Author: Kodagu-admin

ಮಡಿಕೇರಿಯಲ್ಲಿ ಆಮೆಮನೆ ದೇವಿಪ್ರಸಾದ್ (43) ಆತ್ಮಹತ್ಯೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಬದಿ ಬಡಾವಣೆ ರಸ್ತೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ.. ಉಪನ್ಯಾಸಕಿ ಪತ್ನಿ ಕವಿತಾ ಸ್ಥಳಕ್ಕೆ ನಗರ ಠಾಣೆ ಅಧಿಕಾರಿ ಅನ್ನಪೂರ್ಣ.ಡಿವೈಎಸ್‌ ಪಿ ಸೂರಜ್‌ ,ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಭೇಟಿ ,ಪರಿಶೀಲನೆ

Read More

ಪಾರಾಣೆ ಅಂಚೆ ಇಲಾಖೆಯ ನಿವೃತ್ತ ಅಂಚೆ ಪೇದೆ ಮಾದಪ್ಪಾಗೆ ಬೀಳ್ಕೊಡುಗೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ಚೆಯ್ಯಂಡಾಣೆ ಅಂಚೆ ಇಲಾಖೆಯ ವತಿಯಿಂದ 42 ವರ್ಷಗಳ ಕಾಲ ಪಾರಾಣೆ ಅಂಚೆ ಕಚೇರಿಯಲ್ಲಿ ಅಂಚೆ ಪೇದೆ (ಪೋಸ್ಟ್ ಮ್ಯಾನ್)ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮಾದಪ್ಪ ಅವರನ್ನು ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ,ಗೌರವಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಅಂಚೆ ಇಲಾಖೆಯ ಅಂಚೆ ನಿರೀಕ್ಷಕರಾದ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ 42 ವರ್ಷಗಳ ಕಾಲ ಗ್ರಾಮಗಳಲ್ಲಿ ಗ್ರಾಮಸ್ಥರೊಂದಿಗೆ ಮಾದಪ್ಪಅವರು ಒಳ್ಳೆಯ ಭಾಂದವ್ಯ ಹೊಂದಿದ್ದಾರೆ,ಇತ್ತೀಚಿನ ದಿನಗಳಲ್ಲಿ ನೌಕರರು ಒಂದು ವರ್ಷ ಮಾತ್ರ ಕೆಲಸ ಮಾಡಿ ನಂತರ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಸನ್ನಿವೇಶದಲ್ಲಿ 42 ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದೀರಾ ಇದು ತುಂಬಾ ಸಂತೋಷದ ವಿಷಯ ಎಂದು ಮಾದಪ್ಪ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಚೆಯ್ಯಂಡಾಣೆ ಅಂಚೆ ಕಚೇರಿಯ ಉಸ್ತುವಾರಿ (ಪೋಸ್ಟ್ ಮಾಸ್ಟರ್ )ಉಮೇಶ್ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಯಲ್ಲಿ…

Read More

ಹುಣ್ಣಿಮೆಯ ಅಂಗವಾಗಿ ಧರ್ಮಸ್ಥಳ ಸಂಘದಿಂದ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ಮಹಾಆರತಿ ಕಾರ್ಯಕ್ರಮ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ಹುಣ್ಣಿಮೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಹಾಗೂ ಶೌರ್ಯ ತಂಡದ ವತಿಯಿಂದ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ಮಹಾ ಆರತಿಯನ್ನು ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು. ನಾಪೋಕ್ಲು ಸಮೀಪದ ಕೊಟ್ಟಮುಡಿ ಸೇತುವೆ ಬಳಿಯ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು. ಆಯೋಜಿತ ಕಾರ್ಯಕ್ರಮ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ನಾಪೋಕ್ಲು ಸುಭಾಷ್ ನಗರ ಒಕ್ಕೂಟದ ಸೇವಾ ಪ್ರತಿನಿಧಿ ಉಮಾಲಕ್ಷ್ಮೀ,ಸಂಜೀವಿನಿ ಒಕ್ಕೂಟದ ಎಂಬಿಕೆ ಯಮುನಾ,ನಾಪೋಕ್ಲು ಶೌರ್ಯ ತಂಡದ ಸದಸ್ಯರಾದ ಶರವಣ, ದಿಲೀಶ್, ನಾರಾಯಣ, ನವಜೀವನ ಸಮಿತಿ ಸದಸ್ಯ ಬಾಲಸುಬ್ರಮಣಿ ಹಾಗೂ ರಾಜೇಶ್ವರಿ, ರೋಜಾ ಪಾಲ್ಗೊಂಡಿದ್ದರು.

Read More

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬೃಹತ್ ನೇಮಕಾತಿ; 8000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 8,176 ವಿವಿಧ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. ಸಿವಿಲ್, KSRP, ಸಶಸ್ತ್ರ ಕಾನ್‌ಸ್ಟೆಬಲ್ ಮತ್ತು DSI ಹುದ್ದೆಗಳು ಸೇರಿವೆ. ಪರಿಷ್ಕೃತ ಮೀಸಲಾತಿ ನಿಯಮ ಹಾಗೂ ನ್ಯಾಯಾಲಯದ ಆದೇಶದಂತೆ ಈ ಪ್ರಕ್ರಿಯೆ ನಡೆಯಲಿದೆ. ಈ ನೇಮಕಾತಿಯಲ್ಲಿ ವಿವಿಧ ಶ್ರೇಣಿಯ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ವಲಯಗಳಿಗೆ ಹಂಚಿಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 8,176 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮೋದನೆ ನೀಡಿದ್ದು, ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. *ಹುದ್ದೆಗಳ ವರ್ಗೀಕರಣ…

Read More

ಕುಟ್ಟ ವ್ಯಾಪ್ತಿಯಲ್ಲಿ ಜೇನು ಕುರುಬರ ಹಾಡಿಗೆ ಅರಿವು ಕಾರ್ಯಕ್ರಮ ಕುಟ್ಟ ಠಾಣಾ ವ್ಯಾಪ್ತಿಯ ಕೊಡಂಗೆ ಜೇನುಕುರುಬರ ಹಾಡಿಗೆ ಮಹಿಳಾ ಠಾಣೆಯ ಪಿಐ ಉಮೇಶ್ ಕುಮಾರ್ ಮತ್ತು ಕುಟ್ಟ ಠಾಣೆ ಪಿಎಸ್‌ಐ ತಮ್ಮಯ್ಯ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಭೇಟಿ ನೀಡಿ ಹಾಡಿಯ ವಾಸಿಗಳಿಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ, ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ವಿವಿಧ ಸಹಾಯವಾಣಿ ಸಂಖ್ಯೆಗಳಾದ 1098, 112, 1930 ಗಳ ಬಗ್ಗೆ ಮಾಹಿತಿ ನೀಡಿ ಹಾಡಿಯ ವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಡೆಸಲಾದ ಈ ಜಾಗೃತಿ ಕಾರ್ಯಕ್ರಮದಲ್ಲಿ ಸುಮಾರು 50 ರಿಂದ 60 ಜನ ಹಾಡಿಯ ನಿವಾಸಿಗಳು ಸೇರಿದ್ದರು.

Read More

ಸೋಮವಾರಪೇಟೆ ಕ್ಷೇತ್ರದ ವಿಧಾನಸಬಾ ಸದಸ್ಯರು ಮಂತರ್‌ ಗೌಡ ರವರು ಅರಣ್ಯ ಭವನ ಮಡಿಕೇರಿಯಲ್ಲಿ ಇರುವ ಜಿಲ್ಲಾ ಅರಣ್ಯ ಕಮಾಂಡ್‌ & ಕಂಟ್ರೋಲ್‌ ರೂಂಗೆ ಬೇಟಿ ನೀಡಿ ಕಂಟ್ರೋಲ್‌ ರೂಂ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು,ನಂತರ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಹಾಗು ವನ್ಯಪ್ರಾಣಿಗಳು ಗ್ರಾಮ ಪದೇಶಗಳಲ್ಲಿ ಇರುವಿಕೆಯ ಚಲನ ವಲನಗಳು ಕಂಡುಬಂದ ಕೂಡಲೆ ಸಂಬಂದಿಸಿದ ಗ್ರಾಮಗಳ ಸಾರ್ವಜನಿಕರಿಗೆ,ತೋಟದ ಮಾಲಿಕರಿಗೆ ಎಚ್ಚರಿಕೆಯ ಮೊಬೈಲ್ ಸಂದೇಶಗಳನ್ನು ತ್ವರಿತವಾಗಿ ರವಾನಿಸಬೇಕು ಎಂದು ತಿಳಿಸಿದರು. ಮುಂದುವರೆದು ಕೊಡಗು ಜಿಲ್ಲೆಯಲ್ಲಿ ಮಾನವ ಸಂಘರ್ಷ ತಡೆಯಲು ನಿರಂತರ ಗಸ್ತನ್ನು ನಿರ್ವಹಿಸಲು ಸೂಚಿಸಿರುತ್ತಾರೆ. ಉಪರಣ್ಯಸಂರಕ್ಷಣಾಧಿಕಾರಿಗಳು ಮಡಿಕೇರಿ ವಿಭಾಗ ರವರು ಮಾನ್ಯ ವಿಧಾನಸಬಾ ಸದಸ್ಯರು ಮಂತರ್‌ ಗೌಡ ರವರಿಗೆ ಕಂಟ್ರೋಲ್‌ ರೂಂ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿಸಿದರು. ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳು ಸೋಮವಾರಪೇಟೆ ಉಪವಿಭಾಗ ರವರು ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ವಿವರಿಸಿದರು.ಉಪವಲಯ ಅರಣ್ಯಧಿಕಾರಿ ಕಂಟ್ರೋಲ್‌ ರೂಂ ಮಯೂರು ರವರು ಕಂಟ್ರೋಲ್‌ ರೂಂ ನಿರ್ವಹಣೆಯ ಪ್ರತ್ಯಕ್ಷತೆಯನ್ನು ವಿವರಿಸಿದರು. ಸದರಿ ಸಂದರ್ಭದಲ್ಲಿ ಉಪವಲಯ ಅರಣ್ಯಧಾಕಾರಿಗಳು ಕಂಟ್ರೋಲ್‌…

Read More

ಬೆಂಗಳೂರು: ಜಪಾನಿನ ಟೋಕಿಯ ನಗರದಲ್ಲಿ ನಡೆದ 2026 ರ ಇಂಡೋ ಜಪಾನ್ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿ ಹಾಗೂ ಎಂ ಅಂಡ್ ಎಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಾಪಂಡ ಮುದ್ದಪ್ಪ ತಮ್ಮ ಸಂಸ್ಥೆಯ ಪರವಾಗಿ ಪಾಲ್ಗೊಂಡರು. ಭಾರತ ಮತ್ತು ಜಪಾನ್ ದೇಶದ ವಿವಿಧ ಕ್ಷೇತ್ರಗಳ 60 ಕ್ಕೂ ಹೆಚ್ಚು ಮಂದಿ ಹೂಡಿಕೆದಾರರು ಪಾಲ್ಗೊಂಡಿದ್ದ ಈ ಹೂಡಿಕೆದಾರರ ಸಭೆಯಲ್ಲಿ ಭಾರತದ ಉದ್ಯಮಿಗಳು ಜಪಾನಿನಲ್ಲಿ ಹಾಗೂ ಜಪಾನ್ ಉದ್ಯಮಿಗಳು ಭಾರತದಲ್ಲಿ ಹೂಡುವಿಕೆಯ ಬಗ್ಗೆ ಮೂರು ದಿನಗಳ ಕಾಲ ಸಮಾವೇಶ ನಡೆಯಿತು. ಫೆಬ್ರವರಿ 26,27 ಹಾಗೂ 28ರ ವರೆಗೆ ನಡೆದ ಈ ಇಂಡೋ ಜಪಾನ್ ಹೂಡಿಕೆದಾರರ ಸಮಾವೇಶದಲ್ಲಿ ಹಲವಾರು ವಿಜ್ಞಾನಿಗಳು ಸೇರಿದಂತೆ ವಿವಿಧ ಪ್ರತಿಷ್ಟಿತ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Read More

‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕ ಮೂಲಕ ಜಾಗೃತಿ ಜಾಥ ಶ್ರವಣ ಪ್ರತಿಯೊಬ್ಬರ ಮಹತ್ವದ ಅಂಗ: ತಜ್ಞ ವೈದ್ಯರ ಅಭಿಮತ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ವತಿಯಿಂದ ‘ವಿಶ್ವ ಶ್ರವಣ ದಿನ’ ಪ್ರಯುಕ್ತ ಮಂಗಳವಾರ ಸಂಸ್ಥೆಯ ಎರಡನೇ ವರ್ಷದ ಪದವಿ ವೈದ್ಯಕೀಯ ವಿದ್ಯಾರ್ಥಿಗಳಿಂದ ನಗರದ ರಾಜಾಸೀಟು ಉದ್ಯಾನವನ ಆವರಣದಲ್ಲಿ ಶ್ರವಣದ ಮಹತ್ವ ಕುರಿತು ಬೀದಿನಾಟಕ ಮೂಲಕ ಜಾಗೃತಿ ಮತ್ತು ಜಾಥ ಕಾರ್ಯಕ್ರಮ ನಡೆಯಿತು. ಕೇಳಿ ಕೇಳಿ ಜನರೇ, ಪ್ರತಿಯೊಬ್ಬರ ಶ್ರವಣ ಅದರಲ್ಲೂ ಮಕ್ಕಳ ಶ್ರವಣ ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ, ಕಾಲ ಕಾಲಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಬೀದಿನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಿದರು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹೆಚ್ಚಿನದ್ದಾಗಿದೆ. ಆ ದಿಸೆಯಲ್ಲಿ ಕಿವಿಗೆ ಯಾವುದೇ ವಸ್ತುವನ್ನು ಬಳಸಬಾರದು. ಮಕ್ಕಳಲ್ಲಿ ಕಿವಿ ಸ್ಪಷ್ಟವಾಗಿ ಕೇಳುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.…

Read More

ತೋಳೂರು ಶೆಟ್ಟಳ್ಳಿಯಲ್ಲಿ ಅಗ್ನಿ ಅವಘಡ ಮಾಜಿ ಸಿಆರ್ಪಿಎಫ್ ಯೋಧ ಸಾವು ಸೋಮವಾರಪೇಟೆ ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿ ಮಾಜಿ ಸಿಆರ್‌ಪಿಎಫ್ ಯೋಧ ಹೆಚ್.ಎ. ವೆಂಕಟೇಶ್ (64) ಸಾವನ್ನಪ್ಪಿದ್ದಾರೆ. ಮನೆಯಲ್ಲಿ ತೋಟ ಯಂತ್ರಗಳಿಗೆಂದು ಸಂಗ್ರಹಿಸಿದ್ದ ಪೆಟ್ರೋಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬೆಂಕಿ ವೇಗವಾಗಿ ವ್ಯಾಪಿಸಿವೆ. ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ಒಂದು ಕಾಲು ಕಳೆದುಕೊಂಡಿದ್ದ ವೆಂಕಟೇಶ್ ಅವರು ತಕ್ಷಣ ಹೊರಬರಲು ಸಾಧ್ಯವಾಗದೆ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಕಿಯಿಂದ ಮನೆಯ ಒಂದು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಧಾವಿಸಿ ನೆರವಾದರೂ ಪ್ರಯೋಜನವಾಗಲಿಲ್ಲ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Read More

ವಿರಾಜಪೇಟೆ ತಾಲೂಕು ಅಮ್ಮತಿಯ ಚೌಡೇಶ್ವರಿ ಯೂಥ್ ಕ್ಲಬ್ ವತಿಯಿಂದ ನಡೆಯುತ್ತಿರುವ ಮೊದಲನೇ ವರ್ಷದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ* ರವರು ಭೇಟಿ ನೀಡಿ ಶುಭ ಕೋರಿದರು. ಅಮ್ಮತಿಯ ಜಿಎಂಪಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವು ಆಯೋಜನೆಗೊಂಡಿದ್ದು, ತಂಡಗಳಿಗೆ ಶುಭ ಕೋರಿ ಮಾತನಾಡಿದ ಮಾನ್ಯ ಶಾಸಕರು ಕ್ರೀಡೆಯು ಯುವಕರಲ್ಲಿ ಹುಮ್ಮಸ್ಸನ್ನು ಮೂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾದ ಕ್ರಿಕೆಟ್ ಪಂದ್ಯಾಟವು ಗ್ರಾಮೀಣ ಮಟ್ಟದ ಪ್ರತಿಭೆಗಳ ಹೊರಹೊಮ್ಮುವಿಕೆಗೂ ಸಹಕಾರಿಯಾಗಲಿದೆ. ಇಲ್ಲಿ ಆಡುವ ಮಕ್ಕಳು ತಮ್ಮ ಕ್ರಿಕೆಟ್ ಭವಿಷ್ಯವನ್ನು ಉಜ್ವಲವಾಗಿ ಬೆಳೆಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲ ಗಣ್ಯ ಮಾನ್ಯರು, ಸಮಾಜ ಸೇವಕರಾದ ಚೊಕ್ಕಂಡ ಸಂಜು ಸುಬ್ಬಯ್ಯ, ಕ್ರೀಡಾ ಪಟ್ಟುಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More