ವಿರಾಜಪೇಟೆ ಗ್ರಾಮಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಇಬ್ಬರ ಬಂಧನ


ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮತ್ತಿ ಗ್ರಾಮದ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಹತ್ತಿರದ ಬಸ್ಸು ತಂಗುದಾಣದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿ: 20-02-2026 ರಂದು ದಾಳಿ ನಡೆಸಿ 02 ಆರೋಪಿಗಳನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ಆರೋಪಿಗಳ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b)(2)(b) NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ;
1. ಅಸೈನಾರ್.@ ರಜಾಕ್, 43 ವರ್ಷ, ಸುಣ್ಣದ ಬೀದಿ ವಿರಾಜಪೇಟೆ ನಗರ.
2. ಮೋಹನ ಎ.ಜಿ @ ಅಶೋಕ, 42 ವರ್ಷ, ಬಾಳುಗೋಡು ಗ್ರಾಮ, ಬಿಟ್ಟಂಗಾಲ, ವಿರಾಜಪೇಟೆ ತಾ.
ವಶಪಡಿಸಿಕೊಂಡ ಸ್ವತ್ತುಗಳ ವಿವರ;
1. 01 ໖ 60
ತನಿಖಾ ತಂಡದ ವಿವರ;
1. ಶ್ರೀ ಮಹೇಶ್ ಕುಮಾರ್, ಡಿ.ವೈ.ಎಸ್.ಪಿ, ವಿರಾಜಪೇಟೆ ಉಪವಿಭಾಗ,
2. ಶ್ರೀ ಅನೂಪ್ ಮಾದಪ್ಪ, ಸಿಪಿಐ, ವಿರಾಜಪೇಟೆ ವೃತ್ತ.
3. ಶ್ರೀಮತಿ ಲತಾ ಎನ್.ಜೆ, ಪಿ.ಎಸ್.ಐ(ಕಾ&ಸು), ವಿರಾಜಪೇಟೆ ಗ್ರಾಮಾಂತರ ಠಾಣೆ.
4. ಶ್ರೀಮತಿ ವಾಣಿಶ್ರೀ.ಬಿ.ಎಸ್, ಪಿ.ಎಸ್.ಐ(ತನಿಖೆ), ವಿರಾಜಪೇಟೆ ಗ್ರಾಮಾಂತರ ಠಾಣೆ.
5. ಶ್ರೀ ಪ್ರಮೋದ್, ಪಿ.ಎಸ್.ಐ, ವಿರಾಜಪೇಟೆ ನಗರ ಪೊಲೀಸ್ ಠಾಣೆ.
6. ಶ್ರೀ ಸೋಮಣ್ಣ ಕೆ.ಬಿ, ಎ.ಎಸ್.ಐ, ವಿರಾಜಪೇಟೆ ಗ್ರಾಮಾಂತರ ಠಾಣೆ.
7. ಶ್ರೀ ನವೀನ್ ಕುಮಾರ್ ಎಸ್.ಎಲ್, ಹೆಚ್.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
8. ಶ್ರೀ ಬಸವರಾಜು.ಎಂ, ಹೆಚ್.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
9. ಶ್ರೀ ಅಬ್ದುಲ್ ಮಜೀದ್, ಹೆಚ್.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
10. ಶ್ರೀ ಅನೀಫ್.ಕೆ.ಎ, ಹೆಚ್.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
11. ಶ್ರೀ ಬೋಪಣ್ಣ ಎಂ.ಎಸ್, ಹೆಚ್.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
12. ಶ್ರೀಮತಿ ರಾಧ ಮಹಿಳಾ, ಹೆಚ್.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
13. ಶ್ರೀ ಮಹೇಶ್ ಎಸ್, ಪಿ.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
14. ಶ್ರೀ ಶಿವಪ್ರಸಾದ್, ಪಿ.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
15. ಶ್ರೀ ರಾಜೇಶ್.ಎಸ್, ಪಿ.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.
16. ಶ್ರೀ ರಾಘವೇಂದ್ರ, ಪಿ.ಸಿ, ವಿರಾಜಪೇಟೆ ಗ್ರಾಮಾಂತರ ಠಾಣೆ.

