ಶ್ರೀ ಕಾವೇರಿ ತಾಯಿ ತುಲಾಸಂಕ್ರಮಣದ ತೀರ್ಥೋದ್ಭವ ಉತ್ಸವದ ಪೂರ್ವಭಾವಿ ತಯಾರಿಯನ್ನು ವೀಕ್ಷಿಸಲು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿದರು.

ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದ ಮಾನ್ಯ ಶಾಸಕರು ನೇರವಾಗಿ ಭಾಗಮಂಡಲಕ್ಕೆ ಬಂದು ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಧಿಕಾರಿಗಳೊಂದಿಗೆ ತಯಾರಿಯ ಬಗ್ಗೆ ವಿವರಗಳನ್ನು ಪಡೆದರು. ಭಾಗಮಂಡಲದಿಂದ ತಲಕಾವೇರಿ ಸನ್ನಿಧಿಗೆ ಪಾದಯಾತ್ರೆ ಮೂಲಕ ತೆರಳುವ ಸಹಸ್ರಾರು ಮಂದಿ ಭಕ್ತರಿಗೆ ಅನುಕೂಲವಾಗಲೆಂದು ದಾರಿ ಮಧ್ಯ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸಿರುವ ಬಗ್ಗೆ ಮಾನ್ಯ ಶಾಸಕರು ಪರಿಶೀಲಿಸಿದರು. ಅರ್ಚಕ ವೃಂದದೊಂದಿಗೆ ಮಾತನಾಡಿದ ಮಾನ್ಯ ಶಾಸಕರು ಪೂಜಾ ವಿಧಿ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಹಾಗೂ ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

