- ರಸ್ತೆ ಬದಿ ಮದ್ಯದ ಬಾಟಲಿ ಬಾಕ್ಸ್ ಎಸೆದ ಆಸ್ಪತ್ರೆ ಸಿಬ್ಬಂದಿ?
- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
Author: Kodagu-admin
*********************************************************** ಮಡಿಕೇರಿ -ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ಸರ್ಕಾರದ ಕಾರ್ಯಕ್ರಮ ರೂಪಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆ ದಿಸೆಯಲ್ಲಿ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮನವಿ ಮಾಡಿದ್ದಾರೆ. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುತ್ತಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದರು. ಸಂವಿಧಾನ ಅರ್ಥ ಮಾಡಿಕೊಳ್ಳುವವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಡಿ ಎಂದು ಬಹಿರಂಗವಾಗಿ ಹೇಳುತ್ತಾರೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕೇಂದ್ರದವರು ಜಾತಿವಾರು ಜನಗಣತಿ ಮಾಡಲು ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವುದು ಜಾತಿ ಸಮೀಕ್ಷೆಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು. ಸಾಮಾಜಿಕ…
**************** ಮಡಿಕೇರಿ : ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಆ ನಿಟ್ಟಿನಲ್ಲಿ ದಸರಾ ಸಂಸ್ಕøತಿ ಮತ್ತು ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ..ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಮಳೆಯ ನಡುವೆಯೂ ದಸರಾಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿಯಾಗಿದೆ ಎಂದು ನುಡಿದರು. ನಾಡಹಬ್ಬ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾಗೆ ಹೆಚ್ಚಿನ ಸ್ಪಂದನೆ ದೊರೆತಿರುವುದು ಮೆಚ್ಚುವಂತದ್ದು ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು. ಸಾಂಸ್ಕøತಿಕ ಹಿನ್ನೆಲೆ ಇರುವ ತಮ್ಮದೇ ಆಚರಣೆ ಸಂಸ್ಕøತಿ, ಕಲೆಗಳ ಪ್ರದರ್ಶನಕ್ಕೆ ಜಾನಪದ ದಸರಾ ಉತ್ತಮ ವೇದಿಕೆಯಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು. ಕೃಷಿಕ ಮಹಿಳೆ ಭಾಗೀರಥಿ ಹುಲಿತಾಳ ಅವರು ಮಾತನಾಡಿ ಜಾನಪದ ಹಾಡು, ಕತೆಗಳು ಎಂದೆಂದಿಗೂ ಸಾರ್ವಕಾಲೀಕವಾಗಿವೆ ಎಂದರು. ಜಾನಪದ ಹಾಡು ಕತೆಗಳು ಪ್ರತಿಯೊಬ್ಬರ ಮನಸ್ಸಿಗೆ ಮುದ ನೀಡುತ್ತವೆ. ಜೊತೆಗೆ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ ಎಂದು ಹುಲಿತಾಳ ಅವರು ಹೇಳಿದರು. ಭಾವಪೂರ್ಣವಾಗಿ ಜಾನಪದ…
ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ, ವಿರಾಜಪೇಟೆ ಇವರ ವತಿಯಿಂದ ಆಯೋಜನೆಗೊಂಡ ಓಣಂ ಹಬ್ಬಾಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಭಾಗವಹಿಸಿ ಶುಭ ಕೋರಿದರು. ವಿರಾಜಪೇಟೆಯ ಮುತ್ತಪ್ಪನ್ ಕಲಾಮಂಟಪದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾನ್ಯ ಶಾಸಕರು, ವಿಶಿಷ್ಟ ಹಾಗೂ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಮಲಯಾಳಿ ಸಮಾಜದವರು ಓಣಂ ಹಬ್ಬದ ಮೂಲಕ ನಾಡಿಗೆ ಸುಖ ಶಾಂತಿಯ ಸಂದೇಶವನ್ನು ಸಾರುತ್ತಾರೆ. ಪೌರಾಣಿಕ ಬಲಿಚಕ್ರವರ್ತಿಯ ಆಗಮಗದ ಸಂಭ್ರಮಾಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಈ ಹಬ್ಬವು, ಪರಸ್ಪರ ಸಾಮರಸ್ಯದಿಂದ ಬದುಕುವ ಸಂದೇಶ ಸಾರುವುದರೊಂದಿಗೆ ಸಮಾಜಕ್ಕೆ ವಿಶಿಷ್ಟ ಪರಂಪರೆಯನ್ನು ಪರಿಚಯಿಸುತ್ತದೆ ಎಂದು ಬಣ್ಣಿಸಿದರು. ಮಲಯಾಳಿ ಸಮುದಾಯದವರ ಕೊಡುಗೆಯನ್ನು ಸ್ಮರಿಸಿದ ಮಾನ್ಯ ಶಾಸಕರು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನಮ್ಮ ನಾಡಿಗೆ ಇವರ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ನಗರ…
ವಿರಾಜಪೇಟೆ ತಾಲೂಕು ಚೆನ್ನಯ್ಯನ ಕೋಟೆಯಲ್ಲಿ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಭಾಗವಹಿಸಿದರು. ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಮಾನ್ಯ ಶಾಸಕರು, ತಾನು ಪ್ರತಿವರ್ಷ ಈ ಗಣೇಶೋತ್ಸವ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಿದ್ದು, ಇಂಡಿಯಾ ನಿವಾಸಿಗಳು ಶ್ರೀ ಗಣೇಶೋತ್ಸವವನ್ನು ಅದ್ದೂರಿಯಾಗಿ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಆ ಭಗವಂತನು ನಾಡಿಗೆ ಹಾಗೂ ಸಮಸ್ತ ಜನತೆಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಚೆಪ್ಪುಡೀರ ಅರುಣ್ ಮಾಚಯ್ಯ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಪ್ರಮುಖರು ,ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ಪೊನ್ನಂಪೇಟೆಯ ತಾಲೂಕಿನ ಮಾಯಮುಡಿಯಲ್ಲಿ ಆಯೋಜನೆಗೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಭಾಗವಹಿಸಿದರು. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ *ಶ್ರೀ ಚೆಪ್ಪುಡೀರ ಅರುಣ್ ಮಾಚಯ್ಯ ರವರಿಗೆ* ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಶ್ರೀ ಅರುಣ್ ಮಾಚಯ್ಯನವರನ್ನು ಸನ್ಮಾನಿಸಿ, ಶುಭ ಕೋರಿದ ಮಾನ್ಯ ಶಾಸಕರು, ಸ್ವತಹ ಕ್ರೀಡಾಪಟು ಹಾಗೂ ಪ್ರಬುದ್ಧ ರಾಜಕಾರಣಿಯಾದ ಅರುಣ್ ಮಾಚೇನವರಿಗೆ ಈ ಹುದ್ದೆ ಒಲಿದಿದ್ದು ವಿಶೇಷವಾಗಿ ಕೊಡಗಿಗೆ ವರದಾನವಾಗಲಿದೆ. ಇವರ ಅವಧಿಯಲ್ಲಿ ಕ್ರೀಡಾ ಪ್ರಾಧಿಕಾರ ವತಿಯಿಂದ ಕೊಡಗಿಗೆ ಮತ್ತಷ್ಟು ಅನುಕೂಲ ಆಗುವುದರೊಂದಿಗೆ ಇಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಬಲಬಂದಂತಾಗಿದೆ. ಶ್ರೀಯುತರು ತಮ್ಮ ನೂತನ ಜವಾಬ್ದಾರಿಯಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಾಟು ಮೊಣ್ಣಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಮಾಜಿ…
ಹಾಲುಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಾಲುಗುಂದ-ಬೈರಂಬಾಡ ರಸ್ತೆಯನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಇಂದು ಲೋಕಾರ್ಪಣೆಗೊಳಿಸಿದರು. ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಈ ರಸ್ತೆಯನ್ನು ಮಾನ್ಯ ಶಾಸಕರು ವಿಶೇಷ ಕಾಳಜಿಯಿಂದ ಈ ಭಾಗದ ಜನರ ಅನುಕೂಲಕ್ಕಾಗಿ ₹ 15 ಲಕ್ಷ ಅನುದಾನ ಒದಗಿಸಿದ್ದರು. ಅಲ್ಲದೆ ಈ ಭಾಗದಲ್ಲಿ ₹ 35 ಲಕ್ಷ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗದ್ದೆಗೆ ತಡೆಗೋಡೆಯನ್ನು ನಿರ್ಮಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ ಮಾತ್ರವಲ್ಲದೆ, ಈ ಹಿಂದೆ ಈ ಭಾಗದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಅಷ್ಟು ಉದ್ದದ ವಿದ್ಯುತ್ ಸಂಪರ್ಕ ತೋಟದ ಮಧ್ಯ ಹಾದು ಹೋಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ಇದನ್ನು ಗಮನಿಸಿದ ಮಾನ್ಯ ಶಾಸಕರು ಇಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ನೂತನ ಕೇಬಲ್ ಅನ್ನು ರಸ್ತೆಯ ಬದಿಯಲ್ಲಿ ಅಳವಡಿಸಲು ಸೂಚಿಸುವ ಮೂಲಕ ನೂತನವಾಗಿ ಗುಣಮಟ್ಟದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುತ್ತಾರೆ. ಈ…
ಶಿವಾಜಿ ಯುವ ಸೇನೆ ಗೋಣಿಕೊಪ್ಪ, ಇವರು ಆಯೋಜಿಸಿದ, ಹೊನಲು ಬೆಳಕಿನ ಜಿಲ್ಲಾಮಟ್ಟದ ಪ್ರೊ ಕಬಡ್ಡಿ ಮಾದರಿಯ ಪಂದ್ಯಾಟದಲ್ಲಿ ಅತಿಥಿಯಾಗಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಭಾಗವಹಿಸಿದರು. ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಇತ್ತೀಚಿನ ದಿನಗಳಲ್ಲಿ ಕಬ್ಬಡಿ ಪಂದ್ಯಾಟವು ಯೋಜನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದ. ಅತ್ಯಂತ ಚಾಕಚಕ್ಯತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ಈ ಆಟವನ್ನು ಆಡಬೇಕಾಗಿರುವುದರಿಂದ ಇದು ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಕ್ರೀಡೆಯಾಗಿದೆ. ಭಾರತದ ಪುರಾತನ ಕ್ರೀಡೆಗಳಲ್ಲಿ ಒಂದಾಗಿರುವ ಕಬ್ಬಡಿ ಆಟೋ ಇಂದು ವಿಶ್ವಾದ್ಯಂತ ಆಡುತ್ತಿರುವುದು ನಾಡಿಗೆ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಕೋರಿದ ಮಾನ್ಯ ಶಾಸಕರು, ಕ್ರೀಡೆಯನ್ನು ಎಲ್ಲರೂ ಕ್ರೀಡಾ ಮನೋಭಾವದಿಂದ ಆಸ್ವಾದಿಸಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಕುಲಚಂಡ ಪ್ರಮೋದ್ ಗಣಪತಿ, ಪಂಚಾಯಿತಿ ಸದಸ್ಯರು ಶರತ್,…
ಅಂತರರಾಷ್ಟ್ರೀಯ ಕರಾಟೆ ಪಟುವೂ ಆಗಿರುವ *ಚೆಪ್ಪುಡಿರ ಸಿ.ಎಸ್. ಅರುಣ್ ಮಾಚಯ್ಯ* ಅವರಿಗೆ ಒಲಿದ ಪ್ರಮುಖ ಹುದ್ದೆ. ವಿಧಾನಪರಿಷತ್ ಮಾಜಿ ಸದಸ್ಯರೂ ಆಗಿರುವ ಅರುಣ್ ಮಾಚಯ್ಯ. *ಕೊಡಗು ನ್ಯೂಸ್*
ವಿರಾಜಪೇಟೆ ಯಲ್ಲಿ ಹೈಟೆಕ್ ವೈಶ್ಯವಾಟಿಕೆ. ನಾಲ್ವರ ಬಂಧನ. ನಾಲ್ಕು ಮಹಿಳೆಯರ ರಕ್ಷಣೆ. ವಿರಾಜಪೇಟೆ ಪ್ರತಿಷ್ಠಿತ ಗಾಂಧಿನಗರ ದ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದ ಮಾಸಾಜ್ ಪಾರ್ಲರ್ ನಲ್ಲಿ ನಡೆಯುತ್ತಿದ್ದ ವೈಶ್ಯವಾಟಿಕೆ. ಕೇರಳ ರಾಜ್ಯದ ಪ್ರದೀಪ್ ಹಾಗೂ ಶಿಜು ಎಂಬವರಿಂದ ದಂದೆ.. ವಿರಾಜಪೇಟೆ ನಗರ ಪೊಲೀಸರ ಮಿಂಚಿನ ಕಾರ್ಯಚರಣೆ ಇಬ್ಬರು ಪಿಂಪ್ ಗಳಿಗಾಗಿ ಶೋಧ. ಕೊಡಗಿನ ಒಂದು ಮಂಗಳೂರಿನ ಇಬ್ಬರು ಹಾಗೂ ತಮಿಳು ನಾಡಿನ ಓರ್ವ ಮಹಿಳೆಯರ ರಕ್ಷಣೆ..
ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಿ; ********************************************************* ಮಡಿಕೇರಿ ಸೆ.18(ಕರ್ನಾಟಕ ವಾರ್ತೆ):-ಕಾರ್ಮಿಕ ಸಚಿವರಾದ ಸಂತೋಷ್ ಎಸ್.ಲಾಡ್ ಅವರು ಕಾರ್ಮಿಕ ಸಂಘಟನೆಗಳು, ಹೋಂಸ್ಟೇ ಹಾಗೂ ಹೋಟೆಲ್ ಅಸೋಷಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಜೊತೆ ಚರ್ಚಿಸಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು ಕಾರ್ಮಿಕರಿಗೆ ಕನಿಷ್ಠ ವೇತನ ಕಲ್ಪಿಸಬೇಕು. ಆರೋಗ್ಯ ವಿಮೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವಂತಾಗಲು ಕಾರ್ಮಿಕರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ನೀಡಿದರು. ಹೋಂಸ್ಟೇ, ಹೋಟೆಲ್ ಸೇರಿದಂತೆ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು. ಸಿಸಿಟಿವಿ ಅಳವಡಿಸುವುದು, ಸಂಚಾರಿ ದೂರವಾಣಿ ಸಂಖ್ಯೆ ಸೇರಿದಂತೆ ವಾಸ್ತವ್ಯ ಹೂಡುವವರ ಮಾಹಿತಿ ಇರಬೇಕು ಎಂದು ಸಂತೋಷ್ ಲಾಡ್ ಅವರು ಹೇಳಿದರು. ಹೋಂ ಸ್ಟೇ ನೋಂದಣಿ, ಪರವಾನಗಿ, ನವೀಕರಣ ಸಂಬಂಧ ಪ್ರವಾಸೋದ್ಯಮ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವರು ತಿಳಿಸಿದರು. ಜೊತೆಗೆ ಶಾಸಕರ ನೇತೃತ್ವದಲ್ಲಿ ಸಚಿವರನ್ನು…
