Author: Kodagu-admin

*ಮೂರ್ನಾಡಿನಲ್ಲಿ ಹೊಸ ಜಿಮ್ ಉದ್ಘಾಟನೆ – ಆರೋಗ್ಯಾಭಿವೃದ್ಧಿಗೆ ಹೊಸ ವೇದಿಕೆ* *KODAGU NEWS* ಮೂರ್ನಾಡ್: ಆರೋಗ್ಯ ಮತ್ತು ಫಿಟ್ನೆಸ್ ಕಡೆ ಜನರ ಆಸಕ್ತಿ ಹೆಚ್ಚುತ್ತಿರುವ ನಡುವಿನಲ್ಲಿ, ಮೂರ್ನಾಡಿನಲ್ಲಿ ಹೊಸದಾಗಿ ನಿರ್ಮಿಸಲಾದ *“ಮೂರ್ನಾಡ್ ಜಿಮ್”* ಅಕ್ಟೋಬರ್ 30ರಂದು ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸಮಯದಲ್ಲಿ ವ್ಯಾಯಾಮ ಮಾಡಲು ಸೌಲಭ್ಯ ಕಲ್ಪಿಸಲಿದ್ದು, ಅನುಭವಿಗಳಾದ ಪ್ರಮಾಣಿತ ತರಬೇತುದಾರರ ಮಾರ್ಗದರ್ಶನದಲ್ಲಿ ಸದಸ್ಯರಿಗೆ ಸಂಪೂರ್ಣ ಫಿಟ್ನೆಸ್ ತರಬೇತಿ ನೀಡಲಾಗುವುದು. *ಜಿಮ್‌ನಲ್ಲಿ ಲಭ್ಯವಿರುವ ವಿಶೇಷ ತರಬೇತಿಗಳು:* ತೂಕ ಇಳಿಕೆ ಹಾಗೂ ಹೆಚ್ಚಿಸುವ ತರಬೇತಿ, ಫಂಕ್ಷನಲ್ ಟ್ರೈನಿಂಗ್, ಶಕ್ತಿ ಮತ್ತು ಕಾಂಡಿಷನಿಂಗ್ ವರ್ಕೌಟ್‌ಗಳು, ಲವಚಿಕತೆ ಹಾಗೂ ಕೇರ್ ವರ್ಕೌಟ್‌ಗಳು ಜೊತೆಗೆ ವೈಯಕ್ತಿಕ ತರಬೇತಿ (ಪರ್ಸನಲ್ ಟ್ರೈನಿಂಗ್ ಸೆಶನ್‌ಗಳು) ಸೇರಿವೆ. *ವ್ಯಾಯಾಮ ಸಮಯಗಳು:* 🔸 ಬೆಳಿಗ್ಗೆ 5:30 ರಿಂದ 10:00 ರವರೆಗೆ 🔸 ಮಧ್ಯಾಹ್ನ 11:00 ರಿಂದ 1:00 ರವರೆಗೆ 🔸 ಸಂಜೆ 3:00 ರಿಂದ ರಾತ್ರಿ 10:00 ರವರೆಗೆ ಆಕರ್ಷಕ ಸದಸ್ಯತ್ವ ಪ್ಯಾಕೇಜ್‌ಗಳು: 🔹 3 ತಿಂಗಳು –…

Read More

*ತಪ್ಪಿದ ಬಾರಿ ಅನಾಹುತ ಮನೆಯೊಳಗಿದ್ದವರು ಅಪಾಯದಿಂದ ಪಾರಾದ ಘಟನೆ* ✍🏻. ಅಶೋಕ್ _ಮಡಿಕೇರಿ ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅನಾಹುತಗಳು ಸಂಭವಿಸಿವೆ. ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಎಚ್.ಟಿ. ಜಾನಕಿ ಎಂಬವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ರಾತ್ರಿ ಸುಮಾರು 8.30ರ ವೇಳೆಗೆ ಮನೆಯ ಮುಂಭಾಗದ ಕೋಣೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್, ಆ ವೇಳೆ ಮನೆಯಲ್ಲಿ ಇದ್ದರೂ ಅಪಾಯದಿಂದ ಪಾರಾಗಿದ್ದಾರೆ. ಮನೆಯೊಳಗಿನ ವಸ್ತುಗಳು ಜಖಂಗೊಂಡಿದ್ದು, ಉಳಿದ ಕೋಣೆಗಳ ಗೋಡೆಗಳಿಗೂ ಬಿರುಕು ಬಿದ್ದಿದೆ ಎಂದು ಜಾನಕಿಯವರ ಪುತ್ರ ಹರೀಶ್ ತಿಳಿಸಿದ್ದಾರೆ. ಸ್ಥಳೀಯ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

*************************** ಮಡಿಕೇರಿ ಅ.21(ಕರ್ನಾಟಕ ವಾರ್ತೆ):-ಜಿಲ್ಲಾ ಪೊಲೀಸ್ ಘಟಕ ವತಿಯಿಂದ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ಯು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆಯಿತು. ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ ಗಣ್ಯರು ಹಾಗೂ ಅತಿಥಿಗಳು ಗೌರವ ನಮನ ಸಲ್ಲಿಸಿದರು. ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪೆರೆಡ್ ಕಮಾಂಡರ್ ಆರ್.ಪಿ.ಗಣೇಶ್ ಅವರು ಗೌರವ ವಂದನೆ ಸಲ್ಲಿಸಿ, ಮುಖ್ಯ ಅತಿಥಿಗಳಿಂದ ಅನುಮತಿ ಪಡೆದರು. ಬಳಿಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್, ಗುಪ್ತದಳ ವಿಭಾಗದ ಪೊಲೀಸ್ ನಿರೀಕ್ಷರಾದ ಐ.ಪಿ.ಮೇದಪ್ಪ, ಜಿಲ್ಲಾ ಪೊಲೀಸ್ ಲಿಪಿಕ ಸಿಬ್ಬಂದಿಗಳ ಪರವಾಗಿ ಪಿ.ಎ.ನಂಜಪ್ಪ, ನಿವೃತ್ತ ಪೊಲೀಸ್ ಅಧಿಕಾರಿಗಳ ಪರವಾಗಿ ಅಪ್ಪಯ್ಯ, ನಿವೃತ್ತ ಸೇನಾಧಿಕಾರಿಗಳ ಪರವಾಗಿ ಮೊಣ್ಣಪ್ಪ, ಜಿಲ್ಲಾ ಕಾರಾಗೃಹ ಪರವಾಗಿ ಸಂಜಯ್ ಜತ್ತಿ, ನಗರಸಭೆ ಪರವಾಗಿ ಅಧ್ಯಕ್ಷರಾದ ಪಿ.ಕಲಾವತಿ ಹಾಗೂ ಸದಸ್ಯರಾದ ಅನಿತಾ ಪೂವಯ್ಯ, ವಕೀಲರ…

Read More

ಮಡಿಕೇರಿ : ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 1.44 ಗಂಟೆಗೆ ಸರಿಯಾಗಿ ತೀರ್ಥರೂಪಿಣಿಯಾಗಿ ಶ್ರೀ ಕಾವೇರಿ ಮಾತೆ ಭಕ್ತಾದಿಗಳಿಗೆ ದರ್ಶನ ನೀಡಿದಳು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಜೈ ಜೈ ಮಾತಾ, ಕಾವೇರಿ ಮತಾ ಜಯಘೋಷದ ನಡುವೆ ಶ್ರೀ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಕಂಡಳು. ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನಗಳು ಆರಂಭವಾಗಿದ್ದವು, ಭಕ್ತರು ತಂಡೋಪ ತಂಡವಾಗಿ ಆಗಿಮಿಸುತ್ತಿದ್ದು ಕಂಡು ಬಂದಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಶ್ರೀ ಕಾವೇರಿಮಾತೆಗೆ ಜಯಕಾರ ಜಯಘೋಷಿಸಿ, ತಾಯಿ ಕಾವೇರಿ ಮಾತೆಯ ಮಹತ್ವ ಹಾಗೂ ಭಕ್ತಿ ಪರಾಕಾಷ್ಠೆ ಸಾರಿದರು. ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶಾಸಕರಾದ ಡಾ.ಮಂತರ್ ಗೌಡ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ,…

Read More

ಶ್ರೀ ಕಾವೇರಿ ತಾಯಿ ತುಲಾಸಂಕ್ರಮಣದ ತೀರ್ಥೋದ್ಭವ ಉತ್ಸವದ ಪೂರ್ವಭಾವಿ ತಯಾರಿಯನ್ನು ವೀಕ್ಷಿಸಲು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿದರು. ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದ ಮಾನ್ಯ ಶಾಸಕರು ನೇರವಾಗಿ ಭಾಗಮಂಡಲಕ್ಕೆ ಬಂದು ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಧಿಕಾರಿಗಳೊಂದಿಗೆ ತಯಾರಿಯ ಬಗ್ಗೆ ವಿವರಗಳನ್ನು ಪಡೆದರು. ಭಾಗಮಂಡಲದಿಂದ ತಲಕಾವೇರಿ ಸನ್ನಿಧಿಗೆ ಪಾದಯಾತ್ರೆ ಮೂಲಕ ತೆರಳುವ ಸಹಸ್ರಾರು ಮಂದಿ ಭಕ್ತರಿಗೆ ಅನುಕೂಲವಾಗಲೆಂದು ದಾರಿ ಮಧ್ಯ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸಿರುವ ಬಗ್ಗೆ ಮಾನ್ಯ ಶಾಸಕರು ಪರಿಶೀಲಿಸಿದರು. ಅರ್ಚಕ ವೃಂದದೊಂದಿಗೆ ಮಾತನಾಡಿದ ಮಾನ್ಯ ಶಾಸಕರು ಪೂಜಾ ವಿಧಿ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಹಾಗೂ ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Read More

ವಾಹನ ಮಾಲೀಕರ ಮತ್ತು ಚಾಲಕರ ಸಮಿತಿ ವತಿಯಿಂದ ಆಯುಧ ಪೂಜಾ ಭಕ್ತಿ, ಸೌಹಾರ್ದದ ಸಂಭ್ರಮ* *KODAGU NEWS* ಅಮ್ಮತ್ತಿ, ಕೊಡಗು: ವಾಹನ ಮಾಲೀಕರ ಮತ್ತು ಚಾಲಕರ ಆಯುಧ ಪೂಜಾ ಸಮಿತಿಯ ಆಶ್ರಯದಲ್ಲಿ 31ನೇ ವರ್ಷದ ಆಯುಧ ಪೂಜಾ ಮಹೋತ್ಸವ ಬುಧವಾರ (ಅ. 1) ರಂದು ಅಮ್ಮತ್ತಿಯಲ್ಲಿ ಅದ್ದೂರಿಯಾಗಿ ನೆರವೇರಿತು. ವಾಹನಗಳಿಗೆ ಪೂಜೆ ಹಾಗೂ ಅಲಂಕಾರ ಸಲ್ಲಿಸುವ ಈ ಸಂಭ್ರಮದಲ್ಲಿ ಹಲವು ಮಂದಿ ಚಾಲಕರು, ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಭಕ್ತಿ–ಭಾವದಿಂದ ಪೂಜಾ ವಿಧಿಗಳನ್ನು ನೆರವೇರಿಸಿದರು. ಕಾರ್ಯಕ್ರಮಕ್ಕೆ ವಾಹನ ಮಾಲೀಕರ ಮತ್ತು ಚಾಲಕರ ಸಮಿತಿಯ ಅಧ್ಯಕ್ಷರಾದ ಶ್ರೀ ಕುಟ್ಟಂಡ ಸಿ. ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಎಂ. ವಿಶ್ವನಾಥ, (ಕಾಫಿ ಬೆಳೆಗಾರರು ಅಮ್ಮತಿ ) ಶ್ರೀ ಕೆ. ಎಂ. ಕುಶಾಲಪ್ಪ(ಕಾಫಿ ಬೆಳೆಗಾರರು) ಮತ್ತು ಶ್ರೀ ಬಿ. ಬಿ. ರೋಶನ್ ಅಯ್ಯಪ್ಪ (ಕಾಫಿ ಬೆಳೆಗಾರರು, ಅಮ್ಮತ್ತಿ) ಉಪಸ್ಥಿತರಿದ್ದರು. ಪೂಜೆ ಬಳಿಕ ಅತಿಥಿಗಳು…

Read More

ನಾಗರಿಕ ವೇದಿಕೆ ಪೊನ್ನಂಪೇಟೆ, ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾನ್ಯ ಶಾಸಕರು, ನಾಗರಿಕ ವೇದಿಕೆಯವರು ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನರ ನಾಡಿಮಿಡಿತವನ್ನು ಅರಿತವರಾಗಿದ್ದಾರೆ. ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಗರಿಕ ವೇದಿಕೆ ವತಿಯಿಂದ ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಷಯ. ನಾಗರಿಕ ವೇದಿಕೆಯವರ ಈ ಪ್ರಯತ್ನ ಮುಂದೆಯೂ ಹೀಗೆ ಬೆಳೆದು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿಶಾಸಕರಾದ ಪೊನ್ನಣ್ಣ ರವರನ್ನು ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಅವರೊಂದಿಗೆ ಅವರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ನೂತನ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಅರುಣ್ ಮಾಚಯ್ಯ ರವರಿಗೂ ಸನ್ಮಾನಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಗರಿಕ ವೇದಿಕೆ…

Read More

ಇತ್ತೀಚೆಗೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ನಿವಾಸಿ ಅಣ್ಣಪ್ಪ ಎಂಬವರಿಗೆ ಗಂಟಲಿನಲ್ಲಿ ಊತ ಕಂಡು ಬಂದ ಹಿನ್ನೆಲೆಯಲ್ಲಿ, ಅವರಿಗೆ ಚಿಕಿತ್ಸೆ ನೀಡಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ಪರೀಶಿಲನೆಗೆ ಕರೆದುಕೊಂಡು ಹೋದಾಗ, ಅಣ್ಣಪ್ಪ ಅವರ ಗಂಟಲಿನಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳದ್ದಿದ್ದು ಶಸ್ತ್ರಚಿಕಿತ್ಸೆ ಮಾಡಲೇ ಬೇಕಾದ ಅನಿವಾರ್ಯತೆ ಉಂಟಾಯಿತು. ಶಸ್ತ್ರಚಿಕಿತ್ಸೆ ಗೆ ಸುಮಾರು ಅಂದಾಜು 8 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದರು. ತಕ್ಷಣ ಅಣ್ಣಪ್ಪ ರವರ ಸಹೋದರ ಮಣಿಕಂಣ ಅವರು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಸ್ಥಳಿಯ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿ, ಶಾಸಕ ಪೊನ್ನಣ್ಣ ಅವರ ಮೊರೆ ಹೋಗಿದರು. ತಕ್ಷಣವೇ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಶಸ್ತ್ರಚಿಕಿತ್ಸೆ ಮಾಡುವಂತೆ ಶಾಸಕರು ಸೂಚಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಬೇಕಾದ ಹಣವನ್ನು ಆಯ್ಯಶ್ಮಾನ್ ಭಾರತ, ಅರೋಗ್ಯ ಕರ್ನಾಟಕ ಯೋಜನೆಯ ಮುಖಾಂತರ ಹಣವನ್ನು ಪಾವತಿ ಮಾಡಲು ತಿಳಿಸಿದರು. ಶಾಸಕರ ಸೂಚನೆಯಂತೆ ಸಾಮಾಜಿಕ…

Read More