- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ಕೊಡಗಿನಲ್ಲಿ ಒಮ್ಮೆಲೆ ತಾಪಮಾನ ಏರಿಕೆ ತಣ್ಣನೆಯ ಕೂಲ್ ಕೂಲ್ ವೆದರ್‌ಗೆ ಹೆಸರಾಗಿದ್ದ ಕೊಡಗಿನಲ್ಲಿ ಇದೀಗ ಬಿಸಿಲಿನ ಧಗೆ ಶುರುವಾಗಿದೆ. ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಬಿಸಿಲು ಬೆವರಿಳಿಸುತ್ತಿದೆ. ಈ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದ್ದು, ತಾಪಮಾನವೂ ಏರಿಕೆಯಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಇನ್ನೂ ಬೇಸಿಗೆಯ ಹೊಸ್ತಿಲಲ್ಲಿರುವಾಗಲೇ ಕೊಡಗು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ಬೆವರಿಳಿಸುತ್ತಿದೆ. ಸದಾ ತಂಪಾಗಿರುವ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಸಿಲಿನಿಂದ ರಕ್ಷಣೆ ಹೇಗೆಂಬ ಚಿಂತೆ ಚಳಿನಾಡ ಜನರನ್ನು ಕಾಡಲಾರಂಭಿಸಿದೆ. ಸಾಮಾನ್ಯವಾಗಿ ತಂಪು ಹವಾಮಾನಕ್ಕೆ ಪ್ರಸಿದ್ಧವಾಗಿರುವ ಈ ಬೆಟ್ಟನಾಡಿನಲ್ಲಿ ಚಳಿಯಿಂದ ಒಮ್ಮೆಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಪರಿಸರ ಹಾಗೂ ಆರೋಗ್ಯ ಎರಡಕ್ಕೂ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಚಳಿ ನೆಲೆದಲ್ಲೇ ಬಿಸಿಲಿನ ಕಾವು! ಇನ್ನೂ ಫೆಬ್ರವರಿ ದ್ವಿತೀಯಾರ್ಧದಲ್ಲಿದ್ದೇವೆ ಆಗಲೇ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಭಾಗಗಳಲ್ಲಿ ಮಧ್ಯಾಹ್ನದ ತಾಪಮಾನ 31 ಡಿಗ್ರಿ…
ನಾಪೋಕ್ಲು ಮಾಜಿ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ ಪ್ರಕರಣ -ರಾಜಕೀಯ ಪ್ರಭಾವ ಎಂಬ ರೋಗಕ್ಕೆ ನ್ಯಾಯಾಲಯದಿಂದ ಔಷಧಿ- ಆರು ಜನರ ವಿರುದ್ಧ ಎಫ್ ಐ ಆರ್ ದಾಖಲು ಮಡಿಕೇರಿ :ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಟಿ.ಎ.ಮೊಹಮ್ಮದ್ ಅನೀಫ್ ಎಂಬುವವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದ ಮೇರೆಗೆ ಹಲ್ಲೆ ನಡೆಸಿದ ಆರು ಜನರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ದಿನಾಂಕ 13 -11- 2025ರಂದು ನಾಪೋಕ್ಲು ಬಳಿಯ ಚೆರಿಯಪರಂಬುವಿನಲ್ಲಿ ಶಾದಿ ಮಹಲ್ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಪೊನ್ನಣ್ಣ ಅವರು ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನಲ್ಲಿ ತೆರಳುವ ವೇಳೆ ಟಿ.ಎ.ಮೊಹಮ್ಮದ್ ಅನೀಫ್ ಅವರು ಶಾದಿ ಮಹಲ್ ವಿಚಾರವಾಗಿ ಶಾಸಕರಲ್ಲಿ ಮಾತನಾಡಲು ತೆರಳುವ ಸಂದರ್ಭ ಎಡಪಾಲ ಗ್ರಾಮದ ಶಾಫಿ ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು ವಖ್ಫ್ ಬೋರ್ಡ್ ವಿಚಾರದಲ್ಲಿ…
ಸಂಕಷ್ಟದಲ್ಲಿದ್ದವರೊಂದಿಗೆ ಕೈ ಜೋಡಿಸಿ – ಶಾರ್ಜಾದಲ್ಲಿ ನಡೆದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನ ಕೊಡಗು ಕನೆಕ್ಟ್ 2026 ಕಾರ್ಯಕ್ರಮದಲ್ಲಿ ಶಾಸಕ ಮಂತರ್ ಗೌಡ ಸಲಹೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಸಿಲ್ವರ್ ಜ್ಯುಬಿಲಿ ಪ್ರಯುಕ್ತ “ಕನೆಕ್ಟ್ ಕೊಡಗು 2026” ಕಾರ್ಯಕ್ರಮವು ಶಾರ್ಜಾ ಅಲ್ ಬಥಾಯ ಗಾರ್ಡನ್ ನಲ್ಲಿ ವಿಜೃಂಭಣೆಯಿಂದ ನಡೆಯಿತು. ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡ ಈ ಮಹಾ ಕುಟುಂಬ ಸಂಗಮ ಸಾಮಾಜಿಕ ಏಕತೆ ಹಾಗೂ ಸಹೋದರತ್ವದ ಅಪೂರ್ವ ವೇದಿಕೆಯಾಗಿದ್ದು, ಹೊಸ ಇತಿಹಾಸ ನಿರ್ಮಾಣವಾಯಿತು. ದೇಶ ಹಾಗೂ ವಿದೇಶಗಳಿಂದ ಆಗಮಿಸಿದ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು,ಮಕ್ಕಳ ಆಟೋಟ ಸ್ವರ್ದೆ, ಮಹಿಳೆಯರಿಗಾಗಿ ವಿಶೇಷ ತರಬೇತಿ ಮತ್ತು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ಉಚಿತ ವೈದ್ಯಕೀಯ ಅರೋಗ್ಯ ತಪಾಸಣಾ ಶಿಬಿರ ಹಾಗೂ ದಫ್ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕುಟುಂಬ…
ವಿರಾಜಪೇಟೆ ಗ್ರಾಮಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಇಬ್ಬರ ಬಂಧನ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮತ್ತಿ ಗ್ರಾಮದ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಹತ್ತಿರದ ಬಸ್ಸು ತಂಗುದಾಣದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿ: 20-02-2026 ರಂದು ದಾಳಿ ನಡೆಸಿ 02 ಆರೋಪಿಗಳನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ಆರೋಪಿಗಳ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b)(2)(b) NDPS…
ಸಿದ್ದಾಪುರ ಭಾಗದಲ್ಲಿ ಕಾಡುತ್ತಿರುವ ನಿರಂತರ ಕಾಡಾನೆ ಸಮಸ್ಯೆ ಸಿದ್ದಾಪುರ ಕರಡಿಗೋಡು ಗ್ರಾಮದ ಕುಕ್ಕುನೂರು ಚಿದಾನಂದ ರವರ ತೋಟಕ್ಕೆ ಕಳೆದ ರಾತ್ರಿ ಒಂಟಿ ಸಲಗ ವೊಂದು ದಾಳಿ ಮಾಡಿ ಭಾರಿ ಗಾತ್ರದ ಬೈನೆ ಮರವೊಂದನು ಬುಡಸಮೇತ ಬೀಳಿಸಿ ಮರದ ಸೊಪ್ಪನ್ನು ತಿಂದು ಅಪಾರ ಪ್ರಮಾಣದ ಕಾಫಿ ಗಿಡ ಹಾಗು ಮೆಣಸು ಬಳ್ಳಿ ಇರತಕ್ಕ ಪಾನವಳಾ ಮರಗಳನ್ನು ತುಳಿದು ನಾಶ ಪಡಿಸಿದೆ. ಇದರಿಂದಾಗಿ ಅಪಾರ ನಾಶ ನಷ್ಟ ಉಂಟಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತೋಟದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ತೋಟಗಳಿಂದ ಓಡಿಸಲು ಹಾಗೂ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದ್ದಾರೆ.
ಗೋಣಿಕೊಪ್ಪದ ಕಾವೇರಿ ಕಾಲೇಜು ಭರ್ಜರಿ ಗೆಲುವು ಇಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ 5A ಸೈಡ್ ರಿಂಕ್ ಹಾಕಿ ಪಂದ್ಯದಲ್ಲಿ ಕಾವೇರಿ ಕಾಲೇಜು, ಗೋಣಿಕೊಪ್ಪಲು ತಂಡವು ಅದ್ಭುತ ಪ್ರದರ್ಶನ ನೀಡಿ ವಿಜಯಶಾಲಿಯಾಗಿದ್ದು, ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ತಂಡದ ಎಲ್ಲಾ ಆಟಗಾರರು ಅತ್ಯುತ್ತಮ ಆಟ ಪ್ರದರ್ಶಿಸಿದ್ದು, ವಿಶೇಷವಾಗಿ ರೇವಿನ್ ಬೆಮ್ಮಯ್ಯ (Revin Bemmaiah) ಅವರು ಅತ್ಯಧಿಕ ಗೋಲುಗಳನ್ನು ಬಾರಿಸಿ ಟಾಪ್ ಸ್ಕೋರರ್ ಆಗಿ ಮೆರೆದಿದ್ದಾರೆ.
ಹುದಿಕೇರಿ ಶಾಸಕ ಎ. ಎಸ್ ಪೊನ್ನಣ್ಣ ಅನುದಾನದಲ್ಲಿ ನೂತನ ಆಟೋ ತಂಗುದಾಣ: ಶಾಸಕರಿಂದ ಲೋಕಾರ್ಪಣೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಹುದಿಕೇರಿ ಭಾಗಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ತಾಲೂಕು ಹುದಿಕೇರಿಯಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಟೋ ತಂಗುದಾಣ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರೀರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ಹಿರಿಯರು ಚೆಕ್ಕೇರ ವಾಸು ಕುಟ್ಟಪ್ಪ, ಜಿಮ್ಮಿ ಅಣ್ಣಯ್ಯ, ಸುಧೀರ್, ಪಕ್ಷದ ಮುಖಂಡರು ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ನೊರೇರ ಮನೋಹರ್, ರಮೇಶ್, ಬಿಪಿನ್, ರೋನಿ, ಮದನ್ ಮಂದಣ್ಣ, ಕಿಸು, ಹುದಿಕೇರಿ ವಲಯ ಯುವ ಘಟಕದ ಅಧ್ಯಕ್ಷರು ರೀಕ್ಷಿತ್ ಕಾರ್ಯಪ್ಪ, ಮೌನ, ಮಂಜು ದೇವಯ್ಯ, ಬಾನಾಂಗಡ ಅರುಣ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಪಂದ್ಯಾಟದ ಮುಖ್ಯ ಅತಿಥಿಯಾಗಿ ಶಾಸಕ ಎ. ಎಸ್ ಪೊನ್ನಣ್ಣ ರಾಜ್ಯಮಟ್ಟದ ಅಂತರ್ ಕಾಲೇಜ್ ಹಾಕಿ ಪಂದ್ಯಾಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಈ ಪಂದ್ಯಕೂಟ ಆಯೋಜನೆಗೊಂಡಿತ್ತು. ಪಂದ್ಯಾಟಕ್ಕೆ ಶುಭ ಕೋರಿ ಮಾತನಾಡಿದ ಮಾನ್ಯ ಶಾಸಕರು, ಕೊಡಗಿನ ಮನೆಮನೆಗಳಲ್ಲಿ ಹಾಸು ಹೊಕ್ಕಿರುವ ಹಾಕಿ ಕ್ರೀಡೆಯ ರಾಜ್ಯಮಟ್ಟದ ಪಂದ್ಯಾವಳಿಯು ಪೊನ್ನಂಪೇಟೆಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಕಾಲೇಜ್ ವಿದ್ಯಾರ್ಥಿಗಳು ಕೊಡಗಿನ ಪರಿಸರಕ್ಕೆ ಹೊಂದಿಕೊಂಡು ತಮ್ಮ ಚಾಕಚಕ್ಯತೆ ಪ್ರದರ್ಶಿಸುತ್ತಿರುವುದು ಹಾಗೂ ಪ್ರಶಸ್ತಿಗಾಗಿ ಹೋರಾಟ ಮಾಡುತ್ತಿರುವುದು ಕೊಡಗಿಗೆ ಹೆಮ್ಮೆ ಎನಿಸಿದೆ. ಎಲ್ಲರೂ ಉತ್ತಮವಾಗಿ ಆಡಿ, ಈ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಇಂತಹ ಪಂದ್ಯವಳಿಗಳು ಮತ್ತಷ್ಟು ನಡೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಮಿದೇರೀರ ನವೀನ್, ಹಿರಿಯರಾದ ಮುಕಳೇರ ಕುಶಾಲಪ್ಪ,…
ಶಾಲೆಯನ್ನು ಮುಂದಿಟ್ಟು ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ….!!! 30 ಗಿಡ… 1,00,000 ಹತ್ತಿರದ ಬಿಲ್ಲು…!? ಎಮ್ಮೆಮಾಡು:ಅರಣ್ಯ ಅಧಿಕಾರಿಗಳು ಪಡಿಯಾಣಿ ಶಾಲೆಯಲ್ಲಿ ಸುಮಾರು 30 ಗಿಡವನ್ನು ನೆಟ್ಟು ಸುಮಾರು ರೂ 74,290 ಬಿಲ್ಲನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹೆಸರಲ್ಲಿ ಮಾಡಿದ್ದು, ಇದು ನಿಜಕ್ಕೂ ಗ್ರಾಮಸ್ತರನ್ನು ಮೂರ್ಖರಾನ್ನಾಗಿಸಿ, ಸಾರ್ವಜನಿಕರ ಹಣವನ್ನು ಗುಳುಂ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು, ಇದಕ್ಕೆ ಸಂಭಂದ ಪಟ್ಟವರು ಉತ್ತರಿಸಬೇಕಾಗಿದೆ. ಅರಣ್ಯ ಅಧಿಕಾರಿಗಳು ಒಂದಿಷ್ಟು ಮರ ಗಿಡಗಳನ್ನು ತಂದು, ಶಾಲೆಯ ಪಕ್ಕದ ಮನೆಯಿಂದ ಗುದ್ದಲಿ ಪಡೆದು ಸ್ವಲ್ಪಗಿಡ ಗಳನ್ನು ನೆಟ್ಟು ಈ ಬಿಲ್ಲನ್ನು ಪಾಸ್ ಮಾಡಿದ್ದಾರೆ!!! ಈ ಪ್ರಕರಣ ಸರಿಯೇ ಆಗಿದ್ದಲ್ಲಿ ಗ್ರಾಮಸ್ಥರು ದಯವಿಟ್ಟು ತಮ್ಮ ಮೌನವನ್ನು ಮುರಿದು ,ಇಂತಹಾ ಮಹಾ ಭ್ರಷ್ಟಾಚಾರ ದ ಅಧಿಕಾರಿಗಳ ವಿರುದ್ಧ ನಿಲ್ಲಬೇಕಿದೆ. ಕಾನೂನಾತ್ಮಕ ವಾಗಿ ಇದರ ಪರಿಶೀಲನೆಯನ್ನು ನಡೆಸಿ, ಕ್ರಮ ಕೈಗೊಳ್ಳಬೇಕಿದೆ. ಅಂದಾಜು ಮೊತ್ತ. 74,290 ಸಾಮಗ್ರಿ ಮೊತ್ತ 24,907 ಕೂಲಿ ಮೊತ್ತ 49,383 ಒಂದು ದಿನದ ಕೂಲಿ…
ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ವಾರ್ಡ್‍ವಾರು ಕೇತ್ರಗಳ ಪುನರ್ ವಿಂಗಡಣೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ತಾಲ್ಲೂಕು ಕೇಂದ್ರವಾಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಮತ್ತು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ರಸ್ತೆ ಕಾಲೋನಿ, ಮಾಪಿಳ್ಳೆತೋಡು ಸೇತುವೆ, ಕಾವೇರಮ್ಮ ಬಡಾವಣೆ ಮತ್ತು ಇತರ ಬಡಾವಣೆಗಳು ಒಳಗೊಂಡಂತೆ ಸಂಪೂರ್ಣ ಮುಗುಟಗೇರಿ ಗ್ರಾಮವನ್ನು ಸೇರಿಕೊಂಡಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ:221:ಎಂಎಲ್‍ಆರ್:2022(ಇ) ದಿನಾಂಕ:24-07-2024 ರಂತೆ ಪೆÇನ್ನಂಪೇಟೆ ಪಟ್ಟಣ ಪಂಚಾಯಿತಿಯನ್ನಾಗಿ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:ಯುಡಿಡಿ/4/ಎಂಎಲ್‍ಆರ್/2014 ಬೆಂಗಳೂರು ದಿನಾಂಕ:15-02-2014ರ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಡಿಕೇರಿ ಇವರ ಪತ್ರ ಸಂಖ್ಯೆ:ಡಿಯುಡಿಸಿ/ಪೊ.ತಾ/96/2020-21 ದಿನಾಂಕ:20-02-2026ರಂತೆ ಪೆÇನ್ನಂಪೇಟೆ ಪಟ್ಟಣ ಪಂಚಾಯಿತಿ ವಾರ್ಡ್‍ಗಳನ್ನು 2011 ರ ಜನಗಣತಿಯ ಆಧಾರದ ಮೇರೆ ಪುನರ್ ವಿಂಗಡಣೆ ಮಾಡಲು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ-1964ರ ಪ್ರಕರಣ 13ರ ಮೇರೆಗೆ ಪೆÇನ್ನಂಪೇಟೆ ಪಟ್ಟಣ ಪಂಚಾಯಿತಿಯ…
