Author: Kodagu-admin

KODAGU NEWS UPDATE ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿಯಿಂದ ಸಂಸದರ ಭೇಟಿ ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಮೃತುಂಜಯ ದೇವಸ್ಥಾನದ ಆಡಳಿತ ಮಂಡಳಿಯಿಂದ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರು ಕಚೇರಿಯಲ್ಲಿ ಭೇಟಿ ಮಾಡಿ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭ ದೇವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ 8ರಂದು ನಡೆಯಲಿದ್ದು ಸಂಸದರನ್ನು ಆಡಳಿತ ಮಂಡಳಿಯಿಂದ ಅಹ್ವಾನ ಪತ್ರ ನೀಡಿ ಆಹ್ವಾನಿಸಲಾಯಿತು. ದೇವಸ್ಥಾನಕ್ಕೆ ಸದ್ಯದಲ್ಲಿಯೇ ಭೇಟಿ ನೀಡಿ, ಅಭಿವೃದ್ಧಿಗೆ ನೆರವು ನೀಡುವುದಾಗಿ ಸಂಸದರು ಭರವಸೆ ನೀಡಿದರು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ದೇವತಕ್ಕ ಅಣ್ಣೀರ ದಾದ ಗಣಪತಿ,ನಾಡ್ ತಕ್ಕರಾದ ಕಾಯಪಂಡ ಆಯ್ಯಪ್ಪ,ದೇವಸ್ಥಾನ ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್,ಉಪಾಧ್ಯಕ್ಷ ಕಾಯಪಂಡ ಸ್ಟಾಲಿಲ್ ಗಣಪತಿ, ದೇವಸ್ಥಾನ ಆಡಳಿತ ಮಂಡಳಿಯ ಕಾಯಪಂಡ ಸುರೇಂದ್ರ,ಅಣ್ಣೀರ ಲೋಕೇಶ್, ಬಲ್ಯಮೀದೇರಿರ ಚೇತನ್ ಸೋಮಣ್ಣ ಇದ್ದರು. KODAGU NEWS UPDATE

Read More

ನಾಪೊಕ್ಲುವಿನಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣ-ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ನಾಪೋಕ್ಲುವಿನಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದ ನಾಪೋಕ್ಲುವಿನ ಸುಹೇಲ್, ಸಿದ್ದೀಕ್, ನಾಫಿ,ರಾಶಿದ್ ಎಂಬ ಆರೋಪಿಗಳನ್ನು ವಿರಾಜಪೇಟೆ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು.ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಲಯವು ಹದಿ ನಾಲಕ್ಕು ದಿನಗಳ ಕಾಲ ಆರೋಪಿಗಳನ್ನು ಜೂಡಿಶಿಯಲ್ ಕಸ್ಟಡಿಗೆ ನೀಡಿ ಅದೇಶಿಸಿದೆ.

Read More

ಪ್ರಚಾರ ವೇಳೆ ಮಾತಿನ ಚಕಮಕಿ ನಾಪೋಕ್ಲುವಿನ ಬಲ್ಲಮಾವಟಿ ನಾಳೆ ನಡೆಯಲಿರುವ ಹಿಂದು ಸಮಾವೇಶ ಹಿನ್ನೆಲೆ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ದಾಖಲು ಸಿದ್ದಿಕ್ ಎಂಬಾತನಿಂದ ಹಲ್ಲೆ ಆರೋಪ ಹಲ್ಲೆ ಆರೋಪಿಯನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ನಾಪೋಕ್ಲುವಿನಲ್ಲಿ ಹಿಂದೂ ಸಂಘಟನೆಗಳಿಂದ ರಸ್ತೆ ತಡೆ ನಾಪೋಕ್ಲುವಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಸ್ಥಳಕ್ಕೆ ಹಿರಿಯ ಪೋಲಿಸ್‌ ಅಧಿಕಾರಿಗಳು ಬರುವಂತೆ ಪ್ರತಿಭಟನಾಕಾರರ ಒತ್ತಾಯ

Read More

ಮಾ.2ರಂದು ಕಕ್ಕಬ್ಬೆ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕುಂಬ್ಯಾರು ಕಲಾಡ್ಚ ಹಬ್ಬ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ಕೊಡಗು ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಶ್ರದ್ಧಾ ಕೇಂದ್ರವಾದ ನಾಪೋಕ್ಲು ಬಳಿಯ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬವಾದ ಕುಂಬ್ಯಾರು ಕಲಾಡ್ಚ ಹಬ್ಬವು ಮಾ.2 ಸೋಮವಾರದಂದು ನಡೆಯಲಿದೆ. ದೇವಾಲಯದಲ್ಲಿ ಅಂದು ಬೆಳಿಗ್ಗೆ 5.30 ಗಂಟೆಗೆ ಅಭಿಷೇಕ ಪೂಜೆ,6.ಗಂಟೆಗೆ ಪ್ರಾತಕಾಲದ ಪೂಜೆ,10 ಗಂಟೆಗೆ ಎತ್ತು ಪೋರಾಟ, 10.30 ಗಂಟೆಗೆ ತುಲಾ ಭಾರ ಸೇವೆ, 11ಗಂಟೆಗೆ ಭಕ್ತಾದಿಗಳ ಸೇವಾ ಪೂಜೆಗಳು,12.30ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮದ್ಯಾಹ್ನ 2 ಗಂಟೆಗೆ ದೇವರು ಹೊರಗೆ ಬಂದು ಮಲ್ಮಾ ಬೆಟ್ಟಕ್ಕೆ ತೆರಳುವುದು,ಸಂಜೆ 4ಗಂಟೆಗೆ ಕಾಫಿ ಫಲಹಾರ,6ಗಂಟೆಗೆ ಮಲ್ಮಾ ದಿಂದ ದೇವರು ದೇವಾಲಯಕ್ಕೆ ಬಂದು ದೇವರ ಬಲಿ ನೃತ್ಯ ನಡೆಯಲಿದೆ. ರಾತ್ರಿ 8ಗಂಟೆಗೆ ಸಹ ಭೋಜನದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಳ್ಳಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಜೂನಿಯರ್ ಕಾಲೇಜು ಆವರಣದಲ್ಲಿ ಮಕ್ಕಳ ಸಂತೆ ಎತ್ತ ನೋಡಿದರೂ ವಿವಿಧ ಬಗೆಯ ಸೊಪ್ಪು, ತರಕಾರಿ, ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು, ಪಾನಿಪೂರಿ, ಮಸಾಲೆ ಪುರಿ, ಚುರುಮುರಿ ಹೀಗೆ ಜೊತೆಗೆ ಚಿಕನ್ ಬಿರಿಯಾನಿಯು ಸಹ ಇದ್ದುದ್ದು ಬುಧವಾರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯಗಳು. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ, ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಬುಧವಾರ ನಡೆದ ಮಕ್ಕಳ ಸಂತೆಯಲ್ಲಿ ಕೇಳಿ ಬಂದವು. ಸುಮಾರು 70 ಕ್ಕೂ ಹೆಚ್ಚು ಮಕ್ಕಳು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಗಣಿಕೆ ಸೊಪ್ಪು, ನೊಗ್ಗೆ, ಕೊತ್ತಂಬರಿ, ಕರಿಬೇವು, ಬಸಳೆ, ಪಾಲಕ್ ಸೊಪ್ಪು, ಟೊಮೆಟೋ, ಕೆಸ, ಹಲಸು, ಬಾಳೆಕಾಯಿ, ಬಾಳೆಹಣ್ಣು, ಸಪೋಟ, ಕಿತ್ತಳೆ, ಚಕೋತ, ಮೂಲಂಗಿ, ನಿಂಬೆಹಣ್ಣು, ಸಿಹಿಗೆಣಸು, ಕಲ್ಲಂಗಡಿ, ಬದನೆ, ಪರಂಗಿ ಹಣ್ಣು, ಆಲೂಗಡ್ಡೆ, ಈರುಳ್ಳಿ, ಸೌತೆಕಾಯಿ, ಜತೆಗೆ ಮಹಿಳೆಯರ ಸೀರೆ ಒಳಗೊಂಡಂತೆ ಪ್ಯಾನ್ಸಿ ವಸ್ತುಗಳು ಹಲವು ವಿಭಾಗದಲ್ಲಿ ಮಕ್ಕಳ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಭೂಮಿಪೂಜೆ ರಾಷ್ಟ್ರೀಯ ಹೆದ್ದಾರಿ 275 ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆ ವರೆಗೆ 21 ಕಡೆಗಳಲ್ಲಿ ಸುಮಾರು 94 ಕೋಟಿ ರೂ. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಮಡಿಕೇರಿ ತಾಲ್ಲೂಕಿನ ಮದೆನಾಡು ಬಳಿಯ ಕರ್ತೋಜಿ ಬಳಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದರು ಸ್ಥಳೀಯರ ಬೇಡಿಕೆಯಂತೆ 21 ಕಡೆಗಳಲ್ಲಿ ರಕ್ಷಣಾ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ರಕ್ಷಣಾ ತಡೆಗೋಡೆ ಕಾಮಗಾರಿಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ನಿತಿನ್ ಗಡ್ಕರಿ ಅವರ ಪ್ರಯತ್ನದಿಂದ ರಾಷ್ಟ್ರದಲ್ಲಿ ಹೆದ್ದಾರಿಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಸಂಸದರು ಹೇಳಿದರು. ರಾಷ್ಟ್ರದ ರಾಜದಾನಿ ನವದೆಹಲಿ,…

Read More

ಮಾಲ್ದಾರೆ ಚೌಡಿಕಾಡು ಬಳಿ ದ್ವಿಚಕ್ರವಾನದ ಮೇಲೆ ಒಂಟಿ ಸಲಗ ದಾಳಿ -ಸವಾರರು ಅಪಾಯದಿಂದ ಪಾರು ಸಿದ್ದಾಪುರ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಕಾಡು ಪ್ರದೇಶದಲ್ಲಿ ಒಂಟಿ ಸಲಗ ಒಂದು ಬೈಕ್ ಮೇಲೆ ದಾಳಿ ನಡೆಸಿದ ಪರಿಣಾಮ ಬೈಕ್ ಜಖಂ ಗೊಂಡಿದ್ದು ಸವಾರರು ಪ್ರಾಣಾಪಾಯದಿಂದ ಪಾರದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಾಲ್ದಾರೆ ವ್ಯಾಪ್ತಿಗೆ ಒಳಪಡುವ ಇವೊಲ್ವೊ ಬ್ಯಾಕ್ ಸಂಸ್ಥೆಯ ಹಿಲ್ ಕಿಲ್ ಗ್ರೂಪ್ ಗೆ ಸೇರಿದ ಚೌಡಿ ಕಾಡು ಕಾಫಿ ತೋಟದಿಂದ ಬೈಕ್ ಮೇಲೆ ಕಾಡನೆ ದಾಳಿ ನಡೆಸಿದೆ ಆಕಸ್ಮಿಕ ದಾಳಿಯಿಂದ ಆತಂಕಗೊಂಡ ಸಿಬ್ಬಂದಿಗಳು ಬೈಕ್ಬಿಟ್ಟು ಓಡಿದ್ದಾರೆ. ಘಟನೆಯಲ್ಲಿ ಬೈಕ್ಗೆ ಹಾನಿಯಾಗಿದ್ದು ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಈ ಭಾಗದಲ್ಲಿ ನಿರಂತರ ಕಾಡಾನೆ ಭೀತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ ಪದೇ ಪದೇ ಕಾರ್ಮಿಕರು ಹಾಗೂ ವಾಹನ ಸವಾರರ ಮೇಲೆ…

Read More

ನೊಖ್ಯ ಗ್ರಾಮದಲ್ಲಿ ನಿರಂತರ ಆನೆ ಹಾವಳಿ ನೊಖ್ಯ ಗ್ರಾಮದಲ್ಲಿ ಆನೆ ಹಾವಳಿಯು ಹೆಚ್ಚಾಗಿದ್ದು, ಕಾಫಿ ಫಸಲು ಹಾಗೂ ಗದ್ದೆಯನ್ನು ನಾಶ ಮಾಡುವುದರ ಜೊತೆಗೆ, ಚೆಪ್ಪುಡೀರ ಕಾರ್ಯಪ್ಪ ಅವರಿಗೆ ಸೇರಿದ ಸ್ಪ್ರಿಂಕ್ಲರ್ ಪೈಪುಗಳನ್ನು ನಾಶಪಡಿಸಿದೆ. ಕಾಡಾನೆ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಕೂಡ ಅವರು ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವುದು ರೈತರನ್ನು ಕಂಗಾಲು ಮಾಡಿದೆ.

Read More

ಕೇರಳದ ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿಯಲ್ಲಿ, ಫೆಬ್ರವರಿ 24ರಂದು ನಡೆದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಶ್ರೀ ಕೆ.ಜೆ ಜಾರ್ಜ್, ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡರು.

Read More

ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ – ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸೆಸ್ಕ್ ಚೆಲ್ಲಾಟ ಸಲ್ಲದು -ಪ್ರತಿಭಟನೆ ಎಚ್ಚರಿಕೆ ನೀಡಿದ -ಮಹಮ್ಮದ್ ಕುರೇಶಿ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯಲ್ಲಿ ಪ್ರತಿನಿತ್ಯ ರಾತ್ರಿ ವೇಳೆ ನಿರಂತರವಾಗಿ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಪರೀಕ್ಷಾ ದಿನಗಳು ಹತ್ತಿರವಾಗುತ್ತಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಸಂಬಂಧಪಟ್ಟ ಸೆಸ್ಕ್ ಇಲಾಖೆ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಾಪೋಕ್ಲು ಸೆಸ್ಕ್ ಕಚೇರಿ ಎದರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಕುರೇಶಿ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾಪೋಕ್ಲು ವ್ಯಾಪ್ತಿಯ ವಿದ್ಯುತ್ ಫೀಡರ್ ನಲ್ಲಿ ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಬೆಳಿಗ್ಗೆ 10ಗಂಟೆಯಿಂದ ಸಂಜೆ 5ವರೆಗೂ ನಾಪೋಕ್ಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯ ಉಂಟಾಗಲಿದೆ ಎಂದು ಸೆಸ್ಕ್ ಇಲಾಖೆ ಪ್ರಕಟಣೆ ನೀಡಲಾಗುತ್ತಿದೆ. ಆದರೆ ರಾತ್ರಿಯಿಂದ…

Read More