಿದರು.

    ಮತ್ತಷ್ಟು ಮಾಹಿತಿ: ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ವಿಶೇಷ ಚೇತನರು ತಮ್ಮ ವಿಕಲತೆಯನ್ನು ಮರೆತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಕೊಡಗು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಆರ್.ಎನ್.ಬಿಂದುಮಣಿ ಹೇಳಿದರು.

    ಸುಂಟಿಕೊಪ್ಪ ಮತ್ತು ಪಾಲಿಬೆಟ್ಟ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಜಿಲ್ಲೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸೋಮವಾರ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕ್ರೀಡೆಯನ್ನು ಪ್ರೀತಿಸಿ ಪ್ರತಿನಿತ್ಯ ಭಾಗವಹಿಸುವಂತಾಗಬೇಕು. ಕ್ರೀಡೆ ಜೀವನಕ್ಕೆ ಸುಂದರವಾದ ಅರ್ಥವನ್ನು ನೀಡುತ್ತದೆ ಕ್ರೀಡೆ ಎಂದರೆ ಗೆಲುವು ಮತ್ತು ಸೋಲು ಮಾತ್ರವಲ್ಲ, ಜನರು ದಿನನಿತ್ಯ ಸದೃಢರಾಗಿರಬೇಕು ಮತ್ತು ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ ಎಂದು ಆರ್.ಎನ್.ಬಿಂದುಮಣಿ ಅವರು ಹೇಳಿದರು.

    ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚಂಗಪ್ಪ ಅವರು ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಬೆಂಬಲ ಮತ್ತು ಹುರಿದುಂಬಿಸುವುದರೊಂದಿಗೆ ಪೆÇ್ರೀತ್ಸಾಹಿಸಬೇಕು. ಪ್ರತಿ ಮಗುವಿಗೂ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಲು ಅವಕಾಶವನ್ನು ಒದಗಿಸಬೇಕು ಎಂದರು.

    ಟಾಟಾ ಕಾಫಿ ಲಿಮಿಟೆಡ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಸಿ.ಎ.ಬೋಪಯ್ಯ ಮಾತನಾಡಿ, ಸಂಸ್ಥೆಯ ಶಿಕ್ಷಕರು ಹಾಗೂ ಪೆÇೀಷಕರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ದೇವರ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ನಿರ್ದೇಶಕರಾದ ಆರತಿ ಸೋಮಯ್ಯ ಮಾತನಾಡಿ, ಸ್ವಸ್ಥ ಸಂಸ್ಥೆಯು ವಿಶೇಷ ಚೇತನ ಮಕ್ಕಳ ಪ್ರಗತಿಗೆ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಮಕ್ಕಳ ಬೆಳವಣಿಗೆಗಾಗಿ ಎಲ್ಲಾ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುವುದಾಗಿ ತಿಳಿಸಿದರು.

    ಬೋಧಿಸತ್ವ ಸಂಸ್ಥೆಯ ಅಧ್ಯಕ್ಷರಾದ ಕರ್ಮ ರಿಂಪೆÇೀಚೆ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಟಾಟಾ ಕಾಫಿ ಲಿಮಿಟಡ್ ಸಿನಿಯರ್ ಜೆನೆರಲ್ ಮ್ಯಾನೇಜರ್ ಕೆ.ಜಿ.ರಾಜೀವ್, ಹಿರಿಯ ಕಾಫಿ ಬೆಳೆಗಾರರು ಮತ್ತು ಸಮಾಜ ಸೇವಕರಾದ ಬೋಸ್ ಮಂದಣ್ಣ, ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ನಿರ್ವಾಹಕರಾದ ಐಶ್ವರ್ಯ ಬೋಪಯ್ಯ, ಶಿಕ್ಷಕರು, ಪೆÇೀಷಕರು, ಆರೋಗ್ಯ ಸಿಬ್ಬಂದಿಗಳು ಇತರರು ಹಾಜರಿದ್ದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ಸ್ವಪ್ನ ಶೇಟ್, ಚೆರಿ ಚೋಂದಮ್ಮ ಪ್ರಾರ್ಥಿಸಿದರು. ಚೋಕಿರ ಅನಿತ ಅವರು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸ್ವಸ್ಥ ವಿದ್ಯಾರ್ಥಿಗಳಾದ ವೈ.ಎಂ.ದರ್ಶನ್, ಬಿ.ಎಂ.ಸಂಗೀತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

    Previous Articleನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ- ಕಳೆದ ಸಾಲಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮನ್ಸೂರ್ ಗೆ ಸನ್ಮಾನ
    Next Article ತೊರೆನೂರು ಶ್ರೀ ಶನೇಶ್ವರ ದೇವಾಲಯ ಸಮಿತಿ ವತಿಯಿಂದ ಆಯೋಜಿಸಲಾದ ನಾಟಕ ಪ್ರದರ್ಶನಕ್ಕೆ ಶಾಸಕ ಮಂತರ್ ಗೌಡರಿಂದ ಉದ್ಘಾಟನೆ

    Related Posts

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.