Author: Kodagu-admin

ಯೋಗಾಸನದಲ್ಲಿ ಸಾಧನೆಗಳ ಸರದಾರ ಕೊಡಗಿನ ತಲಿನ್ ತಿಮ್ಮಯ್ಯ 🖊️ಪೈಸಲ್ ಇ ಪಾಯಡತ್ ಕರ್ನಾಟಕದ ಕಾಶ್ಮೀರ ಎಂದು ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯು ಭಾರತೀಯ ಸೇನೆಗೆ ನೀಡಿದ ಕೊಡುಗೆ ಅಪಾರ. ಅದೇ ರೀತಿ ವಿವಿಧ ಕ್ರೀಡಾ ಕ್ಷೇತ್ರದಲ್ಲೂ ಹಲವು ದಿಗ್ಗಜರನ್ನೂ ನೀಡುತ್ತಾ ಬಂದಿದೆ. ಸೇನೆ ಕ್ರೀಡೆ ಮಾತ್ರವಲ್ಲದೇ ಈಗ ಯೋಗಾ ಅಭ್ಯಾಸದಲ್ಲೂ ಕೊಡಗಿನ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ನಾನಿವತ್ತು ಹೇಳ ಹೊರಟಿರುವುದು ಕಳೆದ 10 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಕೊಡಗಿನ ಪುಟ್ಟ ಪೋರ ತಲಿನ್. 2ವರ್ಷ ಪ್ರಾಯದಿಂದ ಪ್ರಾರಂಭಿಸಿ ಯೋಗಾದಲ್ಲಿ ಸಾಧನೆ ಮಾಡುತ್ತಿರುವ ಕೊಡಗಿನ ಯುವ ಚಾಂಪಿಯನ್ ತಲಿನ್ ತಿಮ್ಮಯ್ಯ_ಎಮ್_ಯು. ಇವರು ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಹ ಕೊಡಗಿನ ತಿತಿಮತಿಯ ಮದ್ರೀರ_ಉಮೇಶ್ ಮತ್ತು ಲೀನಾ ದಂಪತಿಯ ಪುತ್ರ. ಬೆಂಗಳೂರಿನ ಜೆಪಿ ನಗರದ ಪೂರ್ಣ ವಿಕಾಸ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿ ತಲಿನ್ . ಸಾಧನೆಗಳು ಬೆಂಗಳೂರಿನ ಅಂತರ್ ಶಾಲಾಮಟ್ಟದ ಯೋಗಾ ಚಾಂಪಿಯನ್ಶಿಪ್ಪಿನಲ್ಲಿ 2…

Read More

ಬಿರುನಾಣಿಯಲ್ಲಿ ವಿರಾಟ್ ಹಿಂದೂ ಸಂಗಮ ದಕ್ಷಿಣ ಕೊಡಗಿನ ಬಿರುನಾಣಿಯಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿಯಿಂದ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮ ಸಹಸ್ರ ಹಿಂದೂಗಳ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ನಡೆಯಿತು. ಸೋಮವಾರ ಬಿರುನಾಣಿಯಿಂದ ಬಾಡಗರಕೇರಿ ಕೊಡವ ಸಮಾಜದವರೆಗೂ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು. ಬಿರುನಾಣಿಯಲ್ಲಿ ಹಿಂದೂ ಸಂಗಮದ ಬಂಟಿಂಗ್ಸ್ ಕಿತ್ತೊಯ್ದ ಬಳಿಕ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಬಿರುನಾಣಿಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Read More

ಡಿಗ್ರಿ ಪಡೆದ ವಿದ್ಯಾರ್ಥಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ — ಶಾಸಕ ಎ.ಎಸ್. ಪೊನ್ನಣ್ಣ ಅವರ ತ್ವರಿತ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರ ಗೋಣಿಕೊಪ್ಪಲು ನಿವಾಸಿ ಸಿ.ಎ. ಆಶಿಕ್ ಅವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದಿದ್ದರು. ಆದರೆ ಬಿ.ಎಡ್ ಪದವಿ ಪೂರ್ಣಗೊಳಿಸಿ ಎರಡು ವರ್ಷಗಳಾದರೂ ಕಾನ್ವೋಕೇಶನ್ ಸರ್ಟಿಫಿಕೇಟ್ ನೀಡದ ಹಿನ್ನೆಲೆಯಲ್ಲಿ ಅವರು ಉದ್ಯೋಗದ ನಿಮಿತ್ತವಾಗಿ ಸಂಕಷ್ಟ ಅನುಭವಿಸುತ್ತಿದ್ದರು. ವಿದೇಶದಲ್ಲಿ ಉದ್ಯೋಗಕ್ಕಾಗಿ ಸರ್ಟಿಫಿಕೇಟ್ ತುರ್ತಾಗಿ ಅಗತ್ಯವಿದ್ದರೂ ವಿಶ್ವವಿದ್ಯಾಲಯದ ಅಧಿಕಾರಿಗಳ ವಿಳಂಬದಿಂದ ಆತಂಕ ಎದುರಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಪೋಷಕರು ಗೋಣಿಕೊಪ್ಪಲಿನ ಸಮಾಜ ಸೇವಕರಾದ ಡಾಡು ಜೋಸೆಫ್ ಅವರ ನೆರವು ಕೋರಿ ತಮ್ಮ ಅಳಲು ಹಂಚಿಕೊಂಡರು. ತಕ್ಷಣ ಸ್ಪಂದಿಸಿದ ಡಾಡು ಜೋಸೆಫ್ ಅವರು ಈ ವಿಷಯವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ ಅವರ ಗಮನಕ್ಕೆ ತಂದರು. ಶಾಸಕರು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಗತ್ಯ…

Read More

ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಆರತಿ ಪೊನ್ನಪ್ಪ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾದ ಕೊಡಗು, ಕೇವಲ ತನ್ನ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲದೆ, ಕ್ರೀಡೆಗೂ ಬಲು ಹೆಸರುವಾಸಿಯಾಗಿದೆ. ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಟಗಾರರನ್ನು ದೇಶಕ್ಕೆ ನೀಡಿದ ಪುಟ್ಟ ಜಿಲ್ಲೆ ಕೊಡಗು. ಕೊಡಗಿನಲ್ಲಿ ಪರಂಪರಾಗತವಾಗಿ ಕ್ರೀಡೆಯು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿ ಬಂದಿದೆ, ಅಂತಹ ಒಂದು ಕುಟುಂಬದಿಂದ ಬಂದ ಆಟಗಾರ್ತಿಯೇ ಆರತಿ. ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಲೋಕದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳಾದ ಪಾರುವಂಗಡ ಪೊನ್ನಪ್ಪ ಹಾಗೂ ನಿರ್ಮಲಾ ಉತ್ತಯ್ಯ ದಂಪತಿಯರ ಪುತ್ರಿ. ಈ ಅಪರೂಪದ ಕ್ರೀಡಾ ಹಿನ್ನೆಲೆಯು ಆರತಿಯವರು ಒಬ್ಬ ಶ್ರೇಷ್ಠ ಚಾಂಪಿಯನ್ ಆಗಿ ಬೆಳೆಯಲು ಅಡಿಪಾಯ ಹಾಕಿಕೊಟ್ಟಿತು. ಮಾಜಿ ಭಾರತದ ನಂಬರ್ ಒನ್ ಆಟಗಾರ್ತಿ ಮತ್ತು ಬಹುಮುಖ ಪ್ರತಿಭೆಯ ಕ್ರೀಡಾಪಟುವಾದ ಇವರು, 1990ರ ದಶಕದುದ್ದಕ್ಕೂ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಧಿಪತ್ಯ ಸ್ಥಾಪಿಸಿದ್ದರು. ಆರತಿರವರು 1 ಆಗಸ್ಟ್ , 1976 ರಂದು ಕೊಡಗಿನ ತಿತಿಮತಿಯ ಭದ್ರಗೊಳದಲ್ಲಿ ಜನಿಸಿದರು. ಇವರು ಪಾರುವಂಗಡ ಪೊನ್ನಪ್ಪ ಮತ್ತು ನಿರ್ಮಲಾ ಉತ್ತಯ್ಯ (ತಾಮನೆ ಪಾಲೇಕಂಡ)…

Read More

ರಾಜಕೀಯ ಮೇಲಾಟದಲ್ಲಿ ಧರ್ಮಕ್ಕೆ ಕೊಡಲಿಪೆಟ್ಟು ಬೀಳದಿರಲಿ: ಎಡಿಕೇರಿ ಪ್ರಸನ್ನ ಮಡಿಕೇರಿ: ರಾಜಕೀಯ ಲಾಭಕ್ಕಾಗಿ ಸಮಸ್ತ ಹಿಂದೂಗಳ ಮೂಲವಾದ ಹಿಂದುತ್ವದ ಆಚರಣೆಗಳಿಗೆ ಅಡ್ಡಿಪಡಿಸುವುದು ಸರಿಯಲ್ಲಈ ರೀತಿಯ ಹಿಂದೂ ವಿರೋಧಿ ಚಟುವಟಿಗೆಗಳನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮ ಹೇಳಿಕೆ ನೀಡಿರುವ ಅವರು ಬಿರುನಾಣಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಬಂಟಿಂಗ್ಸ್ ತೆರವುಗೊಳಿಸಿದ ಘಟನೆಗೆ ಪ್ರತಿಕ್ರಿಯಿಸಿರುವ ಅವರು ಇಡೀ ಸಮಾಜ ಇಂದು ಒಗ್ಗಟ್ಟು ಮತ್ತು ಹಿಂದುತ್ವದ ಉಳಿವಿಗಾಗಿ ಪಣ ತೊಟ್ಟಿರುವ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಇಂತ ಕಿಡಿಗೇಡಿತನ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಮರಸ್ಯದಿಂದಿದ್ದ ಕೊಡಗಿನ ಸಮುದಾಯಗಳನ್ನು ರಾಜಕೀಯ ಲಾಭಕ್ಕಾಗಿ ಒಡೆದ ಬಳಿಕ ಈಗ ಕೆಲವು ಪಟ್ಟಬದ್ದ ಹಿತಆಸಕ್ತಿಗಳು ಹಿಂದೂ ಸಮಾಜವನ್ನೇ ಕೆಣಕುವ ಕುಚೇಷ್ಟೆ ಖಂಡನೀಯ ಎಂದಿದ್ದಾರೆ. ಎಲ್ಲಾ ಸಮುದಾಯದ ಶುದ್ಧ ಹೃದಯಗಳು ಇಂದು ಹಿಂದುತ್ವವದ ಉಳಿವಿಗಾಗಿ ಉತ್ತಮ ಸಮಾಜವನ್ನು ಕಟ್ಟಿ ನಮ್ಮೊಳಗಿರುವ ಕೆಟ್ಟ ಕ್ರಿಮಿಗಳ ವಿರುದ್ಧ ಎಲ್ಲರೂ ಒಂದಾಗಬೇಕೆಂದು ಹೇಳಿದ ಪ್ರಸನ್ನ ಈ ಪ್ರಕರಣವನ್ನು…

Read More

ಮಡಿಕೇರಿ ತಾಲೂಕಿಗೆ ನೂತನ ನೋಟರಿಗಳ ನೇಮಕ ಮಡಿಕೇರಿ ವಕೀಲರ ಸಂಘದ ಅಚ್ಚಾoಡಿರ ಪವನ್ ಪೆಮ್ಮಯ್ಯ ಮತ್ತು ಸುನಿಲ್ ಕುಮಾರ್ ಜೆ ಇವರನ್ನು ಕರ್ನಾಟಕ ಸರ್ಕಾರವು ನೋಟರಿಗಳ ಅಧಿನಿಯಮ 1952ರ ನಿಯಮಗಳ ರೀತ್ಯ ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲೂಕಿಗೆ ಹೆಚ್ಚುವರಿಯಾಗಿ ಸೃಷ್ಟಿಸಿರುವ ಎರಡು ನೋಟರಿ ಹುದ್ದೆಗಳಿಗೆ ನೋಟರಿಗಳನ್ನಾಗಿ ನೇಮಕ ಮಾಡಿದೆ.

Read More

ಕಾಸರಗೋಡಿನಲ್ಲಿ ಕೇರಳ-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಕೊಡಗಿನ ಸಾಹಿತಿಗಳಿಗೆ ಪ್ರಶಸ್ತಿ ಪ್ರಧಾನ ಕೇರಳ-ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನವು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಿತು. ಚುಟುಕು ಯುಗಾಚಾರ್ಯ ಡಾ| ಎಂ.ಜಿ.ಆರ್. ಅರಸ್ ವೇದಿಕೆಯಲ್ಲಿ ಈ ಸಂದರ್ಭ ಕವಿಗೋಷ್ಠಿ, ಯುವಕವಿಗೋಷ್ಠಿ, ವಿಚಾರಗೋಷ್ಠಿ, “ಕವಿ ಕಾವ್ಯವಿಭೂಷಣ” “ಕವಿ ಕಾವ್ಯ ಕಂಠೀರವ” ಪ್ರಶಸ್ತಿ ಪ್ರದಾನ ನಡೆಯಿತು. ಈ ಸಂದರ್ಭ ಕೊಡಗಿನ ಚುಟುಕು ಬ್ರಹ್ಮ ಖ್ಯಾತಿಯ ಹಾ.ತಿ.ಜಯಪ್ರಕಾಶ್, ಗೌರಮ್ಮ ದತ್ತಿ ಪ್ರಶಸ್ತಿ, ಅಜೂರ ಪ್ರಶಸ್ತಿ ವಿಜೇತೆ, ಕವಯತ್ರಿ, ಕಥೆಗಾರ್ತಿ ಕೃಪ ದೇವರಾಜ್, ಕಥೆಗಾರ್ತಿ, ಪ್ರಶಸ್ತಿ ವಿಜೇತೆ, ಕವಯತ್ರಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕವಯತ್ರಿ, ಸಾಹಿತಿ ಅರಸಿನಮಕ್ಕಿಯ ರೇಣುಕಾ ಸುಧೀರ್ ರಾಷ್ಟ್ರೀಯ ಕವಿಕಾವ್ಯ ವಿಭೂಷಣ ಪ್ರಶಸ್ತಿ ಸ್ವೀಕಾರ ಮಾಡಿದರು. ಸಮ್ಮೇಳನಕ್ಕೆ ಮೊದಲು ಸರ್ವಾಧ್ಯಕ್ಷ ನಾಡೋಜ ಡಾ. ಕೃಷ್ಣಕುಮಾರ್ ಕೂಡ್ಲು, ಕನ್ನಡ ಭವನದ ಸ್ಥಾಪಕರೂ, ಕೇರಳ ರಾಜ್ಯ-ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರೂ ಆದ ಡಾ| ವಾಮನ್ ರಾವ್ ಬೇಕಲ್ ಅವರುಗಳನ್ನು ಅದ್ಧೂರಿಯಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ವೇದಿಕೆ…

Read More

‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮಕ್ಕೆ ಚಾಲನೆ ಇಂದಿನ ಆಧುನಿಕ ನಾಗಲೋಟದಿಂದ ಯುವಜನರು ಪುಸ್ತಕ ಸಂಸ್ಕøತಿಯಿಂದ ದೂರ ಸರಿಯುತ್ತಿದ್ದು, ಯುವಜನರನ್ನು ಪುಸ್ತಕ ಓದುವಂತಾಗಲು ಹತ್ತಿರಕ್ಕೆ ತರುವಲ್ಲಿ ‘ಅಂಗಳದಲ್ಲಿ ತಿಂಗಳ ಪುಸ್ತಕ ಹಾಗೂ ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ತಿಳಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆ “ಮನೆಗೊಂದು ಗ್ರಂಥಾಲಯ” ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ಯುವಜನರಲ್ಲಿ ಪುಸ್ತಕ ಸಂಸ್ಕøತಿ ಭಿತ್ತಬೇಕು ಎಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 30 ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಬಾಕಿ ಇದೆ ಎಂದು ಹೇಳಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರು ಸೇರಿದಂತೆ ಹಲವು ಸಾಹಿತಿ ಹಾಗೂ ಕವಿಗಳ ಹೆಸರಿನಲ್ಲಿ ವಿಶೇಷ ದಿನದಂದು…

Read More

ಕುಟ್ಟ ಪೊಲೀಸ್ ಠಾಣೆ ಸಿಬ್ಬಂದಿ ಎ.ಟಿ.ಮಂಜುನಾಥ್ ರಚಿತ ಚೊಚ್ಚಲ ಕೃತಿ “ಕಾಣದ ಕಾಡಲು” ಲೋಕಾರ್ಪಣೆ ಗೊಂಡಿತು. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಹಾಗೂ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಆವರಣದಲ್ಲಿ ನಡೆದ ದಿ.ಗಂಗಾಧರ್ ಶೆಟ್, ಸುಲೋಚನಾ ದತ್ತಿ ಮತ್ತು ದಿ.ಎನ್ ಮಹಾಬಲೇಶ್ವರ ಭಟ್ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಕಾಣದ ಕಡಲು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭ ಮಾತನಾಡಿದ ಕೃತಿಯ ಲೇಖಕ ಮಂಜುನಾಥ್, ಕೆಲಸದ ಒತ್ತಡದ ನಡುವೆಯು ಸಣ್ಣ ಪ್ರಯತ್ನ ಮಾಡಲಾಗಿದ್ದು, ಕಾಣದ ಕಡಲು ಎಂಬ ಕಥಾ ಸಂಕಲನದಲ್ಲಿ ಸುಮಾರು 65 ಸಣ್ಣ ಕಥೆಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಲಾಗಿದೆ. ಪ್ರೀತಿ, ಪ್ರೇಮ ಹಾದಿಯಲ್ಲಿ ಅಪ್ಪ-ಅಮ್ಮ ತಂಗಿ, ಅಕ್ಕ ಮತ್ತು ತಮ್ಮನ ಮೇಲೆ ಪ್ರೀತಿ ಇರುತ್ತದೆ. ಆದರೆ ನನ್ನ ಜೀವನದ ಕಾಲೇಜಿನ ದಿನಗಳಲ್ಲಿ ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಪ್ರೀತಿ ಹೇಳಿಕೊಳ್ಳಲಾಗದೆ ಆಕೆ ದೂರ ಆದ ಸಂದರ್ಭದಲ್ಲಿ ಅಂದು ಬರೆಯಲು ಆರಂಭಿಸಿದ…

Read More

ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ ? ಸಿದ್ದರಾಮಯ್ಯ ಸುಳಿವು ಬೆಂಗಳೂರು: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ವ್ಯಸನವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಲು ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಅವರ ಅಧಿಕೃತ ಅಭಿಪ್ರಾಯವನ್ನು ಕೋರಿದ್ದಾರೆ. ಕ್ಯಾಂಪಸ್‌ಗಳಲ್ಲಿ ಅಪ್ರಾಪ್ತ ವಯಸ್ಕರ ಮೊಬೈಲ್ ಬಳಕೆಯನ್ನು ನಿರ್ಬಂಧಿಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡುವಂತೆ ಅವರು ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಉಪಕುಲಪತಿಗಳ (ವಿಸಿ) ಸಮಾವೇಶದಲ್ಲಿ ಅವರು ಈ ಬಗ್ಗೆ ಚರ್ಚಿಸಿದರು. ಚರ್ಚೆಯ ಸಮಯದಲ್ಲಿ, ಸಿದ್ದರಾಮಯ್ಯ ಅವರು ಮೊಬೈಲ್ ವ್ಯಸನ, ಆನ್‌ಲೈನ್ ಗೇಮಿಂಗ್, ಮಕ್ಕಳ ಶೈಕ್ಷಣಿಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದರು. …

Read More