ಹಾಲುಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಾಲುಗುಂದ-ಬೈರಂಬಾಡ ರಸ್ತೆಯನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಇಂದು ಲೋಕಾರ್ಪಣೆಗೊಳಿಸಿದರು. ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಈ ರಸ್ತೆಯನ್ನು ಮಾನ್ಯ ಶಾಸಕರು ವಿಶೇಷ ಕಾಳಜಿಯಿಂದ ಈ ಭಾಗದ ಜನರ ಅನುಕೂಲಕ್ಕಾಗಿ ₹ 15 ಲಕ್ಷ ಅನುದಾನ ಒದಗಿಸಿದ್ದರು. ಅಲ್ಲದೆ ಈ ಭಾಗದಲ್ಲಿ ₹ 35 ಲಕ್ಷ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗದ್ದೆಗೆ ತಡೆಗೋಡೆಯನ್ನು ನಿರ್ಮಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ ಮಾತ್ರವಲ್ಲದೆ, ಈ ಹಿಂದೆ ಈ ಭಾಗದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಅಷ್ಟು ಉದ್ದದ ವಿದ್ಯುತ್ ಸಂಪರ್ಕ ತೋಟದ ಮಧ್ಯ ಹಾದು ಹೋಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿತ್ತು.
ಇದನ್ನು ಗಮನಿಸಿದ ಮಾನ್ಯ ಶಾಸಕರು ಇಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ನೂತನ ಕೇಬಲ್ ಅನ್ನು ರಸ್ತೆಯ ಬದಿಯಲ್ಲಿ ಅಳವಡಿಸಲು ಸೂಚಿಸುವ ಮೂಲಕ ನೂತನವಾಗಿ ಗುಣಮಟ್ಟದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುತ್ತಾರೆ. ಈ ಎಲ್ಲಾ ಕಾಮಗಾರಿಗಳನ್ನು ಸ್ಮರಿಸಿಕೊಂಡ ಸ್ಥಳೀಯರು ಮಾನ್ಯ ಶಾಸಕರಿಗೆ ಧನ್ಯವಾದಗಳು ಅರ್ಪಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪಂಚಾಯಿತಿ ಅಧ್ಯಕ್ಷರಾದ ಪಂದಿಕಂಡ ದಿನೇಶ್, ಸದಸ್ಯರಾದ ಅಂದಾಯಿ, ಪೂವಯ್ಯ, ವಲಯ ಅಧ್ಯಕ್ಷರು ಲಕ್ಷ್ಮಣ, ಅಬ್ದುಲ್ ರೆಹಮನ್, ಸ್ಥಳೀಯರಾದ ಮೇಕೆರೀರ ನಾಣಯ್ಯ, ಕ್ಯಾಪ್ಟನ್ ಮಾದಪ್ಪ, ತಾಲೂಕು ಕೆ ಡಿ ಪಿ ಸದಸ್ಯರು ಕೋಲುಮಂಡ ರಫೀಕ್, ಪುರಸಭೆ ಸದಸ್ಯರಾದ ಶಬರಿಷ್, ಪಕ್ಷದ ಪ್ರಮುಖರು ಕುಂಡಚೀರ ಮಂಜು ದೇವಯ್ಯ, ಬಟ್ಟಕಳಂಡ ರಾಜ ದಿನೇಶ್, ಮಂಜುನಾಥ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್
- ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
- ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
- ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
- ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
- ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
- ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
- ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
- ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ

